Bhagyalakshmi Serial Today Episode: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಹೊಸ ನಟನ ಎಂಟ್ರಿ ಆಗಿದೆ. ಸಾವಿರಾರು ಕೋಟಿ ರೂಪಾಯಿ ಬಾಚಿದ ಸಿನಿಮಾ ನಟ ಯಾರು?
‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯ ಕಷ್ಟವೇ ಮುಗಿಯುತ್ತಿಲ್ಲ. ಭಾಗ್ಯಳನ್ನು ತುಳಿದು ಹಾಕ್ತೀನಿ ಅಂತ ತಾಂಡವ್-ಶ್ರೇಷ್ಠ ಕನಸು ಕಾಣುತ್ತಿದ್ದಾರೆ. ಹೀಗಿರುವಾಗ ಅವಳಿಗೆ ಹೊಸ ದಾರಿ ಸಿಕ್ಕಿದೆ. ಇದರ ಮಧ್ಯೆ ʼಕೆಜಿಎಫ್ 2ʼ ಸಿನಿಮಾದಲ್ಲಿ ಅಭಿನಯಿಸಿದ್ದ ಅನ್ಮೋಲ್ ಭಟ್ಕಲ್ ಅವರು ‘ಭಾಗ್ಯಲಕ್ಷ್ಮೀ’ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಡ್ಯಾನ್ಸಿಂಗ್ ಶೋನಲ್ಲಿ ಭಾಗಿ!
ʼರಾಕಿಂಗ್ ಸ್ಟಾರ್ʼ ಯಶ್ ನಟನೆಯ ʼಕೆಜಿಎಫ್ 2ʼ ಸಿನಿಮಾದಲ್ಲಿ ಅನ್ಮೋಲ್ ನಟಿಸಿದ್ದರು. ಇವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ಸಿಕ್ಕಿತ್ತು. ಇನ್ನು ʼಡ್ಯಾನ್ಸಿಂಗ್ ಚಾಂಪಿಯನ್ʼ ಶೋನಲ್ಲಿಯೂ ಇವರು ಭಾಗವಹಿಸಿದ್ದರು.
ಬಟ್ಟೆಯನ್ನು ಹೀಗೂ ಹಾಕೋಬಹುದಾ? ರಿಯಲ್ ಪತ್ನಿ ಅಂದಕ್ಕೆ ಬೆರಗಾದ ಭಾಗ್ಯಲಕ್ಷ್ಮೀ ನಟ ಸುದರ್ಶನ್ ರಂಗಪ್ರಸಾದ್!
ಧಾರಾವಾಹಿಯಲ್ಲಿ ಅನ್ಮೋಲ್ ಪಾತ್ರ ಏನು?
ಈ ಧಾರಾವಾಹಿಯಲ್ಲಿ ತನ್ಮಯ್‌ಗೆ ಅನ್ಮೋಲ್ ಫ್ರೆಂಡ್ ಆಗಿರುತ್ತಾನೆ. ತನ್ಮಯ್ ತಂದಿದ್ದ ಮನೆ ಅಡುಗೆಯನ್ನು ಅನ್ಮೋಲ್ ತಿಂದು ಫುಲ್ ಖುಷಿ ಆಗುತ್ತಾನೆ. ಆಮೇಲೆ ಅವನು ಇನ್ನೊಂದು ಬಾಕ್ಸ್ ಕೊಡೋಕೆ ಹೇಳುತ್ತಾನೆ. ಇಂದಿನ ಮಕ್ಕಳು ಮನೆ ಅಡುಗೆ ಇಷ್ಟಪಡ್ತಾರಾ ಅಂತ ಕುಸುಮಾ ಆಶ್ಚರ್ಯಪಡುತ್ತಾಳೆ. ಮನೆಯ ಇಎಂಐ ಕಟ್ಟಲು ಭಾಗ್ಯ ಈ ಬಾರಿ ಏನು ಮಾಡ್ತಾಳೆ ಅಂತ ಕಾದು ನೋಡಬೇಕಿದೆ. ಇನ್ನೊಂದು ಕಡೆ ಭಾಗ್ಯಳ ಎಲ್ಲ ಉದ್ಯೋಗವನ್ನು ತಾಂಡವ್ ಹಾಳು ಮಾಡುತ್ತಿದ್ದಾನೆ. ಈಗ ಮನೆಯ ಅಡುಗೆಯನ್ನೇ ಅಸ್ತ್ರ ಮಾಡಿಕೊಂಡು ಭಾಗ್ಯ ಹಣ ಸಂಪಾದನೆ ಮಾಡಬಹುದು.
Bhagyalakshmi Serial: ತಾಂಡವ್‌ಗೆ ಹೊಸ ಅಸ್ತ್ರ ಸಿಕ್ಕಾಯ್ತು; ಭಾಗ್ಯ ಬಚಾವ್ ಆಗೋದು ಕಷ್ಟ ಇದೆ!
ಭಾಗ್ಯಗೆ ಹೊಸ ದಾರಿ ಸಿಕ್ಕಿತು!
ಇನ್ನು ಭಾಗ್ಯ ಬಳಿ ಅನ್ಮೋಲ್ ಬಂದು, “ನಮ್ಮ ಹಾಸ್ಟೆಲ್ ಹುಡುಗರು ಮನೆ ಊಟವನ್ನು ಮಿಸ್ ಮಾಡಿಕೊಳ್ತಿದ್ದಾರೆ. ನೀವು ಏನು ಮಾಡಿದ್ರೂ ಚೆನ್ನಾಗಿ ಮಾಡ್ತೀರಾ. ನಿಮ್ಮ ಊಟ ಹಾಸ್ಟೆಲ್ ಹುಡುಗರಿಗೆ ಸಿಕ್ಕಿದರೆ ತುಂಬ ಖುಷಿಯಾಗ್ತಾರೆ” ಅಂತ ಹೇಳಿರುತ್ತಾನೆ. ಅತ್ತ ತಾಂಡವ್, “ನೀನು ಅಡುಗೆ ಮನೆಯಲ್ಲಿ ಸೌಟು ಹಿಡಿದುಕೊಂಡು ಅಡುಗೆ ಮಾಡೋಕೆ ಸರಿ. ನಿನ್ನಿಂದ ಬೇರೆ ಏನೂ ಆಗೋದಿಲ್ಲ” ಎಂದು ಹೇಳಿದ್ದನು. ಈ ಮಾತು ಕೇಳಿ ಭಾಗ್ಯಗೆ ತಾನು ಹಾಸ್ಟೆಲ್ ಹುಡುಗರಿಗೆ ಅಡುಗೆ ಮಾಡಬಹುದು ಅಂತ ಅನಿಸಿದೆ.
ವೀಕ್ಷಕರು ಏನು ಹೇಳ್ತಾರೆ?
“ಭಾಗ್ಯ ಯಾವುದೇ ಪರಿಸ್ಥಿತಿಯಲ್ಲಿಯೂ ಕುಗ್ಗೋಳಲ್ಲ, ತಾಂಡವ್- ಶ್ರೇಷ್ಠ ಮನಸಾರೆ ಕುಗುತ್ತಾರೆ , ಒಂದಲ್ಲ ಒಂದಿನ ಅವಳು ಗೆದ್ದೆ ಗೆಲ್ತಾಳೆ. ಭಾಗ್ಯಗೆ ಈ ಪರಿಸ್ಥಿತಿ ಬರೋಕೆ ನಿಮ್ಮಂತ ಅಯೋಗ್ಯರೇ ಕಾರಣ. ಅವಳು ತಿಂದು ಬಿಟ್ಟ ಎಂಜಲು ತಿಂತಿದ್ದಾಳೆ ಶ್ರೇಷ್ಠ. ನಿಮಗೆಷ್ಟೇ ದಿಮಾಕು? ದೊಡ್ಡ ಸಾಧನೆ ಮಾಡಿದ್ದಾಳೆ. ಮೂರೊತ್ತು ಇವ್ರು ಜೋಕರ್ ತರ ಮುಂದೆ ನಿಂತ್ಕೋ ಬಿಡೋದು” ಎಂದು ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.