ರಾಮಾಚಾರಿ ಧಾರವಾಹಿ: 'ಚಾರು'ಗೆ ಅಳುವ ಪಾತ್ರ ಬೇಡ, ಸರಪಟಾಕಿ ಪಾತ್ರ ಕೊಡಿ! ಅಭಿಮಾನಿಗಳ ಡೈರೆಕ್ಟ್‌ ಹಿಟ್

Published : Sep 17, 2023, 03:55 PM ISTUpdated : Sep 17, 2023, 06:23 PM IST
ರಾಮಾಚಾರಿ ಧಾರವಾಹಿ: 'ಚಾರು'ಗೆ ಅಳುವ ಪಾತ್ರ ಬೇಡ, ಸರಪಟಾಕಿ ಪಾತ್ರ ಕೊಡಿ! ಅಭಿಮಾನಿಗಳ ಡೈರೆಕ್ಟ್‌ ಹಿಟ್

ಸಾರಾಂಶ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಾಚಾರಿ ಧಾರವಾಹಿಯಲ್ಲಿ ಚಾರುಗೆ ಅಳುವ ಪಾತ್ರ ಕೊಡದೇ, ಸರಪಟಾಕಿ ಪಾತ್ರ ಕೊಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಬೆಂಗಳೂರು (ಸೆ.17): ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿ ದಿನದಿಂದ ದಿನಕ್ಕೆ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಮೊದ ಮೊದಲು ದುರಂಹಕಾರಿ ಹೆಣ್ಣಾಗಿ ಮಾಡರ್ನ್ ಲುಕ್ಕಲ್ಲೇ ಕಾಣಿಸಿ ಕೊಳ್ಳುತ್ತಿದ್ದ ರಾಮಚಾರಿಯ ಚಾರು ಇದೀಗ ಬದಲಾಗಿದ್ದಾಳೆ. ರಾಮಚಾರಿಯ ಕೈ ಹಿಡಿದು, ಸೀರೆಯಲ್ಲಿ ಕಂಗೊಳಿಸುತ್ತಿರುವ ನಟಿಯ ಹೊಸ ಲುಕ್ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಆದರೆ, ಚಾರುಗೆ ಅಳುಮುಂಜಿ ಪಾತ್ರಗಳನ್ನು ಕೊಡದೇ ಸರಪಟಾಕಿಯಂತೆ ನಗು ನಗುತ್ತಾ ಕೀಟಲೆ ಕೊಡುವ ಪಾತ್ರಗಳನ್ನೇ ನೀಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಅಳುಮುಂಜೀನಾ, ಸರಪಟಾಕೀನಾ? ಚಾರು ಹೇಗಿದ್ರೆ ನಿಮಗಿಷ್ಟ? ಎಂದು ಕೇಳಲಾದ ಪ್ರಶ್ನೆಗೆ ಎಲ್ಲ ಅಭಿಮಾನಿಗಳು ಸರಪಟಾಕಿ ಚಾರು ಇಷ್ಟವೆಂದು ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ. 'ಚಾರು ರಾಮಾಚಾರಿ ಮತ್ತು ಅವರ ಅಪ್ಪನ ಒಂದು ಮಾಡಬೇಕು. ಅವಾಗಲೇ ರಾಮಾಚಾರಿ ಚಾರು ಮೇಲೆ ಸ್ವಲ್ಪ ಕರಗುತ್ತದೆ'. 'ನಮ್ಮ ಚಾರು ಯಾವಾಗ್ಲೂ ನಕ್ಕೊತ ಇದ್ರೆ ನಮಗೆ ಖುಷಿ, ಅವಳು ಅಳೋದನ್ನು ನೋಡಾಕ ಆಗಲ್ಲ'. 'ಒಂದು ಕಾಲದಲ್ಲಿ ಎಲ್ಲಾರು ಬೈತಿದ್ದರು ಚಾರುನಾ ಆದ್ರೆ ಈಗ ಅವಳೇ ರಾಮಚಾರಿಯಲ್ಲಿ ಹಾಟ್ ಫೇವರಿಟ್' ಎಂದು ಕಮೆಂಟ್‌ ಮಾಡಿದ್ದಾರೆ.

ಕನ್ನಡ ಕಿರುತೆರೆಯ ವಿಜಯ್, ರಾಮಚಾರಿ, ವೈಷ್ಣವ್, ರಾಮನ ರಿಯಲ್ ವಯಸ್ಸೆಷ್ಟು?

ರಾಮಾಚಾರಿ ಧಾರಾವಾಹಿಯಲ್ಲಿ ದೊಡ್ಡ ಶ್ರೀಮಂತರ ಕುಟುಂಬದಿಂದ ಬಂದಿರುವ ಚಾರು ಮಿಡಲ್ ಕ್ಲಾಸ್ ಹುಡುಗ, ನಾರಾಯಣ ಆಚಾರ್ಯ ಪುತ್ರ ರಾಮಚಾರಿಯನ್ನು ಪ್ರೀತಿ ಹಠಕ್ಕೆ ಬಿದ್ದು ಮದುವೆಯಾಗುತ್ತಾಳೆ. ರಾಮಾಚಾರಿಗಾಗಿ ತನ್ನ ಹೆಸರಿನಲ್ಲಿದ್ದ ಎಲ್ಲಾ ಆಸ್ತಿ ಪಾಸ್ತಿ ಐಷಾರಾಮಿ ಜೀವನ ಬಿಟ್ಟು ಚಾರು ಅಡುಗೆ ಮಾಡಿಕೊಂಡು ರಾಮಾಚಾರಿ ಜೀವನಕ್ಕೆ ಹೊಂದಿಕೊಂಡಿದ್ದಾರೆ. ಆದರೆ, ಬದಲಾಗಿರುವ ಚಾರು ಮೇಲೆ ಎಲ್ಲರಿಗೂ ಪ್ರೀತಿ ಹುಟ್ಟಿದೆ. ಅದ್ಭುತವಾಗಿ ನಟಿಸುತ್ತಿದ್ದಾಳೆ ಅನ್ನೋ ಮೆಚ್ಚುಗೆ ಸಿಕ್ಕಿದೆ. ಈಗ ಚಾರುಗೆ ರಾಮಾಚಾರಿಯೇ ಖುಷಿಯಾಗಿ ನೋಡಿಕೊಳ್ಳದ ಹಿನ್ನೆಲೆಯಲ್ಲಿ ಅಳುಮುಂಜಿ ಪಾತ್ರವನ್ನು ಮಾಡುತ್ತಿದ್ದಾಳೆ.

 

ಕಾಲಿಗೆ ಬಿದ್ದು ಕ್ಷಮೆ ಕೇಳಿದರೂ ಕರಗದ ರಾಮಾಚಾರಿ ಮನಸು: 
ಮನೆಯಲ್ಲಿ ಚಾರು ಮಾಡಿದ ಕೆಲಸದಿಂದ ಮನೆಯಲ್ಲಿ ರಾಮಾಚಾರಿ ಹಾಗೂ ಅವರ ತಂದೆ ನಾರಾಯಣ ಆಚಾರ್ಯರು ಅವಳನ್ನು ಮಾತನಾಡಿಸುತ್ತಿರಲಿಲ್ಲ. ಪ್ರೀತಿಗಾಗಿ ತನ್ನ ಎಲ್ಲ ಸರ್ವಸ್ವವನ್ನು ತ್ಯಾಗ ಮಾಡಿ ಬಂದರೂ ಪ್ರೀತಿ ಅರ್ಥ ಮಾಡಿಕೊಳ್ಳದ ರಾಮಾಚಾರಿ ತನ್ನನ್ನು ಮಾತನಾಡಿಸುತ್ತಿಲ್ಲ ಎಂದು ಚಾರು ಸಾಕಷ್ಟು ಅತ್ತಿದ್ದಾಳೆ. ರಾಮಾಚಾರಿಯ ಕಾಲಿಗೆ ಬಿದ್ದು ತನ್ನನ್ನು ಮಾತನಾಡಿಸುವಂತೆ ಗೋಗರೆದಿದ್ದಾಳೆ. ಆದರೆ, ಇದ್ಯಾವುದಕ್ಕೂ ಕರಗದ ರಾಮಚಾರಿ ಅವಳನ್ನು ನಿರ್ಲಕ್ಷ್ಯ ಮಾಡುತ್ತಾನೆ.

ಅತ್ತೆಯ ಮಾತು ಕೇಳಿ ಸರಪಟಾಕಿಯಾದ ಚಾರು: ರಾಮಾಚಾರಿ ಕೋಪವನ್ನು ತನ್ನ ಮುಗ್ಧತೆ ಹಾಗೂ ಅಳುವಿನಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ, ತನ್ನ ಸೊಸೆಯ ಸ್ಥಿತಿಯನ್ನು ನೋಡಲಾಗದೇ ಅತ್ತೆಯೇ ಕೆಲವು ಉಪಾಯಗಳನ್ನು ಕೊಡುತ್ತಾಳೆ. ಆಗ, ರಾಮಾಚಾರಿಯನ್ನು ಬಲವಂತವಾಗಿ ತಬ್ಬಿಕೊಳ್ಳುತ್ತಾಳೆ. ಇದರಿಂದ ಸಿಟ್ಟಿಗೆದ್ದ ರಾಮಾಚಾರಿ ಬಾಯಿಗೆ ಬಂದಂತೆ ಬೈದು ಕಳಿಸುತ್ತಾನೆ. ಮೂರ್ನಾಲ್ಕು ದಿನಗಳಿಂದ ಮಾತನಾಡದೇ ದೂರವಿಟ್ಟಿದ್ದ ಚಾರಿ, ತನ್ನನ್ನು ಬೈಯುವುದಕ್ಕಾದರೂ ಮಾತನಾಡಿಸದನೆಂದು ಖುಷಿಯಾಗುತ್ತಾಳೆ. ಇದನ್ನು ಅತ್ತೆಯ ಬಳಿ ಹೇಳಿಕೊಂಡಾಗ ಮರಗಿದ ಅತ್ತೆ, ಹೀಗೆಯೇ ಮಗನ ಬಳಿ ಖುಷಿಯಿಂದ ಇರುವಂತೆ ಹೇಳಿಕೊಡುತ್ತಾಳೆ. ನಂತರ, ಸರಪಟಾಕಿಯಾಗಿ ಚಾರು ಬದಲಾಗುತ್ತಾಳೆ.

ಭಾಗ್ಯಲಕ್ಷ್ಮಿ ಧಾರವಾಹಿ ನಟನಿಗೆ ಬಾಟಲಿಯಿಂದ ಹೊಡೆದ ಅಭಿಮಾನಿಗಳು: ತಬ್ಬಿಬ್ಬಾದ ನಟ

ಬೆನ್ನುಜ್ಜಲು ಹೋಗಿ ತಬ್ಬಿಕೊಂಡ ಚಾರು, ಸೊಂಟದಲ್ಲಿ ಬೈಕ್‌ ಕೀ ಸಿಕ್ಕಿಸಿಕೊಂಡು ಕ್ವಾಟ್ಲೆ ಕೊಟ್ಲು: ಅತ್ತೆಯ ಮಾತುಗಳು ಹಾಗೂ ಪ್ರೋತ್ಸಾಹದಿಂದ ಸರಪಟಾಕಿಯಾದ ಚಾರು ರಾಮಾಚಾರಿಗೆ ವಿವಿಧ ವಿಷಯಗಳಲ್ಲಿ ಕ್ವಾಟ್ಲೆ ಕೊಡಲು ಮುಂದಾಗಿದ್ದಾಳೆ. ರಾಮಾಚಾರಿ ಸ್ನಾನ ಮಾಡಲು ಹೋದಾಗ ಬೆನ್ನುಜ್ಜಲು ಅಮ್ಮನನ್ನು ಕರೆದರೆ, ಅವರು ತನ್ನ ಸೊಸೆ ಚಾರುಳನ್ನು ಕಳಿಸುತ್ತಾಳೆ. ಆದರೆ, ಬೆನ್ನುಜ್ಜುವ ಲಯ ಸರಿಯಾಗಿರದೇ ಬೈದುಕೊಂಡು ನೋಡಿದ ರಾಮಾಚಾರಿಗೆ ಚಾರು ಕಾಣಿಸಿಕೊಳ್ಳುತ್ತಾಳೆ. ಆಗ, ಬೈದಯ ಹೊರಕಳಿಸಲು ಮುಂದಾದಾಗ ಸೋಪು ತುಳಿದು ಜಾರಿ ರಾಮಾಚಾರಿ ಮೇಲೆ ಬೀಳುತ್ತಾಳೆ. ನಂತರ, ಚಾರು ವಾರಗಿತ್ತಿ ಬಂದು ಬಾಗಿಲು ತಳ್ಳಿದಾಗ ರಾಮಾಚಾರಿಯೇ ಚಾರು ಮೇಲೆ ಬೀಳುತ್ತಾನೆ. ಇದಾದ ನಂತರ ಆಫೀಸಿಗೆ ಹೋಗಲು ರೆಡಿಯಾದಾಗ ಚಾರು ಸೊಂಟದಲ್ಲಿ ಬೈಕ್‌ ಕೀ ಸಿಕ್ಕಿಸಿಕೊಂಡು ತೆಗೆದುಕೊಳ್ಳುವಂತೆ ರಾಮಾಚಾರಿಗೆ ಹೇಳುತ್ತಾಳೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?