ಬಿಗ್ ಬಾಸ್ 1 ತುಂಬಾ ಇನೋಸೆಂಟ್ ಸೀಸನ್, ಟಿವಿ ನೋಡಿಲ್ಲ ಅಂದ್ರೆ ನನ್ನ ತಾಯಿಯ ದಿನ ಸಂಪೂರ್ಣ ಆಗಲ್ಲ: ವಿಜಯ್ ರಾಘವೇಂದ್ರ

By Vaishnavi Chandrashekar  |  First Published Oct 19, 2024, 10:10 AM IST

ಚಿನ್ನಾರಿ ಮುತ್ತನ ಟೈಟಲ್ ಬದಲಾಯಿಸಿದ್ದು ಬಿಗ್ ಬಾಸ್ ಕಾರ್ಯಕ್ರಮ. ತಮ್ಮ ಬಿಬಿ ಜರ್ನಿ ಹೇಗಿತ್ತು ಎಂದು ನೆನಪಿಸಿಕೊಂಡ ವಿಜಯ್.....


ಕನ್ನಡ ಚಿತ್ರರಂಗ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಸುಮಾರು 11 ವರ್ಷಗಳ ಕಾಲ ಸೂಪರ್ ಹಿಟ್ ಸಿನಿಮಾಗಳನ್ನು ನೋಡಿ ಟಾಪ್ ನಟನಾಗಿದ್ದರೂ ಸಹ ಬಿಗ್ ಬ್ರೇಕ್ ಕೊಟ್ಟಿದ್ದು ಕಿರುತೆರೆಯ ರಿಯಾಲಿಟಿ ಶೋ. ಬಿಗ್ ಬಾಸ್ ಸೀಸನ್ 1ರಲ್ಲಿ ಸ್ಪರ್ಧಿಸಿದ ವಿಜಯ್ ರಾಘವೇಂದ್ರ ವಿನ್ನರ್ ಟ್ರೋಫಿ ಹಿಡಿದು ಹೊರ ಬಂದರು. ಈ ಜರ್ನಿಯಲ್ಲಿ ಒಳ್ಳೆಯ ಸ್ನೇಹಿತರು ಮತ್ತು ಅಭಿಮಾನಿಗಳುನ್ನು ಸಂಪಾದನೆ ಮಾಡಿದ್ದರು. ತಮ್ಮ ಫ್ಯಾಮಿಲಿಗೆ ಎಷ್ಟು ಹತ್ತಿರವಿದ್ದಾರೆ, ಪ್ರತಿಯೊಬ್ಬರಿಗೂ ಫ್ಯಾಮಿಲಿ ಎಷ್ಟು ಮುಖ್ಯ ಎಂದು ವಿಜಯ್ ಆಗಾಗ ಎಕ್ಸ್‌ಪ್ರೆಸ್ ಮಾಡುತ್ತಿದ್ದರು. ಈಗ ವಿಜಯ್ ತಮ್ಮ ಬಿಗ್ ಬಾಸ್ ಸೀಸನ್ ಬೆಸ್ಟ್ ಎಂದು ಹೇಳಿಕೊಂಡಿದ್ದಾರೆ. 

ಬಿಗ್ ಬಾಸ್ ಸೀಸನ್ 1:

Tap to resize

Latest Videos

undefined

'ಬಿಗ್ ಬಾಸ್ ಸೀಸನ್ 1 ಇಸ್ ದಿ ಮೋಸ್ಟ್‌ ಇನ್ನೋಸೆಂಟ್ ಸೀಸನ್ ಆಗಿತ್ತು ಯಾಕೆ ಅಂದ್ರೆ ಸ್ಪರ್ಧಿಗಳಿಗೆ ಹೊಸತು, ಚಾನೆಲ್‌ನವರಿಗೆ ಹೊಸತು, ವೀಕ್ಷಕರಿಗೆ ಹೊಸತು. ಯಾವ ಸಮಯದಲ್ಲಿ ಏನು ನಿರೀಕ್ಷೆ ಮಾಡಬೇಕು ಎಂದು ಯಾರಿಗೂ ಗೊತ್ತಿಲ್ಲ ಏಕೆಂದರೆ 15 ವಿಭಿನ್ನ ವ್ಯಕ್ತಿತ್ವದವರು ಮನೆಯಲ್ಲಿದ್ದಾರೆ. 10-11 ವರ್ಷಗಳ ಕಾಲ ಸಿನಿಮಾರಂಗದಲ್ಲಿ ಕೆಲಸ ಮಾಡಿದ್ದೀನಿ ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣ ಚಿನ್ನಾರಿ ಮುತ್ತ ವಿಜಯರಾಘವೇಂದ್ರನ ಬಿಗ್ ಬಾಸ್ ವಿಜಯ್ ರಾಘವೇಂದ್ರ ಎಂದು ಕರೆಯಲು ಶುರು ಮಾಡಿದ್ದರು. ಬಿಗ್ ಬಾಸ್ ಮೂಲಕ ತುಂಬಾ ಜನರಿಗೆ ಹತ್ತಿರವಾಗಿದ್ದೀನಿ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ವಿಜಯ್ ಮಾತನಾಡಿದ್ದಾರೆ. 

ಇಷ್ಟ ಬಂದಿದ್ದು ತರ್ಸ್ಕೊಂಡು ತಿನ್ಬೋದಿತ್ತು, ದೇವತೆ ರೀತಿ ಇದ್ದೆ; ತಂದೆ ನೆನೆದು ಕಣ್ಣೀರಿಟ್ಟ ನಟಿ

ಟಿಆರ್‌ಪಿ ಮುಖ್ಯ: 

ಟಿಆರ್‌ಪೆ ಚೆನ್ನಾಗಿ ಬರಬೇಕು ಏಕೆಂದರೆ ಅದು ನಮ್ಮ ಜೀವನದ ದಾರಿ. ದಿನ ಸೀರಿಯಲ್ ನೋಡಿಲ್ಲ ಅಂದ್ರೆ ನಮ್ಮ ತಾಯಿಗೆ ದಿನ ಸಂಪೂರ್ಣ ಆದಂಗೆ ಅನಿಸುವುದಿಲ್ಲ. ರಿಯಾಲಿಟಿ ಶೋ ಮತ್ತು ಸೀರಿಯಲ್‌ಗಳು ಜನರನ್ನು ಮನೋರಂಜಿಸಲು ಇರುವುದು. ಸೀರಿಯಲ್ ಪ್ರೊಡಕ್ಷನ್ ಮಾಡಲು ಮುಂದಾದೆ ಆದರೆ ಸರಿಯಾಗಿ ಕೈ ಹಿಡಿಯಲಿಲ್ಲ ಹೀಗಾಗಿ ಗೊತ್ತಿರುವ ಕೆಲಸ ಮಾಡೋಣ ಎಂದು ಸುಮ್ಮನಾದೆ. 58-60 ಸಿನಿಮಾಗಳಲ್ಲಿ ನಾನು 80% ರಿಸ್ಕ್‌ ತೆಗೆದುಕೊಂಡಿರುವುದು ಹೊಸ ತಂಡದ ಜೊತೆ ಕೆಲಸ ಮಾಡುವುದಕ್ಕೆ. ಹೀಗಾಗಿ ನನಗೆ ಸಾಮರ್ಥ್ಯ ಬಂದರೆ ಖಂಡಿತಾ ಆದಷ್ಟು ಸ್ಕ್ರಿಪ್ಟ್‌ಗಳನ್ನು ತೆಗೆದುಕೊಂಡು ಪ್ರಡ್ಯೂಸ್ ಮಾಡುವೆ ಎಂದು ವಿಜಯ್ ಹೇಳಿದ್ದಾರೆ. 

ಪಾರ್ಕ್‌ನಲ್ಲಿ ಹಾಟ್ ಪೋಸ್ ಕೊಟ್ಟ ಸೋನು ; ಡೀಪ್ ಜಾಸ್ತಿ ಆಯ್ತು, ಟಾಪ್ ತುಂಡ ಆಯ್ತು ಎಂದು

click me!