Vaishnavi Gowda: ನಿಶ್ಚಿತಾರ್ಥದ ಬೆನ್ನಲ್ಲೇ ವೈಷ್ಣವಿ ಗೌಡ ಬಾಲಿವುಡ್​ಗೆ ಎಂಟ್ರಿ? ಹೃದಯ ಜಾರಿ ಜಾರಿ ಹೋಗ್ತಿದೆ ಎಂದ ನಟಿ...

Published : Apr 22, 2025, 02:29 PM ISTUpdated : Apr 22, 2025, 02:38 PM IST
Vaishnavi Gowda: ನಿಶ್ಚಿತಾರ್ಥದ ಬೆನ್ನಲ್ಲೇ ವೈಷ್ಣವಿ ಗೌಡ ಬಾಲಿವುಡ್​ಗೆ ಎಂಟ್ರಿ? ಹೃದಯ ಜಾರಿ ಜಾರಿ ಹೋಗ್ತಿದೆ ಎಂದ ನಟಿ...

ಸಾರಾಂಶ

ವೈಷ್ಣವಿ ಗೌಡ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದು, ಭಾವಿ ಪತಿ ಅನುಕೂಲ್​ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಹಿಂದಿ ಹಾಡಿಗೆ ರೀಲ್ಸ್ ಮಾಡಿರುವುದು ಬಾಲಿವುಡ್ ಆಸೆಯನ್ನು ಹುಟ್ಟುಹಾಕಿದೆ. ಅಗ್ನಿಸಾಕ್ಷಿ ಧಾರಾವಾಹಿಯಿಂದ ಖ್ಯಾತಿ ಪಡೆದ ವೈಷ್ಣವಿ, ಬಿಗ್​ಬಾಸ್​ನಲ್ಲೂ ಭಾಗವಹಿಸಿದ್ದರು. ಬಾಲಿವುಡ್ ಕನಸನ್ನು ನನಸಾಗಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೀತಾರಾಮ ಸೀತಾ  ಉರ್ಫ್​ ನಟಿ ವೈಷ್ಣವಿ ಗೌಡ ಸದ್ಯ ಎಂಗೇಜ್​ಮೆಂಟ್​  ಖುಷಿಯಲ್ಲಿದ್ದಾರೆ. ಇದಾಗಲೇ ಭಾವಿ ಪತಿ ಅನುಕೂಲ್​ ಜೊತೆ ಡಿನ್ನರ್​ ಡೇಟಿಂಗ್​ಗೂ ಹೋಗಿದ್ದು, ಅದರ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅಂದ ಹಾಗೆ ನಟಿಯ ಫ್ಯಾನ್ಸ್​ಗೆ ತಿಳಿದಿರುವಂತೆಯೇ ಅನುಕೂಲ್​ ಅವರು ಛತ್ತೀಸಗಢದವರಾಗಿದ್ದು, ಹಿಂದಿ ಭಾಷಿಕರು. ಅವರಿಗೆ ಕನ್ನಡ ಬರುವುದಿಲ್ಲ. ಆದರೂ ತಮ್ಮ ಸೀರಿಯಲ್​, ತಾವು ಭಾಗವಹಿಸಿದ್ದ ಬಿಗ್​ಬಾಸ್ ಎಲ್ಲವನ್ನೂ ನೋಡಿರುವುದಾಗಿ ವೈಷ್ಣವಿ ಇದಾಗಲೇ  ಮಾಧ್ಯಮಗಳಿಗೆ ಹೇಳಿದ್ದಾರೆ. ಆದರೆ ಇದೀಗ ಎಂಗೇಜ್​ಮೆಂಟ್​ ಬೆನ್ನಲ್ಲೇ ನಟಿ ಹಿಂದಿ ಹಾಡಿಗೆ ರೀಲ್ಸ್​ ಮಾಡಿದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ..

ಸಾಮಾನ್ಯವಾಗಿ ವೈಷ್ಣವಿ ಅವರು ಕನ್ನಡ ಭಾಷೆಯ ಹಾಡುಗಳಿಗೆ ರೀಲ್ಸ್​ ಮಾಡುತ್ತಾರೆ. ಇದೀಗ ಭಾವಿ ಪತಿಗಾಗಿಯೇ ಎನ್ನುವಂತೆ ಹಿಂದಿಯ ಯೇ ಕ್ಯಾ ಹುವಾ ಮುಝೆ​​ ಯೇ ದಿಲ್​ ಫಿಸಲ್​ ಫಿಸಲ್​ ಗಯಾ ಎಂದಿದ್ದಾರೆ. ನನಗೆ ಇದೇನಾಗಿದೆ, ನನ್ನ ಹೃದಯ ಜಾರುತ್ತಿದೆ ಎನ್ನುವ ಅರ್ಥದ  ಹಾಡಿಗೆ ರೀಲ್ಸ್​ ಮಾಡಿದ್ದು, ಅವರ ಅಭಿಮಾನಿಗಳು ನಟಿಯ ಕಾಲೆಳೆಯುತ್ತಿದ್ದಾರೆ. ಹಿಂದಿ ಮೇಲೆ ಲವ್​ ಶುರುವಾಯ್ತಾ? ಭಾವಿ ಪತಿಗಾಗಿ ಹಿಂದಿ ಹಾಡು ಆಯ್ದುಕೊಂಡ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಮತ್ತೆ ಕೆಲವರು ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದೀರಾ? ಬಾಲಿವುಡ್​​ ನಟಿಯ ಲೆವಲ್​ಗೆ ರೀಲ್ಸ್​ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಹೀಗೆ ಹೇಳಲು ಕಾರಣವೂ ಇದೆ. ಅದೇನೆಂದರೆ, ಕಿರುತೆರೆಯಲ್ಲಿ ಮಿಂಚುತ್ತಿರುವ ಹಲವು ನಟಿಯರು ಇದಾಗಲೇ ಬೆಳ್ಳಿ ಪರದೆಯ ಮೇಲೂ ಕಾಣಿಸಿಕೊಂಡಿದ್ದಾರೆ. ಆಯಾ ಭಾಷೆಗಳ ಚಿತ್ರಗಳ ಜೊತೆಗೆ ಪರ ಭಾಷೆಗಳಲ್ಲಿಯೂ ನಟಿಸುವ ಅವಕಾಶ ಕೆಲವರಿಗೆ ಸಿಕ್ಕಿದ್ದೂ ಇದೆ. ಆದರೆ ಹಲವು ನಟಿಯರ ಕನಸು ಬಾಲಿವುಡ್‌ಗೆ ಎಂಟ್ರಿ ಕೊಡಬೇಕು ಎನ್ನುವುದೇ ಆಗಿರುತ್ತದೆ. ಬಾಲಿವುಡ್‌ ಎಂಬ ಸಮುದ್ರದಲ್ಲಿ ಈಜುವ ಬಯಕೆ ಅವರದ್ದಾಗಿರುತ್ತದೆ. ಆದರೆ ಈ ಅದೃಷ್ಟ ಸಿಗುವುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ. ಯಾವುದೇ ಗಾಡ್‌ ಫಾದರ್‍‌ ಇಲ್ಲದೆಯೇ ಬೇರೆ ಭಾಷೆಗಳ ನಟಿಯರು ಬಾಲಿವುಡ್‌ನಲ್ಲಿ ಎಂಟ್ರಿ ಪಡೆಯುವುದು ಕನಸಿನ ಮಾತೇ ಎಂದರೂ ಪರವಾಗಿಲ್ಲ. ಆದರೂ ಕನಸು ಕಾಣಲು ಹಣ ಕೊಡಬೇಕೆಂದೇನೂ ಇಲ್ಲವಲ್ಲ, ಆದರೆ ಕೆಲವರಿಗೆ ಆ ಕನಸು ನನಸಾಗುವುದೂ ಇದೆ. ಇದೀಗ ಇದೇ ಲೈನ್‌ನಲ್ಲಿ ಇದ್ದಾರೆ  ವೈಷ್ಣವಿ ಗೌಡ !

ಛತ್ತೀಸ್​ಗಢದ ಯುವಕನ ಜೊತೆ ಲವ್​ನಲ್ಲಿ ಬಿದ್ದದ್ದು ಹೇಗೆ? ಕೊನೆಗೂ ಮೌನ ಮುರಿದ ವೈಷ್ಣವಿ

ಕೆಲವು ದಿದನಗಳ ಹಿಂದೆ  ತಮ್ಮ ವಿಡಿಯೋದಲ್ಲಿ ಬಾಲಿವುಡ್‌ಗೆ ಹೋಗುವ ಕನಸಿನ ಬಗ್ಗೆ ಮಾತನಾಡಿದ್ದರು. . ತಮ್ಮ ಕಾರ್ಯವನ್ನು ಸಿದ್ಧಿಸಿಕೊಳ್ಳಬೇಕು ಎಂದರೆ ಅದಕ್ಕಿರುವ ಹಲವು ವಿಧಾನಗಳ ಬಗ್ಗೆ ಇದಾಗಲೇ ಸಾಕಷ್ಟು ವಿಡಿಯೋ ಶೇರ್ ಮಾಡಿರುವ ನಟಿ, ಇದರಲ್ಲಿ ಕ್ರಿಸ್ಟಲ್‌ ಬಗ್ಗೆ ತಿಳಿಸಿಕೊಟ್ಟಿದ್ದರು. . ಕನಸನ್ನು ನನಸು ಮಾಡಿಕೊಳ್ಳಲು ಇದು ಹೇಗೆ ಸಹಾಯ ಎಂದು ಹೇಳುತ್ತಲೇ, ಕೆಲವರು ಇದರ ಸಹಾಯ ಪಡೆದು ನೀವು ಬಾಲಿವುಡ್‌ಗೆ ಹೋಗಬಹುದಲ್ವಾ ಎನ್ನುವ ಪ್ರಶ್ನೆ ಮಾಡುತ್ತಾರೆ. ಆದರೆ ಆ ಮನಸ್ಸು ನನಗೂ ಇದೆ. ಅಲ್ಲಿಯೂ ನಟಿಯಾಗುವ ಆಸೆ ಇದೆ. ಆದರೆ ಅದು ಅಷ್ಟು ಸುಲಭವಲ್ಲ. ಏನೇ ತಿಪ್ಪರಲಾಗ ಹಾಕಿದರೂ ನಮ್ಮ ಹಣೆಯಲ್ಲಿ ಏನು ಬರೆದಿರುತ್ತದೆಯೋ ಅದೇ ಆಗುವುದು. ಆದರೆ ಕೆಲವು ವಿಧಾನಗಳ ಮೂಲಕ ನನ್ನ ಆಸೆಯನ್ನು ನೆರವೇರಿಸಿಕೊಳ್ಳುತ್ತಿದ್ದೇನೆ ಎಂದಿದ್ದರು.  ನಟಿ. ಇದೇ ವಿಧಾನದ ಮೂಲಕ  ಬಾಲಿವುಡ್‌ ಕನಸಿನ ಆಸೆಯನ್ನೂ ಶೀಘ್ರದಲ್ಲಿ ನೆರವೇರಿಸಿಕೊಳ್ಳುತ್ತಾರೆ ಎನ್ನುವ ಆಸೆ ಅವರ ಅಭಿಮಾನಿಗಳಿಗೆ. ಶೀಘ್ರದಲ್ಲಿಯೇ ನಿಮ್ಮ ಆಸೆ ನೆರವೇರಲಿ ಎಂದು ತಿಳಿಸುತ್ತಿದ್ದರು. . 

ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ,  ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ.  ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ,  ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.  ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.  `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.  `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ   ನಿರೂಪಣೆ ಕೂಡ ಮಾಡಿದ್ದಾರೆ.  `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

ಯಾರ‍್ಯಾರನ್ನೋ ನನ್​ ಗಂಡ ಮಾಡ್ಬೇಡಿ ಪ್ಲೀಸ್​... ಅವ್ರು ಅಕಾಯ್ ಅಲ್ಲ: ವೈಷ್ಣವಿ ಗೌಡ ಬೇಸರ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!