5 ವರ್ಷದಲ್ಲೇ ರೇಪ್‌ಗೊಳಗಾದ ಜಯಶ್ರೀ ರಾಮಯ್ಯ ಕೊನೆಯವರೆಗೂ ಅದನ್ನು ಮರೆತಿರಲಿಲ್ಲ!

Suvarna News   | Asianet News
Published : Jan 26, 2021, 04:05 PM IST
5 ವರ್ಷದಲ್ಲೇ ರೇಪ್‌ಗೊಳಗಾದ ಜಯಶ್ರೀ ರಾಮಯ್ಯ ಕೊನೆಯವರೆಗೂ ಅದನ್ನು ಮರೆತಿರಲಿಲ್ಲ!

ಸಾರಾಂಶ

ಆತ್ಮಹತ್ಯೆ ಮಾಡಿಕೊಂಡ ಬಿಗ್‌ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ತಮ್ಮ ಮೇಲೆ ಬಾಲ್ಯದಲ್ಲಿ ಆದ ರೇಪನ್ನು ಕೊನೆಯವರೆಗೂ ಮರೆತಿರಲಿಲ್ಲ.

ಬಿಗ್‌ಬಾಸ್‌ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಪ್ರಧಾನ ಕಾರಣ ಕ್ಲಿನಿಕಲ್ ಡಿಪ್ರೆಶನ್ ಅಥವಾ ಸರಳವಾದ ಭಾಷೆಯಲ್ಲಿ ಹೇಳುವುದಿದ್ದರೆ ಖಿನ್ನತೆ. ಅವರ ಈ ಖಿನ್ನತೆಯ ಹಿನ್ನೆಲೆಯಲ್ಲಿ ಹಲವಾರು ಕಾರಣಗಳಿದ್ದವು. ಐದನೇ ವರ್ಷ ಪ್ರಾಯದಲ್ಲೇ ರೇಪ್‌ಗೆ ಒಳಗಾಗಿದ್ದ ಈ ನಟಿಯಲ್ಲಿ ಅದರಿಂದ ಆದ ಮಾನಸಿಕ ಗಾಯ ಕೊನೆಯವರೆಗೂ ಹೋಗಿರಲೇ ಇಲ್ಲ.

ಜಯಶ್ರೀ ರಾಮಯ್ಯ ಫಿಲಂಗಳಲ್ಲಿ ನಟಿಸಲು ತುಂಬಾ ಪ್ರಯತ್ನ ಮಾಡಿದ್ದರು. ಆದರೆ ಸರಿಯಾದ ಅವಕಾಶಗಳು ಸಿಕ್ಕಿರಲಿಲ್ಲ. ನಂತರ ಕಿರುತೆರೆಯಲ್ಲಿ ಕೆಲವು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದರು. ಅಷ್ಟರಲ್ಲಿ ಬಿಗ್‌ಬಾಸ್ ಆಫರ್ ಬಂತು. ಬಿಗ್‌ಬಾಸ್‌ನಲ್ಲೂ ಅರ್ಧದಿಂದ ಹೊರಬಿದ್ದರು. ಅಲ್ಲೂ ಆಕೆಯ ಖಿನ್ನತೆಯ ಲಕ್ಷಣಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದವು. ತುಂಬ ಆಪ್ತರ ಬಳಿ ತನ್ನ ಖಿನ್ನತೆಯ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದರು. ಅವರು ಹೇಳಿದ ಪ್ರಕಾರ...

ಮಿಲನಾ ನಾಗರಾಜ್ ಮುಂದೆ ಮಿಲನಾ ಕೃಷ್ಣ ಆಗ್ತಾರಾ..? ...

ಜಯಶ್ರೀ ಮೇಲೆ ತುಂಬ ಸಣ್ಣವಳಿದ್ದಾಗಲೇ ಅತ್ಯಾಚಾರ ನಡೆದಿತ್ತು. ಇದನ್ನು ನಡೆಸಿದವನು ಬೇರ್ಯಾರೂ ಅಲ್ಲ ಆಕೆಯ ಸ್ವಂತ ಕಸಿನ್. ಇದನ್ನು ಅಪ್ಪನಿಗೆ ಹೇಳಿದರೆ ಆತ ಕಿವಿಗೇ ಹಾಕಿಕೊಳ್ಳಲಿಲ್ಲ. ಆಕೆಯ ಅಪ್ಪ ಮದ್ಯವ್ಯಸನಿಯಾಗಿದ್ದ. ಅಮ್ಮನಿಗೆ ಹೇಳಿದರೆ ಆಕೆಯೂ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಯಾಕೆಂದರೆ ಅಮ್ಮನಿಗೂ ಮಾನಸಿಕ ಸಮಸ್ಯೆ ಇತ್ತು. ಕಸಿನ್ ಈಕೆಯನ್ನು ಬಳಸಿಕೊಂಡ ಬಳಿಕ, ಅದರಿಂದ ಆದ ಮಾನಸಿಕ ಗಾಯ ಹಾಗೇ ಉಳಿಯಿತು. ಮುಂದೆ ಜೀವನದಲ್ಲಿ ಯಾವ ಗಂಡಸನ್ನೂ ನಂಬಲಾರದಂತಹ ಸ್ಥಿತಿ ಉಂಟಾಯಿತು. ಹೆಣ್ಣುಮಕ್ಕಳು ಕೂಡ ಈಕೆಯ ಒಳ್ಳೆಯತನವನ್ನೆಲ್ಲ ಬಳಸಿಕೊಂಡು ನಂತರ ವಂಚನೆ ಮಾಡಿದರು. 

ಜಯಶ್ರೀ ಹುಟ್ಟುತ್ತ ಬಡವರೇನಲ್ಲ. ಆಕೆಯ ತಂದೆ ಶ್ರೀಮಂತರಾಗಿದ್ದರು. ಆದರೆ ತಂದೆ ಸತ್ತ ಬಳಿಕ, ಈಕೆಯ ಸೋದರಮಾನ ಇವರ ಆಸ್ತಿಯನ್ನೆಲ್ಲ ಒಳಹಾಕಿಕೊಂಡು, ಈಕೆಯನ್ನೂ ಈಕೆಯ ತಾಯಿಯನ್ನೂ ಮನೆಯಿಂದ ಹೊರಗೆ ಅಟ್ಟಿಬಿಟ್ಟರು. ನಡುರಾತ್ರಿ ಮನೆಯಿಂದ ಹೊರಗೋಡಿಸಿದರು.

ಡೆತ್ ನೋಟ್‌ನಲ್ಲಿ ಜಯಶ್ರೀ ಬರೆದಿಟ್ಟಿದ್ದೇನು? ಸಾವಿಗೂ ಮುನ್ನ.... ...

ಈಕೆಯ ಅಮ್ಮ ಪೊಲೀಸರ ಮೊರೆಹೋದರೂ, ಆ ಪ್ರಕರಣ ಇವರ ಪರ ಆಗಲಿಲ್ಲ. ಇವರಿಗೆ ಬಡತನವೇ ಗಟ್ಟಿಯಾಯಿತು. ಜಯಶ್ರೀ ಹಾಗೂ ಅವರಮ್ಮ ಒಂದು ಪಿಜಿಯಲ್ಇ ವಾಸಿಸಲು ಆರಂಭಿಸಿದರು. ಇಂಥ ಘಟನೆಗಳೆಲ್ಲ ಜಯಶ್ರೀ ಮನಸ್ಸಿನಲ್ಲಿ ಹೆಬ್ಬಂಡೆಯಂತೆ ಕೂತುಬಿಟ್ಟಿದ್ದವು. ಒಂದು ಜೀವ ಮಾನಸಿಕವಾಗಿ ಚಿತ್ರಾನ್ನ ಆಗಲು ಇಷ್ಟು ಸಾಕಲ್ವೇ?

ಜಯಶ್ರೀಗೆ ಮದುವೆ ಮಾಡಿಸಲು ಆತ್ಮೀಯರು ಪ್ರಯತ್ನ ಪಟ್ಟಿದ್ದರು. ಆದರೆ, ಜಯಶ್ರೀಯಲ್ಲಿ ಮಾನಸಿಕ ಸಮಸ್ಯೆ ಇದೆ ಎಂದು ಗೊತ್ತಾದ ಬಳಿಕ ಹುಡುಗರು ಹಿಂಜರಿಯುತ್ತಿದ್ದರು. ಕಳೆದ ವರ್ಷ ಜುಲೈಯಲ್ಲಿ ಈಕೆ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದಳು. ಆ ಬಳಿಕ ನಡೆದ ಮದುವೆ ಪ್ರಯತ್ನಗಳು ಸಫಲ ಆಗಲಿಲ್ಲ. ಆಕೆಯ ಮೇಲೆ ನಡೆದ ರೇಪ್‌ಗೂ ಮದುವೆಗೆ ಹುಡುಗರು ನಿರಾಕರಿಸಿದ್ದಕ್ಕೂ ಸಂಬಂಧವಿಲ್ಲ. ಆದರೆ, ಆಕೆ ಪದೇ ಪದೇ ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಾಳೆ ಎಂಬುದೇ ಹುಡುಗರು ಮದುವೆಗೆ ನಿರಾಕರಿಸಲು ಕಾರಣ ಆಯಿತು. 

ಸೂಸನ್‌ಗೆ 400 ಕೋಟಿ ಕೊಟ್ರಾ ಹೃತಿಕ್ ರೋಶನ್? ಬಾಲಿವುಡ್‌ನ ದುಬಾರಿ ಡೈವೋರ್ಸ್‌ಗಳು! ...

ಜಯಶ್ರೀಯ ಆತ್ಮೀಯರು ಹೇಳುವ ಪ್ರಕಾರ, ಜಯಶ್ರೀ ಸುಂದರವಾಗಿದ್ದಳು. ಇಂಥ ಹಲವರು ಚಿತ್ರರಂಗದಲ್ಲಿ ಕೆಟ್ಟ ಕೆಲಸ ನಡೆಸಿ ಹಣ ಮಾಡಿಕೊಂಡದ್ದು ಉಂಟು. ಅಂಥದ್ದನ್ನೆಲ್ಲ ಜಯಶ್ರೀ ಒಪ್ಪುತ್ತಿರಲಿಲ್ಲ ಮಾತ್ರವಲ್ಲ, ಅಂಥ ಅವಕಾಶಗಳನ್ನು ಖಂಡತುಂಡವಾಗಿ ನಿರಾಕರಿಸಿದ್ದಳು. ಹಾಗೆ ಬರುವ ಹಣ ಎಷ್ಟು ಕೋಟಿಯಾದರೂ ಅವಳಿಗೆ ಬೇಕಿರಲೇ ಇಲ್ಲ. ಅವಳು ಐದು ವರ್ಷದಿಂದ ಅನುಭವಿಸಿದ ಕಿರುಕುಳ, ದೌರ್ಜನ್ಯ, ಯಾರಿಂದಲೂ ಸಿಗದ ಸಹಕಾರ, ಚತ್ರರಂಗದ ಅವಕಾಶ ಇಲ್ಲದಿರುವಿಕೆ ಇವೆಲ್ಲವೂ ಆಕೆಯನ್ನು ಸುಸ್ತಾಗಿಸಿದ್ದವು.

ಖಿನ್ನತೆಗೆ ತುತ್ತಾಗುವ ಹುಡುಗ/ಹುಡುಗಿ ತಮ್ಮೊಳಗೆ ಭಾರವಾದ ಒಂದು ಬಂಡೆಯಂಥ ಭಾವನೆಯನ್ನು ಹೊತ್ತಿರುತ್ತಾರೆ. ಅದನ್ನು ಸ್ವಲ್ಪ ಸ್ವಲ್ಪವೇ ಕಟೆದು ಚೂರಾಗಿಸಿ ಅವರನ್ನು ಹಗುರ ಆಗಿಸಬೇಕಾಗುತ್ತದೆ. ಅದಕ್ಕೆ ಆತ್ಮೀಯರ ಗಾಢವಾದ ಸಹಕಾರ ನೆರವು ಆತ್ಮೀಯತೆಯಂತೂ ಬೇಕೇ ಬೇಕು. ಇಲ್ಲವಾದರೆ ತಮಗೆ ಜಗತ್ತಿನಲ್ಲಿ ಯಾರೂ ಇಲ್ಲ ಎಂಬ ಭಾವನೆಯೇ ಅವರನ್ನು ಕೊರೆದುಹಾಕಿ ಅವರು ಈ ಜಗತ್ತಿನಿಂದ ಶಾಶ್ವತವಾಗಿ ನಿರ್ಗಮಿಸುವ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ. ಇದು ಜಯಶ್ರೀ ರಾಮಯ್ಯ ಪ್ರಕರಣದಿಂದ ಕಲಿಯಬಹುದಾದ ಪಾಠ. ಬಹುಶಃ ಈಕೆಯ ಕತೆಗಳಿಗೆ ಕಿವಿಯಾಗಿ ನಾಲ್ಕು ಸಾಂತ್ವನದ ಮಾತು ಹೇಳಿ, ಕೌನ್ಸೆಲಿಂಗ್ ಕೊಡಿಸಿದ್ದರೆ ಬದುಕುತ್ತಿದ್ದಳೋ ಏನೋ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa:​ ನನ್ನನ್ನು ಸಾಯಿಸಿದವನಿಂದಲೇ ಕೇಕ್​ ಕಟ್​ ಮಾಡಿಸಿ ಸನ್ಮಾನಿಸಿದರು; ನಟಿ ವಿಜಯಲಕ್ಷ್ಮಿ ಭಾವುಕ
ಬಿಗ್ ಬಾಸ್ ಟ್ರೋಫಿನೂ ಇಲ್ಲ, ಜುಟ್ಟೂ ಇಲ್ಲ; 24 ಸ್ಪರ್ಧಿಗಳನ್ನು ಹೊರಹಾಕ್ತೀನೆಂದ ಧ್ರುವಂತ್ ಗೆಟಪ್ ಚೇಂಜ್!