ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ 'ಯಜಮಾನ' ಸೀರಿಯಲ್ನಲ್ಲಿ ರಾಘವೇಂದ್ರ ಮತ್ತು ಝಾನ್ಸಿಯ ಮೊದಲರಾತ್ರಿ ಸೀನ್ ಶೂಟಿಂಗ್ನಲ್ಲಿ ಏನೇನಾಯ್ತು ನೋಡಿ! ವಿಡಿಯೋ ವೈರಲ್
ಅದೊಂದು ಒಂದು ತಿಂಗಳ ಮಟ್ಟಿನ ಮದುವೆ. ಅಪ್ಪ-ಅಮ್ಮ ಇಲ್ಲದೇ ಮಲತಾಯಿ ಮತ್ತು ಮಲ ತಂಗಿಯ ಜೊತೆ ಬೆಳೆಯುತ್ತಿರುವ ರಾಘವೇಂದ್ರನಿಗೆ ಅವರೇ ಎಲ್ಲಾ. ಅವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ. ಸ್ವಾಭಿಮಾನಿಯಾದರೂ ಈಗ ಮಲತಾಯಿಯ ದೆಸೆಯಿಂದ ಎಲ್ಲವನ್ನೂ ಮರೆತುಬಿಟ್ಟಿದ್ದಾನೆ. ತಂಗಿಯ ಅದ್ಧೂರಿ ಮದುವೆಗೆ ಕನಸು ಕಾಣುತ್ತಿರೋ ತಾಯಿಯ ಕನಸನ್ನು ಈಡೇರಿಸಲು ಕಾಂಟ್ರಾಕ್ಟ್ ಮ್ಯಾರೇಜ್‌ಗೆ ಸಹಿ ಹಾಕಿದ್ದಾನೆ ರಾಘವೇಂದ್ರ. ಅದು ಒಂದು ತಿಂಗಳ ಮಟ್ಟಿನ ಮದುವೆ. ಒಂದು ತಿಂಗಳ ಮಟ್ಟಿಗೆ ಮದ್ವೆಯಾದ್ರೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಝಾನ್ಸಿ ಹೇಳಿದ್ದಾಳೆ. ಅವಳಿಗೆ ಯಾವುದೋ ಉದ್ದೇಶಕ್ಕಾಗಿ ಮದುವೆಯಾಗಿದೆ ಎಂದು ಹೇಳುವುದು ಬೇಕಿದೆ. ಆದರೆ ಮದುವೆ ಬೇಡವಾಗಿದೆ. ಆದ್ದರಿಂದ ಒಂದು ತಿಂಗಳ ಮಟ್ಟಿಗೆ ಯಾರು ಅರ್ಹರು ಎಂದು ಹುಡುಕುತ್ತಿರುವಾಗ ರಾಘವೇಂದ್ರ ಸಿಕ್ಕಿದ್ದಾನೆ. ಅವನಿಗೂ ಒಪ್ಪದೇ ಬೇರೆ ದಾರಿ ಇಲ್ಲದೇ ಮದುವೆಯಾಗಿದ್ದಾನೆ.
ಆದರೆ ಇದ್ಯಾವುದೂ ಝಾನ್ಸಿ ಮನೆಯವರಿಗೆ ತಿಳಿದಿಲ್ಲ. ಇದೇ ಕಾರಣಕ್ಕೆ ಆಕೆ ಮದುವೆಯಾದಳು ಎನ್ನುವ ಖುಷಿಗೆ ಮೊದಲ ರಾತ್ರಿ ಭರ್ಜರಿ ಅರೇಂಜ್ ಮಾಡಿದ್ದಾರೆ. ಮದುವೆಗೂ ಮೊದಲೇ ಸಿಕ್ಕಾಪಟ್ಟೆ ಷರತ್ತು ಹಾಕಿದ್ದಾಳೆ ಝಾನ್ಸಿ. ಅದರಲ್ಲಿ ಒಂದು ಮೈಮುಟ್ಟುವಂತೆ ಇಲ್ಲ ಎನ್ನುವುದು. ಆದರೆ, ಅದೇ ಜಿರಳೆಯ ಕಥೆ ಇಟ್ಟುಕೊಂಡು ಝಾನ್ಸಿ ಮೊದಲ ರಾತ್ರಿಯಂದು ಗಂಡನನ್ನು ತಬ್ಬಿಕೊಳ್ಳುವಂತೆ ಮಾಡಲಾಗಿದೆ. ಜಿರಳೆ ನೋಡಿ ಹೆದರಿ ಆಕೆ ಗಂಡನನ್ನು ತಬ್ಬಿಕೊಂಡು ನಂತರ ದೂರ ಮಾಡಿದ್ದಾಳೆ. ಇದರ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಈ ದೃಶ್ಯದ ಶೂಟಿಂಗ್ ವೇಳೆ ಏನಾಯಿತು ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
'ಅಮೃತಧಾರೆ' ಶೂಟಿಂಗ್ ವೇಳೆ ಭೂಮಿಕಾ ಸೀರೆಗೆ ಬೆಂಕಿ! ಸೆಟ್ನಲ್ಲಿ ಆಗಿದ್ದೇನು? ತೆರೆಮರೆ ಕಥೆ ಏನು?
ರಾಮ್ಜಿ ಟಾಕೀಸ್ ಯೂಟ್ಯೂಬ್ ಚಾನೆಲ್ ಈ ವಿಡಿಯೋ ಶೇರ್ ಮಾಡಿದೆ. ಇದರಲ್ಲಿ ರಾಘವೇಂದ್ರ ಆಗಿರುವ ನಟ ಹರ್ಷ, ಝಾನ್ಸಿ ಆಗಿರೋ ನಟಿ ಮಧುಶ್ರೀ ಭೈರಪ್ಪ, ಝಾನ್ಸಿ ತಾತ ಸಂಪತ್ ಕುಮಾರ್ ಆಗಿ ರಮೇಶ್ ಭಟ್ ಅಭಿನಯಿಸುತ್ತಿದ್ದು, ಇವರು ಶೂಟಿಂಗ್ನಲ್ಲಿ ಹೇಗಿದ್ದರು, ಏನೆಲ್ಲಾ ಡಿಸ್ಕಷನ್ ಆಯಿತು, ನಟಿ ಮಧುಶ್ರೀ ಹೇಗೆಲ್ಲಾ ಮೇಕಪ್ ಮಾಡಿಕೊಂಡರು ಎನ್ನುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮೊದಲ ರಾತ್ರಿಯಂದು ಜಿರಳೆ ಕಂಡು ಹೆದರಿ ನಾಯಕಿ, ನಾಯಕನನ್ನು ತಬ್ಬಿಕೊಳ್ಳುವ ದೃಶ್ಯದ ಶೂಟಿಂಗ್ ಕೂಡ ಹೇಗೆ ನಡೆಸಲಾಯಿತು ಎನ್ನುವುದು ಇದರಲ್ಲಿ ತಿಳಿಯುತ್ತದೆ.
ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಇಲ್ಲಿ ಒಂದು ಟ್ವಿಸ್ಟ್ ಇದೆ. ಅದೇನೆಂದರೆ, ರಾಘವೇಂದ್ರನ ಮಲತಾಯಿ ಮಗಳು ಪಲ್ಲವಿಯ ಮದುವೆಗಾಗಿ ಈತ ನಕಲಿ ಮದ್ವೆಯಾಗಿದ್ದಾನೆ ನಿಜ. ಆದರೆ ತಾಯಿ ಮತ್ತು ತಂಗಿಯ ಗಂಡನ ಮನೆಯವರ ನಡುವೆ ನಡೆದಿರುವ ಒಪ್ಪಂದ ಈತನಿಗೆ ಗೊತ್ತೇ ಇಲ್ಲ. ಅದೇನೆಂದರೆ, ಪಲ್ಲವಿಯನ್ನು ಮದುವೆಯಾಗುವ ಗಂಡನಿಗೆ ವಿಶೇಷಚೇತನ ತಂಗಿ ಇದ್ದು, ಆಕೆಯನ್ನು ರಾಘವೇಂದ್ರ ಮದುವೆಯಾಗಬೇಕು ಎನ್ನುವ ಷರತ್ತು ಇದೆ. ಅದಕ್ಕೆ ಮಲತಾಯಿ ಒಪ್ಪಿಕೊಂಡಿದ್ದಾಳೆ. ಆದರೆ ಇದು ರಾಘವೇಂದ್ರನಿಗೆ ತಿಳಿದಿಲ್ಲ. ತಂಗಿಯ ಮದುವೆ ಫಿಕ್ಸ್ ಆಗಿದೆ. ಇತ್ತ ಇವನ ಕಾಂಟ್ರ್ಯಾಕ್ಟ್ ಮುಗಿಯುವುದರೊಳಗೆ ಝಾನ್ಸಿ ಒಪ್ಪಂದವನ್ನು ಮುಂದುವರೆಸಿದರೆ ಇಲ್ಲವೇ ಅವಳಿಗೆ ನಿಜವಾಗಿಯೂ ಲವ್ ಆಗಿಬಿಟ್ಟರೆ ರಾಘವೇಂದ್ರ ಒಪ್ಪಂದು ಮುರಿಯುವಂತೆ ಇಲ್ಲ! ಆದ್ದರಿಂದ ಮುಂದೇನು ಎನ್ನುವ ಕುತೂಹಲವಿದೆ.
ಅಬ್ಬಾ! ಬೆಟ್ಟದ ತುದಿಗೆ ಹೋಗಿ ಹೇಗಪ್ಪಾ ಶೂಟಿಂಗ್ ಮಾಡ್ತಾರೆ ಅಂದುಕೊಂಡ್ರಾ? ಅಸಲಿ ವಿಡಿಯೋ ಇಲ್ಲಿದೆ ನೋಡಿ