'ನನಗೆ ಈ ವ್ಯಕ್ತಿಯೇ ವಿನ್ ಆಗಬೇಕು' ಬಿಗ್‌ ಬಾಸ್ ಗೆಲ್ಲುವ 5 ಸ್ಪರ್ಧಿಗಳ ಹೆಸರು ಹೇಳಿದ ಸೋನಿಕಾ ಗೌಡ!

Published : Nov 19, 2026, 08:23 PM IST
bigg boss sonika gowda

ಸಾರಾಂಶ

ಬಿಗ್ ಬಾಸ್ ಸೀಸನ್ 13ರಿಂದ ಹೊರಬಂದಿರುವ ಸೋನಿಕಾ ಗೌಡ ತಮ್ಮ 50 ದಿನಗಳ ಜರ್ನಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಪ್ರಕಾರ ಧನುಷ್ ಮತ್ತು ಸೌಂದರ್ಯ ಟ್ರೋಫಿ ಗೆಲ್ಲಲು ಅರ್ಹರು ಎಂದು ಅವರು ತಿಳಿಸಿದ್ದಾರೆ. ಜೊತೆಗೆ ತಮ್ಮ ಉದ್ಯಮ ಹಾಗೂ ಹಿನ್ನೆಲೆಯ ಬಗ್ಗೆಯೂ ಮಾತನಾಡಿದ್ದಾರೆ.

ಬಿಗ್ ಬಾಸ್ ಸೀಸನ್‌-13 ಜರ್ನಿ ಮುಗಿಸಿ ಆಚೆ ಬಂದಿರುವ ಸೋನಿಕಾ ಗೌಡ ತಮ್ಮ ಅನುಭವಗಳನ್ನ ಎಳೆ ಎಳೆಯಾಗಿ ಹಂಚಿಕೊಂಡಿದ್ದಾರೆ. ನನ್ನ ಬಿಗ್‌ ಬಾಸ್ ಪ್ರಯಾಣ ತುಂಬಾನೇ ಚೆನ್ನಾಗಿತ್ತು. ಅಲ್ಲಿ ನಾನು ಚೆನ್ನಾಗಿಯೇ ಇದ್ದೆ. 50 ದಿನಗಳ ಕಾಲ ನಾನು ಚೆನ್ನಾಗಿಯೇ ಆಡಿದೆ ಎಂದಿದ್ದಾರೆ.

ಇನ್ನು ಸಂದರ್ಶನ ಒಂದರಲ್ಲಿ ಯಾರು ಗೆಲ್ಲಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು.. ನನ್ನ ಪ್ರಕಾರ ಧನುಷ್, ಸೌಂದರ್ಯ, ತಾಂಡವ್, ಗಗನ್. ಇನ್ನುಳಿದಂತೆ ಅಲ್ಲಿ ಯಾರೂ ಟಾಪ್ ಫೈನಲ್‌ಗೆ ಡಿಸರ್ವಿಂಗ್ ಇಲ್ಲ. ನನಗೆ ಧನುಷ್ ಇಷ್ಟದ ಕಂಟೆಸ್ಟೆಂಟ್. ನನಗೆ ಅವರು ಗೆಲ್ಲಬೇಕು. ಈ ಬಾರಿ ಹೆಣ್ಮಕ್ಕಳು ಕೂಡ ಬಿಗ್ ಬಾಸ್ ಗೆಲ್ಲುವ ಸ್ಪರ್ಧೆಯಲ್ಲಿ ಇದ್ದಾರೆ. ಅದರಲ್ಲಿ ಸೌಂದರ್ಯ ತುಂಬಾ ಚೆನ್ನಾಗಿ ಆಡ್ತಿದ್ದಾರೆ. ಕಾವ್ಯ ಮತ್ತು ಆಸಿಯಾಗೆ ಕಂಪೇರ್ ಮಾಡಿದ್ರೆ ಸೌಂದರ್ಯ ಗುಡ್. ಸೌಂದರ್ಯ ಅವರು ಗೆಲ್ಲುವ ಕೆಪಾಸಿಟಿ ಇದೆ. ಅದು ಬಿಟ್ರೆ ಧನು ಆಟ ತುಂಬಾ ಚೆನ್ನಾಗಿದೆ. ಹೀಗಾಗಿ ನನ್ನ ಪ್ರಕಾರ ಧನು ಬಿಗ್‌ ಬಾಸ್‌ ಟ್ರೋಫಿ ಗೆಲ್ಲೋಕೆ ಡಿಸರ್ವಿಂಗ್ ಇದ್ದಾರೆ ಎಂದಿದ್ದಾರೆ.

ಸೋನಿಕಾ ಗೌಡ ಹಿನ್ನೆಲೆ

ನಟಿ ಸೋನಿಕಾ ಮೂಲತಃ ಕನ್ನಡದವರು. ಆದರೆ ಹುಟ್ಟಿದ್ದು ಮುಂಬೈನಲ್ಲಿ ಬೆಳೆದಿದ್ದು ದುಬೈನಲ್ಲಿ. ದುಬೈನಲ್ಲಿ ಆರಂಭಿಕ ಶಿಕ್ಷಣ ಪಡೆದರು. ನಂತರ ಕೇರಳ ಹಾಗೂ ತಮಿಳುನಾಡಿನಲ್ಲೂ ಕೆಲವು ವರ್ಷ ಇದ್ದರು. ನಂತರ ಅವರ ಕುಟುಂಬ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಕೊನೆಗೆ ಅವರು ಬೆಂಗಳೂರಿನಲ್ಲೇ ಸೆಟಲ್ಡ್ ಆದರು.

ಸೋನಿಕಾ ಗೌಡ ನಟನೆಯ ಜೊತೆಗೆ ಉದ್ಯಮ ಕ್ಷೇತ್ರದ ಅನುಭವ ಕೂಡ ಹೊಂದಿದ್ದಾರೆ. 'ಬಿಗ್ ಬಾಸ್ ಸೀಸನ್ 13' ಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ನೀಡದ್ದರು. ಸುಮಾರು 50 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಆಟವಾಡಿದ ಬಳಿಕ, ನವೆಂಬರ್ 2026 ರಲ್ಲಿ ನಡೆದ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರಬಂದರು.

ನಟಿ, ಕ್ಲಿನಿಕಲ್ ಈಸ್ತಟಿಷಿಯನ್ ಮತ್ತು ಉದ್ಯಮಿಯಾಗಿರುವ ಸೋನಿಕಾ ಬೆಂಗಳೂರಿನಲ್ಲಿ 'Glam X' ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. ಕನ್ನಡದ ಶತಾಯ ಗತಾಯ, ಖುಷಿ ಖುಷಿಯಾಗಿ, ನಾನೇ ರಾಜ ಸೇರಿದಂತೆ ತೆಲುಗು ಹಾಗೂ ಭೋಜ್‌ಪುರಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮದೇ ಆದ ಸಲೂನ್ ಮತ್ತು ಬೂಟಿಕ್ ಉದ್ಯಮವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅವರು ಈ ಹಿಂದಿನ ಮೂರು ಸೀಸನ್‌ಗಳ ʻಬಿಗ್ ಬಾಸ್ʼ ಆಫರ್ ತಿರಸ್ಕರಿಸಿದ್ದರು ಎಂದು ಹೇಳಕೊಂಡಿದ್ದಾರೆ. ಈ ಬಾರಿ ದೊಡ್ಮನೆಗೆ ಪ್ರವೇಶ ಮಾಡಿ 49 ದಿನಗಳ ಕಾಲ ಪ್ರಯಾಣಿಸಿದ್ದರು.

ಬಿಗ್‌ ಬಾಸ್‌ ಮನೆಗೆ ಎಂಟ್ರಿ ನೀಡಿದ ದಿನದಿಂದಲೂ ಸೋನಿಕಾ ಗೌಡ ಸೈಲೆಂಟ್ ಆಗಿದ್ದರು. ಹೊರಗಡೆ ಸಾಕಷ್ಟು ಲವಲವಿಕೆಯಿಂದ ಇರುವ ಸೋನಿಕಾ, ಮನೆಯೊಳಗೆ ವ್ಯಕ್ತಿತ್ವವನ್ನ ತೆರೆದಿಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಅಲ್ಲದೇ ವೀಕೆಂಡ್ ಅಷ್ಟೊತ್ತಿಗೆ ಸೋಶಿಯಲ್ ಮೀಡಿಯಾದಲ್ಲಿ ಅವರೇ ಮನೆಯಿಂದ ಆಚೆ ಬರುತ್ತಾರೆ ಎಂಬ ಚರ್ಚೆ ಶುರುವಾಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಐಶ್ವರ್ಯ ಸಿಂಧೋಗಿಗೆ ಅಪ್ಪ-ಅಮ್ಮನ ಸ್ಥಾನದಲ್ಲಿ ನಿಂತು ಮದ್ವೆ ಮಾಡಿಸ್ತಿದ್ದಾರೆ ಡಾಲಿ ರಾಜೇಶ್​ ದಂಪತಿ
ಸೋಶಿಯಲ್ ಮೀಡಿಯಾದಲ್ಲಿ ಧಮಾಕಾ ಎಬ್ಬಿಸುತ್ತಿರುವ ರೀಲ್ಸ್‌ ಜೋಡಿ; ಸುಮಿತ್‌ಗೆ ಕಲ್ಯಾಣಿ ಸಿಕ್ಕಿದ್ದು ಎಲ್ಲಿ ಗೊತ್ತಾ?