ಸದ್ಯ ಗೌತಮ ಕೆಲಸದ ಮೇಲೆ ವಿದೇಶಕ್ಕೆ ಹೋಗಿದ್ದಾನೆ, ಮನೆಯಲ್ಲಿ ಭೂಮಿಕಾ ಮಾತ್ರ ಇದ್ದಾಳೆ. ಭೂಮಿಕಾ ಬಗ್ಗೆ ಅಜ್ಜಿ ತುಂಬಾ ಕೇರ್ ಮಾಡುತ್ತಿದ್ದಾಳೆ. ಗೌತಮ್ ಕೋಣೆಯಲ್ಲಿ ಭೂಮಿಕಾ ಏನೋ ಮಾಡುತ್ತಿರುವಾಗ ಗೌತಮ್ ಅಲ್ಲಿ ಜೋಡಿಸಿಟ್ಟಿದ್ದ ಪುಸ್ತಕಗಳು ಕೆಳಗೆ ಬೀಳುತ್ತವೆ. ಅದೇ ಸಮಯಕ್ಕೆ ಸರಿಯಾಗಿ ಗೌತಮ್ ಕರೆ ಬರುತ್ತದೆ.
ಅಮೃತಧಾರೆ ಸೀರಿಯಲ್ಲನ್ನು ಜನಮೆಚ್ಚಿ ತಲೆದೂಗುತ್ತಿದ್ದಾರೆ. ಸದ್ಯಕ್ಕೆ ಟಾಪ್ 10 ಸೀರಿಯಲ್‌ನಲ್ಲಿ ಸ್ಥಾನ ಪಡೆಯುತ್ತಿರುವ ಧಾರಾವಾಹಿಗಳಲ್ಲಿ ಇದೂ ಕೂಡ ಒಂದು. ಪಟ್ಟಕ್ಕನ ಮಕ್ಕಳು ಸೀರಿಯಲ್ ಇತ್ತೀಚೆಗೆ ಟಾಪ್ 1 ಸ್ಥಾನದಲ್ಲಿ ರಾರಾಜಿಸುತ್ತಿದೆ. ಆದರೆ, 2 ನೇಸ್ಥಾನದಿಂದ 10ನೇ ಸ್ಥಾನದತನಕ ಧಾರಾವಾಹಿಯ ಸ್ಥಾನಗಳು ಬದಲಾಗುತ್ತಲೇ ಇರುತ್ತವೆ. ಆದರೆ, ಅಮೃತಧಾರೆ ಒಳ್ಳೆಯ ಟಿಆರ್‌ಪಿ ಪಡೆದು ವೀಕ್ಷಕರ ಕುತೂಹಲ ಕಾಪಾಡಿಕೋಮಡು ಬಂದಿದೆ.
ಧಾರಾವಾಹಿಯಲ್ಲಿ ಸದ್ಯ ಗೌತಮ ಕೆಲಸದ ಮೇಲೆ ವಿದೇಶಕ್ಕೆ ಹೋಗಿದ್ದಾನೆ, ಮನೆಯಲ್ಲಿ ಭೂಮಿಕಾ ಮಾತ್ರ ಇದ್ದಾಳೆ. ಭೂಮಿಕಾ ಬಗ್ಗೆ ಅಜ್ಜಿ ತುಂಬಾ ಕೇರ್ ಮಾಡುತ್ತಿದ್ದಾಳೆ. ಗೌತಮ್ ಕೋಣೆಯಲ್ಲಿ ಭೂಮಿಕಾ ಏನೋ ಮಾಡುತ್ತಿರುವಾಗ ಗೌತಮ್ ಅಲ್ಲಿ ಜೋಡಿಸಿಟ್ಟಿದ್ದ ಪುಸ್ತಕಗಳು ಕೆಳಗೆ ಬೀಳುತ್ತವೆ. ಅದೇ ಸಮಯಕ್ಕೆ ಸರಿಯಾಗಿ ಗೌತಮ್ ಕರೆ ಬರುತ್ತದೆ. 'ಇಲ್ಲಿ ಸಿಸಿಟಿವಿ ಇದೆ, ನಾನು ಪುಸ್ತಕ ಬೀಳಿಸಿದ್ದು ನೋಡಿ ಗೌತಮ್ ಕಾಲ್ ಮಾಡಿದ್ದು ಎಂದು ಭುಮಿಕಾ ಅಂದುಕೊಳ್ಳುತ್ತಾಳೆ.
ಆದರೆ ಆಗಿದ್ದು ಬೇರೆ.. ಗೌತಮ್‌ಗೆ ಹಾರ್ಡ್ ಡಿಸ್ಕ್ ಬೇಕಿರುತ್ತದೆ. ಅದಕ್ಕೇ ಆತ ಕಾಲ್ ಮಾಡಿದ್ದಾನೆ. ಹುಡುಕಲು ಹೋದ ಭೂಮಿಕಾಗೆ ಅವನ ಒಳ ಉಡುಪುಗಳೇ ಜಾಸ್ತಿ ಸಿಗುತ್ತವೆ. ಆದರೆ ಹಾರ್ಡ್ ಡಿಸ್ಕ್ ಸಿಗುವುದು ತಡವಾಗುತ್ತದೆ. ಅಷ್ಟರಲ್ಲಿ ಮತ್ತೆ ಕಾಲ್ ಮಾಡುವ ಗೌತಮ್, 'ಯಾಕಿಷ್ಟು ತಡವಾಗುತ್ತಿದೆ? ನಿಮಗೆ ಇನ್ನೂ ಹಾರ್ಡ್ ಡಿಸ್ಕ್ ಸಿಕ್ಕಿಲ್ಲವಾ? ಮತ್ತೆ ಅಲ್ಲೇನು ಸಿಕ್ಕಿತು ನಿಮಗೆ ಎಂದು ಕೇಳುತ್ತಾನೆ ಗೌತಮ್. ಕಕ್ಕಾಬಿಕ್ಕಿಯಾಗುವ ಭೂಮಿಕಾ 'ಅಲ್ಲಿ ನಿಮ್ಮ ಒಳ ಉಡುಪುಗಳು ಮಾತ್ರವೇ ಸಿಕ್ಕಿತು' ಎಂದು ಹೇಳಲು ಅಲ್ಲಿ ಗೌತಮ್ ಮುಜುಗರ ಪಡುತ್ತಾನೆ.
ವೇದಾಂತ್ ಸ್ಕೆಚ್ ನೋಡಿ ಬಿದ್ದು ಬಿದ್ದು ನಕ್ಕ ಆರತಿ; ಅಮೂಲ್ಯ ಮಾಡಿದ್ದೇನು ನೋಡಿ..!
ಧಾರಾವಾಹಿಯಲ್ಲಿ ಮುಂದೇನು ನಡೆಯುತ್ತದೆ? ಭೂಮಿಕಾಗೆ ಗೌತಮ್ ಹಾರ್ಡ್ ಡಿಸ್ಕ್ ಸಿಕ್ಕಿತಾ? ಅಥವಾ ಮುಂದೆ ಇನ್ನೇನಾಯ್ತು? ಈ ಎಲ್ಲ ಕಥೆ ತಿಳಿದುಕೊಳ್ಳಲು ಅಮೃತಧಾರೆ ಸೀರಿಯಲ್ ನೋಡಬೇಕು. ಕಥೆ, ಚಿತ್ರಕಥೆ ತೀವ್ರ ಕುತೂಹಲದ ಘಟ್ಟದಲ್ಲಿದ್ದು, ವೀಕ್ಷಕರನ್ನು ತಮ್ಮ ಮನೆಯ ಸೋಫಾದ ಅಂಚಿಗೆ ತಂದು ಕೂಡ್ರಿಸುತ್ತಿದೆ ಎನ್ನಬಹುದು.
ಬೀದಿಗೆ ಬಂದಿರುವ 'ಲಕ್ಷಣ' ಶಕುಂತಲಾ ದೇವಿ ಸಂಸಾರ ಟ್ರೋಲ್ ಮೇಲೆ ಟ್ರೋಲ್!