ನಿವೇದಿತಾ ಕ್ಯೂಟ್​ ವಿಡಿಯೋ ವೈರಲ್​: ಮೂರು ವರ್ಷ ಕುಣಿದದ್ದು ಸಾಕು, ಮಕ್ಳು ಮಾಡ್ಕೋಳಿ ಅನ್ನೋದಾ?

Published : Oct 02, 2023, 05:47 PM ISTUpdated : Nov 02, 2023, 07:32 PM IST
ನಿವೇದಿತಾ ಕ್ಯೂಟ್​ ವಿಡಿಯೋ ವೈರಲ್​: ಮೂರು ವರ್ಷ ಕುಣಿದದ್ದು ಸಾಕು, ಮಕ್ಳು ಮಾಡ್ಕೋಳಿ ಅನ್ನೋದಾ?

ಸಾರಾಂಶ

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಜೊತೆಯಾಗಿ ಕ್ಯೂಟ್​ ವಿಡಿಯೋ ಶೇರ್​ ಮಾಡಿದ್ರೆ, ಅವರ ಮಕ್ಕಳ ಬಗ್ಗೆ ಫ್ಯಾನ್ಸ್​ ಮಾತಾಡೋದಾ?  

ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.      ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಕಾವೇರಿ ನೀರಿಗೂ, ನಿವೇದಿತಾ ಡ್ಯಾನ್ಸ್​ಗೂ ಏನಪ್ಪಾ ಸಂಬಂಧ? ಚೆಡ್ಡಿ ತೋರಿಸಿದ್ದು ಸಾಕು ಅಂತ ಬಯ್ಯೋದಾ?

ಇದೀಗ ನಟಿ ಹಾಲಿವುಡ್​ನ ಮಾರ್ಟೆನ್​ ಹಾರ್ಕೆಟ್​ ಹಾಡಿಗೆ ಸಕತ್​ ರೀಲ್ಸ್ ಮಾಡಿದ್ದಾರೆ. ಆರಂಭದಲ್ಲಿ ಪತಿ ಚಂದನ್​ ಶೆಟ್ಟಿ ಜೊತೆ ನಂತರ ಸಿಂಗಲ್​ ಆಗಿ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಹಲವರು ಹಾರ್ಟ್​ ಇಮೋಜಿ ಹಾಕಿದ್ರೆ ಇನ್ನು ಕೆಲವರು ಟ್ರೋಲ್​  ಮಾಡುತ್ತಿದ್ದಾರೆ. ನೀವು ಏನು ಮಾಡಿದ್ರೂ ಚಂದ ಎಂದು ಕೆಲವರು ಹೊಗಳುತ್ತಿದ್ದರೆ, ಇನ್ನು ಕೆಲವರು ನಿಮಗೆ ಈ ಸ್ಟೆಪ್​ ಬಿಟ್ಟು ಬೇರೇದು ಬರಲ್ವಾ ಅಂತಿದ್ದಾರೆ. ಇನ್ನು ಕೆಲವರನ್ನೂ ನೇರವಾಗಿ ನಟಿಯನ್ನು ಮಕ್ಕಳ ಕಡೆಗೆ ಎಳೆದಿದ್ದಾರೆ. ನೀವಿನ್ನೂ 15 ವರ್ಷದ ಡಾಲ್​ ಹಾಗೆ ಕಾಣಿಸುತ್ತೀರಿ ಎಂದು ಅಭಿಮಾನಿಯೊಬ್ಬ ಹೇಳಿದ್ರೆ, ಇಷ್ಟು ವರ್ಷ ಕುಣಿದದ್ದು ಸಾಕು, ಮಕ್ಕಳ ಕಡೆ ಗಮನ ಕೊಡಿ ಎಂದು ಈ ಜೋಡಿಯ ಕಾಲೆಳೆದಿದ್ದಾರೆ. 

ಇದೀಗ ಬೆಂಗಳೂರಿನಲ್ಲಿ ಕಾವೇರಿಗಾಗಿ ಹೋರಾಟ ಶುರುವಾಗಿದೆ. ಇಂದು ಬೆಂಗಳೂರು ಬಂದ್​ ಆಗಿದ್ದರೆ ಬರುವ ಶುಕ್ರವಾರ ಇದೇ ಕಾರಣಕ್ಕೆ ಕರ್ನಾಟಕ ಬಂದ್​  ಆಗಿದೆ. ಕುಡಿಯುವ ನೀರಿಗಾಗಿ ಮುಂದೆ ಪರದಾಡುವ ಸ್ಥಿತಿ ಬರುತ್ತದೆ ಎನ್ನುವ ಕಾರಣಕ್ಕೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟ ಸರ್ಕಾರದ ಕ್ರಮವನ್ನು ಖಂಡಿಸಿ ಜನರು ಬೀದಿಗಿಳಿದಿದ್ದಾರೆ. ಅತ್ತ ಹೋರಾಟದ ಕಾವು ಏರುತ್ತಿದ್ದರೆ, ಇತ್ತ  ನಟಿ,  ಹಾಡೊಂದಕ್ಕೆ ಭರ್ಜರಿ ಸೊಂಟ ಬಳುಕಿಸಿ ಪಡ್ಡೆ ಹುಡುಗರ ಕಾವೇರಿಸುತ್ತಿದ್ದಾರೆ. ಹಿಂದೊಮ್ಮೆ ಇದೇ ರೀತಿ ಹಿಂದಿ ಹಾಡಿಗೆ ರೀಲ್ಸ್​ ಮಾಡಿದಾಗ ನಿನ್ನ ಗಂಡನ ಕನ್ನಡ ಹಾಡು ನಿನಗೆ ಸೇರಲ್ವಾ ಅಂತ ಪ್ರಶ್ನಿಸಿದ್ರು ಫ್ಯಾನ್ಸ್​. ಆದರೆ ಇದೀಗ ಚಡ್ಡಿ ತೊಟ್ಟು ಮಾಡಿದ ಈ ಡ್ಯಾನ್ಸ್​ ಅಭಿಮಾನಿಗಳನ್ನು ಮತ್ತಷ್ಟು ಸಿಟ್ಟಿಗೆ ಏರಿಸಿದೆ. 

ನಿವೇದಿತಾ ಗೌಡ ಅಮ್ಮನೂ ಇಷ್ಟು ಕ್ಯೂಟಾ? ಫೋಟೋ ನೋಡಿ ಸಂತೂರ್​ ಮಮ್ಮಿ ಎಂದ ಫ್ಯಾನ್ಸ್​

ಅಂದಹಾಗೆ ಈ ಜೋಡಿ ಬಿಗ್​ಬಾಸ್​ ಮನೆಯಲ್ಲಿ ಪರಿಚಯವಾಗಿತ್ತು. ಅಲ್ಲಿಯೇ ಪ್ರೀತಿಗೆ ತಿರುಗಿ ಮದ್ವೆವರೆಗೂ ಮುಂದುವರೆಯಿತು. 2020ರ ಫೆಬ್ರವರಿ 26ರಂದು ಇವರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಬಳಿಕ ಮಾತನಾಡಿದ್ದ ಚಂದನ ಶೆಟ್ಟಿ. ಮದುವೆಯಾಗಿದೆ, ಜವಾಬ್ದಾರಿ ಹೆಚ್ಚಿದೆ. ಇಷ್ಟು ದಿನ ಮನೆಯಲ್ಲಿ ಒಬ್ಬನೇ ಇರುತ್ತಿದ್ದೆ. ಇನ್ಮುಂದೆ ಹೆಂಡತಿ ಇರ್ತಾಳೆ ಎಂದಿದ್ದರು.  ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಶನ್ ಹಾಲ್‌ನಲ್ಲಿ ನಡೆದ ಈ ಮದುವೆಯಲ್ಲಿ  ಪುನೀತ್ ರಾಜ್‌ಕುಮಾರ್ ದಂಪತಿ, ಧ್ರುವ ಸರ್ಜಾ ದಂಪತಿ, ನಿರ್ದೇಶಕ ಚೇತನ್‌ಕುಮಾರ್, ರಘು ಶಾಸ್ತ್ರಿ, ನಟ ಶ್ರೇಯಸ್ ಮಂಜು, ಶೈನ್ ಶೆಟ್ಟಿ, ನಟಿ ಅದ್ವಿತಿ ಶೆಟ್ಟಿ, ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮುಂತಾದವರು ಮೈಸೂರಿನ ಸ್ಪೆಕ್ಟ್ರಾ ಕಲ್ಯಾಣ ಮಂಟಪಕ್ಕೆ ಹೋಗಿ ನವಜೋಡಿಗೆ ಶುಭ ಹಾರೈಸಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?