
ಕನ್ನಡ ಕಿರುತೆರೆಯಲ್ಲಿ ಒಂದಕ್ಕಿಂತ ಒಂದು ವಿಭಿನ್ನವಾದ ಹಾಗೂ ಅತ್ಯುತ್ತಮ ಕಥೆಗಳನ್ನು ಹೊಂದಿರುವ ಧಾರಾವಾಹಿಗಳು ಪ್ರಸಾರವಾಗುತ್ತಲೇ ಇರುತ್ತೆ. ಕೆಲವನ್ನು ಜನ ಇಷ್ಟಪಟ್ಟರೆ, ಇನ್ನೂ ಕೆಲವು ಧಾರಾವಾಹಿಗಳ (Kannada serials) ಕಥೆ ಒಂದೇ ತೆರನಾಗಿರೋದನ್ನು ನೋಡಿ ನೋಡಿ ಜನರಿಗೂ ಬೇಸರವಾಗಿದೆ. ಅದರಲ್ಲೂ ಗರ್ಭಿಣಿ, ಡೆಲಿವರಿ ವಿಷಯಕ್ಕೆ ಬಂದ್ರೆ ಎಲ್ಲಾ ಧಾರಾವಾಹಿಗಳ ಕಥೆ ಒಂದೇ… ನೀವೇ ಹೇಳಿ ಇಲ್ಲಿವರೆಗೆ ಎಷ್ಟು ಧಾರಾವಾಹಿಗಳಲ್ಲಿ ಮಗು ಜನಿಸಿದೆ? ಬೆರಳೆಣಿಕೆಯ ಒಂದೆರಡು ಧಾರಾವಾಹಿಗಳಲ್ಲಿ ಬಿಟ್ಟರೇ ಮತ್ತೆಲ್ಲಾ ಧಾರಾವಾಹಿಗಳಲ್ಲಿ ಮಕ್ಕಳನ್ನು ಕಳೆದುಕೊಂಡಿದ್ದೇ ಜಾಸ್ತಿ.
ಝೀ ಸೀರಿಯಲ್ಸ್: ನಾಯಕಿಯರಿಗೆ ಮಕ್ಕಳಾಗಿದ್ದಕ್ಕಿಂತ, ನಿರ್ದೇಶಕರು ಅಬಾರ್ಶನ್ ಮಾಡಿಸಿದ್ದೇ ಹೆಚ್ಚಾ?
ಹಳೆ ಸೀರಿಯಲ್ ಗಳನ್ನು ನೆನಪಿಸಿಕೊಂಡ್ರೆ ಗೊತ್ತಾಗುತ್ತೆ….
ಅದರಲ್ಲೂ ಝೀ ಕನ್ನಡದ ಸೀರಿಯಲ್ ಗಳನ್ನು ನೋಡಿದ್ರೆ ಅದರಲ್ಲಿ ಎಷ್ಟೋ ನಾಯಕಿಯರಿಗೆ ಇನ್ನೇನು ಮಗು ಹುಟ್ಟುತ್ತೆ ಎನ್ನುವಾಗ ಅದು ಸಾವನ್ನಪ್ಪಿದ್ದು ಇದೆ. ಅದು ಗಟ್ಟಿಮೇಳ ಇರಬಹುದು, ಪಾರು, ಶ್ರೀರಸ್ತು ಶುಭಮಸ್ತು, ಅಮೃತಧಾರೆಯೂ ಆಗಿರಬಹುದು, ಎಲ್ಲಾ ಧಾರಾವಾಹಿಗಳಲ್ಲಿ, ನಾಯಕಿಯರು ಗರ್ಭಿಣಿಯರಾಗ್ತಾರೆ, ಆದ್ರೆ ಒಂದು ಧಾರಾವಾಹಿಯಲ್ಲಿ ಮಗು ಬೇಡ ಎಂದು ಅಬಾರ್ಟ್ ಮಾಡಿದ್ರೆ, ಮತ್ತೊಂದರಲ್ಲಿ ವಿಲನ್ ಗಳ ಅಟ್ಟಹಾಸಕ್ಕೆ ಮಗು ಬಲಿಯಾಗಿರುತ್ತೆ, ಮತ್ತೊಂದರಲ್ಲಿ ಆಕ್ಸಿಡೆಂಟ್ ಮೂಲಕ ಮಗು ಸಾವನ್ನಪ್ಪಿರುತ್ತೆ.
ಕೊನೆಯದಾಗಿ ಮಗು ಆಗಿದ್ದು ‘ಪಾರು’ ಗೆ ಮಾತ್ರ ಅದರಲ್ಲೂ ಇತ್ತು ಟ್ವಿಸ್ಟ್
ನೆನಪಿದ್ಯಾ ಗಟ್ಟಿಮೇಳ (Gattimela) ಧಾರಾವಾಹಿಯಲ್ಲಿ ವೇದಾಂತ್ ತಂಗಿ ಆಧ್ಯಾ ಎರಡು ಬಾರಿ ಗರ್ಭಿಣಿಯಾಗಿದ್ದಳು. ಅದ್ಧೂರಿಯಾಗಿ ಸೀಮಂತ ಕೂಡ ಮಾಡಿದ್ದರು. ಆದರೆ ಎರಡು ಬಾರಿಯೂ ಆಕೆ ಮಗು ಕಳೆದುಕೊಂಡಿದ್ದಳು. ಇನ್ನು ಪಾರು ಧಾರಾವಾಹಿಯಲ್ಲಿ ಜನನಿ ಮಗುವಿನ ಬಗ್ಗೆ ಕನಸು ಕಂಡಿದ್ದೇ ಕಂಡಿದ್ದು, ಆದರೆ ಮಗು ಹುಟ್ಟಿದ ಕೂಡಲೇ ಸಾವನ್ನಪ್ಪಿತ್ತು. ಶ್ರೀರಸ್ತು ಶುಭಮಸ್ತು (Srirastu Shubhamastu) ಧಾರಾವಾಹಿಯಲ್ಲಿ ಮಗುವಿಗಾಗಿ ಹಂಬಲಿಸುವ ಪೂರ್ಣಿಯೂ ಸಹ ಎರಡು ಬಾರಿ ಗರ್ಭಿಣಿಯಾಗಿ ಮಗುವನ್ನು ಕಳೆದುಕೊಂಡಿದ್ದಳು. ಇನ್ನು ಅಮೃತಧಾರೆಯಲ್ಲಿ ಮಹಿಮಾ ತನಗೆ ಮಗು ಬೇಡ ಎಂದು ಅಬಾರ್ಶನ್ ಮಾಡಿಕೊಂಡ್ರೆ, ಮಲ್ಲಿ ಸೀಮಂತ ದಿನವೇ ಆಕ್ಸಿಡೆಂಟ್ ಆಗಿ ಮಗುವನ್ನು ಕಳೆದುಕೊಂಡಿದ್ದಳು. ಇಲ್ಲಿವರೆಗೆ ಪಾರುನ ಬಿಟ್ರೆ ಬೇರೆ ಯಾರಿಗೂ ಸಹ ತಾಯ್ತನದ ಸುಖವನ್ನು ಅನುಭವಿಸೋಕೆ ಸಾಧ್ಯ ಆಗಲೇ ಇಲ್ಲ. ಪಾರುಗೂ ಸಹ ಮಗುವಾಗಿತ್ತು, ಆದರೆ ಆಕೆಯೂ ಮಗು ಇದ್ರೂ ಇಲ್ಲದಂತೆ ಬದುಕುತ್ತಿದುದು ಬೇರೆ ಕಥೆ.
ಮಗು ಹೆತ್ತು ಪೂರ್ಣಿ ಕೈಗಿತ್ತು ತುಳಸಿ ಸಾವು? ಮುಗಿಯಲಿದೆ ಶ್ರೀರಸ್ತು ಶುಭಮಸ್ತು- ಇದೇನಿದು ಟ್ವಿಸ್ಟ್?
ಹಲವು ವರ್ಷಗಳ ನಂತ್ರ ಬದುಕುಳಿದ ಏಕೈಕ ಮಗು
ಇದೀಗ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಅಮ್ಮನಿಗೆ ಮಗುವಾಗಿದ್ದು, ಮನೆಮಂದಿ ಸಿಕ್ಕಾಪಟ್ಟೆ ಖುಷಿಯಿಂದ ಸಂಭ್ರಮಿಸುತ್ತಿದ್ದಾರೆ. ಆದರೆ ಶಾರ್ವರಿಯ ಕುತಂತ್ರದಿಂದ ತುಳಸಿಯ ಜೀವ ಅಪಾಯಕ್ಕೆ ಸಿಲುಕಿರೋದು ಬೇರೆ ಕಥೆ. ಆದರೆ ವೀಕ್ಷಕರು ಮಾತ್ರ ತುಳಸಿಯ ಮಗುವನ್ನು ನೋಡಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಬಹಳ ವರ್ಷಗಳ ನಂತರ ಕನ್ನಡ ಕಿರುತೆರೆಯಲ್ಲಿ ಬದುಕುಳಿದ ಏಕೈಕ ಮಗು ಇದು ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ, ಮತ್ತೊಬ್ಬರು ಈ ಸೀರಿಯಲ್ ಅಲ್ಲಾದ್ರು, ಪಾಪು ನಾ ಬದುಕ್ಸಿದ್ರಲ ಬಿಡ್ರಪ್ಪ ಸಾಕು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮಗದೊಬ್ಬರು ಎಲ್ಲಾ ಧಾರಾವಾಹಿಯಲ್ಲಿ ಹುಟ್ಟೋಕಿಂತ ಮುಂಚೆ ಮಗುವನ್ನು ಕೊಂದು ಹಾಕ್ಬಿಡ್ತಿದ್ರು.... ಈ ಧಾರಾವಾಹಿಯಲ್ಲಿ ಬದುಕಿಸಿ ಪುಣ್ಯ ಕಟಕೊಂಡ್... ಡೈರೆಕ್ಟರ್ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.