
‘ಬಿಗ್‌ಬಾಸ್ ಮನೆಯಲ್ಲಿ ಮಹಿಳೆಯರಿಗೆ ಸರಿಯಾದ ಅವಕಾಶ ಸಿಕ್ತಿಲ್ವಾ? -ಇಂಥದ್ದೊಂದು ಪ್ರಶ್ನೆ ಜಿಯೋ ಸಿನಿಮಾ ಇಂದು ಬಿಡುಗಡೆ ಮಾಡಿರುವ ಪ್ರೋಮೊ ನೋಡಿದವರ ಮನಸಲ್ಲಿ ಏಳುವಂತಿದೆ. ಹಾಗಾದ್ರೆ ಏನು ನಡೆದಿದೆ ಬಿಗ್‌ಬಾಸ್ ಮನೆಯಲ್ಲಿ? ಬಿಗ್‌ಬಾಸ್ ಒಂದು ಟಾಸ್ಕ್ ಕೊಟ್ಟಿದ್ದಾರೆ. ಆ ಟಾಸ್ಕ್ ಆಡಲು ನೀರಲ್ಲಿ ಮುಳುಗುವ, ಉತ್ತಮ ಗುರಿ ಹೊಂದಿರುವ ನಾಲ್ಕು ಸದಸ್ಯರ ಅಗತ್ಯ ಇದೆ ಎಂದು ಬಿಗ್‌ಬಾಸ್ ಹೇಳಿದ್ದಾರೆ.
ಟಾಸ್ಕ್‌ಗೆ ಆಯ್ಕೆ ಮಾಡುವಾಗ ವಿನಯ್, ‘ನಾನು, ಕಾರ್ತಿಕ್, ಮೈಕಲ್ ಮತ್ತು ತುಕಾಲಿ’ ಎಂದು ಹೇಳಿದ್ದಾರೆ. ಇದಕ್ಕೆ ಅಸಮಧಾನ ವ್ಯಕ್ತಪಡಿಸಿರುವ ಸಂಗೀತಾ, ‘ನಾನು ಯಾಕೆ ಬೇಡ ಅಂತ ಹೇಳಿಲ್ಲ ನೀವು. ಮಹಿಳೆಯರು ಹೀಗೆಯೇ ಗೆಲ್ಲಲು ಸಾಧ್ಯವಾಗ್ತಿಲ್ಲ’ ಎಂದು ತಕರಾರು ತೆಗೆದಿದ್ದಾರೆ. ಇದಕ್ಕೆ ವಿನಯ್, ‘ಮನ್ ವುಮನ್ ಎಂದು ಬೇರೆ ಮಾಡಿ ನೋಡುವುದು ಸರಿಯಲ್ಲ. ಈ ಮನೆಯಲ್ಲಿ ನಿನ್ನ ಬಾಯಲ್ಲಿ ಮಾತ್ರ ಯಾಕೆ ಮನ್ ವುಮನ್ ಅನ್ನೋ ತರತಮದ ಮಾತು ಬರೀ ನಿನ್ನ ಬಾಯಲ್ಲಿ ಕೇಳಿಸುತ್ತದೆ?’ ಎಂದು ವಿನಯ್ ಗರಂ ಆಗಿದ್ದಾರೆ.
ಇದಕ್ಕೆ ಸಂಗೀತಾ ಕೂಡ ‘ಅವಕಾಶ ಸಿಕ್ತಿದೆ ಅಂತ ಬೇರೆ ವಿಷಯನೆಲ್ಲ ಇಲ್ಲಿಗೆ ಎಳೆದು ತರಬೇಡಿ’ ಎಂದು ಸಂಗೀತಾ ಕೂಡ ಅಷ್ಟೇ ಗಟ್ಟಿಯಾಗಿ ಮಾತಾಡಿದ್ದಾರೆ. ತನಿಷಾ ಕೂಡ ಸಂಗೀತಾ ವಿರುದ್ಧ, ‘ನೀವು ಆಡಿದ ಎಲ್ಲ ಟಾಸ್ಕ್‌ಗಳಲ್ಲಿಯೂ ಫರ್ಪೆಕ್ಟ್ ಆಗಿ ಆಡಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಮತ್ತೊಮ್ಮೆ ಬಿಗ್‌ಬಾಸ್ ಮನೆಯಲ್ಲಿ ಮಹಿಳೆ-ಪುರುಷರ ನಡುವಿನ ತರತಮದ ಬಗ್ಗೆ ಚರ್ಚೆ ಶುರುವಾಗಿದೆ. ಅದು ಜೋರಾಗಿಯೂ ಮುಂದುವರಿಯುತ್ತಿದೆ. ಇದರ ಪರಿಣಾಮ ಏನಾಗುತ್ತದೆ? ಕಾಲವೇ ಉತ್ತರಿಸಬೇಕು.
BBK10: 'ನನಗೆ ಏರು ಧ್ವನಿಯಲ್ಲಿ ಮಾತಾಡ್ತೀರಾ': ವಿನಯ್ಗೆ ಖಡಕ್ ವಾರ್ನಿಂಗ್ ಕೊಟ್ಟ ಶ್ರುತಿ!
ಎಂದಿಗೂ ಕ್ಷಮಿಸೋದಿಲ್ಲ ಎಂದ ತುಕಾಲಿ: ತುಕಾಲಿ ಸಂತೋಷ್ ಹಾಗೂ ತನಿಷಾ ನಡುವೆ ನಿನ್ನೆ ನಡೆದ ಆಟದ ವಿಚಾರವಾಗಿ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಿದೆ. ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಅವರನ್ನು ತನಿಷಾ ಕ್ಯಾಪ್ಟನ್ ಆದ ಕಾರಣ ಆಟದಿಂದ ಹೊರಗಿಟ್ಟಿದ್ದಾರೆ. ಅದಕ್ಕಾಗಿ ಮತ್ತು ತನಿಷಾ ನೀಡಿದ ಕಾರಣಕ್ಕಾಗಿ ತುಕಾಲಿ ಸಂತೋಷ್ ಅವರಿಗೆ ಕೋಪ ಬಂದಿದೆ. ನಾನು ಹೇಗೆ ವಿಚಿತ್ರ ಅಂತ ಹೇಳು ಅಂದಿದ್ದಾರೆ. ತನಿಷಾ ಅವರು ಕಾರಣ ನೀಡುವಾಗ ತುಕಾಲಿ ಅವರು ಹೋದ ವಾರಕ್ಕಿಂತ ಈ ವಾರ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ತನಿಷಾ ಹೇಳಿದ್ದಾರೆ. ನಾನು ವಿಚಿತ್ರ ವರ್ತನೆ ಅಂತ ಹೇಳಿದ್ದಕ್ಕೂ ಕೆಲವು ಕಾರಣ ಇದೆ ಎಂದು ತನಿಷಾ ಹೇಳಿದ್ದಾರೆ. ಅದು ಏನು ಅಂತಲೂ ಅವರು ಹೇಳಿದ್ದಾರೆ. ನಿನ್ನ ಸಹಜ ವರ್ತನೆ ಹೇಗಿರುತ್ತದೆಯೋ ಅದಕ್ಕಿಂತ ನೀನು ಬೇರೆ ರೀತಿ ವರ್ತನೆ ಮಾಡ್ತಾ ಇದ್ದೀಯಾ, ಆ ಕಾರಣಕ್ಕಾಗಿ ನೀನು ವಿಚಿತ್ರ ಅಂತ ತನಿಷಾ ಹೇಳ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.