ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಸುರಿಮಳೆ ಸುರಿಸಿದ ಚೈತ್ರಾ ಕುಂದಾಪುರ; ಬೆಚ್ಚಿಬಿದ್ದ ರಜತ್!

By Sathish Kumar KH  |  First Published Jan 3, 2025, 1:16 PM IST

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಒಂದು ಟಾಸ್ಕ್‌ನಲ್ಲಿ ಮುತ್ತುಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇದನ್ನು ನೋಡಿದ ರಜತ್ ಅವರು ಏನು ಟ್ಯಾಲೆಂಟ್ ಅಲ್ವಾ ಗುರೂ ಎಂದು ಬೆಚ್ಚಿ ಬಿದ್ದಿದ್ದಾರೆ.


ಬೆಂಗಳೂರು (ಜ.03): ಬಿಗ್ ಬಾಸ್ ಮೆನಯಲ್ಲಿ ಇದೀಗ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಈ ವೇಳೆ ಮದುವೆ ಆಗಿಲ್ಲವೆಂದರೂ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಸುರಿಮಳೆಯನ್ನೇ ಸುರಿಸಿದ್ದಾರೆ. ಕೇವಲ 5 ನಿಮಿಷದಲ್ಲಿ ದಾಖಲೆಯ ಮುತ್ತುಗಳನ್ನು ಕೊಟ್ಟು ಯಶಸ್ವಿಯೂ ಆಗಿದ್ದಾರೆ.

ಹೌದು, ಇದೇನಿದು ಚೈತ್ರಾ ಕುಂದಾಪುರ ಅವರು ಯಾರಿಗೆ ಮುತ್ತುಕೊಟ್ಟಿದ್ದಾರೆ ಎಂದು ಆಶ್ಚರ್ಯಪಡಬೇಡಿ. ಚೈತ್ರಾ ಅವರು ಮುತ್ತು ಕೊಟ್ಟಿದ್ದು ಒಂದು ಟಾಸ್ಕ್‌ನಲ್ಲಿ. ಅದೂ ಕೂಡ ಒಂದು ವೈಟ್ ಕಾರ್ಡ್ ಬೋರ್ಡ್‌ಗೆ. ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ನಡೆಯುತ್ತಿದ್ದು, ಇದೇ ವೇಳೆ ಅವರಿಗೆ ಫನ್ನಿ ಟಾಸ್ಕ್ ಕೂಡ ನೀಡಲಾಗಿದೆ. ಅದೇ ಈ ಮುತ್ತು ಕೊಡುವ ಟಾಸ್ಕ್. ಹನುಮಂತ, ಧನರಾಜ್ ಆಚಾರ್ ಹಾಗೂ ಚೈತ್ರಾ ಕುಂದಾಪುರ ಅವರಿಗೆ ಲಿಪ್ಸ್ಟಿಕ್ ಹಚ್ಚಿಕೊಂಡು ಒಂದು ವೈಟ್ ಬೋರ್ಡ್‌ಗೆ ಮುತ್ತು ಕೊಡಬೇಕು. ಅದರಲ್ಲಿ ಚೈತ್ರಾ ಕುಂದಾಪುರ ಅವರು ಹೆಚ್ಚಿನ ಮುತ್ತುಗಳನ್ನು ಕೊಟ್ಟಿದ್ದಾರೆ.

Tap to resize

Latest Videos

ಈ ಮುತ್ತು ಕೊಡುವ ಟಾಸ್ಕ್‌ನಲ್ಲಿ ಉಗ್ರಂ ಮಂಜು ಅವರು ಹನುಮಂತನಿಗೆ, ಧನರಾಜ್ ಆಚಾರ್‌ಗೆ ಗೌತಮಿ ಜಾಧವ್, ತ್ರಿವಿಕ್ರಮ್ ಅವರು ಚೈತ್ರಾ ಕುಂದಾಪುರ ಅವರಿಗೆ ಈ ಟಾಸ್ಕ್‌ನಲ್ಲಿ ಜೋಡಿ ಆಗಿರುತ್ತಾರೆ. ಸುಮಾರು 5 ಅಡಿ ಅಂತರದಲ್ಲಿರುವ ಬಾಕ್ಸ್‌ನಲ್ಲಿ ನಿಂತುಕೊಂಡು ಕೋಲಿನ ಮೂಲಕ ಲಿಪ್‌ಸ್ಟಿಕ್ ಹಿಡಿದು ನಿಲ್ಲಬೇಕು. ಆಗ ಸ್ಪರ್ಧಾಳುಗಾಳದ ಚೈತ್ರಾ, ಹನುಮಂತ ಹಾಗೂ ಧನರಾಜ್ ಅವರು ತಮ್ಮ ಜೋಡಿ ಕೋಲಿನ ಸಹಾಯದಿಂದ ಹಿಡಿದ ಲಿಪ್‌ಸ್ಟಿಕ್ ಅನ್ನು ನೇರವಾಗಿ ತುಟಿಗೆ ಹಚ್ಚಿಕೊಳ್ಳಬೇಕು. ಇದಕ್ಕೆ ಕೈಗಳ ಸಹಾಯ ಪಡೆಯುವಂತಿಲ್ಲ. ಇನ್ನು ತುಟಿಕೆ ಹಚ್ಚಿಕೊಂಟ ಲಿಪ್‌ಸ್ಟಿಕ್ ಅನ್ನು ತುಸು ದೂರದಲ್ಲಿ ಅಳವಡಿಕೆ ಮಾಡಿರುವ ವೈಟ್ ಬೋರ್ಡ್‌ಗೆ ಹೋಗಿ ಮುತ್ತು ಕೊಡಬೇಕು. ಈ ರೀತಿಯಾಗಿ 5 ನಿಮಿಷದಲ್ಲಿ ಯಾರು ಹೆಚ್ಚು ಮುತ್ತುಕೊಡುತ್ತಾರೆ ಅವರು ವಿನ್ನರ್ ಎಂದು ಘೋಷಣೆ ಮಾಡಲಾಗುತ್ತದೆ. ಈ ಟಾಸ್ಕ್‌ನ ಉಸ್ತುವಾರಿಯನ್ನು ಭವ್ಯಾ ಗೌಡ ಅವರು ವಹಿಸಿದ್ದರು.

ಇದನ್ನೂ ಓದಿ: ಹೆತ್ತವರ ಹೆಣಕ್ಕೆ ಬೆಂಕಿ ಇಡಲು ಗಂಡು ದಿಕ್ಕಿಲ್ಲದ ಮನೆ ಎಂದು ಅವಮಾನ ಮಾಡಿದ್ದಾರೆ: ಕಣ್ಣೀರಿಟ್ಟ ಚೈತ್ರಾ ಕುಂದಾಪುರ

ಮುತ್ತು ಮೇಲೊಂದು ಮುತ್ತು!

ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 pic.twitter.com/F06mIGAyHm

— Colors Kannada (@ColorsKannada)

ಚೈತ್ರಾ ಕುಂದಾಪುರ, ಧನರಾಜ್ ಆಚಾರ್ ಹಾಗೂ ಹನುಮಂತ ಮೂವರ ನಡುವಿನ ಟಾಸ್ಕ್‌ನಲ್ಲಿ ಮದುವೆ ಆಗದ ಚೈತ್ರಾ ಕುಂದಾಪುರ ಅವರು ಅತಿಹೆಚ್ಚು 77 ಮುತ್ತುಗಳನ್ನು ಕೊಟ್ಟು ವಿಜಯಶಾಲಿ ಆಗಿದ್ದಾರೆ. ಗಾಯಕ ಹನುಮಂತ ಅವರು 70 ಹಾಗೂ ಮದುವೆಯಾಗಿರುವ ಧನರಾಜ್ ಆಚಾರ್ ಅವರು 51 ಮುತ್ತುಗಳನ್ನು ಕೊಟ್ಟಿದ್ದಾರೆ. ಆದರೆ, ಈ ವೇಳೆ ರಜತ್ ಅವರು ಚೈತ್ರಾ ಅವರ ಕಾಲೆಳೆದಿದ್ದಾರೆ. ಇನ್ನು ಮದುಯೆಯಾಗದ ಚೈತ್ರಾ ಅವರು ಇಷ್ಟೊಂದು ಮುತ್ತು ಕೊಟ್ಟಿದ್ದನ್ನು ಇದೆಲ್ಲಾ ಟ್ಯಾಲೆಂಟ್ ಇದೆಯಾ ನಿಮ್ಮ ಬಳಿ ಎಂದು ಗೇಲಿ ಮಾಡಿದ್ದಾರೆ. ಮತ್ತೊಂದೆಡೆ ಧನರಾಜ್ ಅವರಿಗೆ ನೀನು ಮದುವೆ ಆಗಿದ್ದರೂ ವೇಸ್ಟ್ ಮುತ್ತು ಕೊಡಲು ಬರುವುದಿಲ್ಲ ಎಂದು ಕಾಲೆಳೆದಾಗ, 3 ತಿಂಗಳು ಆಯ್ತು ಅಲ್ವಾ ಅದಕ್ಕೆ ಮುತ್ತು ಕೊಡುವ ಪ್ರಾಕ್ಟೀಸ್ ಬಿಟ್ಟು ಹೋಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಐಶ್ವರ್ಯಾ ಸಿಂಧೋಗಿ ಎಲಿಮಿನೇಷನ್ ಹಿಂದೆ ಬೇರೆಯದ್ದೇ ಉದ್ದೇಶವಿದೆ?

click me!