ಬಿಗ್ ಬಾಸ್ ನಿರೂಪಣೆಗೆ ಕಿಚ್ಚ ಸುದೀಪ್‌ ಸ್ಥಾನಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ನಟ; ಸಂಭಾವನೆ ಎಷ್ಟು?

Published : Mar 20, 2025, 12:46 PM ISTUpdated : Mar 20, 2025, 12:51 PM IST
ಬಿಗ್ ಬಾಸ್ ನಿರೂಪಣೆಗೆ ಕಿಚ್ಚ ಸುದೀಪ್‌ ಸ್ಥಾನಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ನಟ; ಸಂಭಾವನೆ ಎಷ್ಟು?

ಸಾರಾಂಶ

ಬಿಗ್ ಬಾಸ್ ಸೀಸನ್ 12ರ ನಿರೂಪಕರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸುದೀಪ್ ನಿರೂಪಣೆ ನಿಲ್ಲಿಸಿದ ಬಳಿಕ ರಮೇಶ್ ಅರವಿಂದ್ ಹೆಸರು ಮುಂಚೂಣಿಯಲ್ಲಿದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಯಶಸ್ಸಿನಿಂದಾಗಿ ಅವರು ಬಿಗ್ ಬಾಸ್ ನಿರೂಪಕರಾಗುವ ಸಾಧ್ಯತೆ ಇದೆ. ಸುದೀಪ್‌ರಷ್ಟೇ ಸಂಭಾವನೆ ರಮೇಶ್‌ರವರಿಗೆ ಸಿಗಬಹುದೆಂದು ಅಂದಾಜಿಸಲಾಗಿದೆ. ರಮೇಶ್ ಈ ಪ್ರಾಜೆಕ್ಟ್‌ಗೆ ಒಪ್ಪಿಗೆ ನೀಡುವ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಿಲ್ಲ.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಬಿಗ್ ಬಾಸ್ ಮುಗಿದು ಎರಡು ಮೂರು ತಿಂಗಳು ಕಳೆದಿದೆ ಅಷ್ಟೇ ಆಗಲೇ ಮುಂದಿನ ಸೀಸನ್‌ ಬಗ್ಗೆ ಲೆಕ್ಕಾಚಾರ ಶುರು ಮಾಡಿದ್ದಾರೆ ವೀಕ್ಷಕರು. ಸುದೀಪ್ ಅಂದ್ರೆ ಬಿಗ್ ಬಾಸ್, ಬಿಗ್ ಬಾಸ್ ಅಂದ್ರೆ ಸುದೀಪ್ ಅನ್ನೋ ಕನ್ನಡಿಗರಿಗೆ ಈಗ ಬೇಸರ ಆಗಿದೆ. ಈ ವರ್ಷ ಶುರುವಾಗಲಿರುವ ಬಿಗ್ ಬಾಸ್ ಸೀಸನ್ 12ರ ನಿರೂಪಕ ಯಾರು? ಸ್ಟಾರ್ ನಟರನ್ನೇ ಕರ್ಕೊಂಡು ಬರ್ತಾರಾ? ಅವರಿಗೂ ಸುದೀಪ್‌ರಷ್ಟೇ ಸಂಭಾವನೆ ಕೊಡ್ತಾರಾ? ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ....

ಹೌದು! ಇದು ನನ್ನ ಕೊನೆಯ ನಿರೂಪಣೆ ಕೊನೆಯ ಬಿಗ್ ಬಾಸ್ ಶೋ ಎಂದು ಕಿಚ್ಚ ಸುದೀಪ್ ಪೋಸ್ಟ್‌ ಮಾಡಿದ ಮೇಲೆ ದೊಡ್ಡ ಸೆನ್ಸೇ‍ಷನ್ ಕ್ರಿಯೇಟ್ ಆಗಿತ್ತು. ಆಗ ಗೋಲ್ಡನ್ ಸ್ಟಾರ್ ಗಣೇಶ್, ಡಾಲಿಂಗ್ ಕೃಷ್ಣ ಹಾಗೂ ರಿಷಬ್ ಶೆಟ್ಟಿ ಹೆಸರು ಕೇಳಿ ಬರುತ್ತಿತ್ತು. ಆದರೆ ಈಗ ನಟ ರಮೇಶ್ ಅರವಿಂದ್ ಹೆಸರು ಕೇಳಿ ಬಂದಿದೆ. ಈಗಾಗಲೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಕಾರಣ ಬಿಗ್ ಬಾಸ್ ಮನೆ ಬಿಸಿಯಲ್ಲಿರುವಾಗ ಕೂಲ್ ಮಾಡಲು ಕೂಲ್ ಕೂಲ್ ವ್ಯಕ್ತಿತ್ವ ಇರುವ ರಮೇಶ್‌ ಬರಲಿದ್ದಾರೆ ಎನ್ನಲಾಗಿದೆ. ಅಲ್ಲದೆ ಸದ್ಯ ವೀಕೆಂಡ್ ವಿತ್ ರಮೇಶ್ ಎಪಿಸೋಡ್ ಮತ್ತೆ ಶುರುವಾಗುತ್ತಾ ಇಲ್ವಾ ಅನ್ನೋ ಕ್ಲಾರಿಟಿ ಇಲ್ಲ. ಹೀಗಾಗಿ ರಮೇಶ್ ಬರುವುದು ಗ್ಯಾರಂಟಿ ಅಂತಿದ್ದಾರೆ ಜನರು. 

ಬೇಸಿಗೆ ಹೆಚ್ಚಾಯ್ತು ಅಂತ ಎಳನೀರು ಕುಡಿಯುವವರೇ ಎಚ್ಚರ...ಈ ಸಮಸ್ಯೆ ಬಗ್ಗೆ ಗೊತ್ತಿರಲಿ!

ಇನ್ನು ಸಂಭಾವನೆ ವಿಚಾರಕ್ಕೆ ಬಂದರೆ ಕಿಚ್ಚ ಸುದೀಪ್ 5 ವರ್ಷಕ್ಕೆ 15 ಕೋಟಿ ಪಡೆದಿದ್ದರು, ವರ್ಷಕ್ಕೆ 5 ಕೋಟಿ ಪಡೆದಿದ್ದಾರೆ ಅನ್ನೋ ಗಾಸಿಪ್ ಇತ್ತು. ಇಷ್ಟರ ಮಟ್ಟಕ್ಕೆ ಸಂಭಾವನೆ ಪಡೆಯುವ ಸಾಮರ್ಥ್ಯ ಇರುವುದು ರಮೇಶ್ ಅರವಿಂದ್‌ರವರಿಗೆ ಎಂದು ಸೋಷಿಯಲ್ ಮೀಡಿಯಾದಲ್ಲೂ ಸುದ್ದಿಯಾಗುತ್ತಿದೆ. ಈ ಪ್ರಾಜೆಕ್ಟ್‌ಗೆ ರಮೇಶ್ ಅರವಿಂದ್ ಒಪ್ಪಿಕೊಂಡಿದ್ದಾರಾ ಇಲ್ವಾ ಅನ್ನೋ ಕ್ಲಾರಿಟಿ ಇಲ್ಲ. ಇವತ್ತಿಗೂ ಜನರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ನೆನಪಿಸಿಕೊಳ್ಳುತ್ತಾರೆ. ಸ್ಟಾರ್ ನಟರ ಎದುರು ಅಷ್ಟು ಸ್ಪಷ್ಟವಾಗಿ ಮಾತನಾಡಬೇಕು ಅಂದ್ರೆ ಎಷ್ಟು ಬುದ್ಧಿವಂತಿಕೆ ಹಾಗೂ ತಯಾರಿಕೆ ಇರಬೇಕು ಹೇಳಿ? 11ನೇ ಸೀಸನ್‌ಗೆ ಬಿಗ್ ಬಾಸ್ ನೋಡುವುದನ್ನು ನಿಲ್ಲಿಸುತ್ತೀವಿ ಎಂದು ಜನರು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದರು ಆದರೆ ರಮೇಶ್ ಅರವಿಂದ್ ಬರ್ತಾರೆ ಅಂದ್ರೆ ನೋಡ್ತೀವಿ ಅಂತಿದ್ದಾರೆ. 

ಹೆಂಗಸ್ರು ತಮ್ಮ ದೇಹದ ಈ ಭಾಗವನ್ನು ಪದೇ ಪದೇ ಮುಟ್ಟಿಕೊಳ್ತಿದ್ದರೆ ಗಂಡಸರ ಎದೆ ಡವಡವ ಅನ್ನೋದು ಗ್ಯಾರಂಟಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!