ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ವಿಲನ್ ಆಗಿರೋ ರಾಜೇಶ್ವರಿ ಅವರು ಈಗ ಬಾಕ್ಸಿಂಗ್ ಪಟು ಎಂದೂ ಸಾಬೀತಾಗಿದ್ದಾರೆ. ಅವರ ಪಂಚ್ ನೋಡಿ ಉಫ್ ಅಂತಿದ್ದಾರೆ ಫ್ಯಾನ್ಸ್!
ಜನಮನ ಗೆದ್ದು, ಟಿಆರ್ಪಿಯಲ್ಲಿ ಟಾಪ್ ಸ್ಥಾನದಲ್ಲಿರೋ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪಾತ್ರಧಾರಿ, ನಾಯಕಿ ಪುಟ್ಟಕ್ಕ ಅರ್ಥಾತ್ ನಟಿ ಉಮಾಶ್ರಿ ಅವರಷ್ಟೇ ಸಕತ್ ಫೇಮಸ್ ಆಗಿರೋ ನಟಿಯೆಂದರೆ ಪುಟ್ಟಕ್ಕನ ಸವತಿ ಅಂದ್ರೆ ಪತಿಯ ಎರಡನೆಯ ಪತ್ನಿಯ ಪಾತ್ರದಲ್ಲಿ ನಟಿಸ್ತಿರೋ ರಾಜೇಶ್ವರಿ. ಹೌದು. ರಾಜೇಶ್ವರಿ ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಈ ಪುಟ್ಟಕ್ಕನ ಮಕ್ಕಳ ಧಾರಾವಾಹಿಯ ವಿಲನ್ ಪಾತ್ರವೇ ಹಾದುಹೋಗುವಷ್ಟರ ಮಟ್ಟಿಗೆ ರಾಜೇಶ್ವರಿ (Rajeshwari) ಪಾತ್ರ ಜೀವ ತುಂಬಿದೆ. ಗಂಡ ಇಲ್ಲದಿದ್ದರೂ ಕ್ಷಣ ಕ್ಷಣಕ್ಕೂ ನೋವನ್ನೇ ಪುಟ್ಟಕ್ಕ ಅನುಭವಿಸುತ್ತಿದ್ದರೂ ಅವರ ಮನೆಯ ಸಮೀಪವೇ ಇದ್ದು, ಕ್ಷಣ ಕ್ಷಣಕ್ಕೂ ಆಕೆಗೆ ತೊಂದರೆ ಕೊಡುವಲ್ಲಿ ಈ ಸವತಿ ರಾಜೇಶ್ವರಿಯದ್ದು ಎತ್ತಿದ ಕೈ. ಪುಟ್ಟಕ್ಕನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದರೂ ಪುಟ್ಟಕ್ಕನಿಗೆ ತೊಂದರೆ ಕೊಡುವುದು ಎಂದರೆ ಈಕೆಗೆ ಅದೇನೋ ಖುಷಿ. ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ಥೇಟ್ ವಿಲನ್ನಂತೆ ಪಾತ್ರ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ರಾಜೇಶ್ವರಿಯವರ ನಿಜವಾದ ಹೆಸರು ಹಂಸ ನಾರಾಯಣಸ್ವಾಮಿ @ ಹಂಸ ಪ್ರತಾಪ್ (Hamsa Pratap)
ಮುದ್ದು ಮೊಗದ ಹಂಸ ಅವರನ್ನು ವಿಲನ್ ಪಾತ್ರದಲ್ಲಿ ಕಲ್ಪನೆ ಮಾಡಿಕೊಳ್ಳುವುದು ಎಷ್ಟೋ ಮಂದಿಗೆ ಅರಗಿಸಿಕೊಳ್ಳಲಾಗದ ಸತ್ಯವೇ. ಆದರೂ ರಾಜೇಶ್ವರಿ ಪಾತ್ರದೊಳಕ್ಕೆ ಹೊಕ್ಕು ಸಾಕ್ಷಾತ್ ಖಳನಾಯಕಿಯಾಗಿ ಮಿಂಚುತ್ತಿದ್ದಾರೆ ಹಂಸ. ಹಂಸ ಅವರು ನಟನೆ ಮಾತ್ರವಲ್ಲದೇ ಇನ್ಸ್ಟಾಗ್ರಾಮ್ನಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಒಂದು ಪಾತ್ರವನ್ನು ತೆರೆಯ ಮೇಲೆ ನೋಡಿದವರಿಗೆ ಅವರ ಅಸಲಿ ಮುಖ ಹೇಗಿದೆ ಎಂದು ತಿಳಿಯುವುದು ಕಷ್ಟವೇ. ಆದರೆ ನಟರ ಸಾಮಾಜಿಕ ಜಾಲತಾಣದಲ್ಲಿ (Social Media) ಅವರ ನಿಜವಾದ ರೂಪವನ್ನು ತಿಳಿಯಬಹುದು. ಅದೇ ರೀತಿ ಹಂಸ ಅವರ ಇನ್ಸ್ಟಾಗ್ರಾಮ್ ನೋಡಿದರೆ ಅರೆರೆ ಪುಟ್ಟಕ್ಕನ ಮಕ್ಕಳಿನ ರಾಜೇಶ್ವರಿ ಇವರು ಹೌದೋ ಅಲ್ವೋ ಅನ್ನುವಷ್ಟರ ಮಟ್ಟಿಗೆ ಡಿಫರೆಂಟ್ ಆಗಿ ಕಾಣಿಸುತ್ತದೆ.
ವಿಧವೆಯರಿಗೆ ಅರಿಶಿಣ-ಕುಂಕುಮವೆ? ಸತ್ಯ ಸೀರಿಯಲ್ ಕಲಿಸಿದ ಪಾಠಕ್ಕೆ ಭೇಷ್ ಭೇಷ್ ಎಂದ ಪ್ರೇಕ್ಷಕರು
ಇದೀಗ ನಟಿಯ ಬಾಕ್ಸಿಂಗ್ ಮಾಡಿದ್ದು, ಅದರ ವಿಡಿಯೋ ಶೇರ್ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬಾಕ್ಸಿಂಗ್ ತರಬೇತುದಾರನ ಜೊತೆ ಸಕತ್ ಕಿಕ್ ಕೊಟ್ಟಿದ್ದಾರೆ ರಾಜೇಶ್ವರಿ. ಇವರು ಬಾಕ್ಸಿಂಗ್ ಪಟು ಕೂಡ ಹೌದಾ ಎಂದು ಎಲ್ಲರೂ ಹುಬ್ಬೇರಿಸುತ್ತಿದ್ದಾರೆ. ಪುಟ್ಟಕ್ಕನಿಗೆ ಮಾತ್ರ ಈ ರೀತಿ ಪಂಚ್ ಕೊಡಬೇಡಿ ಎಂದು ತಮಾಷೆ ಮಾಡುತ್ತಿದ್ದಾರೆ.
ಅಂದಹಾಗೆ ಹಂಸ ಅವರು, ನಟಿ, ಅನೇಕ ಆ್ಯಂಗಲ್ಗಳಲ್ಲಿ, ಬಗೆಬಗೆಯ ಡ್ರೆಸ್ ತೊಟ್ಟು ಹಂಸ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇದ್ದಾರೆ. ಇಂದು ಕೂಡ ಹಲವಾರು ರೀತಿಯ ಡ್ರೆಸ್ಗಳಲ್ಲಿ ಅವರು ಫೋಟೋಶೂಟ್ (Photoshoot) ಮಾಡಿಸಿಕೊಂಡು ಅದನ್ನು ಶೇರ್ ಮಾಡಿಕೊಂಡಿದ್ದಾರೆ. ರೆಡ್ ಬ್ಲೇಜರ್ ತೊಟ್ಟು, ಬ್ಲಾಕ್ ಕಲರ್ ಸೂಟ್, ಮಿಡಿ, ಮಿನಿ, ಫ್ರಾಕ್, ಸಲ್ವಾರ್, ಸೀರೆ... ಹೀಗೆ ವಿಭಿನ್ನ ಉಡುಗೆ ತೊಟ್ಟು ಅವರು ಫೋಟೋಶೂಟ್ ಮಾಡಿಸಿಕೊಂಡಿದ್ದು ಅದರ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋಗಳಿಗೆ ಸಕತ್ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಹಾರ್ಟ್ ಎಮೋಜಿಗಳಿಂದ ಕಮೆಂಟ್ಗಳು ತುಂಬಿದ್ದು ಹಲವಾರು ಮಂದಿ ಸೋ ಸ್ವೀಟ್ ಎನ್ನುತ್ತಿದ್ದಾರೆ. ಇನ್ನು ಹಲವು ಫ್ಯಾನ್ಸ್ ನೀವೇ ನಮ್ ಕ್ರಷ್ ಎನ್ನುತ್ತಿದ್ದಾರೆ. ಇವರು, ಕನ್ನಡದಲ್ಲಿ `ಧ್ರುವ',`ಅಮ್ಮ',`ರಾಜಾಹುಲಿ' ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದಾರೆ.
'ಬಾದಲ್ ಬರ್ಸಾ'ಗೆ ಪುಟ್ಟಕ್ಕನ ಮಕ್ಕಳ ಸೂಪರ್ ಡ್ಯಾನ್ಸ್: ಮೆಸ್ ಸುಟ್ಟೋದ್ರೂ ಹೀಗ್ ಮಾಡೋದಾ ಅಂದ ಫ್ಯಾನ್ಸ್