ರಾಮಚಾರಿ ಸೀರಿಯಲ್‌ನಲ್ಲಿ ಚಾರುಲತಾ ಬೋಳು ತಲೆಯ ಚಾರುವಾಗಿ ಬದಲಾಗಿದ್ದಾಳೆ. ಒಳ್ಳೆಯತನದ ಪರಮಾವಧಿ ಮೂಲಕ ಭರ್ಜರಿ ಟಿಆರ್‌ಪಿ ಗಿಟ್ಟಿಸಿಕೊಂಡಿದ್ದಾರೆ. ಇದೇ ಟೈಮು ಅಂತ ಟ್ರೋಲಿಗರು ಈ ಸೀರಿಯಲ್ ಟೀಮ್ ಕಾಲೆಳೀತಿದ್ದಾರೆ. ಕಾಂತಾರದ ಫೇಮಸ್ ಕಾಮಿಡಿ ಸೀನ್ ನೆನಪಿಸಿ ಟ್ರೋಲ್ ಮಾಡುತ್ತಿದ್ದಾರೆ.
ರಾಮಾಚಾರಿ ಸೀರಿಯಲ್‌ನಲ್ಲಿ ಚಾರು ತಲೆ ಬೋಳಿಸ್ಕೊಂಡಿದ್ದು ಸೀರಿಯಲ್ ಪ್ರೇಮಿಗಳ ನಡುವೆ ಕಾಳ್ಗಿಚ್ಚಿನಂತೆ ಹಬ್ಬಿದ್ದು ಹಳೇ ಕಥೆ. ಅದಕ್ಕೆ ತಕ್ಕಂತೆ ಸೀರಿಯಲ್ ಟೀಮ್‌ನವ್ರೂ ಈ ಸೀನ್‌ಗೆ ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು. ಸೀರಿಯಲ್ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ನಾಯಕಿ ತಲೆ ಬೋಳಿಸ್ಕೊಂಡು ಕಾಣಿಸಿಕೊಳ್ತಿದ್ದಾಳೆ ಅಂತೆಲ್ಲ ಪ್ರಚಾರ ಮಾಡಿದ್ದೇ ಬಂತು. ಆದರೆ ಟಿಆರ್‌ಪಿ ಏನೂ ಏರಿಲ್ಲ. ಐದರ ಏಣಿಯಲ್ಲೇ ಜೋಕಾಲಿ ಆಡ್ತಿದೆ. ಸೋ ಈ ಹಿಂದೆ ಕೆಟ್ಟದಾಗಿ ವಿಎಫ್‌ಎಕ್ಸ್ ಮಾಡಿ ಟಿಆರ್‌ಪಿ ಏರಿಸಲು ಸರ್ಕಸ್ ಮಾಡಿ ವಿಫಲರಾಗಿದ್ದ ಈ ಸೀರಿಯಲ್ ನಿರ್ದೇಶಕ ರಾಮ್ ಜೀ ಸದ್ಯ ನಾಯಕಿಯ ತಲೆ ಬೋಳಿಸಿ ಮತ್ತೊಮ್ಮೆ ಫ್ಲಾಪ್ ಶೋ ನೀಡಿದ್ದಾರೆ ಅಂತ ಜನ ಅವರ ಕಾಲೆಳೆಯುತ್ತಿದ್ದಾರೆ. ಸೋ ಸದ್ಯಕ್ಕೀಗ ಮತ್ತೊಂದು ಫೇಮಸ್ ಕಾಮಿಡಿಯನ್ನು ಲಿಂಕ್ ಮಾಡಿ ನೆಟ್ಟಿಗರು ಚಾರುವಿನ ಕಾಲೆಳೆಯುತ್ತಿದ್ದಾರೆ. ಅದಕ್ಕೆ ಈ ಸೀರಿಯಲ್ ಟೀಮ್ ಕಮಕ್ ಕಿಮಕ್ ಅಂದಿಲ್ಲ.
'ರಾಮಾಚಾರಿ'ಯ ಚಾರಿ ಶುರುವಿನಿಂದಲೂ ಬೇರೆ ಬೇರೆ ಗೆಟಪ್‌ನಲ್ಲಿ ಗಮನಸೆಳೆಯುತ್ತಿದ್ದಳು. ಆರಂಭದಲ್ಲಿ ಕಂಪ್ಲೀಟ್ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಒಂದು ಡ್ರೆಸ್ ಅನ್ನೂ ರಿಪೀಟ್ ಮಾಡದೆ ಮಾಡರ್ನ್ ಔಟ್‌ಫಿಟ್‌ನಲ್ಲಿ ಚಾರುಲತಾ ಸ್ಟೈಲ್ ಐಕಾನ್ ಆಗಿ ಮಿಂಚುತ್ತಿದ್ದಳು. ಮದುವೆಯಾದ್ಮೇಲೆ ಸೀರೆಯುಡಲು ಆರಂಭಿಸಿದ ಚಾರುಲತಾ.. ಅದರಲ್ಲೂ ಕ್ಲಾಸಿ ಲುಕ್ ಮೇನ್ಟೇನ್ ಮಾಡುತ್ತಿದ್ದಳು. ಇಂತಿಪ್ಪ ಚಾರುಲತಾ ಇದೀಗ ಬೋಲ್ಡ್ ಸ್ಟೆಪ್ ತೆಗೆದುಕೊಂಡು ಮುಡಿ ಕೊಟ್ಟಿದ್ದಾಳೆ. ನಾಯಕಿಯೇ ಮುಡಿಕೊಟ್ಟಿರೋದ್ರಿಂದ ಮುಂದೆ ಏನೆಲ್ಲಾ ಆಗುತ್ತೆ? ಸ್ಕ್ರೀನ್ ಮೇಲೆ ಚಾರುಲತಾ ಹೇಗೆ ಕಾಣಿಸಿಕೊಳ್ತಾಳೆ ಎಂಬುದೇ ಮುಂದಿನ ಚಾಲೆಂಜ್. ಚಾರುಲತಾಳ ಸೌಂದರ್ಯಕ್ಕೆ ಪೆಟ್ಟು ಬೀಳಬೇಕು ಅಂತ ದೇವರಿಗೆ ಹರಕೆ ಇದೆ ಅಂತ ಸುಳ್ಳು ಹೇಳಿ ಚಾರುಲತಾ ಮುಡಿ ಕೊಡುವ ಹಾಗೆ ವೈಶಾಖ ಮಾತು ತೆಗೆದುಕೊಂಡಳು. ಮಾತಿನ ಪ್ರಕಾರ ಚಾರುಲತಾ ನಡೆದುಕೊಂಡಿದ್ದಾಳೆ, ಪೂರ್ತಿ ತಲೆ ಬೋಳಿಸಿಕೊಂಡಿದ್ದಾಳೆ. ಅದನ್ನ ಕಂಡು ವೈಶಾಖ ಹಾಗೂ ರುಕ್ಮಿಣಿ ನಕ್ಕಿದ್ದಾರೆ. ತಮ್ಮ ಕಂಪನಿಯ ಶ್ಯಾಂಪೂಗೆ ಮಾಡೆಲ್ ಆಗುವ ಚಾನ್ಸ್ ಚಾರುಲತಾಗೆ ಬಂದಿತ್ತು. ಅದನ್ನ ರಾಮಾಚಾರಿ ಹೇಳುವ ಮುನ್ನವೇ ಚಾರುಲತಾ ಮುಡಿ ಕೊಟ್ಟುಬಿಟ್ಟಿದ್ದಾಳೆ. ಸಾಲದಕ್ಕೆ.. ಚಾರುಲತಾಗೆ ಮುಡಿಸಲು ರಾಮಾಚಾರಿ ಹೂ ತಂದಿದ್ದ. ಹೂ ಮುಡಿಸಲು ಹೋದಾಗ ಚಾರುಲತಾ ತಲೆ ಬೋಳಿಸಿಕೊಂಡಿರೋದನ್ನ ನೋಡಿ ರಾಮಾಚಾರಿಗೆ ಅಕ್ಷರಶಃ ಶಾಕ್ ಆಗಿದೆ.
ದೊಡ್ಮನೆಗೆ ಬಂದ ಪತಿಯಿಂದ ಗೌತಮಿಗೆ ಸಿಕ್ತು ಪ್ರೀತಿಯ ಮುತ್ತು, ಜೊತೆಗೆ ಆನಿವರ್ಸರಿ ಸ್ಪೆಷಲ್ ಗಿಫ್ಟ್
ಆದರೆ ವೈಶಾಖ, ರುಕ್ಮಿಣಿ ಮಾತ್ರ ಚಾರು ಹೊಸ ಅವತಾರ ನೋಡಿ ನಕ್ಕಿಲ್ಲ. ಈ ವಿಚಾರದಲ್ಲಿ ವೀಕ್ಷಕರೂ ವಿಲನ್‌ಗಳ ಜೊತೆ ಸೇರ್ಕೊಂಡು ಚಾರು ಕಾಲೆಳೆದು ನಗ್ತಿದ್ದಾರೆ. 'ಕಾಂತಾರ' ಸಿನಿಮಾದ, 'ಕಾಡಲ್ಲೊಂದು ಸೊಪ್ಪು ಸಿಗ್ತದೆ, ತಂದು ತಲೆಗೆ ಹಚ್ಚಿದ್ರೆ ಕೂದಲು ಬರ್ತದಂತೆ' ಸೀನ್ ಭರ್ಜರಿ ಫೇಮಸ್. ಅದೇ ಸೀನ್ ಅನ್ನು ಚಾರುಗೆ ಅಪ್ಲೈ ಮಾಡಿ ಎಲ್ಲರೂ ನಗುತ್ತಿದ್ದಾರೆ. ಡೈರೆಕ್ಟ್ರೇ ಚಾರುಗೆ ಕಾಡಲ್ಲಿ ಸಿಗುವ ಸೊಪ್ಪು ತಂದುಕೊಡಿ, ಕೂದಲು ಬರ್ತದೆ ಅಂತಿದ್ದಾರೆ. ಇನ್ನೂ ಕೆಲವರು ಆದಿವಾಸಿ ತೈಲ ಹಚ್ಚಿ ಚಾರುಗೆ ಬೇಗ ಕೂದಲು ಬರುತ್ತೆ ಅಂತ ಕಾಮೆಂಟ್ ಮಾಡುತ್ತಿದ್ದಾರೆ. ಬಹಳ ಸೆಂಟಿಮೆಂಟ್ ನಲ್ಲಿ ನೋಡುಗರ ಕಣ್ಣೀರು ಹರಿಸುವಂತೆ ಈ ಸೀನ್ ತೆಗೀಬೇಕು ಅಂದುಕೊಂಡ ನಿರ್ದೇಶಕರಿಗೆ ಕಣ್ಣೀರು ಬರುವಂತಾಗಿದೆ. ವೀಕ್ಷಕರಂತೂ ನಕ್ಕೂ ನಕ್ಕೂ ಕಣ್ತುಂಬಿಕೊಂಡಿದ್ದಾರೆ.
ಲಕ್ಷ್ಮೀ ಬಾರಮ್ಮ ಚೆಲುವೆಯರ ನ್ಯೂ ಇಯರ್ ಪಾರ್ಟಿ ಹೆಂಗಿತ್ತು ನೋಡಿ
ಇನ್ನೊಂದೆಡೆ ರಾಮಾಚಾರಿ ನನಗೆ ಹೆಂಡತಿಯ ಕೂದಲು ಮುಖ್ಯ ಅಲ್ಲ, ಅವಳ ವ್ಯಕ್ತಿತ್ವವೇ ಮುಖ್ಯ ಅನ್ನೋ ಮೂಲಕ ನೆಕ್ಸ್ಟ್ ಲೆವೆಲ್ ಒಳ್ಳೆತನ ಮೆರೆದಿದ್ದಾನೆ. ಮುಂದೆ ಇನ್ನೂ ಏನೇನ್ ನೋಡ್ಬೇಕೋ ಅಂತ ವೀಕ್ಷಕರು ಗೊಣಗುತ್ತಿದ್ದಾರೆ.