BBK11: ಚೈತ್ರಾ ಜೈಲು ಸೇರಿದ್ರು, ಭವ್ಯಾ-ತ್ರಿವಿಕ್ರಮ್ ಇನ್ನಷ್ಟು ಹತ್ತಿರವಾದ್ರು! ಮಂಜು ಬದಲಾಗಿದ್ದಾರೆ?

By Gowthami K  |  First Published Oct 19, 2024, 12:19 AM IST

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ರಂಜಿತ್ ಮತ್ತು ಜಗದೀಶ್ ಹೊರ ಹೋದ ಬಳಿಕ ಮನೆಯಲ್ಲಿ ಹೊಸ ತಿರುವುಗಳು. ಚೈತ್ರಾ ಕುಂದಾಪುರ ಜೈಲು ಸೇರಿದ್ದಾರೆ. ಮಂಜು ಬದಲಾಗಿದ್ದಾರೆ ಎಂದು ಭವ್ಯಾ ಮತ್ತು ಹಂಸಾ ಚರ್ಚಿಸಿದ್ದಾರೆ.


ಬಿಗ್ ಬಾಸ್ ಕನ್ನಡ ಸೀಸನ್ 11ರ ಗಲಾಟೆ ಬಳಿಕ ರಂಜಿತ್ ಮತ್ತು ಜಗದೀಶ್ ಅವರನ್ನು ಹೊರ ಹಾಕಿದ ನಂತರ ಮರುದಿನ ಬೆಳಗ್ಗೆ ಅಂದರೆ 18 ನೇ ದಿನ ಬಿಗ್‌ಬಾಸ್‌ ಮನೆಯಲ್ಲಿ ಒಂದೊಳ್ಳೆ ಹಾಡಿನಿಂದ ದಿನ ಪ್ರಾರಂಭವಾಯ್ತು. ಈ ದಿನ ಹೊಸದಾಗಿದೆ... ಈ ಕ್ಷಣ ಚೆಲುವಾಗಿದೆ... ಮನವು ಹಗುರಾಗಿದೆ... ತನುವು ತೇಲಾಡಿದೆ. ಎಂದು ಹಾಡನ್ನು ಬಿಗ್‌ಬಾಸ್‌ ಹಾಕಿದ್ದರು.

ಇದಾದ ನಂತರ ಶಿಶಿರ್ ಮತ್ತು ಮೋಕ್ಷಿತಾ ಮಾತನಾಡಿಕೊಂಡರು ನಮ್ಮ ಕೋಪಗಳನ್ನು ಸ್ವಲ್ಪ ಕಂಟ್ರೋಲ್‌ ನಲ್ಲಿ ಇಟ್ಟುಕೊಳ್ಳಬೇಕು. ನಾವೆಲ್ಲಿದ್ದೇವೆ. ಯಾವು ವೇದಿಕೆಯಲ್ಲಿ ಇದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಮೋಕ್ಷಿತಾ ಹೇಳಿದರು.

Tap to resize

Latest Videos

undefined

ಕಿಚ್ಚ ಮಾತಿನಂತೆಯೇ ಆಯ್ತು, ಅನಿರೀಕ್ಷಿತ ತಿರುವಿನಲ್ಲಿ ಬಿಗ್‌ಬಾಸ್‌ ಮನೆಯಿಂದ ಇಬ್ಬರು ಔಟ್‌! ಹೋಗಿದ್ದೆಲ್ಲಿಗೆ?

ಇನ್ನು ಈ ವಾರದ ನಾಮಿನೇಶನ್ ನಲ್ಲಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುವ ಸದಸ್ಯರು ಐಶ್ವರ್ಯಾ, ಗೋಲ್ಡ್ ಸುರೇಶ್, ಧನ್‌ರಾಜ್, ಮಂಜು, ಮಾನಸ, ಮೋಕ್ಷಿತಾ ಜೊತೆಗೆ ನೇರವಾಗಿ ನಾಮಿನೇಟ್ ಆಗಿರುವ ಅನುಷಾ ರೈ ಇದ್ದಾರೆ. ಆದರೆ ಈಗ ಮನೆಯಲ್ಲಿ 14 ಮಂದಿ ಇದ್ದು, ಈ ವಾರ ಇಬ್ಬರು ಹೊರಹೋಗಿರುವುದರಿಂದ ಎಲಿಮಿನೇಶನ್ ಇದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಈ ನಡುವೆ ಉಗ್ರಂ ಮಂಜು ಬದಲಾಗಿದ್ದಾರೆ ಎಂದು ಭವ್ಯಾ ಗೌಡ ಮತ್ತು ಹಂಸಾ ಮಾತನಾಡಿಕೊಂಡರು. ಈಗ ವಿಕ್ರಂಗೆ ಪೂಸಿ ಹೊಡಿತಿದ್ದಾರೆ. ನಾಮಿನೇಶನಲ್ಲಿ ವಿಕ್ರಂ ಅವರ ಫೋಟೋ ಹಾಕಿದ್ದಕ್ಕೆ ಇರಬೇಕು. ರಂಜಿತ್ ಅವರನ್ನು ತಳ್ಳಿದು ವಿಕ್ರಂಗೆ ಬೇಜರಾಗಿದೆ ಅದಕ್ಕೆ ಮಂಜು ಅವರನ್ನು ನಾಮಿನೇಶನ್ ಫೋಟೋದಲ್ಲಿ ಹಾಕಿದ್ದಾರೆ. ನಾನು ಬೇಕುಂತ ಮಾಡಿಲ್ಲ ಗೆಳೆಯ ಅಂತ ಆಮೇಲೆ ಹೇಳಿದ್ದಾರೆ ಎಂದು ಹಂಸಾ ಅವರು ಭವ್ಯಾಗೆ ಹೇಳಿದ್ದಾರೆ. ಇನ್ನು ಭವ್ಯಾ ಅವರು ತ್ರಿವಿಕ್ರಮ್ ಜೊತೆಗೂ ಮಂಜು ಬದಲಾಗಿದ್ದಾರೆಂದು ಚರ್ಚೆ ನಡೆಸಿದ್ದಾರೆ.

ಅದಾದ ನಂತರ ಬಿಗ್‌ಬಾಸ್‌ ಮನೆಯಲ್ಲಿ ಯಾರು ಅಪ್ರಾಮಾಣಿಕ ಮತ್ತು ಯಾರು ಕುತಂತ್ರಿ ಎಂಬ ಚಟುವಟಿಕೆ ಮಾಡಿಸಿದರು. ಅಪ್ರಾಮಾಣಿಕ  ಮತ್ತು  ಕುತಂತ್ರಿ ಎಂಬ ಪಟ್ಟಿಯನ್ನು ಸ್ಪರ್ಧಿಗಳಿಗೆ ತಿಳಿಸಿ ಅಂಟಿಸಬೇಕಿತ್ತು.  ಇದರಲ್ಲಿ ಅತೀ ಹೆಚ್ಚು ಹಣೆಪಟ್ಟಿ ಅಂಟಿಸಿಕೊಂಡ  ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಜೈಲಿಗೆ ಹೋಗಬೇಕಿತ್ತು. ಅವರು 4 ಕುತಂತ್ರಿ ಮತ್ತು 3 ಅಪ್ರಮಾಣಿಕ ಎಂಬ ಹಣೆಪಟ್ಟಿ ಪಡೆದರು. ಮತ್ತು ಜೈಲುವಾಸಕ್ಕೆ ಹೋದರು.

ಮುಂಬೈನಲ್ಲಿ ₹22 ಕೋಟಿ ಹೂಡಿಕೆ ಮಾಡಿ ವಾಣಿಜ್ಯ ಕಚೇರಿ ಖರೀದಿಸಿದ ಸಾರಾ ಅಲಿ ಖಾನ್ ಮತ್ತು ಅಮೃತಾ!

ಇನ್ನು ರಾತ್ರಿ ಲೈಟ್ಸ್ ಆಫ್ ಆದ ಮೇಲೆ ಮಂಜು, ಮಾನಸ, ಗೌತಮಿ, ಮೋಕ್ಷಿತಾ  ಸುತ್ತ ಕುಳಿತು ಮಾತನಾಡಿಕೊಂಡಿದ್ದರು. ಈ ವೇಳೆ ತ್ರಿವಿಕ್ರಮ್ ಮತ್ತು ಭವ್ಯಾ ಲವ್ ಮ್ಯಾಟರ್‌ ಅಂತ ಮಾನಸಾ ಮಂಜು ಬಳಿ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಮಂಜು ಅದು ನನಗೆ ಗೊತ್ತು. ಆದ್ರೆ ಜೆನ್ಯೂನ್‌ ಅಲ್ಲ ಎಂದಿದ್ದಾರೆ. 

ಇನ್ನು ಶಿಶಿರ್ ಮತ್ತು ಐಶ್ವರ್ಯಾ ಕುಳಿತು ಮಾತನಾಡಿಕೊಂಡಿದ್ದಾರೆ. ಇನ್ನು ಹೋಗ್ತಾ ಗೇಮ್ ತುಂಬಾ ಟಫ್‌ ಆಗುತ್ತೆ. ಮನೆಯಲ್ಲಿ ಅವರದ್ದೇ ಆದ ಗ್ರೂಪ್‌ ಗಳು ಕ್ರಿಯೇಟ್‌ ಆಗಿದೆ. ನಂದು ಭವ್ಯಾದ ಒಂದು ಟಾಸ್ಕ್ ನಿಂದ ರಿಲೆಶನ್ ಶಿಪ್ ಹಾಳಾಯ್ತು. ನಾನು ಅದನ್ನು ವೈಯಕ್ತಿಕವಾಗಿ ತಗೆದುಕೊಂಡಿರಲಿಲ್ಲ ಎಂದರು. ಇನ್ನು ಮಾನಸ ಮಾತನಾಡೋದು ನನಗೆ ಇಷ್ಟವಾಗಲ್ಲ, ಏಕವಚನ ಬದ ಬಳಕೆ ರೂಡ್‌ ಆಗಿ ಮಾತಾಡ್ತಾರೆ ಅಂತ ಶಿಶಿರ್ ಬಳಿ ಐಧ್ವರ್ಯಾ ಜೇಳಿಕೊಂಡಿದ್ದಾರೆ.

click me!