ಭಾಗ್ಯಲಕ್ಷ್ಮಿಯ ಮನೆಗೆ ಬಂದಳೊಬ್ಬ ವಿಶೇಷ ಅತಿಥಿ! ನಮ್ಮ ಮನೆಗೂ ಬರ್ತಿರಮ್ಮಾ ಅಂತಿದ್ದಾರೆ ವೀಕ್ಷಕರು

Published : Apr 11, 2024, 11:31 AM IST
ಭಾಗ್ಯಲಕ್ಷ್ಮಿಯ ಮನೆಗೆ ಬಂದಳೊಬ್ಬ ವಿಶೇಷ ಅತಿಥಿ! ನಮ್ಮ ಮನೆಗೂ ಬರ್ತಿರಮ್ಮಾ ಅಂತಿದ್ದಾರೆ ವೀಕ್ಷಕರು

ಸಾರಾಂಶ

ಭಾಗ್ಯಲಕ್ಷ್ಮಿ ಮನೆಗೆ ದೇವಿ ಕಳೆ ಇರುವ ಮಹಿಳೆಯ ಎಂಟ್ರಿ ಆಗಿದೆ. ಯಾರೀಕೆ? ಭಾಗ್ಯ-ತಾಂಡವ್​ ಬಾಳಲ್ಲಿ ಎಲ್ಲವೂ ಸರಿಯಾಗುವುದೇ?   

ಭಾಗ್ಯಳ ಮನೆ ಎರಡು ಪಾಲಾಗಿದೆ. ಹೆತ್ತ ಮಗನನ್ನೇ ಪಕ್ಕದ ಮನೆಯವರೇ ಎಂದು ಸಂಬೋಧಿಸುತ್ತಿದ್ದಾಳೆ ಕುಸುಮಾ. ಮನೆಯೊಳಕ್ಕೆ ಗೆರೆ ಎಳೆದಿರುವ ಕುಸುಮಾ,  ಒಂದು ಕಡೆ ಮಗ ತಾಂಡವ್​ನನ್ನು ಇರಿಸಿ ಇನ್ನೊಂದು ಕಡೆ ಉಳಿದ ಎಲ್ಲಾ ಸದಸ್ಯರನ್ನೂ ಇಟ್ಟುಕೊಂಡಿದ್ದಾಳೆ. ಈಗ ತಾಂಡವ್​ ಒಬ್ಬಂಟಿಯಾಗಿದ್ದಾನೆ. ಆದರೆ  ಆಕಾಶ-ಭೂಮಿ ಒಂದು ಮಾಡಿಯಾದರೂ ಭಾಗ್ಯಳನ್ನು ಮನೆಯಿಂದ ಹೊರಕ್ಕೆ ಹಾಕಬೇಕು ಎನ್ನುವುದು ತಾಂಡವ್ ಶಪಥ.  ಸದ್ಯ  ಅಮ್ಮ ಕುಸುಮಾ ಎದುರು ಎಲ್ಲವೂ ಠುಸ್​ ಆಗಿದೆ. ಆದರೆ ಇದೀಗ ಯುಗಾದಿ ದಿನವೇ ಗಂಡ-ಹೆಂಡತಿ ನಡುವೆ ಭರ್ಜರಿ ಪ್ರತಿಜ್ಞೆ ಆಗಿದೆ. ಇಬ್ಬರೂ ಪ್ರತಿಜ್ಞೆ ಮಾಡಿದ್ದು, ಗೆಲುವು ಯಾರದ್ದು, ಹೇಗೆ ಎನ್ನುವುದು ಈಗಿರುವ ಪ್ರಶ್ನೆ. ಅಷ್ಟಕ್ಕೂ, ನಮಗೆ ಮಗನಿಗಿಂತಲೂ ಸೊಸೆಯೇ ಮೇಲು ಎಂದು ಕುಸುಮಾ ಮತ್ತು ಅವರ ಮನೆಯವರು ಭಾಗ್ಯಳ ಪರ ನಿಂತಿದ್ದಾರೆ.   ಯಾವುದೇ ಕಾರಣಕ್ಕೂ ಕುಸುಮಾಳನ್ನು ಹೊರಗೆ ಹಾಕುವ ಪಣ ತೊಟ್ಟ ಮಗ ತಾಂಡವ್​ಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ.  ತಾಂಡವ್​ಗೆ ಬುದ್ಧಿ ಕಲಿಸಲು, ತಮ್ಮ ಸೊಸೆ ಭಾಗ್ಯಳನ್ನು ಉಳಿಸಿಕೊಳ್ಳಲು ಇದಲ್ಲದೇ ಬೇರೆ ಮಾರ್ಗವಿಲ್ಲ ಎಂದು ಈ ಮಾರ್ಗವನ್ನು ತನ್ನದಾಗಿಸಿಕೊಂಡಿದ್ದಾಳೆ.  

 ಕುಸುಮಾ ಮನೆಯನ್ನು ಎರಡು ಪಾಲು ಮಾಡಿದ್ದಾಳೆ. ಅಷ್ಟಕ್ಕೂ ಪಾಲು ಎಂದರೆ ಒಂದು ಗೆರೆ ಎಳೆದಿದ್ದಾಳೆ. ಮಗ ತಾಂಡವ್​ ಬಳಿಯಲ್ಲಿ ನಿಂತಿದ್ದ ಭಾಗ್ಯ ಮತ್ತು ಮಕ್ಕಳನ್ನು ಗೆರೆ ದಾಟಿಸಿ ತನ್ನ ಬಳಿ ಕರೆದುಕೊಂಡು ಬಂದಿದ್ದಾಳೆ. ಪದೇ ಪದೇ ತಾಂಡವ್​, ನನ್ನ ಮನೆಯಲ್ಲಿ ನೀನು ಇರಲು ಸಾಧ್ಯವಿಲ್ಲ ಎಂದು ಪತ್ನಿಗೆ ಹೇಳುತ್ತಿದ್ದ. ಇದೇ ಮಾತನ್ನು ಈಗ ಕುಸುಮಾ ಹೇಳಿದ್ದಾಳೆ.  ನಿನ್ನ ಮನೆ ಗೆರೆಯ ಆ ಭಾಗ, ನಮ್ಮ ಮನೆ ಗೆರೆಯ ಭಾಗ, ನೀನು ಹೇಳಿದ ಹಾಗೆ ನಿನ್ನ ಮನೆಯಿಂದ ಕುಸುಮಾಳನ್ನು ನನ್ನ ಮನೆಗೆ ಕರೆದುಕೊಂಡು ಬಂದಿದ್ದೇನೆ. ಅವಳ ಜೊತೆ ಮಕ್ಕಳನ್ನೂ ಕರೆದುಕೊಂಡು ಬಂದಿದ್ದೇನೆ. ನಿನ್ನ ಮನೆ ನಿನಗೆ, ನಮ್ಮ ಮನೆ ನಮಗೆ. ಏನು ಬೇಕಾದರೂ ಮಾಡಿಕೋ ಎಂದಿದ್ದಾಳೆ. ಇದನ್ನು ಕೇಳಿ ತಾಂಡವ್​ ಜೊತೆ ಭಾಗ್ಯಳೂ ಶಾಕ್​ ಆಗಿದ್ದಾಳೆ. ಹಾವು ಸಾಯ್ಬೇಕು, ಆದ್ರೆ ಕೋಲು ಮುರಿಯಬಾರ್ದು ಎಂಬ ತಂತ್ರ ಮಾಡಿದ್ದಾಳೆ ಕುಸುಮಾ.

ಸೀತಾರಾಮ ಸೀರಿಯಲ್​ ಅಜ್ಜಿ ಮನೆ ಹೇಗಿದೆ? ಶೂಟಿಂಗ್ ಸೆಟ್​ನ ಸಂಪೂರ್ಣ ಪರಿಚಯ ಮಾಡಿಸಿದ ಸೀತಾ...

ಇದರ ನಡುವೆಯೇ ಭಾಗ್ಯ ಮತ್ತು ತಾಂಡವ್​ ನಡುವೆ ಭರ್ಜರಿ ಪ್ರತಿಜ್ಞೆ.  ಗೆರೆಯ ಅತ್ತ ಕಡೆ ಎಲ್ಲರನ್ನೂ ನೀನು ಸೇರಿಸಿಕೊಂಡು ನನ್ನನ್ನು ಒಂಟಿ ಮಾಡಿರುವೆ ಎಂದು ಕೂಗಾಡಿರುವ ತಾಂಡವ್​, ನೋಡ್ತಾ ಇರು, ಗೆರೆಯಿಂದ ಆ ಕಡೆ ಇರುವವರನ್ನೆಲ್ಲಾ ಒಬ್ಬೊಬ್ಬರನ್ನಾಗಿ ಇತ್ತ ಕಡೆ ಮಾಡಿಕೊಳ್ಳುವೆ ಎಂದಿದ್ದಾನೆ. ಇದಕ್ಕೆ ಪ್ರತಿಯಾಗಿ ಪ್ರತಿಜ್ಞೆ ಮಾಡಿರುವ ಭಾಗ್ಯ, ಎಲ್ಲರೂ ಒಂದೇ ಮನೆಯಲ್ಲಿ ಚೆನ್ನಾಗಿ ಇರುವಂತೆ ನಾನು ಮಾಡುತ್ತೇನೆ. ಇದು ನನ್ನ ಪ್ರತಿಜ್ಞೆ ಎಂದು ಹೇಳಿದ್ದಾಳೆ. ಅಂತಿಮವಾಗಿ ಇದು ಸೀರಿಯಲ್​ ಆಗಿರುವ ಕಾರಣ, ಭಾಗ್ಯಳ ಪ್ರತಿಜ್ಞೆಯೇ ಮೇಲುಗೈ ಸಾಧಿಸುತ್ತದೆ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ಹೇಗೆ? ತಾಂಡವ್​ಗಾಗಿ ಅತ್ತ ಶ್ರೇಷ್ಠಾ ಕಾಯುತ್ತಿದ್ದಾಳಲ್ಲ, ಅವಳು ಅಷ್ಟು ಸುಲಭದಲ್ಲಿ ತಾಂಡವ್​ನನ್ನು ಬಿಟ್ಟುಕೊಡುತ್ತಿಲ್ಲ. ಇದೀಗ ಗಂಡ- ಹೆಂಡತಿ ಪ್ರತಿಜ್ಞೆ ಬಲು ಜೋರಾಗಿದ್ದು ಗೆಲುವು ಹೇಗೆ ಎನ್ನುವುದು ಫ್ಯಾನ್ಸ್ ಪ್ರಶ್ನೆ. 

ಈಗ ಇದರ ನಡುವೆಯೇ, ಮನೆಗೊಬ್ಬ ಹೆಣ್ಣುಮಗಳ ಎಂಟ್ರಿಯಾಗಿದೆ. ಮನೆಯನ್ನು ಸರಿ ಮಾಡಲು ಬಂದಿರುವುದಾಗಿ ಈಕೆ ಹೇಳಿದ್ದಾಳೆ. ಯಾರೀಕೆ ಎನ್ನುವುದು ಈಗಿರುವ ಕುತೂಹಲ. ದಸರಾ ಸಮಯದಲ್ಲಿ ಬಂದಿರುವ ದೇವತೆಯೇ ಈಗಲೂ ಬಂದಿದ್ದಾಳೆ. ಆಗಾಗ್ಗೆ ದೇವಿ ಭಾಗ್ಯಳ ಮನೆಗೆ ಬರುತ್ತಿರುತ್ತಾಳೆ ಎಂದಿರುವ ಭಾಗ್ಯಲಕ್ಷ್ಮಿ ಫ್ಯಾನ್ಸ್​, ನಮ್ಮ ಮೇಲೂ ಕರುಣೆ ತೋರು ದೇವಿಗೆ, ನಮ್ಮ ಮನೆಗೂ ಆಗಾಗ್ಗೆ ಬರುತ್ತಿರು ಎನ್ನುತ್ತಿದ್ದಾರೆ. ಆದರೆ ಈಕೆ ಯಾರು? ಭಾಗ್ಯಳ ಬಾಳು ಸರಿ ಹೋಗುತ್ತಾ ಎನ್ನುವುದು ಈಗಿರುವ ಪ್ರಶ್ನೆ. 

ಧನುಷ್​ ಜೊತೆ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ಹೊತ್ತಲ್ಲೇ ಆರೋಗ್ಯಕರ ಜೀವನದ ಸಲಹೆ ನೀಡಿದ ರಜನಿ ಪುತ್ರಿ ಐಶ್ವರ್ಯಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೀರಿಯಲ್ ನಟಿಯರು ಆ.., ವಯಸ್ಸಿಗೆ ಮದುವೆಯಾಗಬೇಡಿ; ಮೊದಲ ಮದುವೆ ಅನುಭವ ಬಿಚ್ಚಿಟ್ಟ ನಟಿ ಅಪ್ಸರಾ!
ವೆಬ್‌ ಸಿರೀಸ್‌ನಲ್ಲಿ ಸಖತ್‌ ಬೋಲ್ಡ್‌ ಪಾತ್ರದಲ್ಲಿ ನಟಿಸಿ ಪ್ರಖ್ಯಾತಿ ಪಡೆದ ನಟಿಗೆ ಸ್ತನ ಕ್ಯಾನ್ಸರ್‌!