lakshana serial ಗೋವಾದಲ್ಲಿ 'ಲಕ್ಷಣ' ಧಾರಾವಾಹಿ ಮದುವೆ ಚಿತ್ರೀಕರಣ, ಮಧುಮಗಳು ಶ್ವೇತಾನ ಅಥವಾ ಲಕ್ಷಣನನಾ?

Suvarna News   | Asianet News
Published : Mar 07, 2022, 01:12 PM IST
lakshana serial ಗೋವಾದಲ್ಲಿ 'ಲಕ್ಷಣ' ಧಾರಾವಾಹಿ ಮದುವೆ ಚಿತ್ರೀಕರಣ, ಮಧುಮಗಳು ಶ್ವೇತಾನ ಅಥವಾ ಲಕ್ಷಣನನಾ?

ಸಾರಾಂಶ

ತಾಯಿ ಪ್ರೀತಿಗೆ ಬೆಲೆ ಕೊಟ್ಟು, ಭೂಪತಿ ಶ್ವೇತಾಳನ್ನೇ ಮದುವೆ ಆಗಲಿದ್ದಾನಾ? ಅಥವಾ ಸ್ನೇಹಕ್ಕೆ ಬೆಲೆ ಕೊಟ್ಟು, ಪ್ರೀತಿ ಮೊದಲು ಎಂದು ಲಕ್ಷಣ ಬೇಕು ಎನ್ನುತ್ತಾನಾ?  

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ (Lakshna) ಧಾರಾವಾಹಿ ವೀಕ್ಷಕರ ಕಣ್ದುಂಬಿಸಲು ಹೊಸ ಪ್ಲ್ಯಾನ್ ಮಾಡಿದೆ. ಅದುವೇ ಭೂಪತಿ ಮತ್ತು ಶ್ವೇತಾ ಲ್ಯಾವಿಷ್ ವೆಡ್ಡಿಂಗ್ (Lavish Wedding). ಸಾಮಾನ್ಯವಾಗಿ ಧಾರಾವಾಹಿಯಲ್ಲಿ ಮದುವೆ ಸಂಭ್ರಮವನ್ನು ರೆಸಾರ್ಟ್‌ ಅಥವಾ ಯಾವುದಾದರೂ ಮಂಟಪದಲ್ಲಿ ಚಿತ್ರೀಕರಣ ಮಾಡುತ್ತಾರೆ. ನಾವು ಆ ಸಾಲಿಗೆ ಸೇರಬಾರದು. ಈಗಿನ ಜನರೇಷನ್ ಚೇಂಚ್ ಕೇಳುತ್ತೆ ಎಂದು, ನಿರ್ಮಾಪಕ ಕಮ್ ನಟ ಜಗನ್ (Jagan Chandrashekar) ಹೊಸ ಪ್ಲ್ಯಾನ್ ಮಾಡಿದ್ದಾರೆ. ಇಡೀ ತಂಡ ಗೋವಾಗೆ ಪ್ರಯಾಣ ಮಾಡಿ ಚಿತ್ರೀಕರಣ ಮುಗಿಸಿದ್ದಾರಂತೆ. 

'ಡೆಸ್ಟಿನೇಷನ್‌ ಮದುವೆ (Destination Wedding) ಚಿತ್ರೀಕರಣ ಮಾಡುವುದು ಸುಲಭವಲ್ಲ. ನಟರಿಂದ ಹಿಡಿದು, ಪ್ರತಿಯೊಬ್ಬ ತಂತ್ರಜ್ಞನೂ ಅವರ ತುದಿಕಾಲಿನಲ್ಲಿ ನಿಂತು ಕೆಲಸ ಮಾಡಿದ್ದಾರೆ. ಇಡೀ ಕಥೆಗೆ ರೋಚಕ ತಿರುವು ಕೊಡುವುದು ಮದುವೆಯ ಸನ್ನಿವೇಶ. ಭೂಪತಿ ಯಾರನ್ನು ಮದುವೆ ಆಗುತ್ತಾನೆಂದು ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಕೆಲವರು ಶ್ವೇತಾ ಎನ್ನುತ್ತಾರೆ, ಇನ್ನೂ ಕೆಲವರು ನಕ್ಷತ್ರಾ ಅನ್ನುತ್ತಾರೆ. ಈ ಉತ್ತರವೇ ತುಂಬಾ ಸ್ಪೆಷಲ್,' ಎಂದು ಇ-ಟೈಮ್ಸ್‌ ಟಿವಿ ಜೊತೆ ಜಗನ್ ಮಾತನಾಡಿದ್ದಾರೆ. 

'ಹಿಟ್ ಸೀರಿಯಲ್‌ಗಳಾದ ರಾಧ ರಮಣ (Radha Ramana), ಲಕ್ಷ್ಮಿ ಬಾರಮ್ಮ (Lakshmi Baramma) ಮತ್ತು ಅಗ್ನಿಸಾಕ್ಷಿ (Agnisakshi) ಶುರುವಾಗಿದ್ದು ಮದುವೆ ಸೀನ್ ಚಿತ್ರೀಕರಣದಿಂದಲೇ. ಅವರೆಲ್ಲಾ ಮದುವೆ ದೃಶ್ಯವನ್ನು ತುಂಬಾನೇ ಅದ್ಧೂರಿಯಾಗಿ ತೋರಿಸಿದ್ದರು. ಆದರೆ ನೀವು ಅದನ್ನ ಲಕ್ಷಣ ಧಾರಾವಾಹಿಗೆ ಹೊಲಿಸಿದರೆ, ಡಿಫರೆಂಟ್ ಕಥೆ ಹೇಳುತ್ತದೆ. ಇಲ್ಲಿ ಮೊದಲು ಸ್ನೇಹ, ಆಮೇಲೆ ಪ್ರಪೋಸಲ್, ಆಮೇಲೆ ಇಡೀ ಕುಟುಂಬ. ಇವೆಲ್ಲಾ ಆದ ಮೇಲೆಯೇ ನಟನ ಮದುವೆ ವಿಚಾರ ಬರುವುದು. ಈಗ ನಿಜವಾದ ಕಥೆ ಶುರುವಾಗುತ್ತಿದೆ. ನಾನು ಮೊದಲ ದಿನದಿಂದಲೂ ಕಥೆಯಲ್ಲಿ ಇರುವ ಇಂಟ್ರೆಸ್ಟಿಂಗ್ ವಿಚಾರ ರಿವೀಲ್ ಮಾಡುವುದಕ್ಕೆ ಕಾಯುತ್ತಿರುವೆ. ಇಷ್ಟು ದಿನಗಳಲ್ಲಿ ಎಲ್ಲರೂ ಮಾಡಿಕೊಂಡು ಬಂದಿರುವ ರೀತಿಯಲ್ಲಿ ನನಗೆ ರೆಸಾರ್ಟ್ ಅಥವಾ ಮದುವೆ ಹಾಲ್‌ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಇಷ್ಟವೇ ಇರಲಿಲ್ಲ. ಈ ಧಾರಾವಾಹಿಯಲ್ಲಿ ಎಲ್ಲಾವೂ ವಿಭಿನ್ನವಾಗಿರಬೇಕು ಎಂದು ಯೋಚನೆ ಮಾಡುವಾಗ ಮಿಸ್ಟರ್ ಜೆಡಿ ಅವರು ಡೆಸ್ಟಿನೇಷನ್ ಮದುವೆ ಬಗ್ಗೆ ಪ್ಲ್ಯಾನ್ ಕೊಟ್ಟರು,' ಎಂದು ಜಗನ್ ಹೇಳಿದ್ದಾರೆ.

'ಲಕ್ಷಣ' ಧಾರಾವಾಹಿ ನಟಿ ಶ್ವೇತಾ ಧರಿಸುವ ಉಡುಪುಗಳು ಎಷ್ಟು ಸ್ಟೈಲಿಷ್ ನೋಡಿ...

'ಡೆಸ್ಟಿನೇಷನ್ ಮದುವೆ ವಿಚಾರ ಹೇಳಿದ ತಕ್ಷಣ ನಾನು ಒಪ್ಪಿಕೊಂಡೆ. ಜಾಗ ಅಂತ ಬಂದಾಗ ನನಗೆ ಮೊದಲು ಬಂದ ಯೋಚನೆಯೇ ಗೋವಾ (Goa). ಇದುವರೆಗೂ ಕನ್ನಡ ಧಾರಾವಾಹಿ ಲೋಕದಲ್ಲಿ ಯಾರೂ ಗೋವಾದಲ್ಲಿ ಮದುವೆ ಚಿತ್ರೀಕರಣ ಮಾಡಿಲ್ಲ. ಕೇಳಿದ ತಕ್ಷಣ ಎಲ್ಲರಿಗೂ ಎಕ್ಸೈಟ್ ಆಯ್ತು. ನಾನು ಆದಷ್ಟು ಬೇಗ ಸೀನ್‌ಗಳು ಮತ್ತು ಮದುವೆ ಪ್ಲ್ಯಾನಿಂಗ್ ಶುರು ಮಾಡಿ, ಆನಂತರ ಪ್ರಯಾಣ ಶುರು ಮಾಡಿದ್ದು. ನಮ್ಮ ಇಡೀ ತಂಡ ಗೋವಾದಲ್ಲಿತ್ತು. ನಾನು ಗೋವಾದಲ್ಲಿರುವ ಐಷಾರಾಮಿ Golf courseನಲ್ಲಿ ಮೊದಲು ಚಿತ್ರೀಕರಣ ಮಾಡಿದ್ದು. ಬೇರೆ ಬೇರೆ ಲೋಕೇಷನ್‌ ಬಳಸಿದ್ದೀವಿ. ಬೀಚ್‌ ಏರಿಯಾ ಇದೆ, ರೆಸಾರ್ಟ್‌ ಇದೆ. ಪ್ರತಿಯೊಂದೂ ದೃಶ್ಯವೂ ವೀಕ್ಷಕರ ಕಣ್ಣು ತುಂಬಿಸುತ್ತದೆ. ಗೋವಾದಲ್ಲಿ ಚಿತ್ರೀಕರಣ ಮಾಡುವಾಗ ಪ್ರತಿಯೊಬ್ಬರೂ ತುಂಬಾನೇ ಶ್ರಮ ಹಾಕಿದ್ದಾರೆ. ಒಟ್ಟಾರೆ ಇದೊಂದು ಶೆಡ್ಯೂಲ್ ಮಜವಾಗಿತ್ತು,' ಎಂದಿದ್ದಾರೆ ಜಗನ್. 

ನಕ್ಷತ್ರ ಅಭಿನಯಕ್ಕೆ ಫಿದಾ ಆದ ಜಗನ್ನಾಥ್; ಲಕ್ಷಣ ಕಥೆಗೆ ವೀಕ್ಷಕರು ಫಿದಾ!

'ಗೋವಾದಲ್ಲಿ ಚಿತ್ರೀಕರಣ ಯಾಕೆ ಅಂದ್ರೆ ನಾನು ಮಾಲ್ಡೀವ್ಸ್‌ನಲ್ಲಿ (Maldives) ಮಾಡುವುದಕ್ಕೆ ಆಗುವುದಿಲ್ಲ. ಹೀಗಾಗಿ ಗೋವಾನೇ ಆಯ್ಕೆ ಮಾಡಿದ್ದು. ಯಾವ ಅದ್ಧೂರಿ ಮದುವೆ ಮಾಡುವ ಸ್ಥಳಕ್ಕೂ ಕಡಿಮೆ ಇಲ್ಲ ಈ ಗೋವಾ. ಗೋವಾದಲ್ಲಿ ತುಂಬಾ ಮಂದಿ ಮದುವೆ ಆಗಿದ್ದಾರೆ. ಅವರೆ ಮದುವೆ ತುಂಬಾನೇ ಮ್ಯಾಜಿಕಲ್ ಆಗಿತ್ತು. ಆ ಮ್ಯಾಜಿಕ್‌ ಲಕ್ಷಣ ಧಾರಾವಾಹಿಯಲ್ಲಿ ಇರಬೇಕಿತ್ತು. ಲಕ್ಷಣ ಧಾರಾವಾಹಿ ವೀಕ್ಷಕರ ಪ್ರತಿಯೊಂದೂ ನಿರೀಕ್ಷೆಯನ್ನು ಮುಟ್ಟಿದೆ. ಹಾಗೆ ಈ ಮದುವೆ ಸೀಕ್ವೆನ್ಸ್‌ ಅನ್ನು ಕೂಡ ಎಲ್ಲರೂ ಇಷ್ಟ ಪಡುತ್ತಾರೆ ಅಂದುಕೊಂಡಿರುವೆ,' ಎಂದು ಜಗನ್ ಮಾತು ಮುಗಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ