bigg boss kannada : ಬಿಗ್ ಬಾಸ್ ಗೆ ಹೋಗ್ತಾರಾ ಗೀತಾ ಖ್ಯಾತಿಯ ಭವ್ಯಾ ಗೌಡ ?

Published : Aug 14, 2024, 10:02 AM IST
 bigg boss kannada : ಬಿಗ್ ಬಾಸ್ ಗೆ ಹೋಗ್ತಾರಾ ಗೀತಾ ಖ್ಯಾತಿಯ ಭವ್ಯಾ ಗೌಡ ?

ಸಾರಾಂಶ

ಬಿಗ್ ಬಾಸ್ ಕನ್ನಡ ಸೀಸನ್ 11ರ ತಯಾರಿ ಜೋರಾಗಿ ನಡೆಯುತ್ತಿದೆ. ಅಕ್ಟೋಬರ್ ನಲ್ಲಿ ಶುರುವಾಗಲಿರುವ ಶೋಗೆ ಯಾರೆಲ್ಲ ಸ್ಪರ್ಧಿ ಎಂಬ ಚರ್ಚೆ ಶುರುವಾಗಿದೆ. ಮನೆ ಮನೆಗೆ ಗೀತಾ ಆಗಿ ಬರ್ತಿದ್ದ ಭವ್ಯ ಗೌಡ ಹೆಸರು ಪಟ್ಟಿಯಲ್ಲಿದೆ.  

ಬಿಗ್ ಬಾಸ್ ಕನ್ನಡ ಸೀಸನ್ 11 (bigg boss kannada season 11) ಕ್ಕೆ ದಿನಗಣನೆ ಶುರುವಾಗಿದೆ. ಸದ್ಯ ಎಲ್ಲರ ಕಣ್ಣು ಬಿಗ್ ಬಾಸ್ ಮೇಲಿದೆ. ಬಿಗ್ ಬಾಸ್ ಶೋ ಯಾವಾಗ ಶುರುವಾಗುತ್ತೆ, ಬಿಗ್ ಬಾಸ್ ನಿರೂಪಕರು ಯಾರು, ಬಿಗ್ ಬಾಸ್ ಸ್ಪರ್ಧಿಗಳು ಯಾರು ಎಂಬೆಲ್ಲ ಪ್ರಶ್ನೆ ಹುಟ್ಟಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಒಬ್ಬರಾದ್ಮೇಲೆ ಒಬ್ಬರ ಹೆಸರು ಕೇಳಿ ಬರ್ತಿದೆ. ಈಗ ಗೀತಾ (Geetha) ಧಾರಾವಾಹಿ ಖ್ಯಾತಿಯ ಭವ್ಯಾ ಗೌಡ (Bhavya Gowda) ಬಿಗ್ ಬಾಸ್ 11ರಲ್ಲಿ ಕಾಣಿಸಿಕೊಳ್ತಾರೆ ಎನ್ನುವ ಸುದ್ದಿ ಹಬ್ಬಿದೆ.

ಬಿಗ್ ಬಾಸ್ ಯಾವುದೇ ಶೋ ಬಂದ್ರೂ, ಶೋ ಶುರುವಾಗುವ ಮುನ್ನ ಒಂದಿಷ್ಟು ಸೆಲೆಬ್ರಿಟಿ ಹೆಸರುಗಳು ಕೇಳಿ ಬರ್ತಿರುತ್ತವೆ. ಬಿಗ್ ಬಾಸ್ 10ರ ಸೀಸನ್ ವೇಳೆ ಕೂಡ ಭವ್ಯಾ ಗೌಡ ಹೆಸರು ಬಂದಿತ್ತು. ಆದ್ರೆ ಭವ್ಯಾ ಗೌಡ, ಬಿಗ್ ಬಾಸ್ 10ರ ಸರಣಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಭವ್ಯಾ ಗೌಡ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಬರ್ತಿದ್ದಾರೆ ಎಂಬ ಸುದ್ದಿ ಇದೆ. 

'ವೃಷಣದಲ್ಲಿ ರಕ್ತ, ಎದೆಯ ಮೂಳೆ ಮುರಿತ..' ಪೋಸ್ಟ್‌ ಮಾರ್ಟಮ್‌ನಲ್ಲಿ ದರ್ಶನ್ & ಗ್ಯಾಂಗ್ ರಾಕ್ಷಸತನ ಬಯಲು!

ಟಿಕ್ ಟಾಕ್ ನಲ್ಲಿ ಸಿಂಕ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದ ಭವ್ಯಾ ಗೌಡ, ಗೀತಾ ಧಾರಾವಾಹಿ ಆಡಿಷನ್ ಕೊಟ್ಟು ಗೆದ್ದಿದ್ದರು. 2020ರಲ್ಲಿ ಗೀತಾ ಸೀರಿಯಲ್ ಗೆ ಎಂಟ್ರಿ ನೀಡಿದ ಭವ್ಯಾ ಗೌಡ, ತಮ್ಮ ನಟನೆ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಇದಾದ್ಮೇಲೆ ಭವ್ಯಾ ಗೌಡ, ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಅವರು ಡಿಯರ್ ಕಣ್ಮಣಿ ಚಿತ್ರದಲ್ಲಿ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ಭವ್ಯಾ ಗೌಡ, ತಮ್ಮ ಫೋಟೋಗಳನ್ನು, ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾರೆ. 

ಡಾನ್ಸ್, ಆಕ್ಟಿಂಗ್ ಜೊತೆ ಸ್ಪೋರ್ಟ್ಸ್ ನಲ್ಲೂ ಭವ್ಯಾ ಗೌಡ ಮುಂದಿದ್ದಾರೆ. ಕ್ಯೂಪಿಲ್ ಕ್ರಿಕೆಟ್ ನಲ್ಲಿ ಭವ್ಯಾ ಗೌಡ ಟೀಂ ಚಾಂಪಿಯನ್ ಆಗಿದೆ. ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಭವ್ಯಾ ಗೌಡ ಅವರ ಬೌಲಿಂಗ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡಿತ್ತು. ಭವ್ಯಾ ಸ್ಪೋರ್ಟ್ಸ್ ಬಿಗ್ ಬಾಸ್ ನಲ್ಲಿ ವರ್ಕ್ ಔಟ್ ಆಗುವ ಸಾಧ್ಯತೆ ಇದೆ. 

ಈ ಹಿಂದೆ ಬಿಗ್ ಬಾಸ್ ಮಿನಿಯಲ್ಲಿ ಭವ್ಯಾ ಗೌಡ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಮನೆ ಹೇಗಿರುತ್ತೆ, ಏನೆಲ್ಲ ಟಾಸ್ಕ್ ಇರುತ್ತೆ ಎಂಬುದು ಅವರಿಗೆ ಗೊತ್ತು. ಫಿಟ್ ಆಗಿರುವ ಭವ್ಯಾ, ಟಾಸ್ಕ್ ಗಳನ್ನು ಆರಾಮವಾಗಿ ಮಾಡಬಲ್ಲರು. ಹಾಗೆಯೇ ಒಂದು ತಂಡವನ್ನು ಮುನ್ನಡೆಸುವ ಶಕ್ತಿ, ಬುದ್ಧಿವಂತಿಕೆ ನನ್ನಲ್ಲಿದೆ ಎಂಬುದನ್ನು ಅವರು ಕ್ಯೂಪಿಆರ್ ನಲ್ಲಿ ತೋರಿಸಿದ್ದಾರೆ. ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಭವ್ಯ, ಬಿಗ್ ಬಾಸ್ ಮನೆಗೆ ಬಂದ್ರೆ ಇನ್ನಷ್ಟು ಅಭಿಮಾನಿಗಳನ್ನು ಸೆಳೆದು, ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಬಹುದು ಎನ್ನುತ್ತಿದ್ದಾರೆ ಫ್ಯಾನ್ಸ್.

ತೆಲುಗು ಬಿಗ್‌ಬಾಸ್‌ ಸೆಪ್ಟೆಂಬರ್‌ ನಲ್ಲಿ ಆರಂಭ, ಪ್ರೋಮೋ ರಿಲೀಸ್‌, ಸಂಭಾವ್ಯರ ಪಟ್ಟಿಯಲ್ಲಿ ಇಬ್ಬರು ಕನ್ನಡತಿಯರು!

ಇತ್ತ ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಸಾಕಷ್ಟು ತಯಾರಿ ನಡೆದಿದೆ. ಹೈದ್ರಾಬಾದ್ ನಲ್ಲಿ ಪ್ರೋಮೋ ಶೂಟ್ ಆಗಿದೆ ಎನ್ನುವ ಸುದ್ಧಿ ಇದೆ. ಕಿಚ್ಚ ಸುದೀಪ್, ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದು, ಎಡಿಟಿಂಗ್ ನಡೆಯುತ್ತಿದೆ ಎನ್ನಲಾಗ್ತಿದೆ. ಈ ಮಧ್ಯೆ, ಈ ಬಾರಿ ಕಿಚ್ಚನ ಬದಲು ರಿಷಬ್ ಶೆಟ್ಟಿ ನಿರೂಪಕರಾಗಿ ಕಾಣಿಸಿಕೊಳ್ತಿದ್ದಾರೆ ಎಂಬ ಚರ್ಚೆ ಕೂಡ ಬಿಸಿಯಾಗಿದೆ. ರಿಷಬ್ ಶೆಟ್ಟಿ ಕಾಂತಾರ 1ರಲ್ಲಿ ಬ್ಯುಸಿ ಇರುವ ಕಾರಣ ಅವರು ನಿರೂಪಣೆ ಮಾಡೋದಿಲ್ಲ ಎನ್ನುವ ಮಾತೂ ಇದೆ. ಪ್ರೋಮೋ ರಿಲೀಸ್ ಆದ್ಮೇಲೆ ಯಾರ ನಿರೂಪಣೆ ಎಂಬುದು ಸ್ಪಷ್ಟವಾಗಲಿದೆ. ಬಿಗ್ ಬಾಸ್ ಅಕ್ಟೋಬರ್ ಎರಡು ಅಥವಾ ಮೂರನೇ ವಾರದಲ್ಲಿ ಶುರುವಾಗುವ ಸಾಧ್ಯತೆ ದಟ್ಟವಾಗಿದೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!