ಭಾಗ್ಯಲಕ್ಷ್ಮಿ ಕುಸುಮತ್ತೆ ರಿಯಲ್‌ ಪುತ್ರಂಗೆ ಹಾವೆಂದ್ರೆ ಜೀವ: ಕುಕ್ಕೆಗೆ ಹೋದ್ರೂ ಬಗೆ ಹರಿದಿಲ್ಲ ಸಮಸ್ಯೆ!

By Suchethana D  |  First Published Dec 5, 2024, 5:15 PM IST

ಭಾಗ್ಯಲಕ್ಷ್ಮಿ ಸೀರಿಯಲ್ ಕುಸುಮಾ ಅರ್ಥಾತ್‌ ನಟಿ ಪದ್ಮಜಾ ರಾವ್‌ ಅವರ ಮಗ ಸಂಜೀವ ಅವರಿಗೆ ಹಾವು, ಪ್ರಾಣಿ, ಪಕ್ಷಿ ಎಂದ್ರೆ ಪ್ರೀತಿ. ಅವರ ಕಥೆ ಕೇಳಿ...
 


ಪದ್ಮಜಾ ರಾವ್​ ಎಂದರೆ ಬಹುಶಃ ಈಗಿನ ಬಹುತೇಕರಿಗೆ ತಿಳಿಯಲಿಕ್ಕಿಲ್ಲ. ಆದರೆ, ಕಲರ್ಸ್​ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿಯ   ಕುಸುಮತ್ತೆ ಎಂದರೆ ಸಾಕು ಆದರ್ಶ ಮಾತೆ ಕಣ್ಣೆದುರಿಗೆ ಬರುತ್ತಾಳೆ. ಇದ್ದರೆ ಇಂಥ ಅತ್ತೆ ಇರಬೇಕು, ಎಲ್ಲರಿಗೂ ಇಂಥ ಅತ್ತೆ ಸಿಗಬೇಕು ಎನ್ನುವ ಕ್ಯಾರೆಕ್ಟರ್​ ಕುಸುಮಳದ್ದು. ಸೊಸೆಗಾಗಿ ಮಗನ ವಿರುದ್ಧವೇ ತಿರುಗಿ ಬೀಳುವ ಅತ್ತೆಯಂದಿರು ಬಹಳ ಕಡಿಮೆ ಎಂದೇ ಹೇಳಬಹುದು. ಆದರೆ ರೆಬಲ್​ ಅತ್ತೆ ಈಕೆ. ಸೊಸೆ ಭಾಗ್ಯಳಿಗಾಗಿ ಮಗ ತಾಂಡವ್​ ವಿರುದ್ಧ ಅದೆಷ್ಟು ಬಾರಿ ತಿರುಗಿ ಬಿದ್ದಿದ್ದಾಳೋ ಗೊತ್ತಿಲ್ಲ. ಇದೀಗ ಸೊಸೆಯಾಗಿ ಮಗನನ್ನೇ ಧಿಕ್ಕರಿಸಿ ಮನೆಯಿಂದ ಹೊರಹೋಗಿದ್ದಾಳೆ ಕುಸುಮಾ. ಇದು ರೀಲ್‌ ಕುಸುಮತ್ತೆ ಕಥೆಯಾದ್ರೆ, ರಿಯಲ್‌ ಮಗ ಸಂಜೀವನ ಕಥೆಯೇ ಬೇರೆ! 

ನಟಿ ಪದ್ಮಜಾ ಅವರ ಪುತ್ರ ಸಂಜೀವ್‌ ಅವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಇನ್ನಿಲ್ಲದ ವ್ಯಾಮೋಹ. ಇದೀಗ ರ್‍ಯಾಪಿಡ್‌ ರಶ್ಮಿ ಶೋನಲ್ಲಿ ಅವರು, ತಮ್ಮ ಬದುಕಿನ ಹಲವು ಘಟನೆಗಳನ್ನು ವಿವರಿಸಿದ್ದಾರೆ. ಅದರಲ್ಲಿಯೂ ಹಾವು ಹಿಡಿಯುವುದು ಎಂದರೆ ತಮಗೆ ಏಕೆ ಪ್ರೀತಿ ಎನ್ನುತ್ತಲೇ ಹಾವಿನ ಬಗ್ಗೆಯೂ ಕೆಲವೊಂದು ವಿಷಯಗಳನ್ನು ಶೇರ್‍‌ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಇವರ ಕಥೆಯೇ ರೋಚಕವಾಗಿದೆ. ತಾವು ಹಾವು ಹಿಡಿಯುವ ವಿಷಯ ಅಮ್ಮನಿಗೆ ಗೊತ್ತೆ ಇರಲಿಲ್ಲ. ಗೊತ್ತಿದ್ದರೆ ಬಹುಶಃ ಆಗ ಬಿಡುತ್ತಿರಲಿಲ್ಲ ಎಂದಿದ್ದಾರೆ ಸಂಜೀವ್‌. ನಾನೇನೋ ಪ್ರಾಣಿ, ಪಕ್ಷಿ ಸಾಕುತ್ತಿದ್ದೆ ಎಂದಷ್ಟೇ ಅಮ್ಮನಿಗೆ ತಿಳಿದಿತ್ತು. ಹಾವು ಹಿಡಿಯುವುದು ಗೊತ್ತೂ ಇರಲಿಲ್ಲ. ಅದನ್ನು ನಾನು ಹೇಳಿಯೂ ಇರಲಿಲ್ಲ. ಅದೊಂದು ದಿನ ಬನಶಂಕರಿ ಬಳಿ ಹಾವು ಬಂತು ಎಂದು ನನಗೆ ಕರೆ ಮಾಡಲಾಗಿತ್ತು. ನಾನು ಹೋಗಿ ಹಾವು ಹಿಡಿದದ್ದನ್ನು ಯಾರೋ ವಿಡಿಯೋ ಮಾಡಿದ್ದರು. ಹಾವು ಹಿಡಿಯುವುದನ್ನು ನೋಡಿ ಒಬ್ಬ ಲೇಡಿ ಮೂರ್ಛೆ ಕೂಡ ಹೋಗಿದ್ದರು. ಆ ವಿಡಿಯೋ ಟಿವಿಯಲ್ಲಿ ಪ್ರಸಾರ ಆಗಿಬಿಟ್ಟಿತು. ಅದನ್ನು ಅಮ್ಮ ನೋಡಿದಾಗಲೇ ನಾನು ಹಾವು ಹಿಡಿಯುವುದು ಗೊತ್ತಾಗಿದ್ದು ಎಂದಿದ್ದಾರೆ ಸಂಜೀವ್.

Tap to resize

Latest Videos

ಈ ಸಂದರ್ಶನ ಹೆಂಡ್ತಿಗೆ ತೋರಿಸ್ಬೇಡಿ ಅಂತಲೇ ಐವರು ಪ್ರೇಯಸಿಯರ ಹೆಸ್ರು ಥಟ್‌ ಅಂತ ಹೇಳಿದ ನಾ. ಸೋಮೇಶ್ವರ್!

ಕೊನೆಗೆ ನಾನು ಹಾವು ಹಿಡಿಯುವುದನ್ನು ಬಿಡಬೇಕು ಎಂದು ಒತ್ತಾಯ ಮಾಡಿದರು. ನನ್ನಿಂದ ಅದು ಸಾಧ್ಯವಾಗಲಿಲ್ಲ. ಕುಕ್ಕೆಗೆ ಹೋಗಿ ಎಲ್ಲಾ ಪೂಜೆ, ಪುನಸ್ಕಾರ ಮಾಡಿದರು. ಆದರೆ ಅಲ್ಲಿಯವರು ಕೂಡ, ಏನೂ ಮಾಡಲು ಆಗಲ್ಲಮ್ಮ, ಇದು ನಿಮ್ಮಿಂದ ಸಾಧ್ಯವಾಗದ ಮಾತು ಎಂದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ ಅವರು. ಇದು ಅಂದಿನ ಮಾತಾಯಿತು. ಆದರೆ ಈಗ ಅಮ್ಮ ಇದಕ್ಕೆಲ್ಲಾ ಒಪ್ಪುತ್ತಾರೆ ಎಂದು ತಿಳಿಸಿದ್ದಾರೆ. ಆದರೆ ಈಗ ತಮ್ಮ ತಾಯಿ  ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಷ್ಟಕ್ಕೂ ನನಗೆ  ಚಿಕ್ಕ ವಯಸ್ಸಿನಿಂದಲೂ   ಆಟದ ಸಾಮಾನಿನ ಬದಲು  ಜಿರಳೆ ಹಿಡಿಯುವುದು, ಇಲಿ ಹಿಂದೆ ಓಡುವುದು, ಬೆಕ್ಕು, ನಾಯಿ ಇಷ್ಟವಾಗಿತ್ತು. ಮೊದಲಿನಿಂದಲೂ ಏನೇನೋ ಪ್ರಾಣಿ ಸಾಕುತ್ತನೇ ಬಂದಿದ್ದೇನೆ.  13ನೇ ವಯಸ್ಸಲ್ಲೇ ಹಾವು ಹಿಡಿಯುವುದಕ್ಕೆ ಶುರು ಮಾಡಿದ್ದೆ ಎಂದಿದ್ದಾರೆ. 

 
  ಒಂದು ಸಲ ಹಠ ಮಾಡಿ ಫೋಟೋ ಶೂಟ್ ಮಾಡಿಸಿ ಯೋಗರಾಜ್‌ ಭಟ್ರು ಅವರ ಕೈಗೆ ಅಮ್ಮ ಕೊಟ್ಟಿದ್ದರು.  ಆಕ್ಟಿಂಗ್‌ ಕಡೆ ಒಲವು ತೋರಿಸಿದ್ರೆ  ಹಾವು ಪ್ರಾಣಿ ಪಕ್ಷಿಗಳನ್ನು ಗಮನ ಕಳೆದುಕೊಳ್ಳಬಹುದು ಅಂದುಕೊಂಡಿದ್ದರು. ಆದರೆ ನನಗೆ ಇದರ ಮೇಲೆಯೇ ಆಸಕ್ತಿ ಇತ್ತು. ಅಮ್ಮನಿಗೆ  ನಾನು ಚೆನ್ನಾಗಿ ಓದಬೇಕು ಅನ್ನೊ ಆಸೆ ತುಂಬಾ ಇತ್ತು ಒಳ್ಳೆ ಕೆಲಸದಲ್ಲಿ ಇರಬೇಕಿತ್ತು ಅಂತ ಆಸೆ ಇತ್ತು. ಆದರೂ ನನಗೆ ಅವುಗಳಿಗಿಂತಲೂ ಹೆಚ್ಚಾಗಿ ಇದರ ಮೇಲೆಯೇ ಒಲವು ಇತ್ತು ಎಂದಿದ್ದಾರೆ ಸಂಜೀವ್‌. ಈ ಹಿಂದೆ ಪದ್ಮಜಾ ಅವರು ಕೂಡ ಮಗನ ಈ ಚಟುವಟಿಕೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು.  6-8 ವರ್ಷಗಳಿಂದ ನನ್ನ ಮಗನ ಬಗ್ಗೆ ತುಂಬಾ ಹೆಮ್ಮೆ ಇದೆ. ಒಂದು ಪೆಟ್‌ ಸ್ಯಾಂಚುರಿ ಅರಂಭಿಸಿದ್ದಾನೆ, ಪ್ರತಿಯೊಂದು ಪ್ರಾಣಿ ಪಕ್ಷಿಗಳ ಬಗ್ಗೆ ವಿವರಿಸುತ್ತಾನೆ. ಅದು ಮೃಗಾಲಯಗಳ  ರೀತಿ ಅಲ್ಲ ಜನರು ಪ್ರಾಣಿ ಪಕ್ಷಿಗಳ ಜೊತೆ ಸಂಪರ್ಕ ಬೆಳೆಸಿಕೊಳ್ಳಲು ಮಾಡುತ್ತಿರುವ ಸಂಸ್ಥೆ. ಇಲ್ಲಿ ಅವರನ್ನು ಮುಟ್ಟಿ ನೋಡಿ ತಿಳಿದುಕೊಳ್ಳಬಹುದು ಎನ್ನುತ್ತಾನೆ ಎಂದಿದ್ದರು ನಟಿ ಪದ್ಮಜಾ ರಾವ್.

ತಪ್ಪಿಸಿಕೊಂಡು ಹೋಗ್ತಿದ್ದವನ ಪೊಲೀಸರಿಗೆ ಒಪ್ಪಿಸಿತ್ತು ಸತ್ತವಳ ಆತ್ಮ: ರೋಚಕ ಘಟನೆ ವಿವರಿಸಿದ ಡಿವೈಎಸ್‌ಪಿ ರಾಜೇಶ್‌!
 

click me!