ಜೊತೆಜೊತೆಯಲ್ಲಿ ಸೀರಿಯಲ್ ಮೂಲಕ ಮನಗೆದ್ದಿರೋ ನಟಿ ಮೇಘಾ ಶೆಟ್ಟಿ, ಬಿಗ್ಬಾಸ್ ಸೀಸನ್ 10 ಮನೆಯೊಳಕ್ಕೆ ಹೋಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ನಟಿ ಹೇಳಿದ್ದೇನು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲ್ಲಿ ಧಾರಾವಾಹಿ ಕಳೆದ ತಿಂಗಳು ಮುಗಿದಿದ್ದರೂ ಈ ಗುಂಗಿನಿಂದ ಇಂದಿಗೂ ಹಲವರು ಹೊರಬಂದಿಲ್ಲ. ಧಾರಾವಾಹಿಯಲ್ಲಿ ಸಕತ್ ಮಿಂಚಿದವರ ಪೈಕಿ ನಾಯಕಿ ಅನು ಒಬ್ಬರು. ಇವರ ಮುಗ್ಧ ಅಷ್ಟೇ ಗಟ್ಟಿತನದ ಪಾತ್ರಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಅನು ಸಿರಿಮನೆ ಎಂದೇ ಖ್ಯಾತಿ ಪಡೆದಿರುವ ನಟಿಯ ನಿಜವಾದ ಹೆಸರು ಮೇಘಾ ಶೆಟ್ಟಿ (Megha Shetty). ಅನು ಸಿರಿಮನೆ ಪಾತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬಂದ ಮೇಘಾ ದೊಡ್ಡ ಮಟ್ಟದ ಖ್ಯಾತಿಗಳಿಸಿದರು. ಜೊತೆ ಜೊತೆಯಲಿ ಧಾರಾವಾಹಿ ಮುಗಿದರೂ ಅನು ಸಿರಿಮನೆ ಪಾತ್ರ ಅಭಿಮಾನಿಗಳಲ್ಲಿ ಮನದಲ್ಲಿ ಗಟ್ಟಿಯಾಗಿ ಬೇರೂರಿದೆ. ಸುಸಂಪ್ರದಾಯಬದ್ಧವಾಗಿ ಪಾತ್ರದಲ್ಲಿ ನಟಿಸಿರುವ ಜೊತೆಜೊತೆಯಲಿ ಅನು, ನಿಜ ಜೀವನದಲ್ಲಿಯೂ ಅನುವಿನಂತೆಯೇ ಇರಲಿ ಎನ್ನುವುದು ಪ್ರೇಕ್ಷಕರ ಹಂಬಲ. ಆದರೆ ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರುವ ಮೇಘಾ ಶೆಟ್ಟಿ (Megha Shetty), ವಿಭಿನ್ನ ಪೋಸ್‌ನಲ್ಲಿ ಮಿಂಚುತ್ತಿದ್ದಾರೆ. ಪ್ರತಿಯೊಬ್ಬ ಪಾತ್ರಧಾರಿಯ ನಿಜ ಜೀವನವೇ ಬೇರೆ, ಪಾತ್ರಗಳಲ್ಲಿ ಅವರ ನಟನೆಯೇ ಬೇರೆ. ಅದೇ ರೀತಿ ಅನು ನಿಜಜೀವನದಲ್ಲಿ ಮೇಘಾ ಶೆಟ್ಟಿಯಾಗಿ ವಿಭಿನ್ನ ರೂಪದಲ್ಲಿ ಫ್ಯಾನ್ಸ್ ಹೃದಯ ಕದಿಯುತ್ತಿದ್ದಾರೆ.
ನಟಿ ಮೇಘಾ ಶೆಟ್ಟಿ ಸದ್ಯ ಸಿನಿಮಾದ ಕಡೆ ಗಮನ ಹರಿಸಿದ್ದಾರೆ. ಮರಾಠಿ ಚಿತ್ರರಂಗಕ್ಕೂ ಕಾಲಿರಿಸಿದ್ದಾರೆ. ಈ ವರ್ಷ ತೆರೆ ಕಾಣುತ್ತಿರುವ ಚಿತ್ರಗಳ ಪೈಕಿ ಅತೀ ಹೆಚ್ಚು ಕುತೂಹಲ ಮೂಡಿಸುತ್ತಿರುವ ಆಕ್ಷನ್ ಪ್ಯಾಕೇಜ್ ಚಿತ್ರ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ ಮರಾಠಿ ಹಿಂದಿ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವ 'ಆಪರೇಷನ್ ಲಂಡನ್ ಕೆಫೆ' (Operation London Cafe) ಬಹುತೇಕ ಚಿತ್ರೀಕರಣ ಮುಗಿಸಿದ್ದು. ಚಿತ್ರದ ಡಬ್ಬಿಂಗ್ ಹಂತದ ಚಟುವಟಿಕೆಗಳು ಭರದಿಂದ ಸಾಗುತ್ತಿದೆ. ಇದಕ್ಕೆ ಮೇಘಾ ಶೆಟ್ಟಿಯೇ ನಾಯಕಿ. ಕನ್ನಡದ ಸೇರಿದಂತೆ ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಈ ಚಿತ್ರ ತಯಾರಾಗುತ್ತಿದೆ. ಇತ್ತೀಚೆಗೆ ಕನ್ನಡದಲ್ಲಿ ನಟ ಡಾರ್ಲಿಂಗ್ ಕೃಷ್ಣ ಅವರ ಜೊತೆ ನಟಿಸಿ ಮೇಘಾ ಶೆಟ್ಟಿ ಸೈ ಎನಿಸಿಕೊಂಡಿದ್ದರು.
ಶಿವರಾಜ್ ಕುಮಾರ್ ಜೊತೆ 'ಅಮೃತಧಾರೆ' ಸೀರಿಯಲ್ ಭೂಮಿಕಾ! ಏನಿದು ವಿಷ್ಯ?
ಇತ್ತೀಚೆಗೆ ಮೇಘಾ ಶೆಟ್ಟಿ ವಿಭಿನ್ನ ಡ್ರೆಸ್ ತೊಟ್ಟು ವಿಡಿಯೋ, ಫೋಟೋಶೂಟ್ (photoshoot) ಮಾಡಿಸಿಕೊಳ್ಳುತ್ತಿದ್ದಾರೆ. ತಮ್ಮ ಅನು ಹೀಗೆಯೇ ಇರಬೇಕು ಎನ್ನುವವರಿಗೆ ಕೆಲವೊಮ್ಮೆ ನಟಿಯ ಬಟ್ಟೆ-ಬರೆಗಳು ಬೇಸರ ತರಿಸುವುದೂ ಇದೆ. ಹಾಗೆಂದು ಅವರು ತಮ್ಮ ತನವನ್ನು ಬಿಟ್ಟು ಕೊಡಲು ಆದೀತೆ? ಹಾಟ್ ಪೋಸ್ ಕೊಟ್ಟು ಸಕತ್ ಮಿಂಚುತ್ತಿದ್ದಾರೆ ಮೇಘಾ ಶೆಟ್ಟಿ. ಆದರೆ ಈಗ ವಿಷಯ ಅವರು ಫೋಟೋ ಬಗ್ಗೆ ಅಲ್ಲ, ಬದಲಿಗೆ ಅವರು ಬಿಗ್ಬಾಸ್ ಮನೆಯೊಳಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಇದೀಗ ಈ ಗಾಸಿಪ್ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಬಿಗ್ ಬಾಸ್ ಸೀಸನ್ 10ರಲ್ಲಿ (Bigg Boss Kannada Season 10) ನಾನು ಭಾಗವಹಿಸುತ್ತಿಲ್ಲ ಎಂದು ಹೇಳಿದ್ದಾರೆ. ಇಲ್ಲ. ಅಕ್ಟೋಬರ್ 4ರಿಂದ ವಿನಯ್ ರಾಜ್‌ಕುಮಾರ್ ಜೊತೆಗಿನ ‘ಗ್ರಾಮಾಯಣ’ ಶೂಟಿಂಗ್ ಶುರುವಾಗುತ್ತಿದೆ. ಅದಕ್ಕಾಗಿ ನಟಿ ಸಿದ್ಧತೆ ಮಾಡಿಕೊಳ್ತಿದ್ದಾರೆ. ಹಳ್ಳಿ ಹುಡುಗಿಯ ಪಾತ್ರವಾಗಿರುವ ಕಾರಣ, ಹಳ್ಳಿ ಸೊಗಡಿನಲ್ಲಿ ಬೆಂಗಳೂರು ಬಿಟ್ಟು ಬೇರೆ ಕಡೆ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ. ಒಂದು ತಿಂಗಳುಗಳ ಕಾಲ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ.
ಗ್ರಾಮಾಯಣ ಸಿನಿಮಾ ಜೊತೆಗೆ ಬೇರೆ ಬೇರೆ ಸಿನಿಮಾಗಳನ್ನ ಕೂಡ ನಟಿ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಜೊತೆಗೆ ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳನ್ನ ನಟಿ ಪೂರ್ಣಗೊಳಿಸಬೇಕಿದೆ. ಧನ್ವೀರ್ ಗೌಡ ಜೊತೆಗಿನ ‘ಕೈವ’ ಚಿತ್ರ ಕೂಡ ರಿಲೀಸ್‌ಗೆ ರೆಡಿಯಿದೆ. ಸಾಕಷ್ಟು ಸಿನಿಮಾಗಳ ರಿಲೀಸ್‌ಗೆ ಇರುವ ಕಾರಣದಿಂದಾಗಿ ನಟಿ ಬಿಗ್ ಬಾಸ್ಗೆ ಹೋಗುತ್ತಿಲ್ಲ ಎಂದಿದ್ದಾರೆ ನಟಿ.
ನಿವೇದಿತಾ ಕ್ಯೂಟ್ ವಿಡಿಯೋ ವೈರಲ್: ಮೂರು ವರ್ಷ ಕುಣಿದದ್ದು ಸಾಕು, ಮಕ್ಳು ಮಾಡ್ಕೋಳಿ ಅನ್ನೋದಾ?