ʼಶಾರದೆʼ ಧಾರಾವಾಹಿ: ಕನ್ನಡ ಕಿರುತೆರೆಗೆ ಕಂಬ್ಯಾಕ್‌ ಮಾಡಿದ Bigg Boss ದಿವ್ಯಾ ಸುರೇಶ್!‌

Published : Mar 13, 2025, 03:58 PM ISTUpdated : Mar 13, 2025, 04:35 PM IST
ʼಶಾರದೆʼ ಧಾರಾವಾಹಿ: ಕನ್ನಡ ಕಿರುತೆರೆಗೆ ಕಂಬ್ಯಾಕ್‌ ಮಾಡಿದ Bigg Boss ದಿವ್ಯಾ ಸುರೇಶ್!‌

ಸಾರಾಂಶ

ʼಬಿಗ್‌ ಬಾಸ್ʼ‌ ಖ್ಯಾತಿಯ ದಿವ್ಯಾ ಸುರೇಶ್‌ ಅವರು ಕನ್ನಡ ಕಿರುತೆರೆಗೆ ಕಂಬ್ಯಾಕ್‌ ಮಾಡುತ್ತಿದ್ದಾರೆ. ʼಶಾರದೆʼ ಎನ್ನುವ ಹೊಸ ಧಾರಾವಾಹಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿಯಲ್ಲಿ ದಿವ್ಯಾ ನಟಿಸುತ್ತಿದ್ದಾರೆ. 

ಜಗತ್ತಿನ ಎಲ್ಲ ಪ್ರೀತಿಯನ್ನು ಧಾರೆಯೆರೆಯೋ ನಿಷ್ಕಲ್ಮಶ ಜೀವ ಅಂದ್ರೆ ಅದು 'ತಾಯಿ'. ಇದನ್ನೇ ಸಾರವಾಗಿಟ್ಟುಕೊಂಡು ʼಶಾರದೆʼ ಎನ್ನುವ ಧಾರಾವಾಹಿ ಪ್ರಸಾರ ಆಗಲಿದೆ. ಈ ಧಾರಾವಾಹಿಗೆ ದಿವ್ಯಾ ಸುರೇಶ್‌ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಅವರು ಅನೇಕ ತಿಂಗಳುಗಳ ಬಳಿಕ ಕನ್ನಡ ಕಿರುತೆರೆಗೆ ಕಂಬ್ಯಾಕ್‌ ಮಾಡಿದ್ದಾರೆ. 

ʼತ್ರಿಪುರ ಸುಂದರಿʼ, ʼಜೋಡಿ ಹಕ್ಕಿʼ, ʼನನ್ನ ಹೆಂಡ್ತಿ ಎಂಬಿಬಿಎಸ್ʼ‌ ಧಾರಾವಾಹಿಗಳಲ್ಲಿ ನಟಿಸಿದ್ದ ದಿವ್ಯಾ ಸುರೇಶ್‌ ಅವರು ʼಬಿಗ್‌ ಬಾಸ್‌ ಕನ್ನಡ ಸೀಸನ್‌ 8ʼ ಶೋನಲ್ಲಿಯೂ ಭಾಗವಹಿಸಿದ್ದರು. ಈಗ ಅವರು ʼಶಾರದೆʼ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಕಂಬ್ಯಾಕ್‌ ಮಾಡುತ್ತಿದ್ದಾರೆ.

ʼಶಾರದೆʼ ಧಾರಾವಾಹಿ ಕಥೆ ಏನು? 
ಈ ಧಾರಾವಾಹಿ ಕಥೆಯಲ್ಲೂ ಅಷ್ಟೇ ನಾಯಕಿ ಶಾರದಾ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಕೂಡ ಯಾರೋ ಮಾಡಿದ ಕುತಂತ್ರದಿಂದ ಬಡತನದಲ್ಲಿ ಬೆಳೆದಿರುತ್ತಾಳೆ. ಗಂಡ ಮಾಡಿದ ಮೋಸದಿಂದಾಗಿ ಎಷ್ಟೇ ನೋವಿದ್ದರೂ ಈಕೆ ತನ್ನ ಮಗಳಿಗಾಗಿ ಹೋರಾಡುತ್ತ ಜೀವನ ನಡೆಸುತ್ತಿರುತ್ತಾಳೆ. ಇನ್ನೊಂದೆಡೆ ಕೂಡು ಕುಟುಂಬದಲ್ಲಿ ಬೆಳೆದಿರೋ ನಾಯಕ ಸಿದ್ದಾರ್ಥ್, ಇಷ್ಟವಿಲ್ಲದಿದ್ದರೂ ಅತ್ತೆ ಮಗಳಾದ ಜ್ಯೋತಿಕಾಳ ಜೊತೆ ಮದುವೆಯಾಗಲು ತಯಾರಾಗಿರ್ತಾನೆ. ಆದರೆ ಈ ಮನೆಗೆ ಮನೆ ಕೆಲಸದವಳಾಗಿ ಬರೋ ಶಾರದಾಳ ಬದುಕಲ್ಲಿ ಮುಂದೆ ಏನೆಲ್ಲ ತಿರುವು ಬರಲಿದೆ? ಕಷ್ಟ, ನೋವು, ಅವಮಾನಗಳನ್ನೇ ಎದುರಿಸುತ್ತಾ ಬಂದಿರೋ ಶಾರದೆಗೆ ತನ್ನ ಜನ್ಮರಹಸ್ಯದ ಬಗ್ಗೆ ತಿಳಿಯುತ್ತಾ? ಒಬ್ಬಂಟಿಯಾಗಿ ಬದುಕುತ್ತಿರೋ ಶಾರದೆಯ ಬಾಳಲ್ಲಿ ಪ್ರೀತಿಯ ಹೂ ಚಿಗುರಲಿದೆಯಾ? ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ಮಗಳು ʼಸೀತೆʼ ಪಾತ್ರ ಮಾಡ್ತಿದ್ದಾಳೆ ಅಂತ 4 ವರ್ಷಗಳ ಕಾಲ ತ್ಯಾಗ ಮಾಡಿದ್ದ ಶರ್ಮಿಳಾ ಚಂದ್ರಶೇಖರ್‌ ಕುಟುಂಬ! ಏನದು?

ಪಾತ್ರಧಾರಿಗಳು 
ಈ ಧಾರಾವಾಹಿಯಲ್ಲಿ ಹೀರೋಯಿನ್‌ ಆಗಿ ಚೈತ್ರಾ ಸಕ್ಕರಿ, ಹೀರೋ ಆಗಿ ಸೂರಜ್ ಹೊಳಲು, ಮುಖ್ಯ ಪಾತ್ರದಲ್ಲಿ ದಿವ್ಯ ಸುರೇಶ್, ಸ್ವಾತಿ, ಅನಂತವೇಲು, ಅಂಬುಜಾ, ರಾಜೇಶ್ ಧ್ರುವ ಮುಂತಾದವರು ನಟಿಸುತ್ತಿದ್ದಾರೆ. 

ಸುನೀಲ್‌ ಪುರಾಣಿಕ ನಿರ್ಮಾಣದ ಧಾರಾವಾಹಿ! 
ಪುರಾಣಿಕ್ ಪ್ರೊಡಕ್ಷನ್ಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿಯನ್ನು ಸುನಿಲ್ ಪುರಾಣಿಕ್, ಸಾಗರ್ ಪುರಾಣಿಕ್ ಅವರು ನಿರ್ಮಿಸುತ್ತಿದ್ದು, ಧರಣಿ ಜಿ ರಮೇಶ್ ನಿರ್ದೇಶಿಸುತ್ತಿದ್ದಾರೆ. ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮ 'ಶಾರದೆ' ಧಾರಾವಾಹಿಗೆ ಸಂಗೀತವನ್ನು ಸಂಯೋಜಿಸಿದ್ದು, ನಿರ್ದೇಶಕ ಪವನ್ ಒಡೆಯರ್ ಬರೆದಿರುವ ಸಾಹಿತ್ಯಕ್ಕೆ ಗಾಯಕ ಸಿದ್ಧಾರ್ಥ ಬೆಳ್ಮಣ್ಣು ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ.

ಮಗಳು ʼಸೀತೆʼ ಪಾತ್ರ ಮಾಡ್ತಿದ್ದಾಳೆ ಅಂತ 4 ವರ್ಷಗಳ ಕಾಲ ತ್ಯಾಗ ಮಾಡಿದ್ದ ಶರ್ಮಿಳಾ ಚಂದ್ರಶೇಖರ್‌ ಕುಟುಂಬ! ಏನದು?

ಯಾವಾಗ ಪ್ರಸಾರ ಆಗಲಿದೆ? 
'ಶಾರದೆ' ಇದೇ ಸೋಮವಾರದಿಂದ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರ ಆಗಲಿದೆ. ಈಗಾಗಲೇ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ʼಆಸೆʼ, ʼನಿನ್ನ ಜೊತೆ ನನ್ನಕಥೆʼ, ʼನೀನಾದೆ ನಾʼ, ʼರೇಣುಕಾ ಯಲ್ಲಮ್ಮʼ, ʼಎಡೆಯೂರು ಶ್ರೀ ಸಿದ್ಧಲಿಂಗೇಶ್ವರʼ ದಂತಹ ಧಾರಾವಾಹಿಗಳು ಈಗಾಗಲೇ ಪ್ರಸಾರ ಆಗುತ್ತಿವೆ. ಈ ಸಾಲಿಗೆ ಹೊಸ ಕಥೆ 'ಶಾರದೆ' ಸೇರಲಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್