ಅಶೋಕ - ಪ್ರಿಯಾ ಮದುವೆಯಲ್ಲಿ ಸೀತಾ - ರಾಮ ಜೋಡಿಗೆ ಹೊಸ ಪರೀಕ್ಷೆ: ಏನದು?

Published : Apr 10, 2024, 03:41 PM ISTUpdated : Apr 10, 2024, 03:47 PM IST
ಅಶೋಕ - ಪ್ರಿಯಾ ಮದುವೆಯಲ್ಲಿ ಸೀತಾ - ರಾಮ ಜೋಡಿಗೆ ಹೊಸ ಪರೀಕ್ಷೆ: ಏನದು?

ಸಾರಾಂಶ

ಅಶೋಕ್​ ಮತ್ತು ಪ್ರಿಯಾ ಮದುವೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಸೀತಾ ಮತ್ತು ರಾಮ್​ ಜೋಡಿಗೆ ಹೊಸ ಪರೀಕ್ಷೆ ಶುರುವಾಗಿದೆ. ಏನದು?  

ಅಶೋಕ್​ ಮತ್ತು ಪ್ರಿಯಾ ಮದುವೆ ಶುರುವಾಗಿದೆ. ಮದುವೆ ಸಮಾರಂಭದಲ್ಲಿ ಸೀತಾ, ರಾಮ್​ ಮತ್ತು ಸಿಹಿ ಕೂಡ ಬಂದಿದ್ದಾರೆ. ಸಿಹಿಗೋ ಭಾರಿ ಆತಂಕ. ಸೀತಾಳ ಮದುವೆಯಲ್ಲಿ ಆದ ಗಲಾಟೆಯಂತೆ ಇಲ್ಲಿಯೂ ಆಗಿಬಿಟ್ಟರೆ ಎನ್ನುವ ಟೆನ್ಷನ್​. ಇದನ್ನೇ ಅವಳು ಅಜ್ಜಿ-ತಾತನ ಬಳಿ ಕೇಳುತ್ತಿದ್ದಾಳೆ. ಇವಳ ಯೋಚನೆ ಒಂದೆಡೆಯಾದರೆ ಅದೇ ಇನ್ನೊಂದೆಡೆ ತನ್ನ ತಾತನ ಬಳಿ ಎಲ್ಲ ವಿಷಯವನ್ನೂ ಹೇಳುವ ನಿರ್ಧಾರ ಮಾಡಿದ್ದಾನೆ ರಾಮ್​. ಈ ಮದುವೆಯಲ್ಲಿ ನಾನು ನಿಮ್ಮ ಜೊತೆ ಸಿಹಿಯನ್ನೂ ತಾತನಿಗೆ ಇಂಟ್ರೊಡ್ಯೂಸ್​ ಮಾಡುತ್ತೇನೆ ಎಂದಿದ್ದಾನೆ ರಾಮ್​. ಅಷ್ಟರಲ್ಲಿಯೇ ಏನೋ ಒಂದು ಸಂಭವಿಸಿದೆ, ಏನದು?

ಹೌದು. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದೆ. ಅಶೋಕ - ಪ್ರಿಯಾ ಮದುವೆಲಿ ಸೀತಾ - ರಾಮ ಜೋಡಿಗೆ ಹೊಸ ಪರೀಕ್ಷೆ ಎನ್ನುವ ಶೀರ್ಷಿಕೆಯಲ್ಲಿ ಈ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಹಾಗಿದ್ದರೆ ಮದುವೆಯಲ್ಲಿ ಏನಾಗಲಿದೆ? ಸೀತಾಳ ಜೊತೆ ಸಿಹಿಯನ್ನೂ ಒಪ್ಪಿಕೊಳ್ತಾನಾ ರಾಮ್​ನ ತಾತ? ಅಥವಾ ಮದುವೆ ಮನೆಯಲ್ಲಿ ಏನಾದ್ರೂ ಎಡವಟ್ಟು ನಡೆಯತ್ತಾ? ರಾಮ್​ ಮತ್ತು ಸೀತಾ ಮದುವೆಯನ್ನು ತಾತ ಒಪ್ಪಿಕೊಳ್ಳದೇ ಹೋದರೆ ಮುಂದೇನು? ಒಂದೆಡೆ ಇವರಿಬ್ಬರನ್ನೂ ದೂರ ಮಾಡಲು ಚಿಕ್ಕಮ್ಮ ಮತ್ತು ಮಾಜಿ ಪ್ರೇಯಸಿ ಚಾಂದನಿ ಕಾಯುತ್ತಿರುವ ಹೊತ್ತಿನಲ್ಲಿಯೇ ಇನ್ನೇನು ಅವಘಡ ಆಗಲಿದೆ, ಇತ್ಯಾದಿಗಳಿಗೆ ಸೀರಿಯಲ್​ನಲ್ಲಿ ಉತ್ತರ ಸಿಗಬೇಕಿದೆ.

ಡೈರೆಕ್ಟರ್​ ಸಾಹೇಬ್ರೇ ನಾವು ಅಂದುಕೊಂಡಂಗೆ ಮಾಡ್ಲಿಲ್ವಲ್ಲಾ, ಥ್ಯಾಂಕ್ಸ್​ ನಿಮ್ಗೆ ಅಂತಿರೋದ್ಯಾಕೆ ಅಮೃತಧಾರೆ ಫ್ಯಾನ್ಸ್​?

ಇದರ ನಡುವೆಯೇ ಸೀತಾಳ ಹಿಂದಿನ ಕಥೆಯೂ ರಹಸ್ಯವಾಗಿಯೇ ಉಳಿದಿದೆ.  ತನ್ನ ಹಿಂದಿನ ಕಥೆ ನಿಮಗೆ ಗೊತ್ತಿಲ್ಲ ಎಂದು ಅದನ್ನು ಹೇಳಲು ಹೋದಾಗ ರಾಮ್​ ತಡೆದಿದ್ದಾನೆ. ನನ್ನ ಹಿಂದಿನ ಕಥೆಯೂ ಚೆನ್ನಾಗಿಲ್ಲ, ಅದೆಲ್ಲಾ ನನಗೆ ಬೇಡ... ನೀವು ಬೇಕು, ನಿಮ್ಮ ಪ್ರೀತಿ ಬೇಕು ಎಂದು ಹೇಳುವ ಮೂಲಕ ಸೀತಾಳಿಗೆ ತನ್ನ ಹಿಂದಿನ ಕಥೆಯನ್ನು ಹೇಳಲು ರಾಮ್​ ಕೊಟ್ಟಿಲ್ಲ. ಆಗ ಸೀತಾ ಸುಮ್ಮನಾಗಿದ್ದಳು. ರಾಮ್​ನನ್ನು ಪ್ರೀತಿ ಮಾಡುವುದಾಗಿ ಒಪ್ಪಿಕೊಂಡಿದ್ದಳು. 

ಇದೀಗ ಇಬ್ಬರೂ ಲವ್​ನಲ್ಲಿ ಬಿದ್ದಿದ್ದಾರೆ.  ಒಂದು ವೇಳೆ ಮದುವೆಯಾದ ಮೇಲೆ ಸೀತಾಳ ಹಿಂದಿನ ಸ್ಟೋರಿ ಗೊತ್ತಾಗಿ ಇಬ್ಬರ ನಡುವೆ ಒಡಕು ಬಂದರೆ ಎನ್ನುವ ಆತಂಕದಲ್ಲಿಯೂ ಅಭಿಮಾನಿಗಳಿದ್ದಾರೆ. ಅದೇ ಇನ್ನೊಂದೆಡೆ ಹಲವರು ಸಿಹಿ, ಸೀತಾಳ ಮಗುವೇ ಅಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಿಹಿಯ ರಹಸ್ಯ ಹೊರಬರಲು ಇನ್ನೂ ಹಲವು ದಿನಗಳು ಕಾಯಬೇಕಿದೆ. ಮತ್ತೊಂದೆಡೆ ಸೀತಾಳಿಗೆ ಪದೇ ಪದೇ ಬರುತ್ತಿರುವ ಸಂದೇಶಗಳು ಅಭಿಮಾನಿಗಳನ್ನು ಚಿಂತೆಗೂಡು ಮಾಡಿದೆ. 

ಸುಂದರಿಯಾಗಿ ಕಾಣಲು ನಟಿಯರು ಲಕ್ಷ ಲಕ್ಷ ಖರ್ಚು ಮಾಡಿದ್ರೆ ಟಬು ಮಾಡಿದ್ದೇನು? ಅಭಿಮಾನಿಗಳಿಗೆ ಭಾರಿ ಬೇಸರ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕುತೂಹಲದ ಪೋಸ್ಟ್​ ಹಾಕಿದ ಸೂರಜ್​ ಸಿಂಗ್​
ಮೃತಪಟ್ಟ ಅಜ್ಜಿಯನ್ನೂ ಬಿಡದ Bigg Boss ಗಿಲ್ಲಿ ನಟ: ಶ್ರದ್ಧಾಂಜಲಿ ಬ್ಯಾನರ್​ನಲ್ಲಿ ನಟಿಯ ಕಣ್ಣು-ಬಾಯಿ!