ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾ ಪಾತ್ರಧಾರಿ ಸಂಜನಾ ಸೀರಿಯಲ್ ಬಿಟ್ಟಿರೋ ನಿಜ ಕಾರಣ ವಿವರಿಸುತ್ತಲೇ ವೀಕ್ಷಕರಿಗೆ ಸಿಹಿ ಸುದ್ದಿ ಕೊಟ್ಟ ಪುಟ್ಟಕ್ಕನ ಮಕ್ಕಳು ನಿರ್ದೇಶಕ ಆರೂರು ಜಗದೀಶ್.
ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾ ಸತ್ತಿದ್ದಾಳೆ. ಅಪಘಾತದಲ್ಲಿ ಅವಳನ್ನು ಸಾಯಿಸಲಾಗಿದೆ. ಜಿಲ್ಲಾಧಿಕಾರಿಯಾಗಿ ತನ್ನ ಗುರಿ ಮುಟ್ಟಿ ಇನ್ನಷ್ಟು ಸಾಧನೆ ಮಾಡುತ್ತಾಳೆ ಎನ್ನುವ ಹೊತ್ತಿಗೆ ಪಾತ್ರವನ್ನು ಸಾಯಿಸಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕರಿಗೆ ವಾಚಾಮಗೋಚರವಾಗಿ ವೀಕ್ಷಕರು ಬೈಯುತ್ತಿದ್ದಾರೆ. ಆದರೆ ಈ ಪಾತ್ರವನ್ನು ಸಾಯಿಸಿರುವ ಹಿಂದಿನ ಉದ್ದೇಶವೇ ಬೇರೆ. ಈ ಬಗ್ಗೆ ಪಂಚಮಿ ಟಾಕ್ಸ್ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಪುಟ್ಟಕ್ಕನ ಮಕ್ಕಳು ನಿರ್ದೇಶಕ ಆರೂರು ಜಗದೀಶ್ ಮಾತನಾಡಿದ್ದಾರೆ. ಸ್ನೇಹಾ ಅಂದ್ರೆ ನಟಿ ಸಂಜನಾ ಬುರ್ಲಿಯನ್ನು ಸಾಯಿಸಿದ್ದಕ್ಕೆ ವೀಕ್ಷಕರು ನನಗೆ ಹಾಕಿರೋವಷ್ಟು ಹಿಡಿ ಶಾಪ ಯಾರಿಗೂ ಹಾಕಿಲ್ಲ ಅನ್ನಿಸತ್ತೆ. ಆದ್ರೆ ಏನು ಮಾಡುವುದು, ಒಳಗೆ ಏನು ಆಗ್ತಿರುತ್ತೋ ಅವರಿಗೆ ಗೊತ್ತಾಗಲ್ಲ. ಹೊಗಳಿದಾಗ ಹೊಗಳಿಸಿಕೊಳ್ತೀವಿ, ಅದೇ ರೀತಿ ವೀಕ್ಷಕರಿಂದ ಬೈಸಿಕೊಳ್ಳುವುದೂ ನಡೆಯುತ್ತಲೇ ಇರುತ್ತದೆ. ಏನೂ ಮಾಡಲು ಆಗುವುದಿಲ್ಲ ಎನ್ನುತ್ತಲೇ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಸೀರಿಯಲ್ ಬಿಟ್ಟ ಅಸಲಿ ಕಾರಣವನ್ನು ಆರೂರು ಜಗದೀಶ್ ತೆರೆದಿಟ್ಟಿದ್ದಾರೆ.
ಸಂಜನಾ ಅವರಿಗೆ ಹೈಯರ್ ಎಜುಕೇಷನ್ ಮಾಡುವ ಆಸೆ ಇತ್ತು. ತುಂಬಾ ಓದಬೇಕು, ನಾನು ಬ್ರಿಲಿಯೆಂಟ್ ಇದ್ದೇನೆ. ದೊಡ್ಡ ವ್ಯಕ್ತಿ ಆಗಬೇಕು ಎಂದು ವರ್ಷದ ಹಿಂದೆಯೇ ಹೇಳಿದ್ರು. ಆ್ಯಕ್ಟಿಂಗ್ ತುಂಬಾ ಚೆನ್ನಾಗಿ ಬರುತ್ತದೆ. ಸಿನಿಮಾದಲ್ಲಿ ಅವಕಾಶ ಸಿಗುತ್ತದೆ, ನಟನೆಯಲ್ಲಿಯೇ ಮುಂದುವರೆಯಲು ಹೇಳಿದ್ವಿ. ಆದರೆ ಸಿನಿಮಾ ಆಕೆಯ ಕೈಹಿಡಿಯಲಿಲ್ಲ. ಪುಟ್ಟಕ್ಕನ ಮಕ್ಕಳು ಇಷ್ಟು ಹಿಟ್ ಆಯ್ತು ಅಂದ ಮಾತ್ರಕ್ಕೆ ಬೇರೆ ಸೀರಿಯಲ್ಲೂ ಹಿಟ್ ಆಗತ್ತೆ ಎನ್ನಲು ಆಗಲಿಲ್ಲ. ಆದ್ದರಿಂದ ಆಕೆ ಬೇರೆ ಸೀರಿಯಲ್ಗೂ ಹೋಗಲು ಇಷ್ಟಪಡಲಿಲ್ಲ. ಉನ್ನತ ವ್ಯಾಸಂಗನೇ ಮಾಡುವ ಆಸೆ ವ್ಯಕ್ತಪಡಿಸಿದ್ರು. ನಾನು ಚಾನೆಲ್ ಜೊತೆ ಮಾತನಾಡಿ ಪರ್ಮಿಷನ್ ಕೊಟ್ಟೆ. ಅವರ ಭವಿಷ್ಯಕ್ಕೆ ಧಕ್ಕೆ ಮಾಡುವ ಮನಸ್ಸು ಇರಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ಸ್ನೇಹಾ ಪಾತ್ರವನ್ನು ಸಾಯಿಸಬೇಕಾಯಿತು ಎಂದರು.
ಇನ್‌ಸ್ಟಾಗ್ರಾಮ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಪುಟ್ಟಕ್ಕನ ಮಗಳು ಸ್ನೇಹಾ! ಸೀರಿಯಲ್ ಬಿಟ್ಮೇಲೆ ನಟಿಗೆ ಇದೇನಾಯ್ತು?
undefined
ಆ ಪಾತ್ರಕ್ಕೆ ಬೇರೆ ಸೀರಿಯಲ್ ರೀತಿ ಬೇರೆ ನಟಿಯನ್ನು ಹಾಕಿಕೊಳ್ಳಬಹುದಿತ್ತಲ್ವಾ ಎಂದು ಪ್ರಶ್ನಿಸಿದಾಗ, ಆರೂರು ಜಗದೀಶ್ ಅವರು, ಆ ಬಗ್ಗೆಯೂ ಯೋಚನೆ ಮಾಡಿದ್ವಿ. ಆದರೆ ಅದು ಅಷ್ಟು ಸುಲಭದ ಮಾತಲ್ಲ. ಬೇರೆ ಸೀರಿಯಲ್ಗಳಲ್ಲಿ ಪಾರ್ಟ್ ಬದಲಾದಾಗ ಜನರು ಅದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ನೋಡಿದ್ದೇನೆ. ಜನರು ಹೊಸ ನಟರನ್ನು ಸ್ವೀಕರಿಸಲು ಐದಾರು ತಿಂಗಳು ಬೇಕಾಗಬಹುದು. ಕೆಲವೊಂದು ಅದು ಸಕ್ಸಸ್ ಕೂಡ ಆಗುವುದಿಲ್ಲ. ಹಳೆಯ ನಟರ ಜೊತೆ ಹೊಸಬರ ಕಂಪೇರ್ ಮಾಡಲಾಗುತ್ತದೆ. ಇದು ಹೊಸ-ಹಳೆ ಎಲ್ಲ ನಟ-ನಟಿಯರಿಗೂ ನೋವು ತರುವ ವಿಷಯವಾಗುತ್ತದೆ. ಅದೇ ಕಾರಣಕ್ಕೆ ಎಲ್ಲಾ ಯೋಚನೆ ಮಾಡಿಯೇ ಪಾತ್ರವನ್ನು ಸಾಯಿಸುವುದೇ ಲೇಸು ಎನ್ನಿಸಿತ್ತು ಎಂದಿದ್ದಾರೆ ಆರೂರು ಜಗದೀಶ್.
ಇದೇ ವೇಳೆ ಸದ್ಯ ವೀಕ್ಷಕರಿಗೆ ಬೇಸರ ಆಗಿರುವುದು ತಿಳಿದಿದೆ. ಆದರೆ ಶೀಘ್ರದಲ್ಲಿಯೇ ಸಿಹಿ ಸುದ್ದಿ ಕೊಡ್ತೀವಿ. ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಕೇವಲ ಒಂದು ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲ. ಇಲ್ಲಿ ಎಲ್ಲಾ ಪಾತ್ರಕ್ಕೂ ಜೀವವಿದೆ. ಇದೇ ಕಾರಣಕ್ಕೆ ಹೊಸ ಟ್ವಿಸ್ಟ್ ಕೊಡುತ್ತೇವೆ. ಇದು ಕೂಡ ಸೀರಿಯಲ್ ವೀಕ್ಷಕರಿಗೆ ತುಂಬಾ ಖುಷಿ ಕೊಡುತ್ತದೆ ಎನ್ನುವುದು ಖಂಡಿತಾ ಗೊತ್ತಿದೆ. ಸದ್ಯ ಸ್ನೇಹಾಳ ಸಾವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಅಷ್ಟೆ. ಆದರೆ ಇನ್ನು ಮುಂದೆ ಇನ್ನಷ್ಟು ಸೀರಿಯಲ್ ಅನ್ನು ಇಷ್ಟಪಡುವ ರೀತಿ ಟ್ವಿಸ್ಟ್ ಕೊಡುವ ಪ್ಲ್ಯಾನ್ ಮಾಡಿದ್ದೇವೆ. ತಕ್ಷಣಕ್ಕೆ ಆಗಿರುವ ಬೇಸರ ಶೀಘ್ರದಲ್ಲಿಯೇ ಬಗೆಹರಿಸುತ್ತೇವೆ ಎಂಬ ಮಾತನ್ನೂ ಹೇಳಿದ್ದಾರೆ.
ಭಿಕ್ಷೆ ಬೇಡಿ ದುಡ್ಡು ಕೊಟ್ಮೇಲೆ ಸ್ನೇಹಾ ಪಾತ್ರಕ್ಕೆ ಆಯ್ಕೆ ಆದೆ: ಅಂದು ನಡೆದ ಘಟನೆ ವಿವರಿಸಿದ ನಟಿ ಸಂಜನಾ ಬುರ್ಲಿ