ಮತ್ತೊಂದು ಗುಡ್ ನ್ಯೂಸ್ ಕೊಟ್ಟ ನಟ ಕಿರಣ್ ರಾಜ್… ಸೀರಿಯಲ್ ಬೆನ್ನಲ್ಲೆ ಹೊಸ ಚಿತ್ರಕ್ಕೂ ಆದ್ರು ನಾಯಕ!

Published : Mar 13, 2025, 04:38 PM ISTUpdated : Mar 13, 2025, 05:30 PM IST
ಮತ್ತೊಂದು ಗುಡ್ ನ್ಯೂಸ್ ಕೊಟ್ಟ ನಟ ಕಿರಣ್ ರಾಜ್… ಸೀರಿಯಲ್ ಬೆನ್ನಲ್ಲೆ ಹೊಸ ಚಿತ್ರಕ್ಕೂ ಆದ್ರು ನಾಯಕ!

ಸಾರಾಂಶ

ಜನಪ್ರಿಯ ನಟ ಕಿರಣ್ ರಾಜ್ 'ಕರ್ಣ' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ್ದಾರೆ. ಈ ಸೀರಿಯಲ್ ಪ್ರೊಮೊ ಕುತೂಹಲ ಮೂಡಿಸಿದೆ. ಇದರೊಂದಿಗೆ, ಕಿರಣ್ ರಾಜ್ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಈ ಹಿಂದೆ 'ಮಾರ್ಚ್ 22' ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಕಿರಣ್ ರಾಜ್ ಹಿಂದಿ ಕಿರುತೆರೆಯಲ್ಲೂ ಹೆಸರು ಗಳಿಸಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕನ್ನಡತಿ. ಈ ಸೀರಿಯಲ್ ನಲ್ಲಿ ಹರ್ಷ ಪಾತ್ರದಲ್ಲಿ ನಟಿಸಿದ್ದವರು ಕಿರಣ್ ರಾಜ್ (Kiran Raj). ಆ ಧಾರಾವಾಹಿಯಲ್ಲಿ ಅವರ ಪಾತ್ರವನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಹರ್ಷ -ಭುವಿಯ ಜೋಡಿಯನ್ನು ಮೆಚ್ಚಿಕೊಳ್ಳದ ಕನ್ನಡಿಗರೇ ಇರಲಿಲ್ಲ. ಸೀರಿಯಲ್ ಮುಗಿದ ಮೇಲೆ ಮತ್ತೆ ಕಿರಣ್ ರಾಜ್ ರನ್ನು ತೆರೆಯ ಮೇಲೆ ನೋಡೊದಕ್ಕೆ ಜನ ಕಾತುರರಾಗಿದ್ದರು. ಇದೀಗ ಕರ್ಣ ಸೀರಿಯಲ್ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ ಕಿರಣ್ ರಾಜ್. 

ಒಂದೇ ದಿನದಲ್ಲಿ ಕರ್ಣ ಪ್ರೋಮೋಗೆ 6 ಮಿಲಿಯನ್ಸ್ ವೀವ್ಸ್ ! ಹೀರೋಯಿನ್ ಗುಟ್ಟು ಬಿಚ್ಚಿಟ್ಟ ಕಿರಣ್ ರಾಜ್

ಕರ್ಣ ಧಾರಾವಾಹಿ ಮೂಲಕ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ 
ಈಗಾಗಲೇ ಕರ್ಣ ಸೀರಿಯಲ್ (Karna Serial) ಪ್ರೊಮೋ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ತನ್ನವರ ಮಧ್ಯಾನೇ ಅನಾಥವಾಗಿರೋ ಮನೆ ಮಗನ ಕಥೆ!” ಈ ಧಾರಾವಾಹಿಯಲ್ಲಿದೆ. ಬೆಳಗ್ಗೆ ಅಂಗಳದಲ್ಲಿ ರಂಗೋಲಿ ಹಾಕೋದ್ರಿಂದ ಹಿಡಿದು, ಪಾತ್ರೆ ತೊಳೆದು, ಅಡುಗೆ ಮಾಡಿ, ಎಲ್ಲರಿಗೂ ಅವರಿಗಿಷ್ಟವಾದ ಜ್ಯೂಸ್, ಹಾಲು, ಚಹಾ ಕೊಡ್ರಿಂದ, ದೇವರ ಪೂಜೆ, ಅಷ್ಟೇ ಯಾಕೆ ಮನೆಮಂದಿರ ಚಪ್ಪಲಿ ಹಾಳಾದರೆ ಅದನ್ನು ಹೊಲಿದು ತರುವ ವ್ಯಕ್ತಿಯೂ ಕರ್ಣನೇ ಆಗಿರುತ್ತಾನೆ. ತಿಪ್ಪೆಯಿಂದ ಎತ್ತಿಕೊಂಡು ಬಂದ ಮಗು ಅವನಿಗ್ಯಾಕೆ ಮರ್ಯಾದೆ ಅನ್ನೋ ಮಾತು ಕೂಡ ಕೇಳಿ ಬರುತ್ತೆ. ಹಾಗಾಂತ, ಈ ಮನೆಯಲ್ಲಿ ಕರ್ಣ ಮನೆ ಕೆಲಸದವನು ಅಲ್ಲ, ಬದಲಾಗಿ, ಪ್ರಶಸ್ತಿ ಪಡೆದಂತಹ ಜನಪ್ರಿಯ ಗೈನಕಾಲಜಿಸ್ಟ್ ಅಂದ್ರೆ ಡಾಕ್ಟರ್ ಆಗಿರುತ್ತಾನೆ. ಹಾಗಿದ್ರೆ, ಮನೆ ಮಂದಿ ಆತನನ್ನು ಅಷ್ಟು ಕೆಟ್ಟದಾಗಿ ಟ್ರೀಟ್ ಮಾಡೋದು ಯಾಕೆ? ಎಲ್ಲವನ್ನೂ ಸಹಿಸಿಕೊಂಡು ಕರ್ಣ ನಗು ನಗುತ್ತಾ ಇರೋದಾದ್ರೂ ಯಾಕೆ? ಅನ್ನೋದೆ ಸೀರಿಯಲ್ ಕಥೆ.  ಈ ಧಾರಾವಾಹಿಯಲ್ಲಿ ಹಿರಿಯ ನಟಿ ಆಶಾರಾಣಿ, ಸುಂದರ್‌ ವೀಣಾ, ನಾಗಾಭರಣ, ವೀಣಾ ರಾವ್‌, ಸಿಮ್ರನ್ ನಟಿಸಿದ್ದಾರೆ. 

ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದು, ಫ್ಯಾನ್ಸ್‌ಗೆ ಕೊಟ್ಟ ಮಾತು ಉಳಿಸ್ಕೊಂಡ ಕಿರಣ್‌ ರಾಜ್!‌

ಹೊಸ ಸಿನಿಮಾಗೆ ನಾಯಕನಾದ ಕಿರಣ್ ರಾಜ್
ಕರ್ಣ ಧಾರಾವಾಹಿಯ ಮೂಲಕ ಕಿರಣ್ ರಾಜ್ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿರೋದನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಅಭಿಮಾನಿಗಳು ಖುಷಿಯಾಗಿದ್ದಾರೆ. ಇದರ ಜೊತೆಗೆ ಕಿರಣ್ ರಾಜ್ ಇದೀಗ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದು, ಹೊಸ ಸಿನಿಮಾದಲ್ಲಿ (new movie) ನಟಿಸುತ್ತಿರುವುದಾಗಿ ತಿಳಿಸಿದ್ದಾರೆ. ಮುಹೂರ್ತದ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಿರಣ್ New beginning. New movie Update soon ಎಂದು ಬರೆದುಕೊಂಡಿದ್ದಾರೆ. ಅಂದ್ರೆ ಯಾವ ಸಿನಿಮಾ? ನಿರ್ದೇಶಕರು ಯಾರು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಅಭಿಮಾನಿಗಳು ನಟನಿಗೆ ಶುಭಾಶಯವನ್ನು ಕೋರಿದ್ದಾರೆ. ದೊಡ್ಡ ಮಟ್ಟದಲ್ಲಿ ಬೆಳೆಯಿರಿ ಎಂದು ಆಶೀರ್ವದಿಸಿದ್ದಾರೆ ಕೂಡ. 

ಬೆಳ್ಳಂಬೆಳಗ್ಗೆ ವೀಕ್ಷಕರಿಗೆ ಗುಡ್‌ನ್ಯೂಸ್‌ ಕೊಟ್ಟ ನಟ ಕಿರಣ್‌ ರಾಜ್!‌ ಎಂಥ ʼಕರ್ಣʼನಪ್ಪಾ...!

ಕಿರಣ್ ರಾಜ್ ನಟನೆಯ ಸಿನಿಮಾಗಳು
ಕಿರಣ್ ರಾಜ್ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾರ್ಚ್ 22, ವಾಚ್ ಮ್ಯಾನ್, ಅಸತೋಮ ಸದ್ಗಮಯ, ರಾನಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಆಲ್ಲ ಹಿಂದಿ ಕಿರುತೆರೆಯಲ್ಲೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಕಿರಣ್ ರಾಜ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!