ಸೀತಾರಾಮ ಸೀರಿಯಲ್‌ನಲ್ಲಿ ಸೀತಾ ಮತ್ತು ರಾಮನ ಮದುವೆ ಆಗಿದ್ದೇ ಸೀರಿಯಲ್ ವೀಕ್ಷಕರಿಗೆ ಬೋರಿಂಗ್ ಶುರುವಾಗಿದೆ. ಆದರೆ ಕಾರಣ ಮದುವೆ ಆಗಿರೋದಲ್ಲ ಅಂತಿದ್ದಾರೆ ಈ ಸೀರಿಯಲ್ ಫ್ಯಾನ್ಸ್
ಸೀತಾರಾಮ ಸೀರಿಯಲ್‌ನಲ್ಲಿ ಕಥೆ ಸೀರಿಯಸ್ ಸೀರಿಯಸ್ ಹಂತಕ್ಕೆ ಏರ್ತಿದೆ. ಯಾಕೋ ಜನಕ್ಕೆ ಈ ಸೀರಿಯಲ್ ಅನ್ ಇಂಟರೆಸ್ಟಿಂಗ್ ಅಂತ ಅನಿಸೋದಕ್ಕೆ ಶುರುವಾಗಿದೆ. ಏಕೆಂದರೆ ಸೀತಾರಾಮರ ಮದುವೆ ಗ್ರ್ಯಾಂಡ್ ಆಗಿ ಏನೋ ನಡೀತು, ಆದರೆ ಅವರಿಬ್ಬರ ನಡುವಿನ ಕನೆಕ್ಟಿವಿಟಿ ಸರಿಯಾಗಿ ರಿಜಿಸ್ಟರ್ ಆಗಿಲ್ಲ. ಸಿಹಿ ಏನೋ ಹೈಲೈಟ್ ಆದ್ಲು, ಆದರೆ ರಾಮ ಸೀತೆಯ ಪ್ರೀತಿ ಎಸ್ಟಾಬ್ಲಿಶ್ ಆಗೋದಕ್ಕೆ ಜಾಗವೇ ಸಿಗಲಿಲ್ಲ. ಮದುವೆ ಆದಮೇಲೂ ಇಬ್ಬರೂ ಸಿಹಿ ಸಿಹಿ ಅಂತಿದ್ದರೇ ಹೊರತು ಇಬ್ಬರ ನಡುವೆ ಯಾವೊಂದು ಬಂಧವೂ ಕ್ರಿಯೇಟ್ ಆದದ್ದು ಸ್ಪಷ್ಟವಾಗಿಲ್ಲ. ಮದುವೆ ಒಂದು ಗ್ರ್ಯಾಂಡ್ ಆಗಿ ಮಾಡಿಬಿಟ್ಟರೆ ಎಲ್ಲ ಮುಗಿದುಹೋಯ್ತಾ? ಅನ್ನೋದು ವೀಕ್ಷಕರ ಪ್ರಶ್ನೆ. ಜೊತೆಗೆ ಈಗಿನ ಕಥೆಯಲ್ಲಿ ಬರೀ ಬೇರೆ ಪಾತ್ರಗಳೇ ಹೈಲೈಟ್ ಆಗ್ತಿವೆ. ಸೀತಾ ಮತ್ತು ರಾಮರಿಗೆ ಸಿಗಬೇಕಾದ ಸ್ಪೇಸ್ ಸಿಕ್ತಿಲ್ಲ.
ಇವರಿಬ್ಬರ ಪಾತ್ರಗಳು ಬಹಳ ಮೆಕ್ಯಾನಿಕಲ್ ಆಗ್ತಿವೆ ಅಂತ ಅನೇಕ ವೀಕ್ಷಕರು ಸೀರಿಯಲ್ ಪ್ರೋಮೋಗಳಲ್ಲಿ ಕಾಮೆಂಟ್ ಪಾಸ್ ಮಾಡಿದ್ದಾರೆ.
ಸದ್ಯ ಸಿಹಿ ಬೋರ್ಡಿಂಗ್ ಸ್ಕೂಲಿಗೆ ಹೋಗೋದಕ್ಕೆ ರೆಡಿ ಆಗ್ತಿದ್ದಾಳೆ. ಇನ್ನೊಂದು ಕಡೆ ಭಾರ್ಗವಿ ಇವರು ಮೂವರನ್ನೂ ಸರಿಯಾಗಿ ಮಟ್ಟ ಹಾಕೋದಕ್ಕೆ ಪ್ಲಾನ್ ಮಾಡ್ತಿದ್ದಾಳೆ. ಮಗದೊಂದು ಕಡೆ ಮತ್ತೊಂದು ಕಥೆಯ ಎಳೆ ತೆರೆದುಕೊಂಡಿದೆ. ಅದು ಸಿಹಿ ಹುಟ್ಟಿಗೆ ಸಂಬಂಧಪಟ್ಟದ್ದು. ಸಿಹಿಯನ್ನು ಬೋರ್ಡಿಂಗ್ ಸ್ಕೂಲ್ ಗೆ ಕಳಿಸುವುದು ಒಳ್ಳೆಯವರ್ಯಾರಿಗೂ ಇಷ್ಟವಿರುವುದಿಲ್ಲ. ಆದರೆ ಈಗಾಗಲೇ ಅಡ್ಮಿಷನ್ ಮಾಡಿ ಆಗಿದ್ದು,ಈಗ ಅವಳನ್ನು ಶಾಲೆಗೆ ಕಳಿಸಲೇಬೇಕಾಗಿದೆ. ಹೀಗಾಗಿ ಅವಳ ಬಟ್ಟೆಗಳನ್ನು ಸೀತಾ ಪ್ಯಾಕ್ ಮಾಡುತ್ತಿದ್ದಾಳೆ.
ನಟಿಸ್ತಿರೋ ಸೀರಿಯಲ್ ಸ್ಟಾಪ್ ಆಯ್ತು, Biggboss ಮನೆಗೆ ಹೋಗ್ತಾರಾ ಇವರೆಲ್ಲಾ..
ಸಿಹಿ ಮನೆಯವರಿಗೆಲ್ಲಾ ಡ್ರಾಯಿಂಗ್ ಮಾಡಿ ಅವರ ಮೇಲಿನ ಪ್ರೀತಿಯನ್ನು ತೋರಿಸುತ್ತಿದ್ದಾಳೆ. ಅನಿಕೇತನ್ ಗೆ ಡ್ರಾಯಿಂಗ್ ಕೊಟ್ಟಾಗಿದೆ. ಈಗ ಸಾಧನಾಳಿಗೆ ಡ್ರಾಯಿಂಗ್ ಕೊಟ್ಟಿದ್ದಾಳೆ.ವೀಡಿಯೋ ಕಾಲ್ ನಲ್ಲಿ ಸತ್ಯಜಿತ್ ಜೊತೆಗೆ ಮಾತನಾಡಿದ್ದಾಳೆ. ಸಿಹಿ ಬೋರ್ಡಿಂಗ್ ಸ್ಕೂಲ್‌ಗೆ ಹೋಗುತ್ತಿರುವ ಸುದ್ದಿ ಕೇಳಿ ಸತ್ಯಜಿತ್ ಶಾಕ್ ಆಗಿದ್ದಾನೆ.
ಇನ್ನೊಂದು ಕಡೆ ಸೀತಾ ಮನೆಯನ್ನು ಸುಲೋಚನಾ ಸೇಲ್ ಗೆ ಹಾಕಿದ್ದಾಳೆ. ಇದರಿಂದ ಮನೆಯನ್ನು ನೋಡಲು ಜನ ಬರುತ್ತಿದ್ದು, ಅಜ್ಜಿ-ತಾತ ಗಾಬರಿಯಾಗಿದ್ದಾರೆ. ಸೀತಾಳಿಗೆ ಫೋನ್ ಮಾಡಿ ಈ ಬಗ್ಗೆ ವಿಚಾರಿಸುತ್ತಾರೆ. ಮನೆಯನ್ನು ಸೇಲ್ ಗೆ ಇಟ್ಟಿದ್ದೀಯಾ. ಮನೆ ನೋಡಲು ಜನ ಬರುತ್ತಿದ್ದಾರೆ ಎಂದು ಕೇಳುತ್ತಾರೆ. ಸೀತಾ ಗಮನವೆಲ್ಲಾ ಮಗಳ ಮೇಲಿದೆ. ಹೀಗಾಗಿ ಇವಳಿಗೆ ತನ್ನ ಮನೆಯ ಬಗೆಗಿನ ಕಾಳಜಿ ಹೆಚ್ಚಾಗಿ ಇರುವುದಿಲ್ಲ. ಇನ್ನು ಸುಲೋಚನಾ ಮನೆಗೆ ರುದ್ರಪ್ರತಾಪ್ ಎಂಟ್ರಿಕೊಟ್ಟಿದ್ದಾನೆ. ತಮ್ಮ ಪಾಲಿಗೆ ದಕ್ಕದ ಸೀತಾ ಮನೆಯನ್ನು ಮಾರಾಟ ಮಾಡಿ ಇಬ್ಬರೂ ಆ ಹಣದಲ್ಲಿ ಮಜಾ ಮಾಡಬೇಕು ಎಂದು ಸುಲೋಚನಾ ಮತ್ತು ಸುದೇಶ್ ಸ್ಕೆಚ್ ಹಾಕುತ್ತಿದ್ದಾರೆ. ಇದೇ ವೇಳೆಗೆ ರುದ್ರಪ್ರತಾಪ್ ಮತ್ತೆ ಮನೆಗೆ ಬಂದು ವಕ್ಕರಿಸಿದ್ದಾನೆ. ಸೀತಾ ಗಂಡ ಹಾಗೂ ಸಿಹಿ ತಂದೆಯ ಬ ಗ್ಗೆ ಮಾಹಿತಿ ನೀಡಿ ಎಂದು ರುದ್ರಪ್ರತಾಪ್ ಪೀಡಿಸಿದ್ದಾನೆ. ಆದರೆ, ಇಬ್ಬರಿಗೂ ಆ ಸತ್ಯ ತಿಳಿದಿಲ್ಲ.
ಸೇಮ್-ಟು-ಸೇಮ್ ಡ್ರೆಸ್ನಲ್ಲಿ ಮಿಂಚಿದ ಸೀತಾ- ಶ್ರಾವಣಿ! ಇವರಿಬ್ಬರ ಸಂಬಂಧವಾದ್ರೂ ಏನು?
ಚಾಂದಿನಿ ಸೀತಾ ಮೇಲೆ ಜಿದ್ದು ಸಾಧಿಸುತ್ತಿದ್ದಾಳೆ. ಹೇಗಾದರೂ ಮಾಡಿ ಸೀತಾಳನ್ನು ಮಟ್ಟ ಹಾಕಬೇಕು ಎಂದು ಅವಳ ಹಳೆಯ ಗಂಡನ ಬಗ್ಗೆ ಮಾಹಿತಿ ಹುಡುಕಲು ಮುಂದಾಗಿದ್ದಾಳೆ. ತನ್ನ ಅಗ್ರಿಮೆಂಟ್ ಪೇಪರ್ ಹುಡುಕುವ ಸಂದರ್ಭದಲ್ಲಿ ಅವಳಿಗೆ ಸಂಜೀವಿನಿ ಆಶ್ರಮಕ್ಕೆ ಸೀತಾ ಬರೆದ ಪತ್ರವೊಂದು ಸಿಕ್ಕಿದೆ. ಕನ್ನಡ ಓದಲು ಬರದ ಚಾಂದಿನಿ ಆ ಪತ್ರದ ಮೂಲವನ್ನು ಹುಡುಕುತ್ತಿದ್ದಾಳೆ. ಇದರಿಂದ ಸೀತಾಳ ಹಿಂದಿನ ಕಥೆ ಗೊತ್ತಾಗಬಹುದು. ಆಗ ಅವಳ ಖುಷಿಯನ್ನು ಕಿತ್ತುಕೊಳ್ಳಬಹುದು ಎಂದುಕೊಂಡಿದ್ದಾಳೆ.
ಸೋ ಮುಂದಿನ ದಿನಗಳಲ್ಲಿ ಸೀತಾ ಮತ್ತು ಸಿಹಿಯ ಕುರಿತಾದ ಸತ್ಯ ರಿವೀಲ್ ಆಗೋದಿದೆ. ಆದರೆ ಈ ಕಾರಣಕ್ಕೆ ಸೀತಾ ಮತ್ತು ರಾಮನ ಪಾತ್ರಗಳ ನಡುವೆ ಗ್ಯಾಪ್ ತಂದಿರೋದು ವೀಕ್ಷಕರಿಗೆ ಇಷ್ಟವಾಗ್ತಿಲ್ಲ. ರಾಮ, ಸೀತಾ ಮೊದಲಿನ ಹಾಗೇ ಇರಲಿ. ಅವರ ರಿಲೇಶನ್‌ಶಿಪ್ ಹಾಳು ಮಾಡ್ಬೇಡಿ ಅಂತ ಸೀರಿಯಲ್ ಟೀಮ್‌ಗೆ ರಿಕ್ವೆಸ್ಟ್ ಮಾಡುತ್ತಿದ್ದಾರೆ.