ನಿನ್ನ ಲೈಫೂ ಹಲ್ವಾದಂತೇ ತಳ ಹಿಡಿದು ಹೋಗಲಿದೆ; ಭವಿಷ್ಯವಾಣಿ ಪುಷ್ಪಾ ಪಾಲಿಗೆ ನಿಜ ಆಗಿಬಿಡುತ್ತಾ?!

By Shriram Bhat  |  First Published Jan 3, 2024, 1:15 PM IST

'ನಾನು ಹೇಳ್ತಾ ಇರೋದು ನಿಜ ಆಗುತ್ತೆ ನೋಡ್ತಾ ಇರಿ. ಆಕೆಯ ಜೀವನ ಈಗಾಲ್ಲೇ ಹಳಿ ತಪ್ಪಿದೆ. ಮುಂದೆ, ಇನ್ನೂ ಹಳ್ಳ ಹಿಡಿದು ಹೋಗುತ್ತೆ'ಎಂದು ತಾನು ಆಡಿದ ಇನ್ನಷ್ಟು ಕನ್ಫರ್ಮ್ ಮಾಡುತ್ತಾನೆ.  


ಪುಷ್ಪಾ ನೋಡಿದ ಹಾಗಾಗಿ ಆಕಾಶ್ ಯಾರನ್ನೋ ಫಾಲೋ ಮಾಡಲು ಯತ್ನಿಸುತ್ತಾನೆ. ಆದರೆ, ಆಕಾಶ್ ಅವಳನ್ನು ತಲುಪಲು, ಅವಳ ಮುಖ ನೋಡಲು ವಿಫಲನಾಗುತ್ತಾನೆ. ಆಕಾಶ್‌ ಅದೇ ಬೇಜಾರಿನಲ್ಲಿ ಒಂದು ಕಡೆ ನಿಂತಿದ್ದಾನೆ. ಇತ್ತ ಮನೆಯಲ್ಲಿ ಪಷ್ಪಾ ಹಲ್ವಾ ಮಾಡುತ್ತಿದ್ದು, ಅದನ್ನು ನೋಡುತ್ತಿರುವ ಬದಲು ಮೊಬೈಲ್‌ನಲ್ಲಿ ಏನೋ ನೋಡುತ್ತಿದ್ದಾಳೆ. ಹಲ್ವಾ ಸೀದು ಹೋಗಿದ್ದರೂ ಕೆಟ್ಟ ವಾಸನೆ ಬರುತ್ತಿದ್ದರೂ ಅವಳು ಮೊಬೈಲ್‌ ಹ್ಯಾಂಗೋವರ್‌ನಿಂದ ಹೊರಬಾರದೇ ಮನೆಯವರೆಲ್ಲ ಒಬ್ಬೊಬ್ಬರಾಗಿ ಬಂದು ನೋಡುತ್ತಿದ್ದರೂ ಆಕೆ ಮೊಬೈಲ್ ನೋಡುತ್ತಳೇ ಇದ್ದಾಳೆ. 

ಹಲ್ವಾ ತಳ ಹಿಡಿದಿದ್ದು ಗೊತ್ತಾಗುವ ಹೊತ್ತಿಗೆ ಮನೆಯವರೆಲ್ಲರೂ ಪುಷ್ಪಾ ಅಕ್ಕಪಕ್ಕದಲ್ಲಿ ಸೇರಿಕೊಂಡಿದ್ದು ಜಾತ್ರೆಯ ಗದ್ದಲ ಶುರುವಾದಂತಿತ್ತು. ಆದರೆ, ಅಲ್ಲಿದ್ದ ಮನೆ ಅಳಿಯ ಮಾವ ಪುಷ್ಪಾಗೆ 'ಹಲ್ವಾ ತಳ ಹಿಡಿದಂತೆ ನಿನ್ನ ಬಾಳು ಕೂಡ ಸ್ವಲ್ಪ ದಿನಗಳಲ್ಲಿ ತಳ ಹಿಡಿಯಲಿದೆ' ಎಂದು ಹೇಳುತ್ತಾನೆ. ಈ ಮಾತು ಕೇಳಿ ಮನೆಯವರೆಲ್ಲರೂ ಶಾಕ್ ಆಗುತ್ತಾರೆ. ಅವರೆಲ್ಲರಿಗಿಂತ ಪುಷ್ಪಾ ಹೆಚ್ಚು ಶಾಕ್ ಆಗುತ್ತಾಳೆ. ಏಕೆಂದರೆ, ಅವಳ ವಿಷಯ ಎಲ್ಲರಿಗಿಂತ ಹೆಚ್ಚು ಆಕೆಗೇ ಗೊತ್ತು. ಆದರೆ, ಮನೆಯವರೆಲ್ಲ ಮಾವನ ವಿರುದ್ಧ, ಪುಷ್ಪಾ ಪರವಾಗಿ ನಿಲ್ಲುತ್ತಾರೆ. 

Tap to resize

Latest Videos

ಡಿವೋರ್ಸ್ ತೆಗೆದುಕೊಳ್ಳುವ ಮಾತಾಡಿದ ಅಂಕಿತಾ; ವಿಕ್ಕಿ ಬಗ್ಗೆ ಅನುಕಂಪ ತೋರಿದ್ರಾ ಮುನಾವರ್!

ಯಾರು ಪುಪ್ಪಾಗೆ ಅದೆಷ್ಟೇ ಸಪೋರ್ಟ್ ಮಾಡಿದರೂ, ಮಾವ ಮಾತ್ರ ತನ್ನ ಮಾತು ಹಿಂದೆ ತೆಗೆದುಕೊಳ್ಳುವುದಿಲ್ಲ. ಮುಂದುವರೆಸುತ್ತ 'ನಾನು ಹೇಳ್ತಾ ಇರೋದು ನಿಜ ಆಗುತ್ತೆ ನೋಡ್ತಾ ಇರಿ. ಆಕೆಯ ಜೀವನ ಈಗಾಲ್ಲೇ ಹಳಿ ತಪ್ಪಿದೆ. ಮುಂದೆ, ಇನ್ನೂ ಹಳ್ಳ ಹಿಡಿದು ಹೋಗುತ್ತೆ' ಎಂದು ತಾನು ಆಡಿದ ಇನ್ನಷ್ಟು ಕನ್ಫರ್ಮ್ ಮಾಡುತ್ತಾನೆ.  ಪುಷ್ಪಾ ಒಂದೇ ಸವನೆ ಕಣ್ಣೀರು ಸುರಿಸುತ್ತಿದ್ದಾಳೆ. ಆಕೆಗೆ, ತಾನು ಊಹಿಸಿದಂತೆ, ಮಾವನ ಮಾತಿನಂತೆ ತನ್ನ ಜೀವನ ಹಳ್ಳ ಹಿಡಿದರೆ ಗತಿಯೇನು ಎಂಬ ಚಿಂತೆ ಕಾಡುತ್ತಿದೆ. ಆದರೆ, ಸದ್ಯಕ್ಕೆ ಆಕೆ ಅಸಹಾಯಕಳು, ಏನನ್ನೂ ಪರಿಹಾರ ಮಾಡುವ ಸ್ಥಿತಿಯಲ್ಲಿಲ್ಲ. 

ಸದ್ಯದಲ್ಲೇ ರಾಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ ಮದುವೆ; ಎಲ್ಲಿ, ಯಾವಾಗ ...?

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಬೃಂದಾವನ' ಸೀರಿಯಲ್ ಹೊಸ ಹೊಸ ತಿರುವುಗಳನ್ನು ಪಡೆದು ಕುತೂಹಲಕಾರಿಯಾಗಿ ಮುಂದುವರೆಯುತ್ತಿದೆ. ಹೀರೋ ಸರಿಯಿಲ್ಲ ಎನ್ನುತ್ತಲೇ ವೀಕ್ಷಕರು ಧಾರಾವಾಹಿ ನೋಡುವುದನ್ನು ಮುಂದುವರೆಸಿದ್ದಾರೆ. ಇತ್ತ ಆಕಾಶ್ ತನ್ನ ಪ್ರಿಯತಮೆ ಪುಪ್ಷಾ ಸಿಗುತ್ತಾಳೆ ಎಂಬ ಆಶಾಭಾವದಲ್ಲಿ ಲೈಫ್ ಲೀಡ್ ಮಾಡುತ್ತಿದ್ದಾನೆ. ಆದರೆ, ಆಕಾಶ್ ಮಡದಿಯಾಗಿರುವ ಪುಷ್ಪಾ ಮಾತ್ರ ನೊಂದು, ಬೆಂದು ಬಳಲಿ ಹೋಗುತ್ತಿದ್ದಾಳೆ. ಅಂದಹಾಗೆ, ಬೃಂದಾವನ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ರಾತ್ರಿ 8.00ಕ್ಕೆ ಪ್ರಸಾರವಾಗುತ್ತಿದೆ. 

 

 

 

click me!