ಬಿಗ್ಬಾಸ್-8ನೇ ಸಂಚಿಕೆಯಲ್ಲಿ ಈ ಬಾರಿ ಮೈಸೂರಿನ ಯುವ ನಟ ನಿಖಿಲ್ಗೆ ಚೀಫ್ ಪಟ್ಟ ಒಲಿದಿದೆ. ಅಷ್ಟಕ್ಕೂ ಯಾವುದೀ ಬಿಗ್ಬಾಸ್? ಏನಿದರ ವಿಶೇಷತೆ?
ಈಗ ಎಲ್ಲೆಲ್ಲೂ ಬಿಗ್ಬಾಸ್ದ್ದೇ ಹವಾ. ಇತ್ತ ಕನ್ನಡದ ಬಿಗ್ಬಾಸ್ಗೆ ಹಲವು ಕನ್ನಡಿಗರು ಕುತೂಹಲದಿಂದ ಕಾಯುತ್ತಿದ್ದರೆ, ಅತ್ತ ತೆಲುಗು ಬಿಗ್ಬಾಸ್ನಲ್ಲಿ ಸೀಸನ್ 8’ ಷೋ ಆರಂಭವಾಗಿ ಇದಾಗಲೇ 15 ದಿನಗಳ ಕಳೆದಿವೆ. ಎಂದಿನಂತೆ ನಟ ನಾಗಾರ್ಜುನ ಅವರ ನಿರೂಪಣೆಯಲ್ಲಿ ಇದೇ 1ರಿಂದ ಆರಂಭವಾಗಿದೆ. ಈ ಬಾರಿಯ ವಿಶೇಷತೆ ಕೂಡ ಹಿಂದಿನಂತೆಯೇ ಮುಂದುವರೆದಿದೆ. ಕನ್ನಡಿಗರೂ ತೆಲುಗು ಬಿಗ್ಬಾಸ್ನಲ್ಲಿ ಛಾನ್ಸ್ ಸಿಕ್ಕಿದೆ. ಕಳೆದ ಸಲ ಬೆಂಗಳೂರಿನ ಶೋಭಾ ಶೆಟ್ಟಿ ಮತ್ತು ಮಂಗಳೂರಿನ ಕೀರ್ತಿ ಭಟ್ ತೆಲುಗು ಬಿಗ್ಬಾಸ್ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿಯ ವಿಶೇಷತೆ ಎಂದರೆ ನಾಲ್ವರು ಈ ಷೋನಲ್ಲಿ ಇದ್ದಾರೆ. ಮೈಸೂರಿನ ನಿಖಿಲ್, ವಿದ್ಯಾ ವಿನಾಯಕ ಸೀರಿಯಲ್ ಖ್ಯಾತಿಯ ಯಶ್ಮಿ ಗೌಡ, ರಂಗನಾಯಕಿ’ ಧಾರಾವಾಹಿ ಪ್ರೇರಣಾ ಕಂಬಂ ಈ ಬಾರಿ ತೆಲುಗು ಬಿಗ್ಬಾಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಅದಕ್ಕೂ ವಿಶೇಷವಾದ ಸುದ್ದಿ ಏನಪ್ಪಾ ಎಂದರೆ, ಈ ಬಾರಿ ಚೀಫ್ ನೇಮಕ ಮಾಡಲಾಗಿದೆ. ಅದರ ಪಟ್ಟ ಕೂಡ ಕನ್ನಡಿಗನಿಗೇ ಒಲಿದಿದೆ. ಹೌದು. ಮೈಸೂರಿನ ನಿಖಿಲ್ ಮಲಯಕ್ಲಳ್ ಅವರಿಗೆ ಚೀಫ್ ಪಟ್ಟ ಸಿಕ್ಕಿದೆ. ಇದು ಕನ್ನಡಿಗರಿಗೂ ಸಕತ್ ಖುಷಿ ತಂದುಕೊಟ್ಟಿದೆ. ಅಷ್ಟಕ್ಕೂ ಮೈಸೂರಿನ ನಿಖಿಲ್ ‘ಮನೆಯೇ ಮಂತ್ರಾಲಯ’ ಎನ್ನುವ ಸೀರಿಯಲ್ ಮೂಲಕ ಕನ್ನಡಕ್ಕೆ ಪರಿಚಯವಾದವರು. ಇದಾದ ಬಳಿಕ ತೆಲುಗು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಹಲವಾರು ರಿಯಾಲಿಟಿ ಷೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ‘ಊಟಿ’ ಎನ್ನುವ ಸಿನಿಮಾದಲ್ಲಿ ಚಿಕ್ಕ ರೋಲ್ನಲ್ಲಿ ಇವರು ಕಾಣಿಸಿಕೊಂಡಿದ್ದರು. ಇದೀಗ ಚೀಫ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.
ದುಡ್ಡು ಆಮೇಲೆ ಕೊಡು ಎಂದು ಕಾರು ಕೊಟ್ಟ- ಆಮೇಲೆ ನೋಡಿದ್ರೆ ಅವನ ಆಸೆ... ತನಿಷಾ ಶಾಕಿಂಗ್ ವಿಷ್ಯ ರಿವೀಲ್
ಅಂದಹಾಗೆ, ತೆಲುಗು ಬಿಗ್ಬಾಸ್ನಲ್ಲಿ ಈ ಬಾರಿ ಒಟ್ಟೂ 14 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಕನ್ನಡಿಗರಿಗೆ ಅವಕಾಶ ಹೆಚ್ಚಿರುವ ಕಾರಣ, ತೆಲುಗು ಕಲಾವಿದರು ಬೇಸರ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೂಡ ಇದೆ. ಬಿಗ್ಬಾಸ್ನಲ್ಲಿ ವರ್ಷದಿಂದ ವರ್ಷಕ್ಕೆ ವಿಭಿನ್ನ ರೀತಿಯ ಪ್ರಯೋಗ ಮಾಡುವುದು ಮಾಮೂಲು. ಅದೇ ರೀತಿ ತೆಲುಗು ಬಿಗ್ಬಾಸ್ನಲ್ಲಿಯೂ ಈ ಬಾರಿ ಹಲವು ವಿಶೇಷತೆಗಳು ಇವೆ. ಆದರೆ ಕಪ್ಪು ಯಾರಿಗೆ ಗೆಲ್ಲುತ್ತಲೆ, ಕನ್ನಡಿಗರಿ ಸಿಗತ್ತಾ ಎನ್ನುವ ಕುತೂಹಲವಿದೆ.
ಇನ್ನು, ಕನ್ನಡದ ಬಿಗ್ಬಾಸ್ ವಿಷಯಕ್ಕೆ ಬರುವುದಾದರೆ, ಬಿಗ್ ಬಾಸ್ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಈ ಮಧ್ಯೆ ಹೋಸ್ಟ್ ಯಾರು ಮಾಡೋದು ಎಂಬ ಪ್ರಶ್ನೆ ವೀಕ್ಷಕರಲ್ಲಿ ಕಾಡುತ್ತಲೇ ಇತ್ತು. ಅಂತೂ ಇಂತೂ ಪ್ರೇಕ್ಷಕರ ಕುತೂಹಲಕ್ಕೆ ತೆರೆಬಿದ್ದಿದೆ. ಕಿಚ್ಚ ಸುದೀಪ್ ಅವರು ಮಾಸ್ ಡೈಲಾಗ್ ಹೊಡೆದ ನಯಾ ಬಿಗ್ ಬಾಸ್ ಪ್ರೋಮೋವೊಂದು ರಿಲೀಸ್ ಆಗಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಪ್ರೋಮೋದಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾತಿಗೆ ಮಾತು, ಸೇಡಿಗೆ ಸೇಡು, ವರ್ಷ ವರ್ಷ ಯುದ್ಧ ಮಾಡೋರು ಬದಲಾಗುತ್ತಾರೆ. ಆದರೆ ಎಲ್ಲರನ್ನೂ ನಿಯಂತ್ರಿಸುವ ಸೂತ್ರಧಾರ.. ಎಂದು ಡೈಲಾಗ್ ನಿಲ್ಲುತ್ತಿದ್ದಂತೆಯೇ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಎಂಟ್ರಿ ಆಗುತ್ತಾರೆ. ಹಾಗೆಯೇ, ಸುದೀಪ್ ಪಂಚಿಂಗ್ ಆಗಿ ಒಂದಷ್ಟು ಮಾಸ್ ಡೈಲಾಗ್‌ಗಳನ್ನು ಕೂಡ ಹೇಳಿಕೊಂಡಿದ್ದಾರೆ. 10 ವರ್ಷದಿಂದ ಒಂದು ಲೆಕ್ಕ. ಈಗಿಂದ ಬೇರೆನೇ ಲೆಕ್ಕ. ಇದು ಹೊಸ ಅಧ್ಯಾಯ ಎಂದು ಹೇಳಿದ್ದಾರೆ. ಅಲ್ಲಿಗೆ ಪ್ರೋಮೋ ಮುಕ್ತಾಯವಾಗಿದೆ.
ಅವತ್ತು ಬಟ್ಟೆ ತೊಳೆಯುತ್ತಿದ್ದಾಗ ಅವನು ಬಂದು... ಬದುಕು ಬದಲಿಸಿದ ಆ ದಿನ ನೆನೆದ ಬಿಗ್ಬಾಸ್ ನೀತು
ನಿಖಿಲ್ ಈಗ ಇಡೀ ಬಿಗ್ ಬಾಸ್ ತಂಡಕ್ಕೆ ಚೀಫ್ ಆಗಿ ಆಯ್ಕೆ. ಮೈಸೂರು ಮೂಲದ ನಿಖಿಲ್. ಬಿಗ್ ಬಾಸ್ ನ ನೆಚ್ಚಿನ ಕಂಟೆಸ್ಟೆಂಟ್. pic.twitter.com/JC4gqkmn4O
— JustKannada (@JustKannada)