
ಕನ್ನಡ ಕಿರುತೆರೆ ಜಗತ್ತು ರೌಂಡ್‌ಅಪ್ ಆಗ್ತಾನೇ ಇದೆ. ಒಂಥರಾ ಎಲ್ರೂ ಇಲ್ಲಿಲ್ಲೇ ಸುತ್ತುತ್ತಿರೋ ಥರ ಕಾಣುತ್ತೆ. ಆದರೆ ಒಂದಂತೂ ನಿಜ. ಸೀರಿಯಲ್‌ನಲ್ಲಿ ಮೇಕಪ್‌ನಲ್ಲಿ, ಬೇರೆ ಪಾತ್ರವಾಗಿ ಆರ್ಟಿಸ್ಟ್‌ಗಳನ್ನು ನೋಡಿದೋರಿಗೆ ಇವ್ರು ರಿಯಲ್‌ನಲ್ಲಿ ಹೇಗಿರಬಹುದು ಅನ್ನೋ ಕುತೂಹಲ ಅಂತೂ ಇದ್ದೇ ಇರುತ್ತೆ. ಸೀರಿಯಲ್‌ಗಳಲ್ಲಿ ಅತೀ ಒಳ್ಳೆತನ, ಅತಿಯಾದ ಸಜ್ಜನಿಕೆ ಇತ್ಯಾದಿಗಳಿರೋ ನಾಯಕಿ ಬಿಗ್‌ಬಾಸ್ ಮನೆಗೆ ಬಂದು ಹೊಟ್ಟೆಕಿಚ್ಚು, ಕೊಂಕು, ಜಂಭ ಇತ್ಯಾದಿ ಬಿಹೇವಿಯರ್ ತೋರಿಸಿದಾಗ ವೀಕ್ಷಕರು, ಅಯ್ಯಮ್ಮಾ, ನಮ್ ರಾಮಾಯಣದ ಸೀತೆ ಅಂದ್ಕೊಂಡಿದ್ನಲ್ಲಾ ಇವ್ಳನ್ನಾ, ಈಗ ನೋಡಿದ್ರೆ ಒಳ್ಳೆ ವಿಲನ್ ಥರ ಇದ್ದಾಳಲ್ಲ ಅಂತ ಮೂಗಿನ ಮೇಲೆ ಬೆರಳಿಡ್ತಾರೆ. ಅಲ್ಲಿಗೆ ಚಾನೆಲ್‌ಗೆ ಟಿಆರ್‌ಪಿ ಬರೋದಕ್ಕೆ ಮೋಸ ಇಲ್ಲ. ಈ ಬಾರಿಯ ಕಿಚ್ಚ ಸುದೀಪ್ ಸಾರಥ್ಯದ ಬಿಗ್‌ಬಾಸ್‌ನಲ್ಲಿ ಇಂಥಾದ್ದೊಂದು ಸೀನ್‌ಗೆ ವೀಕ್ಷಕರು ರೆಡಿಯಾಗಬಹುದು. ಯಾಕಂದ್ರೆ ಈಗಾಗ್ಲೇ ವೈಂಡ್‌ಅಪ್ ಆಗಿರೋ ಆಗ್ತಿರೋ ಸೀರಿಯಲ್ ನಾಯಕ, ನಾಯಕಿ, ಪೋಷಕ ಪಾತ್ರದಲ್ಲಿರುವವರು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡೋದು ಬಹುತೇಕ ಖಚಿತ ಅನ್ನಲಾಗ್ತಿದೆ.
ಬಿಗ್‌ಬಾಸ್ ಹಿಸ್ಟರಿ ಗಮನಿಸಿದರೆ ಈ ರಿಯಾಲಿಟಿ ಶೋ ಶುರುವಾಗುವ ಸಮಯದಲ್ಲಿ ಎರಡು ಮೂರು ಸೀರಿಯಲ್‌ಗಳು ಮುಕ್ತಾಯವಾಗೋದು ಆರಂಭದಿಂದ ಇರೋ ನಿಯಮ. ಸೀರಿಯಲ್‌ಗಳನ್ನು ಇನ್ನೊಂದು ವರ್ಷ ಎಳೆಯುವ ಶಕ್ತಿ ನಿರ್ದೇಶಕರಿಗೆ ಇದ್ದರೂ ಬಿಗ್‌ಬಾಸ್ ಎಂಬ ದೊಡ್ಡ ರಿಯಾಲಿಟಿ ಶೋಗಾಗಿ ಈ ಸೀರಿಯಲ್‌ಗಳಿಗೆ ಬೇಗ ಮುಕ್ತಾಯ ಹಾಡಲಾಗುತ್ತದೆ. ಈ ವರ್ಷ ಬಿಗ್‌ಬಾಸ್ ಕಾರಣಕ್ಕೆ ಕಲರ್ಸ್ ಕನ್ನಡದ ಮೂರು ಸೀರಿಯಲ್‌ಗಳು ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಹೆಚ್ಚಿನ ಸೀರಿಯಲ್ ಪ್ರಿಯರ ಊಹೆ ಪ್ರಕಾರ ಮುಕ್ತಾಯಗೊಳ್ಳುವ ಒಂದು ಸೀರಿಯಲ್ ಕೆಂಡಸಂಪಿಗೆ. ಈ ಸೀರಿಯಲ್ ಕಥೆ ಭಿನ್ನವಾಗಿತ್ತು. ಶುರುವಲ್ಲಿ ಎಲ್ಲ ಚೆನ್ನಾಗಿದ್ದರೂ ಯಾಕೋ ವೀಕ್ಷಕರ ಮನ ಗೆಲ್ಲುವಲ್ಲಿ ಸಕ್ಸಸ್ ಆಗಲಿಲ್ಲ. ರೇಟಿಂಗ್ ಬರಲಿಲ್ಲ. ಅದರಲ್ಲೂ ಲೀಡ್ ಪಾತ್ರ ಮಾಡುತ್ತಿದ್ದ ಕಾವ್ಯಾ ಶೈವ ಬದಲಾದ ಮೇಲಂತೂ ಹೊಸ ಕಲಾವಿದೆಗೆ ಜನ ಅಡ್ಜೆಸ್ಟ್ ಆಗಲಿಲ್ಲ. ಹೀಗಾಗಿ ಈ ಸೀರಿಯಲ್ ನಿಲ್ಲೋದು ಪಕ್ಕ ಅನ್ನೋ ಮಾತಿದೆ.
bigg boss kannada : ಬಿಗ್ ಬಾಸ್ ಗೆ ಹೋಗ್ತಾರಾ ಗೀತಾ ಖ್ಯಾತಿಯ ಭವ್ಯಾ ಗೌಡ ?
ಅದು ಬಿಟ್ಟರೆ ನಿಲ್ಲೋ ಇನ್ನೊಂದು ಸೀರಿಯಲ್ 'ಚುಕ್ಕಿತಾರೆ' ಅನ್ನೋ ಮಾತಿದೆ. ಈ ಸೀರಿಯಲ್ ಮಕ್ಕಳ ಕಥೆ ಆಧರಿಸಿದ್ದು. ನವೀನ್ ಸಜ್ಜು ಇದ್ದಾಗ ಇದ್ದ ಪಾಪ್ಯುಲಾರಿಟಿ ಆಮೇಲೆ ಕಡಿಮೆ ಆಯ್ತು. ಈ ಲಿಸ್ಟ್‌ನಲ್ಲಿರೋ ಇನ್ನೊಂದು ಸೀರಿಯಲ್ ಅಂತರ್‌ಪಟ. ಇದರಲ್ಲಿ ನಾಯಕ ನಾಯಕಿ ಇಬ್ಬರೂ ಹೊಸಬರು. ಇದಕ್ಕೂ ಅಂಥಾ ಉತ್ತಮ ರೆಸ್ಪಾನ್ಸ್ ಸಿಕ್ತಿಲ್ಲ. ಸೋ ಸದ್ಯದ ಲೆಕ್ಕಾಚಾರದ ಪ್ರಕಾರ ಈ ಮೂರು ಸೀರಿಯಲ್‌ಗಳು ಇನ್ನು ಕೆಲವೇ ದಿನಗಳಲ್ಲಿ ವೈಂಡ್ ಅಪ್ ಆಗುತ್ತವೆ.
ಇದರ ಜೊತೆ ಜೀ ಕನ್ನಡದ 'ಸತ್ಯ' ವೈಂಡ್‌ಅಪ್ ಆಗಿದೆ. ಜೊತೆಗೆ ಇನ್ನೊಂದಿಷ್ಟು ಸೀರಿಯಲ್‌ಗಳು ಕೊನೆಗೊಳ್ಳೋ ಹಾದಿಯಲ್ಲಿವೆ. ಈ ಸೀರಿಯಲ್‌ನ ಮೇಜರ್ ಪಾತ್ರದಲ್ಲಿರೋರು ಅವಕಾಶ ಸಿಗುತ್ತೋ ಇಲ್ವೋ ಅಂತ ತಲೆ ಕೆಡಿಸಿಕೊಳ್ಳೋ ಮೊದಲೇ ಬಿಗ್‌ಬಾಸ್ ರೆಡ್‌ಕಾರ್ಪೆಟ್ ಹಾಸಿ ಇವರಿಗೆಲ್ಲ ಸ್ವಾಗತ ಕೋರ್ತಿದೆ. ಆ ಪ್ರಕಾರ ಕಲರ್ಸ್ ತಂಡದ ವೈಂಡ್‌ಅಪ್ ಆಗಿರೋ ಸೀರಿಯಲ್‌ಗಳಿಂದ ನವೀನ್ ಸಜ್ಜು, ದಿವ್ಯಶ್ರೀ, ವಿಶಾಲ್, ಜಯಶ್ರೀ, ರಾಧಿಕಾ, ಶ್ರವಂತ್ ಮೊದಲಾದವರು ಬಿಗ್‌ಬಾಸ್‌ಗೆ ಎಂಟ್ರಿ ಕೊಡೋ ಸಾಧ್ಯತೆ ಇದೆ.
ಕಿಚ್ಚ ಸುದೀಪ್ ಸಾರಥ್ಯದಲ್ಲಿ Biggboss 11 ಬರ್ತಿದೆ, ಯಾವೆಲ್ಲ ಸೀರಿಯಲ್‌ಗಳಿಗೆ ಹೊಗೆ?
ಇದಲ್ಲದೇ 'ಸತ್ಯ' ಸೀರಿಯಲ್‌ನ ಗೌತಮಿ ಜಾಧವ್, ಸಾಗರ್ ಬಿಳೇಗೌಡ ಮೊದಲಾದರೂ ದೊಡ್ಡಮನೆಗೆ ಹೋಗಲು ರೆಡಿ ಆಗ್ತಿದ್ದಾರೆ ಅನ್ನೋ ಸುದ್ದಿ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.