Ramachari: ತನ್ನ ಹೆಸರು ಕೂಗಿ ಅರ್ಭಟಿಸಿದ ರಾಮಾಚಾರಿ ಕಂಡು ನಡುಗಿದ ಚಾರು!

Published : Jun 22, 2022, 02:51 PM IST
Ramachari: ತನ್ನ ಹೆಸರು ಕೂಗಿ ಅರ್ಭಟಿಸಿದ ರಾಮಾಚಾರಿ ಕಂಡು ನಡುಗಿದ ಚಾರು!

ಸಾರಾಂಶ

ತನ್ನ ತಂಗಿಯ ಶ್ರುತಿಯ ಜೀವನ ಹಾಳು ಮಾಡಿದ್ದೇ ಚಾರು ಎಂದು ರಾಮಾಚಾರಿಗೆ ತಿಳಿದುಹೋಗಿದೆ. ಆತ ನೇರ ಚಾರು ಮನೆಗೇ ಬಂದು ಅರ್ಭಟಿಸಿದ್ದಕ್ಕೆ ಚಾರು ಮತ್ತು ಅವಳ ಮನೆಯವರು ನಡುಗಿ ಹೋಗಿದ್ದಾರೆ.  

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ 'ರಾಮಾಚಾರಿ' ಸೀರಿಯಲ್‌ನಲ್ಲಿ ರಾಮಾಚಾರಿ (Ramachari Searial) ಚಾರು ವಿರುದ್ಧ ತಿರುಗಿ ಬಿದ್ದಿದ್ದಾನೆ. ಅದಕ್ಕೆ ಕಾರಣ ಚಾರು ಮಾಡಿರುವ ಅನಾಹುತ. ಮಗಳು ಸಂಸ್ಕಾರ ಕಲಿಯಲಿ ಅಂತ ಶ್ರೀಮಂತೆ ಚಾರುವನ್ನು ಅವಳ ಅಪ್ಪ ರಾಮಾಚಾರಿ ಮನೆಯಲ್ಲಿ ಬಿಟ್ಟಾಗಿನಿಂದ ಅವಳ ಇಗೋಗೆ ಹರ್ಟ್ ಆಗುತ್ತಲೇ ಇದೆ. ಅವಳ ಇಗೋವನ್ನು ಹೇಗಾದರೂ ಮುರಿಯಬೇಕು ಅಂತ ರಾಮಾಚಾರಿ ಮನೆಯವರು, ಆದರೆ ತನಗೆ ತನ್ನ ಇಗೋ ದೊಡ್ಡದು ಅಂತನ್ನುವ ಚಾರು ಮಧ್ಯೆ ದೊಡ್ಡ ಘರ್ಷಣೆಯೇ ನಡೆದಿದೆ. ಅದರ ಫಲವೆಂಬ ಹಾಗೆ ಚಾರು ಮನೆಯವರಿಗೆ ಬುದ್ಧಿ ಕಲಿಸಲು ಹೋಗಿದ್ದಾಳೆ. ಪರಿಣಾಮ ರಾಮಾಚಾರಿಯ ತಂಗಿಯ ಬದುಕೇ ಹಾಳಾಗಿದೆ.

 ಯಾವ ಮನುಷ್ಯರೂ ಹುಟ್ಟಿಂದ ಕೆಟ್ಟವರಲ್ಲ, ಅವರು ಬೆಳೆಯುವ ಪರಿಸರ, ಪರಿಸರದಲ್ಲಿ ಅವರು ವಿಚಾರಗಳನ್ನು ಗೃಹಿಸುವ ರೀತಿ ಅವರ ಸ್ವಭಾವವನ್ನು ನಿರ್ಧರಿಸುತ್ತೆ ಅನ್ನೋದು ಮನಃಶಾಸ್ತ್ರದಲ್ಲಿ ಹೇಳಿರೋ ಮಾತು. 'ರಾಮಾಚಾರಿ' ನಾಯಕಿ ಚಾರುವಿನ ವಿಷಯದಲ್ಲೂ ಇದೇ ನಡೆಯುತ್ತಿದೆ. ಅವಳು ಹುಟ್ಟಿದ್ದು ಶ್ರೀಮಂತ ಉದ್ಯಮಿ ಜೈ ಶಂಕರ್ ಮನೆಯಲ್ಲಿ. ಜೈ ಶಂಕರ್ ಮೊದಲ ಪತ್ನಿ ಮಾನ್ಯತಾ ಮಗಳಾಗಿ. ಅಮ್ಮನ ದರ್ಪ, ಶ್ರೀಮಂತಿಕೆಯ ಸೊಕ್ಕು, ಅವಿವೇಕ ಎಲ್ಲ ಮಗಳಲ್ಲೂ ಇದೆ. ಆದರೆ ಆಳದಲ್ಲಿ ಮಾನವೀಯತೆಯೂ ಇದೆ. ಅವಿವೇಕ, ಅಹಂ ಆ ಮಾನವೀಯತೆ ಹೊರ ಬರೋದಕ್ಕೆ ಬಿಡ್ತಾ ಇಲ್ಲ. ಈ ಸೂಕ್ಷ್ಮ ಅರಿವ ಜೈ ಶಂಕರ್ ಮಗಳನ್ನು ರಾಮಾಚಾರಿಯ ತುಂಬು ಕುಟುಂಬದ ಮನೆಯಲ್ಲಿ ಸಂಸ್ಕಾರ ಕಲಿಯಲು ಬಿಡುತ್ತಾನೆ. ಸಂಪೂರ್ಣ ವಿರುದ್ಧ ಪರಿಸರದಲ್ಲಿ ಬೆಳೆಯುವ ಚಾರುಗೆ ಆ ಮನೆಯ ವಾತಾವರಣ, ಅಲ್ಲಿನ ಸಂಸ್ಕಾರಗಳೆಲ್ಲ ಅಸಹನೆ, ಸಿಟ್ಟು ಹೆಚ್ಚುವಂತೆ ಮಾಡುತ್ತೆ.

Kannadathi: ಮದುಮಗಳಂತೆ ರೆಡಿಯಾದ ವರೂ, ಹರ್ಷನ ಹೆಂಡ್ತಿ ನಾನೇ ಅಂತಿದ್ದಾಳಲ್ಲಪ್ಪಾ!

ಆದರೆ ಎಲ್ಲ ಕಡೆ ಅವಳ ಬಗ್ಗೆ ರಾಮಾಚಾರಿಗೆ ಕರುಣೆಯ ಇತ್ತು. ಆತ ಸಹನೆಯಿಂದಲೇ ಅವಳಿಗೆ ಸಹಾಯ ಮಾಡುತ್ತಿದ್ದ. ಸಂಸ್ಕಾರ ಕಲಿಯಲು ತನ್ನಿಂದಾದ ನೆರವನ್ನೆಲ್ಲ ನೀಡುತ್ತಿದ್ದ. ಅವಳು ತಪ್ಪು ಮಾಡಿದಾಗ ಬುದ್ಧಿ ಹೇಳಿ ತಿದ್ದುತ್ತಿದ್ದ. ಆದರೆ ಈ ಸಹನೆ, ಬುದ್ಧಿವಂತಿಕೆ ರಾಮಾಚಾರಿ ಮನೆಯವರಲ್ಲಿ ಅಷ್ಟಾಗಿ ಕಾಣುತ್ತಿರಲಿಲ್ಲ. ತಮ್ಮ ಸಂಸ್ಕಾರವೇ ದೊಡ್ಡದು, ಚಾರು ಬಹಳ ಕೆಟ್ಟವಳು ಅನ್ನುವ ರೀತಿ ಅವರ ವರ್ತನೆ ಇತ್ತು.

ಒಂದು ಸನ್ನಿವೇಶದಲ್ಲಿ ಮನೆಯವರ ಈ ವರ್ತನೆ ಚಾರುವನ್ನು ಒಂದು ಕೆಟ್ಟ ಕೆಲಸ ಮಾಡುವಂತೆ ಪ್ರೇರೇಪಿಸಿದೆ. ರಾಮಾಚಾರಿ ತಂಗಿಯೇ ಅವಳ ಟಾರ್ಗೆಟ್ ಆಗಿದ್ದಾಳೆ. ಮನೆಯವರೆಲ್ಲ ಚಾರುವಿನ ಸಂಸ್ಕಾರವನ್ನು ಆಡಿಕೊಳ್ಳುತ್ತಾ, ರಾಮಾಚಾರಿಯ ತಂಗಿ ಶ್ರುತಿಯ ಕಾಲಡಿ ನುಸುಳುವ ಯೋಗ್ಯತೆಯೂ ನಿನಗಿಲ್ಲ ಎಂದಿದ್ದು ಅವಳ ಸಿಟ್ಟನ್ನು ಕೆರಳಿಸಿದೆ. ಇದಕ್ಕೆ ಪ್ರತೀಕಾರವಾಗಿ ಅವಳು ಧನುಷ್‌ನನ್ನು ಬಳಸಿ ರಾಮಾಚಾರಿಯ ತಂಗಿ ಶ್ರುತಿ ಜೊತೆಗೆ ಪ್ರೀತಿಯ ನಾಟಕ ಆಡುವಂತೆ ಮಾಡಿದ್ದಾಳೆ. ಈ ಮೂಲಕ ಅವರ ಇಡೀ ಕುಟುಂಬಕ್ಕೆ ಅವಮಾನವಾಗುವಂತೆ ಮಾಡಿದ್ದಾಳೆ. 

Kannadathi: ಡಾ.ದೇವ್ ಪಾತ್ರಧಾರಿ ವಿಜಯ ಕೃಷ್ಣ ಸೀರಿಯಲ್‌ನಿಂದ ಔಟ್! ಹೇಮಂತ್ ಎಂಟ್ರಿ..

ಈ ವಿಚಾರ ಚಾರುವಿಗೆ ಪ್ರತೀಕಾರ. ಆದರೆ ರಾಮಾಚಾರಿ ಕುಟುಂಬಕ್ಕೆ ತಡೆಯಲಾರದ ಹೊಡೆತ. ಶ್ರುತಿಯ ಬದುಕೇ ಇದರಿಂದ ಹಾಳಾಗಿದೆ. ರಾಮಾಚಾರಿಗೆ ಈ ವಿಷಯ ತಿಳಿದು ಆತ ಚಾರುವಿನ ಮನೆಗೆ ಬಂದು ಉಗ್ರರೂಪ ತೋರಿದ್ದಾನೆ. ರಾಮಾಚಾರಿಯ ಹೊಸ ಅವತಾರ ಕಂಡು ಚಾರು ನಡುಗಿದ್ದಾಳೆ. ತಾನ್ಯಾಕೆ ಅಂಥಾ ಕೆಲಸ ಮಾಡಿದೆ ಅನ್ನೋದನ್ನೂ ಹೇಳಿದ್ದಾಳೆ. ಇಂಥಾ ಸಮಯದಲ್ಲೂ ವ್ಯವಧಾನ ಕಳೆದುಕೊಳ್ಳದ ರಾಮಾಚಾರಿ ನಿಜವಾದ ಯೋಗ್ಯತೆ ಗಳಿಸಿಕೊಳ್ಳುವುದು ಹೇಗೆ ಅನ್ನುವ ಪಾಠವನ್ನು ಚಾರುವಿಗೆ ಕಲಿಸಿದ್ದಾನೆ. ನಾನು ಎತ್ತರಕ್ಕೆ ಬೆಳೀಬೇಕು ಅಂದರೆ ಅವನಿಗಿಂತ ಎತ್ತರಕ್ಕೆ ಹೋಗುವ ಯೋಗ್ಯತೆ ಸಂಪಾದಿಸಬೇಕೇ ಹೊರತು ಅವನ ಕಾಲನ್ನು ಕತ್ತರಿಸಿ ತಾನು ಬೆಳೆದೆ ಅಂತ ಬೀಗೋದಲ್ಲ ಅನ್ನುವ ಮಾತು ಹೇಳಿದ್ದಾನೆ. ಇದು ನಿಜ ಬದುಕಿಗೂ ಸಂದೇಶದ ಹಾಗಿದೆ. 

ರಾಮಾಚಾರಿಯ ಈ ನಟನೆಗೆ ವೀಕ್ಷಕರಿಂದಲೂ ಮೆಚ್ಚುಗೆ ಹರಿದುಬಂದಿದೆ. ಋತ್ವಿಕ್ ಕೃಪಾಕರ್ ರಾಮಾಚಾರಿಯಾಗಿ ಮಿಂಚಿದ್ರೆ, ಮೌನಾ ಗುಡ್ಡೆಮನೆ ಚಾರು ಪಾತ್ರದಲ್ಲಿ ಗಮನಸೆಳೆಯುತ್ತಿದ್ದಾರೆ. 

ನಟಿ ಐಶ್ವರ್ಯ ಮುಖಕ್ಕೆ ಪಾರ್ಶ್ವವಾಯು; ಸ್ಟ್ರಾಂಗ್ ಸ್ಟಿರಾಯ್ಡ್‌ಗಳು ಹಿಂಸೆ ಎಂದ ನಟ

 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!