ರಂಜಿತ್, ಮಾನಸ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ: ಬಿಗ್‌ಬಾಸ್‌ಗೆ ಕೃತಜ್ಞತೆ ಸಲ್ಲಿಸಿದ ಜಗದೀಶ್

Published : Oct 19, 2024, 09:44 AM IST
ರಂಜಿತ್, ಮಾನಸ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ: ಬಿಗ್‌ಬಾಸ್‌ಗೆ ಕೃತಜ್ಞತೆ ಸಲ್ಲಿಸಿದ ಜಗದೀಶ್

ಸಾರಾಂಶ

ಎಷ್ಟೋ ಕೋಟಿ ಜನಗಳ ಮಧ್ಯೆ ಬಿಗ್‌ಬಾಸ್‌‌ನಲ್ಲಿ ಭಾಗಿಯಾಗುವ ಅವಕಾಶ ನಮ್ಮ ಅದೃಷ್ಟ. ಅದನ್ನು ವಿಭಿನ್ನವಾಗಿ ತೋರಿಸುವ ಮೀಡಿಯಾ, ಎಂಜಾಯ್‌ ಮಾಡಿದ ವೀಕ್ಷಕರು, ನನ್ನ ಅಭಿಮಾನಿ ದೇವರಿಗೆ ವಂದನೆಗಳು. ನಾನು ಬಿಗ್‌ ಬಾಸ್‌ ಮಿಸ್‌ ಮಾಡಿಕೊಳ್ತೇನೆ’ ಎಂದು ಇದರಲ್ಲಿ ಲಾಯರ್ ಜಗದೀಶ್‌ ಹೇಳಿದ್ದಾರೆ.  

‘ಬಿಗ್‌ಬಾಸ್‌ ಸೀಸನ್‌ 11’ನಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿ ಜಗದೀಶ್‌ ಅವರು, ‘ಐ ಮಿಸ್ ಬಿಗ್‌ಬಾಸ್‌’ ಎಂದಿದ್ದಾರೆ. ಈ ಕುರಿತು ವಾಯ್ಸ್ ನೋಟ್‌ ಕಳುಹಿಸಿರುವ ಅವರು, ‘ಬಿಗ್‌ ಬಾಸ್‌ ಕಾರ್ಯಕ್ರಮ ವ್ಯಕ್ತಿಯ ಜೀವನವನ್ನು ತೋರಿಸುವಂಥಾ ಕನ್ನಡಿ. ಅಲ್ಲಿ ನನ್ನ ನಿಜ ಮುಖ ನೋಡಿದಾಗ ನನಗೇ ಆಶ್ಚರ್ಯ ಆಯ್ತು. ನನ್ನಲ್ಲಿ ಅಡಗಿದ ಕೋಪ, ಪ್ರತಿಭೆ ಎಲ್ಲವೂ ಅರ್ಥವಾಗಿದೆ. ನಿಜವಾಗಿಯೂ ನಾವು ಅದೃಷ್ಟವಂತರು. 

ಎಷ್ಟೋ ಕೋಟಿ ಜನಗಳ ಮಧ್ಯೆ ಬಿಗ್‌ಬಾಸ್‌‌ನಲ್ಲಿ ಭಾಗಿಯಾಗುವ ಅವಕಾಶ ನಮ್ಮ ಅದೃಷ್ಟ. ಅದನ್ನು ವಿಭಿನ್ನವಾಗಿ ತೋರಿಸುವ ಮೀಡಿಯಾ, ಎಂಜಾಯ್‌ ಮಾಡಿದ ವೀಕ್ಷಕರು, ನನ್ನ ಅಭಿಮಾನಿ ದೇವರಿಗೆ ವಂದನೆಗಳು. ನಾನು ಬಿಗ್‌ ಬಾಸ್‌ ಮಿಸ್‌ ಮಾಡಿಕೊಳ್ತೇನೆ’ ಎಂದು ಇದರಲ್ಲಿ ಲಾಯರ್ ಜಗದೀಶ್‌ ಹೇಳಿದ್ದಾರೆ.

ಪತಿ ತುಕಾಲಿಗೆ ಗೌರವ ಕೊಡದ ಹೆಣ್ಣು ಬೇರೆ ಗಂಡಸರಿಗೆ ಗೌರವ ಕೊಡ್ತಾರಾ?; ಮಾನಸ ಬಗ್ಗೆ ವೀಕ್ಷಕರಿಗೆ ಅಸಮಾಧಾನ

‘ನನ್ನ ಹೀರೋ ಸುದೀಪ್, ನನ್ನ ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ. ರಂಜಿತ್, ಮಾನಸ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ, ನೀವೆಲ್ಲಾ ತುಂಬಾ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಕಲಾವಿದರಾಗಿದ್ದೀರಿ. ನಾನು ನಿಮ್ಮ ಜೊತೆಯಲ್ಲಿ ಒಬ್ಬನಾಗಿ ನಗಲು ಪ್ರಯತ್ನ ಪಟ್ಟೆ ಅಷ್ಟೆ, ಈ ನಿಟ್ಟಿನಲ್ಲಿ ಕೆಲವು ತಪ್ಪುಗಳು ನನ್ನಿಂದ ಆಗಿವೆ. ಅದು ನಟನೆ ಅಥವಾ ಮನರಂಜನೆಯ ಒಂದು ಭಾಗವಷ್ಟೆ, ವೈಯುಕ್ತಿಕ ದ್ವೇಷ ಯಾವುದೂ ಇಲ್ಲ’ ಎಂದು ಸಂದೇಶದಲ್ಲಿ ಜಗದೀಶ್‌ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!