ಲಚ್ಚಿ ಪುಟ್ಟ ಗುಂಡುಮಾಮನ ಜೊತೆ ಮಲ್ಕೊಂಡ್ರೆ ಸುಟ್ಟ ವಾಸನೆ ಬರ್ತಿರೋದು ಎಲ್ಲಿಂದ? ಭೂಮಿ ಕ್ಯೂಟ್‌ ಪೊಸೆಸ್ಸಿವ್‌ನೆಸ್‌ ನೋಡಿ!

By Bhavani Bhat  |  First Published Jan 16, 2025, 1:40 PM IST

ಅಮೃತಧಾರೆ ಸೀರಿಯಲ್‌ನಲ್ಲಿ ಗುಂಡು ಮಾಮ ಮತ್ತು ಪುಟಾಣಿ ಲಚ್ಚಿ ಸೊಸೆ ಎಪಿಸೋಡ್‌ಗಳು ಜನಮನ ಗೆದ್ದಿವೆ. ಲಚ್ಚಿ ಹಠ ಮಾಡಿ ಗುಂಡು ಮಾಮನ ಜೊತೆ ಮಲ್ಕೊಂಡ್ರೆ ಪಕ್ಕದ ಪಕ್ಕದಲ್ಲೇ ಸುಟ್ಟ ವಾಸನೆ ಬರ್ತಿರೋದು ಎಲ್ಲಿಂದ ಅನ್ನೋ ಎಪಿಸೋಡು ವೀಕ್ಷಕರ ಮನ ಗೆದ್ದಿದೆ


ಅಮೃತಧಾರೆ ಸೀರಿಯಲ್‌ನಲ್ಲಿ ಸದ್ಯ ಲವಲವಿಕೆ ಹೆಚ್ಚಾಗಿದೆ. ಕಾರಣ ಈ ಸೀರಿಯಲ್ ನಾಯಕ ಗೌತಮ್‌ ದಿವಾನ್ ಮನೆಯಲ್ಲಿ ತುಂಬಿ ತುಳುಕುತ್ತಿರುವ ಸಂತೋಷ. ಇದಕ್ಕೆ ಕಾರಣ ಗೌತಮ್ ತಾಯಿ ಮತ್ತು ತಂಗಿಯ ಆಗಮನ ಆಗಿರೋದು. ಇಷ್ಟೇ ಆಗಿದ್ರೆ ಪರ್ವಾಗಿರ್ತಿರಲಿಲ್ಲ. ಇವರ ಜೊತೆಗೆ ಒಂದು ಮಗುವೂ ಬಂದಿದೆ. ಇದರಿಂದ ಸೀರಿಯಲ್‌ ನ ಸಕ್ಸಸ್ ಓಟ ಹೆಚ್ಚಾಗಿದೆ. ಇದೀಗ ಅಂತೂ ಮಾವ ಮತ್ತು ಸೊಸೆ ಮುದ್ದಿನ ಒಡನಾಡ ನೋಡಿ ಒಂದು ಸುಟ್ಟ ವಾಸನೆಯೂ ಕಾಣಿಸಿಕೊಂಡಿದೆ. ಅದನ್ನೂ ವೀಕ್ಷಕರು ಎನ್‌ಜಾಯ್ ಮಾಡ್ತಿದ್ದಾರೆ. 'ಅಮೃತಧಾರೆ' ಧಾರಾವಾಹಿ ಈಗಾಗಲೇ ಎಲ್ಲೆಡೆ ಮೆಚ್ಚುಗೆ ಗಳಿಸಿ ನಂಬರ್ ವನ್ ಸ್ಥಾನವನ್ನು ಆವರಿಸಿಕೊಂಡಿದೆ. ಕರ್ನಾಟಕದ ಮನೆ ಮನೆಯಲ್ಲಿ ಮೆರೆದ ಧಾರಾವಾಹಿ 'ಅಮೃತಧಾರೆ' ಸಂಭ್ರಮದಲ್ಲಿ ಮುಳುಗಿದೆ. ಗೌತಮ್ ಹಾಗೂ ಭೂಮಿಕಾ ಲವ್ ಸ್ಟೋರಿ ಇಷ್ಟ ಆಗಿದೆ. ಇಬ್ಬರೂ ಜೋಡಿಯಾಗಿ ಇಷ್ಟ ಆಗಿದ್ದಾರೆ. ವೀಕ್ಷಕರು ಬಾಯ್ತುಂಬ ಹೊಗಳುತ್ತಿರುವ ಈ ಧಾರಾವಾಹಿ ಎರಡೆರಡು ಸಂಭ್ರಮವನ್ನು ಸೆಲೆಬ್ರೇಟ್ ಮಾಡಿದ್ದೂ ಆಯ್ತು. ಒಂದು ನಂಬರ್ 1 ಆಗಿರೋ ಖುಷಿ ಆದರೆ ಇನ್ನೊಂದು 500 ಎಪಿಸೋಡ್‌ಗಳನ್ನು ಯಶಸ್ವಿಯಾಗಿ ಮುಗಿಸಿರೋ ಸಂಭ್ರಮ.

ಇನ್ನು ಕಥೆ ವಿಚಾರಕ್ಕೆ ಬರೋದಾದ್ರೆ ಸದ್ಯ ಈ ಸೀರಿಯಲ್‌ನಲ್ಲಿ ಒಂದು ಕಡೆ ಫ್ಯಾಮಿಲಿ ಡ್ರಾಮ, ಇನ್ನೊಂದು ಕಡೆ ಸರ್ಕಾರಿ ಶಾಲೆಗಳ ರಕ್ಷಣೆ, ಮತ್ತೊಂದು ಕಡೆ ವಿಲನ್ ರಾಜೇಂದ್ರ ಭೂಪತಿ ಎಪಿಸೋಡ್‌ಗಳು ಭರ್ಜರಿ ಪ್ರದರ್ಶನ ಕಾಣ್ತಿವೆ. ಮುಖ್ಯವಾಗಿ ಗೌತಮ್‌ಗೆ ಬಹಳ ವರ್ಷಗಳಿಂದ ಹುಡುಕಾಡುತ್ತಿದ್ದ ತನ್ನ ತಾಯಿ ಹಾಗೂ ತಂಗಿ ಸಿಕ್ಕಿದ್ದಾರೆ.

Tap to resize

Latest Videos

ಅಮೃತಧಾರೆಯ ಜೀವ ಪಾತ್ರಧಾರಿ ಚೇಂಜ್‌! ಶಶಿ ಹೆಗಡೆ ರೀಲ್ಸ್‌ ಮಾಡ್ತಾ ಸೀರಿಯಲ್‌ನೇ ಮರ್ತುಬಿಟ್ರಾ?

ಆದರೆ, ಅಮ್ಮನಿಗೆ ಯಾವುದು ನೆನಪಿರಲಿಲ್ಲ. ಶಾಕುಂತಲಾ ದೇವಿಯನ್ನು ಗುರುತು ಹಿಡಿದಿರಲಿಲ್ಲ. ಹೀಗಾಗಿ ಶಾಕುಂತಲಾ ದೇವಿ ನಿಟ್ಟುಸಿರು ಬಿಟ್ಟಿದ್ದರು. ಆದ್ರೀಗ ಗೌತಮ್ ತಾಯಿಗೆ ಶಾಕುಂತಲಾ ದೇವಿ ನೋಡಿ ಹಳೆಯದ್ದು ನೆನಪಾಗುವ ಸನ್ನಿವೇಶ ಎದುರಾಗಿದೆ. ಭೂಮಿಕಾ ಮುಂದೆ ಭಾಗ್ಯಮ್ಮನ ಭಯಕ್ಕೆ ಕಾರಣ ಹೊರಬೀಳುತ್ತಾ? ಶಕುಂತಲಾ ದೇವಿ ಅಸಲಿ ಮುಖವಾಡ ಕಳಚಿ ಬೀಳುತ್ತಾ ಅನ್ನೋದನ್ನು ನೋಡಬೇಕಿದೆ.

ಈ ಎಲ್ಲ ಕಷ್ಟ, ಟೆನ್ಶನ್‌ಗಳ ನಡುವೆ ಎಲ್ಲರಿಗೂ ಖುಷಿ ಕೊಡ್ತಿರೋದು ಗುಂಡು ಮಾಮ ಮತ್ತು ಪುಟಾಣಿ ಲಚ್ಚಿ ಸೊಸೆಯ ಎಪಿಸೋಡ್‌ಗಳು.

ಸೀರಿಯಲ್‌ಗಳಲ್ಲಿ ಮಕ್ಕಳ ಎಪಿಸೋಡ್‌ ಯಾವತ್ತೂ ಜನರಿಗೆ ಕನೆಕ್ಟ್ ಆಗೋದು ಜಾಸ್ತಿ. ಇದನ್ನು ಚೆನ್ನಾಗಿ ಬಲ್ಲ ಸೀರಿಯಲ್ ಟೀಮ್ ಅದರಂತೆ ಮಾಮ ಮತ್ತು ಸೊಸೆಯ ಎಪಿಸೋಡ್ ಪ್ರಸಾರ ಮಾಡ್ತಿದೆ. ಇದರಲ್ಲೀಗ ಲಚ್ಚಿ ತನ್ನ ಮಾವನ ಜೊತೆಗೇ ಮಲಕ್ಕೋತೀನಿ ಅಂತ ಹಠ ಮಾಡ್ತಿದ್ದಾಳೆ. ಅಮ್ಮ ಸುಧಾ ಅವಳನ್ನು ತಡೆದರೂ ಬಿಡ್ತಿಲ್ಲ. ತಾನು ಮಾವನ ಜೊತೆಗೇ ಮಲಕ್ಕೊಳ್ಳೋದು ಅಂತ ಹಠ ಹಿಡಿದಿದ್ದಾಳೆ. ಇದು ಮಾವ ಗೌತಮ್ ಕಣ್ಣಿಗೂ ಬಿದ್ದಿದೆ. ಆತ ಸಂತೋಷದಿಂದ ಪುಟಾಣಿ ಸೊಸೆಯನ್ನು ತನ್ನ ಪಕ್ಕ ಮಲಗಿ ಸುಖಪುರುಷನಂತೆ ನಿದ್ದೆ ಹೋಗಿದ್ದಾನೆ. ಆದರೆ ಮಲಗಲು ಬಂದ ಭೂಮಿಗೆ ಇದನ್ನು ನೋಡಿ ಶಾಕ್ ಆಗಿದೆ. ಅವಳಿಗೆ ಗೌತಮ್ ಪಕ್ಕ ಮಲಗದೇ ನಿದ್ದೆಯೇ ಬರ್ತಿಲ್ಲ.

ವೈಷ್ಣವ್‌ ಲಕ್ಷ್ಮೀ ಹನಿಮೂನ್‌ನಲ್ಲಿ ಕರಡಿಯಂತೆ ಬಂದ ಕೀರ್ತಿ! ಬಿಂದಾಸ್ ಡ್ಯಾನ್ಸ್‌ ಮಾಡಿದವಳಿಗೆ ನೆಟ್ಟಿಗರ ಬೆಂಬಲ

ಅವಳು ಮಗುವನ್ನು ಗೌತಮ್ ಆಚೆ ಮಲಗಿಸಿ ತಾನು ಗೌತಮ್ ಪಕ್ಕ ಮಲಗೋಕೆ ಟ್ರೈ ಮಾಡಿದರೆ ಗೌತಮ್ ಗದರಿ ಮಗುವನ್ನು ಪಕ್ಕ ಮಲಗಿಸಿಕೊಂಡಿದ್ದಾನೆ. ನಿದ್ದೆ ಬರದೆ ಪೊಸೆಸ್ಸಿವ್‌ನೆಸ್‌ನಲ್ಲಿ ಒದ್ದಾಡ್ತ ಭೂಮಿ ಬೇರೇನೂ ತೋಚದೆ ಪುಸ್ತಕ ಹಿಡಿದಿದ್ದಾಳೆ. ಆಗ ಎಚ್ಚರ ಆದ ಗೌತಮ್‌ಗೆ ಏನೋ ಮಿಸ್‌ ಅಗಿ ಅನಿಸಿದೆ. ಸುಟ್ ವಾಸನೆ ಬರ್ತಿದೆ, ಸರಿಯಾಗಿ ನೋಡಿ ಡುಮ್ಮ ಸರ್ ಅಂತ ವೀಕ್ಷಕರು ಹೇಳ್ತಿದ್ದಾರೆ.

ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್‌ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾಸಿಂಗ್ ನಟಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

click me!