ಹೊಸ ಗಾಡಿ ತಗೊಂಡಾಗಲೆಲ್ಲಾ ಕನ್ನಡದ ಸ್ಟಾರ್ ನಟನ ಬಳಿ ಹೋಗೋದೇಕೆ ಶಮಂತ್ ಬ್ರೋ ಗೌಡ? ಡಿಪಿಯಲ್ಲೂ ಅವರದ್ದೇ ಫೋಟೋ!

Published : Nov 20, 2026, 04:03 PM IST
Shamanth Bro Gowda

ಸಾರಾಂಶ

Shamanth Bro Gowda: ಫೋನ್ ಡಿಪಿ, ವಾಲ್‌ಪೇಪರ್ ಚೇಂಜ್ ಮಾಡದೆ ಅದೇ ಫೋಟೋ ಇಟ್ಟುಕೊಂಡಿರೋ ಶಮಂತ್ ಬ್ರೋ ಗೌಡ ಅವರ ಫೇವರೆಟ್ ನಟ ಯಾರು ಗೊತ್ತಾ? ಹೊಸ ಗಾಡಿ ತಗೊಂಡ್ರೆ ಅವರ ಬಳಿ ಹೋಗೋದೇಕೆ? ಇಲ್ಲಿದೆ 'ಅಗ್ನಿ ಸಾಕ್ಷಿ' ನಾಯಕನ ಕುತೂಹಲಕಾರಿ ಸ್ಟೋರಿ!

ಸಾಮಾನ್ಯವಾಗಿ ಯಾರೇ ಹೊಸ ವಾಹನ ಖರೀದಿಸಿದರೂ ಮೊದಲು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತಾರೆ ಅಥವಾ ಕುಟುಂಬಸ್ಥರಿಗೆ ತೋರಿಸುತ್ತಾರೆ. ಆದರೆ, 'ಲಕ್ಷ್ಮೀ ಬಾರಮ್ಮ', 'ಅಗ್ನಿಸಾಕ್ಷಿ'ಯಂತಹ ಜನಪ್ರಿಯ ಧಾರಾವಾಹಿಗಳು ಹಾಗೂ 'ಬಿಗ್ ಬಾಸ್ ಕನ್ನಡ 8' ಖ್ಯಾತಿಯ ಶಮಂತ್ ಬ್ರೋ ಗೌಡ ಅವರ ಬಳಿ ಒಂದು ಅಭ್ಯಾಸವಿದೆ. ಅವರು ಯಾವುದೇ ಹೊಸ ಗಾಡಿ ತೆಗೆದುಕೊಂಡರೂ ಮೊದಲು ಕನ್ನಡದ ಒಬ್ಬ ಸ್ಟಾರ್ ನಟನ ಬಳಿ ಹೋಗಲೇಬೇಕಂತೆ! ಅಷ್ಟೇ ಅಲ್ಲ, ಎಷ್ಟೋ ಸಮಯದಿಂದ ತಮ್ಮ ಫೋನ್ ಡಿಪಿ ಮತ್ತು ವಾಲ್‌ಪೇಪರ್ ಕೂಡ ಬದಲಿಸಿಲ್ಲವಂತೆ. ಅಷ್ಟಕ್ಕೂ ಶಮಂತ್ ಅಷ್ಟೊಂದು ಇಷ್ಟಪಡುವ ಆ ನಟ ಯಾರು? ಸಂದರ್ಶನದಲ್ಲಿ ಅವರು ಏನಂದರು? ಯಾಕೆ ಹೀಗೆ ಮಾಡುತ್ತಾರೆ? ಇಲ್ಲಿದೆ ನೋಡಿ ಸಂಪೂರ್ಣ ವಿವರ.

ಅವರು ಇಷ್ಟಪಡುವ ಆ ನಟ ಯಾರು?

ಶಮಂತ್ ಬ್ರೋ ಗೌಡ ಅಷ್ಟೊಂದು ಆರಾಧಿಸುವ ಆ ನೆಚ್ಚಿನ ನಟ ಬೇರೆ ಯಾರೂ ಅಲ್ಲ, ಕಿಚ್ಚ ಸುದೀಪ್! ಇತ್ತೀಚೆಗೆ ನಿರೂಪಕಿಯೊಂದಿಗೆ ನಡೆಸಿದ ಸಂದರ್ಶನದಲ್ಲಿ ಸುದೀಪ್ ಅವರ ಹೆಸರು ಪ್ರಸ್ತಾಪವಾಗುತ್ತಿದ್ದಂತೆಯೇ ಶಮಂತ್ ಸಖತ್ ಖುಷಿಯಾದರು. "ಓ ಸುದೀಪ್ ಸರ್! ಅವರು ನನ್ನ ಫೇವರೆಟ್" ಎಂದು ಹೇಳುತ್ತಲೇ, ನೋಟಿಫಿಕೇಶನ್‌ಗಳನ್ನೆಲ್ಲಾ ಕ್ಲಿಯರ್ ಮಾಡಿ ತಮ್ಮ ಫೋನ್ ಅನ್ನು ನಿರೂಪಕಿಗೆ ತೋರಿಸಿದರು. ಆ ಫೋನ್‌ನ ಡಿಪಿ (DP) ಹಾಗೂ ಲಾಕ್ ಸ್ಕ್ರೀನ್ ವಾಲ್‌ಪೇಪರ್‌ನಲ್ಲಿ ತಾವು ಮತ್ತು ಸುದೀಪ್ ಕಾರಿನಲ್ಲಿ ಕುಳಿತು ತೆಗೆಸಿಕೊಂಡಿರುವ ಫೋಟೋ ಇತ್ತು. "ಈ ಫೋಟೋ ತೆಗೆಸಿಕೊಂಡ ದಿನದಿಂದ ಇವತ್ತಿನವರೆಗೂ ನನ್ನ ಫೋನ್ ಡಿಪಿಯೂ ಚೇಂಜ್ ಆಗಿಲ್ಲ, ಲಾಕ್ ವಾಲ್‌ಪೇಪರ್ ಕೂಡ ಬದಲಿಸಿಲ್ಲ" ಎಂದು ಶಮಂತ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಯಾಕೆ ಹೀಗೆ ಮಾಡ್ತಾರೆ ಶಮಂತ್?

ಇದನ್ನು ನೋಡಿ ಅಚ್ಚರಿಪಟ್ಟ ನಿರೂಪಕಿ, "ವಾವ್! ನಿಮಗೆ ಅವರ ಮೇಲೆ ಅಷ್ಟೊಂದು ಅಭಿಮಾನವೇ?" ಎಂದು ಪ್ರಶ್ನಿಸಿದರು. ಅದಕ್ಕೆ "ಯೆಸ್" ಎಂದು ಉತ್ತರಿಸಿದ ಶಮಂತ್, ತಮ್ಮ ವಿಶೇಷ ಹವ್ಯಾಸವನ್ನು ಬಿಚ್ಚಿಟ್ಟರು. "ನಾನು ಯಾವುದೇ ಹೊಸ ಗಾಡಿ ತೆಗೆದುಕೊಂಡರೂ, ಮೊದಲು ಸುದೀಪ್ ಸರ್ ಅವರಿಗೆ ಒಂದು ರೌಂಡ್ ಕೊಟ್ಟು, ಆ ಗಾಡಿಯ ಮೇಲೆ ಅವರಿಂದ ಸಿಗ್ನೇಚರ್ ಹಾಕಿಸಿಕೊಳ್ಳುವುದು ನನ್ನ ಹ್ಯಾಬಿಟ್ ಆಗಿಬಿಟ್ಟಿದೆ" ಎಂದು ತಿಳಿಸಿದ್ದಾರೆ. ಸುದೀಪ್ ಅವರು ತಮ್ಮ ನೆಚ್ಚಿನ ನಟರಾಗಿರುವುದರಿಂದ ಮತ್ತು ಅವರ ಮೇಲಿರುವ ಅಪಾರ ಅಭಿಮಾನ ಹಾಗೂ ಪ್ರೀತಿಯ ಕಾರಣದಿಂದಲೇ ಶಮಂತ್ ಪ್ರತೀ ಬಾರಿ ಈ ರೀತಿ ಮಾಡುತ್ತಾರೆ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗಿದೆ.

ಅಂದಹಾಗೆ ಶಮಂತ್, ಈಗ ಪೂರ್ಣಪ್ರಮಾಣದ ನಾಯಕನಟನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಕಿರುತೆರೆಯಲ್ಲಿ ತಮ್ಮದೇ ಆದ ಮ್ಯಾನರಿಸಂ ಹಾಗೂ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಶಮಂತ್, ಇದೀಗ 'ಕದ್ರಿ' ಚಿತ್ರದ ಮೂಲಕ ಚಂದನವನದಲ್ಲಿ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.

ಈ ಹಿಂದೆ 'ರಾಘು' ಹಾಗೂ 'ಶೆಫ್ ಚಿದಂಬರ'ದಂತಹ ವಿಭಿನ್ನ ಕಥಾಹಂದರದ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ನಿರ್ದೇಶಕ ಎಂ. ಆನಂದ್ ರಾಜ್ ಅವರು 'ಕದ್ರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಕನ್ನಡದ ಜಾನಪದ ಭಯಾನಕ' ಎಂಬ ವಿಶೇಷ ಜಾನರ್‌ನಲ್ಲಿ ಈ ಸಿನಿಮಾವನ್ನು ರೂಪಿಸುತ್ತಿರುವುದು ಗಮನಾರ್ಹ. "ಕಲ್ಪನೆಗೂ ಮೀರಿದ ಕತ್ತಲೆ, ಕಾಲದಿಂದ ಅಚ್ಚಳಿಯದೆ ಉಳಿದಿರುವ ಭಯ" ಎಂಬ ಕುತೂಹಲಕಾರಿ ಅಡಿಬರಹ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಕಿರುತೆರೆಯ ಧಾರಾವಾಹಿಗಳು ಹಾಗೂ 'ಬಿಗ್ ಬಾಸ್' ಮನೆಯಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದ ಶಮಂತ್, ಮೊದಲ ಬಾರಿಗೆ ಜಾನಪದ ಭಯಾನಕ ಕಥೆಯ ಮೂಲಕ ನಾಯಕನಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಕಿರುತೆರೆಯಲ್ಲಿ ಗಳಿಸಿರುವ ಜನಪ್ರಿಯತೆಯನ್ನು ಬೆಳ್ಳಿತೆರೆಯಲ್ಲೂ ಉಳಿಸಿಕೊಳ್ಳುವ ಮಹತ್ವದ ಸವಾಲು ಇದೀಗ ಶಮಂತ್ ಮುಂದಿದೆ.

ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಎಂ. ಆನಂದ್ ರಾಜ್, ನಾಗರಾಜ್ ಸಿ ಅವರೊಂದಿಗೆ ಸೇರಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಅನುಭವಿ ತಂತ್ರಜ್ಞರ ದಂಡೇ ಈ ಚಿತ್ರಕ್ಕೆ ಸಾಥ್ ನೀಡುತ್ತಿದೆ. ಉದಯ ಲೀಲಾ ಛಾಯಾಗ್ರಹಣ, ವಿಜಯೇಂದ್ರ ಜೋಡಿದಾರ ಸಂಭಾಷಣೆ, ಸೂರಜ್ ಜೋಯಿಸ್ ಹಾಗೂ ಜುಬೈರ್ ಮುಹಮ್ಮದ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಸೂರಜ್ ಜೋಯಿಸ್ ಹಿನ್ನೆಲೆ ಸಂಗೀತ ನೀಡಲಿದ್ದಾರೆ.

ಉಳಿದಂತೆ ನಾಗೇಂದ್ರ ಉಜ್ಜನಿ ಸಂಕಲನ, ಅನಿಲ್ ಕಬೀರ್ ಕಲಾ ನಿರ್ದೇಶನ, ರಾ ಸೀನಾ ಸಾಹಸ ನಿರ್ದೇಶನ ಹಾಗೂ ಅಭಿಷೇಕ್ ಮಠದ್ ನೃತ್ಯ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಒಟ್ಟಿನಲ್ಲಿ, ಕಿರುತೆರೆಯಲ್ಲಿ 'ಬ್ರೋ ಗೌಡ'ನಾಗಿ ಮಿಂಚಿದ ಶಮಂತ್, 'ಕದ್ರಿ' ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಯಾವ ರೀತಿಯಲ್ಲಿ ಮೋಡಿ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

"ದೇವಿಯ ಪಾತ್ರ ಮಾಡುತ್ತಿದ್ರೂ ಸೆಟ್‌ನಲ್ಲಿ ಕೆಟ್ಟದಾಗಿ ನಡೆಸಿಕೊಂಡ್ರು": 'ಸೀತೆ' ಪಾತ್ರದ ಬಗ್ಗೆ ಶರ್ಮಿಳಾ ಚಂದ್ರಶೇಖರ್ ಮಾತು
1984ರಲ್ಲಿ ತೆರೆಗೆ ಬಂದಿದ್ದ 'ಶರಾಬಿ'ಯಲ್ಲಿ ನಿಜವಾಗಿಯೂ ಡ್ರಿಂಕ್ಸ್‌ ಮಾಡಿದ್ರಾ ಅಮಿತಾಭ್ ಬಚ್ಚನ್? ರಹಸ್ಯ ಇಲ್ಲಿದೆ!