ನನ್ನ ಇತಿಹಾಸ ಗೊತ್ತಿದ್ರೂ ಮದ್ವೆಗೆ ಒಪ್ಪಿದ್ದಾಳೆ! ಮತ್ತೊಂದು ಮದ್ವೆಗೆ ರೆಡಿಯಾದ ದೃಷ್ಟಿಬೊಟ್ಟು ನಟ ವಿಜಯ್​ ಹೇಳಿದ್ದೇನು?

Published : Jan 16, 2025, 09:51 PM ISTUpdated : Jan 17, 2025, 09:59 AM IST
ನನ್ನ ಇತಿಹಾಸ ಗೊತ್ತಿದ್ರೂ ಮದ್ವೆಗೆ ಒಪ್ಪಿದ್ದಾಳೆ! ಮತ್ತೊಂದು ಮದ್ವೆಗೆ ರೆಡಿಯಾದ ದೃಷ್ಟಿಬೊಟ್ಟು ನಟ ವಿಜಯ್​  ಹೇಳಿದ್ದೇನು?

ಸಾರಾಂಶ

ವಿಜಯ್ ಸೂರ್ಯ "ದೃಷ್ಟಿಬೊಟ್ಟು" ಧಾರಾವಾಹಿಯಲ್ಲಿ ರೌಡಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. "ಅಗ್ನಿಸಾಕ್ಷಿ" ಧಾರಾವಾಹಿ ಖ್ಯಾತಿಯ ಈ ನಟ, ಧಾರಾವಾಹಿಗಳ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಈಗ ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ಮತ್ತೊಂದು ಮದುವೆಯಾಗುತ್ತಿರುವ ರೌಡಿ ದತ್ತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಯಲ್ ಲೈಫ್‌ನಲ್ಲಿ ಚೈತ್ರಾ ಶ್ರೀನಿವಾಸ್ ಅವರನ್ನು ವಿವಾಹವಾಗಿದ್ದು, ಎರಡು ಮಕ್ಕಳ ತಂದೆಯಾಗಿದ್ದಾರೆ.

ನಟ ವಿಜಯ್ ಸೂರ್ಯ ಅವರು ಈಗ ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಾಕಲೇಟ್‌ ಬಾಯ್‌ ಎಂದೇ ಫೇಮಸ್‌ ಆಗಿರೋ ನಟ, ಈ ಸೀರಿಯಲ್‌ನಲ್ಲಿ ರೌಡಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅಂದಹಾಗೆ ವಿಜಯ್‌ಸೂರ್ಯ ಅವರಿಗೆ ಸಕತ್‌ ಹಿಟ್‌ ಕೊಟ್ಟಿದ್ದು ‘ಅಗ್ನಿಸಾಕ್ಷಿ’ ಸೀರಿಯಲ್‌. ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್‌ ಪ್ರಸಾರ ಆಗಿತ್ತು. ಬಳಿಕ ನಟ ದಿನ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆಮೇಲೆ ‘ಪ್ರೇಮಲೋಕ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಧಾರಾವಾಹಿಗಳ ಜೊತೆಗೆ ಅವರು ಸಿನಿಮಾ ಕೂಡ ಮಾಡುತ್ತಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಹಲವಾರು ನಟ-ನಟಿಯರು ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ. ಕೆಲವರಿಗೆ ಅದೃಷ್ಟ ಒಲಿಯುವುದಿಲ್ಲ.  ಹಾಗೆಯೇ ವಿಜಯ್ ಅವರು ಬೆಳ್ಳಿತೆರೆಗೆ ಕಾಲಿಟ್ಟರೂ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ.  

 ಅಂದಹಾಗೆ ವಿಜಯ್ ಸೂರ್ಯ ಅವರಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಹುಡುಗಿಯರಿಗೆ ಅವರ ಮೇಲಿನ ಕ್ರೇಜ್ ಏನೂ ಕಮ್ಮಿಯಾಗಿಲ್ಲ ಅನ್ನಿ. ಆದರೆ ಇದೀಗ ಇವರು ಮತ್ತೊಂದು ಮದ್ವೆಗೆ ರೆಡಿಯಾಗಿದ್ದಾರೆ. ಹುಡುಗಿಗೆ ತನ್ನ ಪಾಸ್ಟ್​ ಬಗ್ಗೆ ಗೊತ್ತಿದ್ದರೂ, ಅದನ್ನು ಒಪ್ಪಿಕೊಂಡು ಮದ್ವೆಗೆ ರೆಡಿಯಾಗಿದ್ದಾಳೆ ಎಂದು ಇನ್​ಸ್ಟಾಗ್ರಾಮ್​ ನೇರ ಪ್ರಸಾರದಲ್ಲಿ ಬಂದು ನಟ ಹೇಳಿದ್ದಾರೆ! ಹಾಗಂತೆ ವಿಜಯ್​ ಫ್ಯಾನ್ಸ್​ ಗಾಬರಿ ಬೀಳಬೇಕಿಲ್ಲ. ರಿಯಲ್​  ಲೈಫ್​ನಲ್ಲಿ ಅವರಿಗೆ ಒಂದೇ ಮದುವೆಯಾಗಿರೋದು, ಈಗ ದೃಷ್ಟಿಬೊಟ್ಟು ಸೀರಿಯಲ್​ ರೌಡಿ ದತ್ತನಾಗಿ ಸೀರಿಯಲ್​ನಲ್ಲಿ ಮತ್ತೊಂದು ಮದ್ವೆಯಾಗ್ತಿದ್ದಾರೆ ಅಷ್ಟೇ. ದತ್ತನ ಮೇಲೆ ದೃಷ್ಟಿಗೆ ಲವ್​ ಇರುತ್ತೆ. ದತ್ತ ಕೂಡ ನೋಡಲು ಚೆನ್ನಾಗಿಲ್ಲದ ಹುಡುಗಿಯನ್ನೇ ಮದುವೆಯಾಗುವ ಹಂಬಲ ಇರುತ್ತದೆ. ಅದಕ್ಕಾಗಿ ದೃಷ್ಟಿಯೇ ಸೂಟ್ ಎಂದು ಅಂದುಕೊಳ್ಳುವಷ್ಟರಲ್ಲಿಯೇ ಕಥೆ ಬೇರೆಡೆ ತಿರುಗಿದೆ. ಇಂಪನಾ ಜೊತೆ ಮದುವೆ ನಡೆಯುತ್ತಿದೆ. ನಾನು ರೌಡಿ ಎನ್ನುವುದು ತಿಳಿದಿದ್ದರೂ ಇಂಪನಾ ಮದುವೆಯಾಗಲು ರೆಡಿಯಾಗಿದ್ದಾರೆ, ಮದುವೆ ಬಂದು ಎಲ್ಲರೂ ಹಾರೈಸಿ ಎಂದಿದ್ದಾರೆ.

ತಾಳಿ ಕಟ್ಟೋ ಟೈಂನಲ್ಲಿ ಪಂಚೆ ಬಿದ್ದೋದ್ರೆ ಏನ್‌ ಮಾಡ್ತೀರಾ ಕೇಳಿದ್ರೆ ವಿಜಯ್‌ ಸೂರ್ಯ ತರ್ಲೆ ಉತ್ತರ ಕೇಳಿ!

ಮದುವೆಯಾಗತ್ತಾ? ನಿಲ್ಲತ್ತಾ? ದೃಷ್ಟಿ ಕಥೆ ಏನು ಎಂಬ ಬಗ್ಗೆ ಇದೀಗ ಕುತೂಹಲವಿದೆ. ಇನ್ನು ವಿಜಯ್ ಅವರ ಮದುವೆ ಲೈಫ್‌ ಕುರಿತು ಹೇಳುವುದಾದರೆ, ಇವರ ರಿಯಲ್​ ಪತ್ನಿ ಹೆಸರು ಚೈತ್ರಾ ಶ್ರೀನಿವಾಸ. 2019ರ ಫೆಬ್ರವರಿ 14ರಂದು  ಚೈತ್ರಾ ಶ್ರೀನಿವಾಸ್ ಅವರನ್ನು ವಿಜಯ್ ಮದುವೆ ಆಗಿದ್ದರು. ಇವರದ್ದು ಅರೇಂಜ್ಡ್‌ ಮ್ಯಾರೇಜ್. ಚೈತ್ರಾ ಅವರು ಸಾಫ್ಟ್‌ವೇರ್ ಉದ್ಯೋಗಿ. ಕ್ಯಾಮರಾ, ಸಾರ್ವಜನಿಕ ಜೀವನದಿಂದ ಚೈತ್ರಾ ಅವರು ತುಂಬ ದೂರ ಇದ್ದಾರೆ.   2020ರ ಫೆಬ್ರವರಿ 14ರಂದು ವಿಜಯ್ ಸೂರ್ಯ, ಚೈತ್ರಾ ಶ್ರೀನಿವಾಸ್ ಅವರಿಗೆ ಗಂಡು ಮಗು ಜನಿಸಿತ್ತು. ಕಳೆದ ವರ್ಷ ಎರಡನೇ ಮಗು ಜನಿಸಿದೆ. ಮೊದಲ ಮಗನಿಗೆ ಸೋಹನ್ ಸೂರ್ಯ ಎಂದು ಹೆಸರಿಟ್ಟಿದ್ದರು. ಎರಡನೇ ಮಗುವಿಗೆ ಕಾರ್ತಿಕೇಯ ಸೂರ್ಯ ಎಂದು ನಾಮಕರಣ ಮಾಡಿದ್ದರು.  

ವಿಜಯ್‌ ಅವರ ಸಿನಿ ಬದುಕಿನ ಕುರಿತು ಹೇಳುವುದಾದರೆ,  ಧಾರಾವಾಹಿಗಳಿಂದ ಬೆಳ್ಳಿ ತೆರೆಗೆ ಕಾಲಿಟ್ಟಿದ್ದ ನಟ ವಿಜಯ್ ಸೂರ್ಯ ಅವರು ಕ್ರೇಜಿಲೋಕದಲ್ಲಿ ನಟಿಸಿದ್ದರು. ಈ ಸಿನಿಮಾದ ಅಭಯ್ ಪಾತ್ರಕ್ಕೆ ಸೈಮಾ ಅವಾರ್ಡ್ ಕೂಡ ಸಿಕ್ಕಿತ್ತು.  ಇಷ್ಟಕಾಮ್ಯ ಚಿತ್ರದ ಮೂಲಕ ನಾಯಕ ನಟನಾದರು.  ಇದಾದ ನಂತರ ಕೆಲವು  ಕದ್ದುಮುಚ್ಚಿ, ಗಾಳಿಪಟ-2 ಸಿನಿಮಾದಲ್ಲಿಯೂ ಕಾಣಿಸಿಕೊಂಡರು. ಆದರೆ, ವಿಜಯ್ ಸೂರ್ಯಗೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾದಲ್ಲಿ ಯಶಸ್ಸು ಸಿಗಲಿಲ್ಲ. ಆದ್ದರಿಂದ ಸೀರಿಯಲ್‌ಗೆ ಮರಳಿದ್ದಾರೆ. 
 

ಕಾರಲ್ಲಿ ಸದಾ ಜೊತೆಯಾಗಿ ಯಾರಿರ್ಬೇಕು ಕೇಳಿದ್ರೆ ಅಂಬರೀಷ್‌ ಹೀಗೆ ಹೇಳೋದಾ? ಹಳೆ ವಿಡಿಯೋ ವೈರಲ್‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?