ಕೈಯಲ್ಲಿ ಕತ್ತಿ ಹಿಡಿದು ಕಾಳಿಯವತಾರ ತಾಳಿದ ಕುಸುಮತ್ತೆ! ತಾಂಡವ್​- ಶ್ರೇಷ್ಠಾ ಡಬಲ್​ ಮರ್ಡರ್​?

By Suchethana D  |  First Published Sep 16, 2024, 3:20 PM IST

ಮದುವೆ ಮಂಟಪಕ್ಕೆ ಪೂಜಾ ಸಹಿತ ಟ್ರ್ಯಾಕ್ಟರ್​ನಲ್ಲಿ ಬಂದಿರೋ ಕುಸುಮಾ, ಕೈಯಲ್ಲಿ ಕತ್ತಿ ಹಿಡಿದು ಕಾಳಿಯವತಾರ ತಾಳಿದ್ದಾಳೆ. ಮಗ ಮತ್ತು ಆತನ ಗರ್ಲ್​ಫ್ರೆಂಡ್​ ಗತಿಯೇನು? 
 


ಕೈಯಲ್ಲಿ ಕತ್ತಿ ಹಿಡಿದು ಪೂಜಾ ಜೊತೆ ಟ್ರ್ಯಾಕ್ಟರ್​ ಮೇಲೆ ಕುಸುಮಾ ಮದುವೆ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ! ಕಾಳಿಯವತಾರ ತಾಳಿದ್ದಾಳೆ. ಇನ್ನೇನು ತಾಂಡವ್​ ಶ್ರೇಷ್ಠಾಳ ಕುತ್ತಿಗೆಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಎಂಟ್ರಿ ಕೊಟ್ಟಿರೋ ಕುಸುಮಾ ಮತ್ತು ಪೂಜಾ, ಮದುವೆಯನ್ನು ನಿಲ್ಲಿಸಿದ್ದಾರೆ. ಮದುವೆ ಮನೆಯ ಎಲ್ಲಾ ಸಾಮಗ್ರಿಗಳನ್ನೂ ಚೆಲ್ಲಾಪಿಲ್ಲಿ ಮಾಡಿದ್ದಾಳೆ ಕುಸುಮಾ. ಇದಕ್ಕೆ ಕಾರಣ, ಶ್ರೇಷ್ಠಾ ಮತ್ತು ತಾಂಡವ್​ ಮದುವೆ ಅತ್ತ ನಡೆಯುತ್ತಿದ್ದರೆ, ಇತ್ತ ಅಮ್ಮ ಕುಸುಮಾಳಿಗೆ ಶ್ರೇಷ್ಠಾ ಮದ್ವೆಯಾಗ್ತಿರೋದು ತನ್ನ ಮಗನೇ ಎನ್ನುವ ಸತ್ಯ ತಿಳಿದಿರುವುದು.  ಈ ಮದುವೆಯನ್ನು ನಿಲ್ಲಿಸಲು ಆಟೋದಲ್ಲಿ ಬರುತ್ತಿದ್ದಳು. ಆದರೆ ಆಟೋ ಅಪಘಾತಕ್ಕೀಡಾಗಿ ಅಲ್ಲಿಗೆ ಪೊಲೀಸರು ಬಂದರು. ಪೊಲೀಸರು ತನಿಖೆ ಎಂದೆಲ್ಲಾ ಹೇಳಿದಾಗ ಕುಸುಮಾ ತನ್ನ ಬಂಗಾರದ ಬಳೆಯನ್ನು ಪೊಲೀಸರಿಗೆ ಕೊಟ್ಟು ಅಲ್ಲಿಂದ ಓಡೋಡಿ ಕಲ್ಯಾಣ ಮಂಟಪಕ್ಕೆ ಬಂದಿದ್ದಾಳೆ. ಭಾಗ್ಯ-ಕುಸುಮಾ  ಬಂದೇ ಬರುತ್ತಾರೆ ಎನ್ನುವ ಕಾರಣಕ್ಕೆ ಬಾಗಿಲಿನಲ್ಲಿ ಬಾಡಿಗಾರ್ಡ್​ ನಿಯೋಜನೆ ಮಾಡಿದ್ದಾಳೆ ಶ್ರೇಷ್ಠಾ. ಅವರು ಕುಸುಮಾಳನ್ನು ನೋಡುತ್ತಿದ್ದಂತೆಯೇ ಅವಳನ್ನು ತಡೆಯಲು ಮುಂದಾಗಿದ್ದಾರೆ.

ಇಷ್ಟಾಗುತ್ತಿದ್ದಂತೆಯೇ ಸೆಕ್ಯುರಿಟಿ ಗಾರ್ಡ್​ಗಳು ಆಕೆಯನ್ನು ತಳ್ಳಿದ್ದಾರೆ. ಮದುವೆ ನಿಲ್ಲಿಸಲು ಬಂದಿರೋ ಪೂಜಾ ಕುಸುಮತ್ತೆಯ ಕೈ ಹಿಡಿದಿದ್ದಾಳೆ. ಇಬ್ಬರೂ ಸೇರಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಇತ್ತ ಸುಂದ್ರಿ ಗಂಡ ಪೂಜಾಳನ್ನು ಕಿಡ್​ನ್ಯಾಪ್ ಮಾಡಿಸಿದ್ದ. ಶ್ರೇಷ್ಠಾ ದುಡ್ಡು ಕೊಟ್ಟು ಹೀಗೆ ಮಾಡಿಸಿದ್ದಾಳೆ. ಏಕೆಂದರೆ ಆಕೆಗೆ ಎಲ್ಲ ಸತ್ಯ ಗೊತ್ತಿದೆ ಎಂದು. ಈ ವಿಷಯ ಸುಂದ್ರಿಗೆ ತಿಳಿದು ಭಾಗ್ಯಳಿಗೆ ತಿಳಿಸಿದ್ದಾಳೆ. ಭಾಗ್ಯ ತನ್ನ ತಂಗಿಯನ್ನು ಬಿಡಿಸಿಕೊಂಡು ಹೋಗಲು ಬಂದಿದ್ದಾಳೆ. ಅಲ್ಲಿ ಅವಳಿಗೆ ಸುಂದ್ರಿ ಅರ್ಧಂಬರ್ಧ ಸತ್ಯ ಹೇಳಿದ್ದಾಳೆ. ತಾಂಡವ್​ ತರುಣ್​ ಹೆಸರಿನಲ್ಲಿ ಇರುವುದು, ಶ್ರೇಷ್ಠಾ ಮದ್ವೆಯಾಗ್ತಿರೋದು ಭಾಗ್ಯಳ ಗಂಡನನ್ನೇ ಎನ್ನುವ ಸತ್ಯ ಹೇಳಲಿಲ್ಲ. ಬದಲಾಗಿದೆ ತರುಣ್​ಗೆ ನಾವು ನಿಜವಾದ ಅಪ್ಪ-ಅಮ್ಮ ಅಲ್ಲ. ಶ್ರೇಷ್ಠಾ ದುಡ್ಡು ಕೊಟ್ಟ ಕಾರಣ ಹೀಗೆ ಮಾಡಿರುವುದಾಗಿ ಹೇಳಿದ್ದಾಳೆ. ಆದರೆ ಅಲ್ಲಿ ನಡೆಯುತ್ತಿರುವುದು ನಿನ್ನ ಗಂಡನ ಮದ್ವೆ ಎನ್ನುವುದು ಹೇಳಿಲ್ಲ. ಅವಳು ಮದುವೆ ಮಂಟಪಕ್ಕೆ ಬರುವುದು ಬಾಕಿ ಇದೆ. 

Tap to resize

Latest Videos

ಹೃದಯ ಪ್ರೀತಿಯಲ್ಲಿ ಕರಗೋಗಿದೆ ಎಂದ ನಿವೇದಿತಾ! ಹೊಸ ಎಂಟ್ರಿಗೆ ಗ್ರೀನ್​ ಸಿಗ್ನಲ್​ ಕೊಟ್ರಾ? ಯಾರೀತ?
 
ಭಾಗ್ಯಳೂ ಮದುವೆ ಮಂಟಪಕ್ಕೆ ಬರ್ತಾಳಾ? ಗಂಡನ ನಿಜ ವಿಷಯ ಅವಳಿಗೂ ಗೊತ್ತಾಗತ್ತಾ? ಶ್ರೇಷ್ಠಾ ಏನು ಮಾಡುತ್ತಾಳೆ. ತಾಳಿ ಕಟ್ಟಲು ರೆಡಿಯಾಗಿರೋ ತಾಂಡವ್​ ಮುಂದಿನ ನಿರ್ಧಾರ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಆ ದರೆ, ಇದರ ನಡುವೆಯೇ ಭಾಗ್ಯಳಿಗೆ ಇಂಥ ಗಂಡ ಬೇಕೆ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಇಷ್ಟೆಲ್ಲಾ ಮಾಡಿದರೂ ಶ್ರೇಷ್ಠಾಳ ಹಿಂದೆ ಬಿದ್ದಿರೋ ತಾಂಡವ್​ನನ್ನು ಯಾವ ಕಾರಣಕ್ಕೂ ಭಾಗ್ಯ ತನ್ನಜೀವನದಲ್ಲಿ ಎಂಟ್ರಿ ಕೊಡಿಸುವುದು ಸರಿಯಲ್ಲ. ಇಂಥ ಗಂಡ ಇದ್ದರೆಷ್ಟು ಬಿಟ್ಟರೆಷ್ಟು ಎನ್ನುತ್ತಿದ್ದಾರೆ ರೊಚ್ಚಿಗೆದ್ದ ಕಮೆಂಟಿಗರು. ಅವನು ಶ್ರೇಷ್ಠಾಳನ್ನೇ ಮದುವೆಯಾಗಬೇಕು. ಆಗ ಇದೆ ಅವನಿಗೆ ಮಾರಿಹಬ್ಬ. 

ಶ್ರೇಷ್ಠಾಳ ಅಸಲಿ ಗುಣ ಗೊತ್ತಾಗಿ ಮತ್ತೆ ಭಾಗ್ಯಳ ಕಾಲಿಗೆ ಬಂದು ಬೀಳಬೇಕು ಎನ್ನುವುದು ಭಾಗ್ಯಲಕ್ಷ್ಮಿ ಸೀರಿಯಲ್​ ಪ್ರೇಮಿಗಳ ಅಭಿಲಾಷೆಯಾಗಿದೆ. ಆದರೆ ಭಾಗ್ಯ ತನಗಾಗಿ ಅಲ್ಲದಿದ್ದರೂ, ಮಕ್ಕಳಿಗಾಗಿ ಅಪ್ಪ ಬೇಕು ಎನ್ನುತ್ತಿದ್ದಾಳೆ. ಅಪ್ಪ ಇಲ್ಲದ ಮಕ್ಕಳನ್ನು ಅವಳು ಊಹಿಸಿಕೊಳ್ಳುವುದೂ ಕಷ್ಟವಾಗಿದೆ. ಒಟ್ಟಿನಲ್ಲಿ ಸೀರಿಯಲ್​ ಸದ್ಯ ಕುತೂಹಲ ಕೆರಳಿಸಿದೆ. ಆದರೆ ಇದುವರೆಗೂ ಭಾಗ್ಯಳಿಗೆ ಅಸಲಿಯತ್ತು ತಿಳಿಯದೇ ಇರುವುದು ಕೂಡ ಹಾಸ್ಯಾಸ್ಪದ ಎನ್ನಿಸುತ್ತಿದೆ ಎನ್ನುವುದು ಬಹುತೇಕ ಕಮೆಂಟಿಗರ ಮಾತು. ಇನ್ನು ಹಲವರು ಪೂಜಾ ಟ್ರ್ಯಾಕ್ಟರ್​ ಚಲಾಯಿಸುತ್ತಿರುವ ಬಗ್ಗೆಯೂ ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಕುಸುಮಾ ತನ್ನ ಮಗನ ಸತ್ಯವನ್ನು ಸೊಸೆಗೆ ತಿಳಿಸ್ತಾಳೋ ಅಥ್ವಾ ಈಗಲೂ ಬಚ್ಚಿಡುತ್ತಾಳೋ ಗೊತ್ತಿಲ್ಲ. ಒಂದು ವೇಳೆ ಭಾಗ್ಯಳಿಗೆ ಸತ್ಯ ತಿಳಿದರೆ ಇಂಥ ಗಂಡನ ಜೊತೆ ಇರಲು ಒಪ್ಪುತ್ತಾಳೋ ಎನ್ನುವುದು ಕೂಡ ಈಗಿರುವ ಕುತೂಹಲ. 
 

ಮೇಕಪ್​ ಮಾಡುವಾಗಲೇ ನಟಿ ಸೋನಲ್​ ಅರಿಶಿಣದ ಕೊಂಬು ಮಾಯ! ವಿಡಿಯೋ ನೋಡಿ ಫ್ಯಾನ್ಸ್​ ಶಾಕ್

click me!