ಸೀತಾರಾಮ ಸೀರಿಯಲ್ನಲ್ಲಿ ಸಿಹಿ ಸಾವನ್ನಪ್ಪಿದ್ದಾಳೆ. ಸೀತಾಗೆ ಈ ವಿಷ್ಯ ಗೊತ್ತಿಲ್ಲ. ಆಸ್ಪತ್ರೆ ಬೆಡ್ ಮೇಲೆ ಸೀತಾ ಮಲಗಿದ್ರೆ ಇತ್ತ ಅಂತ್ಯಸಂಸ್ಕಾರ ನಡೆಯುತ್ತಿದೆ. ಧಾರಾವಾಹಿ ಇಷ್ಟು ಕಠೋರವಾಗಿದ್ದು ವೀಕ್ಷಕರಿಗೆ ಇಷ್ಟವಾಗ್ತಿಲ್ಲ.
ಸಿಹಿಯಾಗಿದ್ದ ಜೀ ಕನ್ನಡ ಸೀರಿಯಲ್ ಸೀತಾರಾಮ (Zee Kannada Serial Seetharama) ಈಗ ಕಹಿಯಾಗಿದೆ. ಸಿಹಿ ಸಾವನ್ನು ವೀಕ್ಷಕರು ಒಪ್ಪಿಕೊಳ್ತಿಲ್ಲ. ಸಿಹಿಗೆ ಅಪಘಾತ (Accident) ವಾದ ದೃಶ್ಯ ಮಾತ್ರ ತೋರಿಸಿದ್ರೆ ವೀಕ್ಷಕರು ಸ್ವಲ್ಪ ಮಟ್ಟಿಗೆ ದುಃಖ ಮರೆಯುತ್ತಿದ್ರೇನೋ, ಆದ್ರೆ ಸೀರಿಯಲ್ ನಲ್ಲಿ ಸಾವಿನ ನಂತ್ರ ರಾಮನ ದುಃಖ ಹಾಗೂ ಸಿಹಿ ಅಂತ್ಯ ಸಂಸ್ಕಾರದ ಇಂಚಿಂಚನ್ನು ತೋರಿಸ್ತಿದ್ದಾರೆ. ಇದನ್ನು ನೋಡಿದ ವಿಕ್ಷಕರು ನೋವಿನ ಜೊತೆ ಕೋಪ ವ್ಯಕ್ತಪಡಿಸ್ತಿದ್ದಾರೆ. ಇಂಥ ದೃಶ್ಯಗಳನ್ನು ತೋರಿಸಿ ಕರಳು ಹಿಂಡ್ಬೇಡಿ ಎಂಬುದು ವೀಕ್ಷಕರ ಮನವಿ.
ಈ ಹಿಂದೆಯೇ ಒಂದು ಪ್ರೋಮೋ (promo) ಹಾಕಿ, ಸೀತಾರಾಮದಲ್ಲಿ ಸಿಹಿ ಸಾಯ್ತಾಳೆ ಎಂಬ ಸೂಚನೆ ನೀಡಿದ್ರು. ಆಗಿನಿಂದಲೂ ವೀಕ್ಷಕರ ವಿರೋಧ ಕೇಳಿ ಬರ್ತನೆ ಇತ್ತು. ದಯವಿಟ್ಟು ಸೀರಿಯಲ್ ಗೆ ಈ ಆಂಗಲ್ ನೀಡ್ಬೇಡಿ ಎಂದು ಮನವಿ ಮಾಡಿದ್ದರು. ನಿರ್ದೇಶಕರು ವೀಕ್ಷಕರ ಮಾತನ್ನು ಕೇಳಿಲ್ಲ. ಸಿಹಿಯನ್ನು ಸಾಯ್ಸಿ, ಸುಬ್ಬಿಯನ್ನು ಕರೆತರುವ ತಯಾರಿ ನಡೆಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಸಿಹಿ, ಪಾಪಿ ಭಾರ್ಗವಿ ಪ್ಲಾನ್ ನಿಂದ ಸಾವನ್ನಪ್ಪಿದ್ದಾಳೆ. ಸಿಹಿಗೆ ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ಇತ್ತ ಸೀತಾ ಮೂರ್ಛೆ ಹೋಗಿದ್ದು, ಇನ್ನೂ ಆಕೆಗೆ ಎಚ್ಚರವಾಗಿಲ್ಲ. ಆಸ್ಪತ್ರೆಯಲ್ಲಿ ಒಂದ್ಕಡೆ ಸಿಹಿ ಶವ ಹಾಗೂ ಇನ್ನೊಂದ್ಕಡೆ ಮಲಗಿರುವ ಸೀತಾ ಇಬ್ಬರನ್ನು ನೋಡೋಕೆ ಆಗ್ತಿಲ್ಲ. ಸಿಹಿ ಸಾವನ್ನಪ್ಪಿದ್ದಾಳೆ ಎಂಬುದು ಸೀತಾಗೆ ತಿಳಿದಿಲ್ಲ. ಎಲ್ಲ ಹೊಣೆ ಹೊತ್ತಿರುವ ರಾಮ, ಸೀತಾ ಮುಂದೆ ಸಿಹಿ ಶವ ತಂದು ತನ್ನ ದುಃಖ ತೋಡಿಕೊಂಡಿದ್ದಾಗಿದೆ. ಈಗ ಅಂತ್ಯಸಂಸ್ಕಾರ ನಡೆಯುತ್ತಿದೆ.
ಹೆರಿಗೆಯಾದ ನಾಲ್ಕೇ ತಿಂಗಳಿಗೆ ಇಷ್ಟೊಂದು ಕುಣಿದ ನಟಿ, ಹುಷಾರಿ ಎಂದ ಫ್ಯಾನ್ಸ್
ಜೀ ಕನ್ನಡ ಪೋಸ್ಟ್ ಮಾಡಿರುವ ಪ್ರೋಮೋದಲ್ಲಿ, ಚಿತೆಯ ಮೇಲೆ ಪುಟಾಣಿ ಸಿಹಿಯನ್ನು ಸೇರಿಸಲಾಗಿದೆ. ಅದಕ್ಕೆ ರಾಮ್ ಅಗ್ನಿ ಸ್ಪರ್ಶ ಮಾಡ್ತಿದ್ದಾನೆ. ಸಿಹಿ, ರಾಮನಿಗೆ ಪರಿಚಯವಾದ ದಿನದಿಂದ ಅಂತಿಮ ದಿನದವರೆಗಿನ ಎಲ್ಲ ಸಿಹಿ ನೆನಪು ರಾಮನಿಗೆ ಬರ್ತಿದೆ. ಸೀತಾ, ಅಪ್ಪ ಅಮ್ಮ ಕೂಡ ಅಲ್ಲಿಗೆ ಬಂದಿದ್ದಾರೆ.
ಜೀ ಕನ್ನಡದ ಈ ಪ್ರೊಮೋ ಅಭಿಮಾನಿಗಳಿಗೆ ಸ್ವಲ್ಪವೂ ಇಷ್ಟವಾಗಿಲ್ಲ. ಸೀತಾರಾಮ ಸೀರಿಯಲ್ ಡಿಫರೆಂಟ್ ಆಗಿದೆ, ಸಂತೋಷ ತುಂಬಿದೆ ಎಂತ ಸೀರಿಯಲ್ ನೋಡ್ತಿದ್ವಿ. ಆದ್ರೆ ಎಲ್ಲವನ್ನು ಹಾಳು ಮಾಡಿದ್ರಿ. ಸಿಹಿ ಇಲ್ಲದೆ ಸೀರಿಯಲ್ ನೋಡೋದು ಕಷ್ಟ ಎಂದು ವೀಕ್ಷಕರು ಹೇಳಿದ್ದಾರೆ. ಸಿಹಿ ಆತ್ಮ ಅಲ್ಲೇ ಇದ್ದು, ಸೀರಿಯಲ್ ದಾರಿ ಬದಲಾಗಿದ್ದು ಇಷ್ಟವಿಲ್ಲ ಅನ್ನೋದು ಇನ್ನೊಬ್ಬರ ಕಮೆಂಟ್.
ಸಿಹಿಯ ನಿಜವಾದ ಅಮ್ಮ ಹಾಗೂ ಪಾಲಕರನ್ನು ವೀಕ್ಷಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಚಿಕ್ಕ ಮಗುವಿನ ಸಾವನ್ನು ನಮಗೆ ಸಹಿಸಲು ಆಗ್ತಿಲ್ಲ. ನಿಜವಾದ ಅಮ್ಮ ಇದನ್ನೆಲ್ಲ ಹೇಗೆ ನೋಡ್ತಿದ್ದಾರೆ, ರೀಲ್ ಆದ್ರೂ ಕರುಳು ಕಿವುಚುವ ಇಂಥ ದೃಶ್ಯ ತೋರಿಸಿ ನಮ್ಮನ್ನು ನೋವಿನಲ್ಲಿ ಮುಳುಗಿಸಬೇಡಿ ಎಂದು ನಿರ್ದೇಶಕರಿಗೆ ಅಭಿಮಾನಿಗಳು ಬುದ್ಧಿ ಕೇಳಿದ್ದಾರೆ. ಇದು ಕರುಳಿನ ಕುಡಿ ಸಿನಿಮಾವನ್ನು ನೆನಪಿಸುತ್ತಿದೆ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.
ಆನ್ಲೈನ್ ನಲ್ಲಿ ಸಿಗ್ತಿದೆ ಪುಷ್ಪ 2 , ಪೈರಸಿಗೆ ಒಳಗಾಯ್ತು ಪ್ಯಾನ್ ಇಂಡಿಯಾ ಸಿನಿಮಾ
ಸೀತಾ ಹಾಗೂ ರಾಮ, ಶ್ಯಾಮ್ ಮತ್ತು ಶಾಲಿನಿ ವಿರುದ್ಧ ಕೋರ್ಟ್ ನಲ್ಲಿ ಗೆಲುವು ಸಾಧಿಸಿದ್ದರು. ಸಿಹಿ, ಶಾಲಿನಿ ಪಾಲಾಗುತ್ತಾಳೆ ಅಂದ್ಕೊಂಡಿದ್ದ ವೀಕ್ಷಕರು ಖುಷಿಪಟ್ಟಿದ್ದರು. ಸಿಹಿ ಸಾವಿನ ಪ್ರೋಮೋ ನೋಡಿದ್ರೂ ಅದನ್ನು ಕೆಲವರು ನಂಬಿರಲಿಲ್ಲ. ಇದು ಕನಸು ಎನ್ನುತ್ತ ತಮ್ಮನ್ನು ತಾವು ಸಮಾಧಾನ ಮಾಡ್ಕೊಂಡಿದ್ದರು. ಆದ್ರೀಗ ಅದು ಸತ್ಯ ಎಂಬುದು ಗೊತ್ತಾಗಿದೆ. ಸಿಹಿ ಆತ್ಮ ಮತ್ತು ಸುಬ್ಬಿಯಾಗಿ ಸಿಹಿ ಮತ್ತೆ ಸೀರಿಯಲ್ಗೆ ಬರ್ತಾಳೆ ಎಂಬುದೊಂದೇ ಈಗ ವೀಕ್ಷಕರಿಗಿರುವ ಸಮಾಧಾನ.