ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ನಲ್ಲಿ ಶ್ರಾವಣಿ ಸುಬ್ಬುವನ್ನು ಅಡ್ಡ ಹಾಕಿ ಪ್ರಶ್ನೆ ಮಾಡಿದ್ದಾಳೆ. ಆಗ ನನ್ನ ಮನಸ್ಸಲ್ಲಿರೋದು ನೀವೇ ಮೇಡಂ ಅಂತ ಸುಬ್ಬು ಹೇಳಿದ್ದಾನೆ. ಆದರೆ ಇದ್ಯಾಕೋ ಮಿಸ್ ಹೊಡೀತಿದ್ಯಲ್ಲ ಅಂತಿದ್ದಾರೆ ಫ್ಯಾನ್ಸ್.
ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ನಲ್ಲಿ ಸುಬ್ಬು ಮತ್ತು ಶ್ರಾವಣಿ ನಡುವೆ ಅದೂ ಇದೂ ಎಲ್ಲ ಶುರುವಾಗಿ ಬಹಳ ಟೈಮ್ ಆಯ್ತು. ಆದರೂ ಕಥೆ ಅಲ್ಲೇ ಇದೆ. ಅಲ್ಲಿಂದ ಮುಂದೆ ಒಂದು ಸ್ಟೆಪ್ ಕೂಡ ಇಟ್ಟಿಲ್ಲ. ಇದೀಗ ಕಥೆಗೆ ಚೂರು ಚಲನೆ ಬಂದ ಹಾಗಿದೆ. ಆದರೆ ಅದು ರಿಯಲ್ಲಾ ಅಥವಾ ಅಲ್ಲೊಂದು ಟ್ವಿಸ್ಟ್ ಇಟ್ಟಿದ್ದಾರ ಅನ್ನೋ ಅನುಮಾನ ವೀಕ್ಷಕರಿಗೆ ಇದೆ. ಏಕೆಂದರೆ ಸುಬ್ಬು ಆ ಡೈಲಾಗ್ ಹೇಳಿರುವ ರೀತಿ ಆ ಥರ ಇದೆ. ಎಲ್ಲರಿಗೂ ಗೊತ್ತಿರುವಂತೆ ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ, ದುಡ್ಡಿಗಿಂತಲೂ ಒಳ್ಳೆಯನಕ್ಕೆ ಬೆಲೆಕೊಟ್ಟು ಶುದ್ಧ ಪ್ರೀತಿಗಾಗಿ ಹಾತೊರೆಯುವ ಮಗಳು ಶ್ರಾವಣಿ. ತನ್ನನ್ನು ಹುಟ್ಟಿಸಿದ ಅಪ್ಪನ ಜೊತೆಗೇ ಬೆಳೆದರೂ ಕೆಟ್ಟ ಬುದ್ಧಿಯ ಅತ್ತೆಯಿಂದಾಗಿ ಅಪ್ಪ ಹತ್ತಿರವಿದ್ದೂ ದೂರ ಇರುವ ಹಾಗಾಗಿದೆ. ಅಪ್ಪನನ್ನು ಕಂಡರೆ ಮಗಳಿಗೆ ಬಹಳ ಪ್ರೀತಿ. ಆದರೆ ಅಪ್ಪನ ಮನಸ್ಸಲ್ಲಿ ಆಳದಲ್ಲಿ ಮಗಳ ಬಗ್ಗೆ ಪ್ರೀತಿ ಇದ್ದರೂ, ಅಕ್ಕ ಬಹಳ ವರ್ಷಗಳಿಂದ ನೀಡುತ್ತ ಬಂದಿರುವ ಕೆಟ್ಟ ಫೀಡ್‌ಬ್ಯಾಕ್ ಆತನಿಗೆ ಅಷ್ಟು ಬೇಗ ಮಗಳ ಬಗ್ಗೆ ಪ್ರೀತಿ ವಿಶ್ವಾಸ ಬರಲು ಬಿಡೋದಿಲ್ಲ. ಇದಕ್ಕಾಗಿ ಆತ ಮಗಳು ಶ್ರಾವಣಿಯನ್ನು ದೂರವೇ ಇಟ್ಟಿದ್ದಾನೆ. ಅವಳ ಬಗ್ಗೆ ಸಿಟ್ಟನ್ನೇ ತೋರಿಸುತ್ತಾ ಬಂದಿದ್ದಾನೆ. ಆದರೆ ಕ್ರಮೇಣ ಅದು ಬದಲಾಗುತ್ತಿದೆ. ಅದು ಬದಲಾಗೋದು ಸುಬ್ಬುವಿನಿಂದ. ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಹುಡುಗ ಈ ಸುಬ್ಬು. ಈ ಶ್ರಾವಣಿ ಓದೋ ಕಾಲೇಜಿನಲ್ಲೇ ಅವನೂ ಓದುತ್ತಿದ್ದಾನೆ. ಆದರೆ ಅವನು ಸದಾ ಅವಳಿಗೆ ಕಾವಲಿನ ಹಾಗೆ ಇರುವ ಹುಡುಗ. ಅವಳು ಖುಷಿ ಆಗಿರಲಿ ಅಂತ ಸದಾ ಬಯಸುವ ಉತ್ತಮ ಸ್ನೇಹಿತ.
ಈ ನಡುವೆ ಶ್ರಾವಣಿಗೆ ಒಂದು ಹಂತದಲ್ಲಿ ಸುಬ್ಬು ಮೇಲೆ ಪ್ರೀತಿ ಹುಟ್ಟಿದೆ. ಅದನ್ನು ಅವಳು ನಾನಾ ಬಗೆಯಲ್ಲಿ ಅವನಿಗೆ ಕನ್ವೇ ಮಾಡುತ್ತಿದ್ದಾಳೆ. ಆದರೆ ಸುಬ್ಬುವಿಗೆ ಇದು ಅರ್ಥವೇ ಆಗುತ್ತಿಲ್ಲ. ಅವನಿಗೆ ನಿಜಕ್ಕೂ ಅರ್ಥ ಆಗ್ತಾ ಇಲ್ವಾ ಅಥವಾ ಆತ ಪರಿಸ್ಥಿತಿಗೆ ಸೋತು ಹಾಗೆ ಆಡ್ತಿದ್ದಾನಾ ಅನ್ನೋದು ವೀಕ್ಷಕರಿಗೆ ಇನ್ನೂ ಗೊತ್ತಿಲ್ಲ.
ಅಮೃತಧಾರೆಯ ಜೀವ ಪಾತ್ರಧಾರಿ ಚೇಂಜ್! ಶಶಿ ಹೆಗಡೆ ರೀಲ್ಸ್ ಮಾಡ್ತಾ ಸೀರಿಯಲ್‌ನೇ ಮರ್ತುಬಿಟ್ರಾ?
ಇನ್ನೊಂದು ಕಡೆ ಶ್ರಾವಣಿಗೆ ಅತ್ತೆ ಮಗನ ಜೊತೆಗೆ ಅಪ್ಪ ಮದುವೆ ಮಾಡ್ತಿದ್ದಾನೆ. ಆದರೆ ಶ್ರಾವಣಿ ಈ ಮೊದಲೇ ತನ್ನ ಕತ್ತಿಗೆ ತಾಳಿ ಕಟ್ಟಿಕೊಂಡು ತನಗೆ ಅದಾಗಲೇ ಮದುವೆ ಆಗಿದೆ ಅಂದಿದ್ದಾಳೆ. ಯಾರು ಹುಡುಗ ಅನ್ನೋ ಪ್ರಶ್ನೆ ಬಂದಾಗ ಸುಬ್ಬು ಕಡೆಗೆ ಬೊಟ್ಟು ಮಾಡಿದ್ದಾಳೆ. ಇತ್ತ ಸುಬ್ಬು ಏನೂ ತೋಚದ ಸ್ಥಿತಿಯಲ್ಲಿದ್ದಾನೆ. ಅತ್ತ ಕಡೆ ಇನ್ನೊಬ್ಬ ಹುಡುಗಿ ಶ್ರೀವಲ್ಲಿ ಅವನ ಹಿಂದೆ ಬಿದ್ದಿದ್ದಾಳೆ. ಅವಳನ್ನು ಮದುವೆ ಮಾಡಿಕೊಳ್ಳಲು ಮನೆಯಲ್ಲಿ ಬಲವಂತ ನಡೆಯುತ್ತಿದೆ. ಇನ್ನೊಂದು ಕಡೆ ಶ್ರಾವಣಿಗೆ ಇಷ್ಟವೇ ಇಲ್ಲ ಮದನ್ ಜೊತೆಗೆ ಅವಳ ಮದುವೆ ಫಿಕ್ಸ್ ಆಗಿದೆ. ಆದರೆ ಯಾವ ಕಾರಣಕ್ಕೂ ಮದುವೆ ಮಾಡಿಕೊಳ್ಳಲು ರೆಡಿ ಇಲ್ಲದ ಅವಳು ಅಪ್ಪನಿಗೆ ನೋವು ಮಾಡಬಾರದು ಎಂಬ ಕಾರಣಕ್ಕೆ ಒಪ್ಪಿಕೊಂಡಿದ್ದಾಳೆ. ಈ ನಡುವೆ ಕನಸಿನಲ್ಲಿ ಅವಳ ಅಮ್ಮ ಬಂದು ನಿಜವಾದ ಪ್ರೀತಿಗೆ ಯಾವತ್ತೂ ಗೆಲುವು ಇರುತ್ತದೆ ಅನ್ನೋದನ್ನು ಹೇಳಿದ್ದಾಳೆ.
ಇದರ ನಡುವೆ ಸುಬ್ಬು ಹೇಳಿದ ಒಂದು ಮಾತು ಶ್ರಾವಣಿ ಮಾತ್ರ ಅಲ್ಲ, ವೀಕ್ಷಕರನ್ನೂ ಗೊಂದಲಕ್ಕೆ ನೂಕಿದೆ. ಶ್ರಾವಣಿ ಸುಬ್ಬು ಹತ್ರ ನಿನ್ನ ಮನಸ್ಸಲ್ಲಿರೋ ಹುಡುಗಿ ಯಾರು ಅಂತ ಪಟ್ಟು ಹಿಡಿದು ಕೇಳಿದ್ದಾಳೆ. ಆತ ಶುರುವಲ್ಲಿ ತಪ್ಪಿಸಿಕೊಳ್ಳಲು ನೋಡಿದರೂ ಆಮೇಲೆ ನೀವೇ ಮೇಡಂ ಅಂದಿದ್ದಾನೆ. ಅದನ್ನು ಕೇಳಿ ಎಲ್ಲರಿಗೂ ಆಶ್ಚರ್ಯ ಆಗಿದೆ. ಸುಬ್ಬು ಇಷ್ಟು ಬೇಗ ಶ್ರಾವಣಿ ಪ್ರೀತಿಯನ್ನು ಒಪ್ಪಿಕೊಂಡು ಬಿಟ್ಟನಾ ಅಂತ. ಇದು ಕನಸಿರಬಹುದು ಅಂತ ಕೆಲವರು, ಇದು ಬೇರೆ ಡೈಮೆನ್ಶನ್ ತಗೊಳ್ಳುತ್ತೆ ಅಂತ ಮತ್ತೆ ಕೆಲವರು ಕಾಮೆಂಟ್ ಮಾಡ್ತಿದ್ದಾರೆ. ಆದರೆ 'ನನ್ನ ಮನಸ್ಸಲ್ಲಿರೋದು ನೀವೇ ಮೇಡಂ' ಅನ್ನೋ ಸುಬ್ಬು ಮಾತು ಮಾತ್ರ ಎಲ್ಲರ ತಲೆಗೆ ಹುಳ ಬಿಟ್ಟಿದೆ.