ಈಕೆ ವಿಶ್ವದ ಅತೀ ಶ್ರೀಮಂತ ಟಿವಿ ನಿರೂಪಕಿ: ಹಾಲಿವುಡ್ ಟಾಪ್‌ ನಟರು ಈಕೆಯ ಶ್ರೀಮಂತಿಕೆ ಮುಂದೆ ಫ್ಲಾಪು

Published : Apr 21, 2025, 06:23 PM ISTUpdated : Apr 22, 2025, 10:12 AM IST
ಈಕೆ ವಿಶ್ವದ ಅತೀ ಶ್ರೀಮಂತ ಟಿವಿ ನಿರೂಪಕಿ: ಹಾಲಿವುಡ್ ಟಾಪ್‌ ನಟರು ಈಕೆಯ ಶ್ರೀಮಂತಿಕೆ ಮುಂದೆ ಫ್ಲಾಪು

ಸಾರಾಂಶ

ಕೆಲವರು ಅಪ್ಪ ಅಜ್ಜ ಮಾಡಿದ ಆಸ್ತಿಯಿಂದಾಗಿ ಶ್ರೀಮಂತಿಕೆ ಹುಟ್ಟಿನಿಂದಲೇ ಬಂದಿದ್ದರೆ ಮತ್ತೆ ಕೆಲವರು ಸ್ವತಃ ದುಡಿದು ಕೋಟ್ಯಾಧಿಪತಿಗಳು, ಬಿಲಿಯನೇರ್‌ಗಳು ಆದವರು. ಅಂತಹ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಜಗತ್ತಿನ ಅತೀ ಶ್ರೀಮಂತ ಟಿವಿ ಶೋ ನಿರೂಪಕಿ

ಟಿವಿ ಕಾರ್ಯಕ್ರಮಗಳನ್ನು ನಡೆಸಿ ಕೊಡುವ ಹಾಗೂ ಕೆಲವು ಟಾಕ್‌ ಶೋಗಳನ್ನು ನಡೆಸಿಕೊಡುವ  ಟಿವಿ ನಿರೂಪಕರು ಜನರ ಮೇಲೆ ಅತೀ ಹೆಚ್ಚು ಪ್ರಭಾವ ಬೀರುವ ವ್ಯಕ್ತಿತ್ವಗಳಲ್ಲಿ ಒಬ್ಬರೆನಿಸಿದ್ದಾರೆ. ಕನ್ನಡದಲ್ಲೇ ಈಗ ಹೇಳುವುದಾದರೆ ದಿ ವೀಕೆಂಡ್ ವಿತ್ ರಮೇಶ್ ಸೇರಿದಂತೆ ಶೋ ನಡೆಸಿಕೊಟ್ಟ ನಟ ರಮೇಶ್ ಅರವಿಂದ್ ಅವರಿಗೆ ರಾಜ್ಯದೆಲ್ಲೆಡೆ ಲಕ್ಷಾಂತರ ಜನ ಅಭಿಮಾನಿಗಳಿದ್ದಾರೆ. ಅದೇ ರೀತಿ ಜಗತ್ತಿನ ಅತ್ಯಂತ ಶ್ರೀಮಂತ ಟಿವಿ ಶೋ ನಿರೂಪಕಿಯೊಬ್ಬರ ಬಗ್ಗೆ ನಾವೀಗ ಹೇಳ ಹೊರಟಿದ್ದೇವೆ. ಇವರು ಹಾಲಿವುಡ್‌ನ ಮೂರು ಅತ್ಯಂತ ಶ್ರೀಮಂತ ಸೂಪರ್‌ಸ್ಟಾರ್‌ಗಳ ಒಟ್ಟು ಶ್ರೀಮಂತಿಕೆಗಿಂತಲೂ ಹೆಚ್ಚು ಶ್ರೀಮಂತರು ಎಂದರೆ ನೀವು ನಂಬಲೇಬೇಕು.

ಹುಟ್ಟುವಾಗ ಬಡವರಾಗಿ ಹುಟ್ಟಿದರೆ ನಿಮ್ ತಪ್ಪಲ್ಲ, ಆದರೆ ಸಾಯುವಾಗಲೂ ಬಡವರಾಗಿಯೇ ಸತ್ತರೆ ಅದು ನಿಮ್ಮದೇ ತಪ್ಪು ಎಂಬ ಮಾತೊಂದು ಸಾಮಾನ್ಯವಾಗಿ ಹರಿದಾಡುತ್ತಿರುತ್ತದೆ. ಕೆಲವರು ಅಪ್ಪ ಅಜ್ಜ ಮಾಡಿದ ಆಸ್ತಿಯಿಂದಾಗಿ ಶ್ರೀಮಂತಿಕೆ ಹುಟ್ಟಿನಿಂದಲೇ ಬಂದಿದ್ದರೆ ಮತ್ತೆ ಕೆಲವರು ಸ್ವತಃ ದುಡಿದು ಕೋಟ್ಯಾಧಿಪತಿಗಳು, ಬಿಲಿಯನೇರ್‌ಗಳು ಆದವರು. ಅಂತಹ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಜಗತ್ತಿನ ಅತೀ ಶ್ರೀಮಂತ ಟಿವಿ ಶೋ ನಿರೂಪಕಿ ಒಪ್ರಾ ವಿನ್‌ಫ್ರೇ.

ಇದನ್ನೂ ಓದಿ: ಚಿನ್ನ ಕರಗಿಸಿ ಹಣ ನೀಡುವ ಎಟಿಎಂ: ಮಾರುಕಟ್ಟೆಯಲ್ಲಿ ಹೊಸ ಸಂಚಲನ

ಕಳೆದ 50 ವರ್ಷಗಳಲ್ಲಿ ಅಮೆರಿಕದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಈ ಶ್ರೀಮಂತ ಟಾಕ್ ಶೋ ನಿರೂಪಕಿ ಒಪ್ರಾ ವಿನ್‌ಫ್ರೇ ಒಬ್ಬರು. ಪ್ರೈಮ್‌ಟೈಮ್ ಟಾಕ್ ಶೋಗಳ ಪ್ರಭಾವದಿಂದಾಗಿ ಇಂದು ಅವರು ಅತ್ಯಂತ ವಿನಮ್ರ ಹಿನ್ನೆಲೆಯಿಂದ ಬಂದಿದ್ದರೂ ಸಹ, ಅಮೆರಿಕದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆನಿಸಿದ್ದಾರೆ. ಜರ್ನಲಿಸ್ಟ್ ಆಗಿ ನಂತರ ಟಾಕ್‌ ಶೋ ಐಕಾನ್ ಆಗಿ ಬದಲಾದ ಒಪ್ರಾ ಅವರ ಇಂದಿನ ನೆಟ್‌ವರ್ತ್‌ 3 ಬಿಲಿಯನ್ ಡಾಲರ್‌ ಎಂದರೆ ನಂಬಲೇಬೇಕು. ಫೋರ್ಬ್ಸ್‌ನ 2025ರ ವಿಶ್ವದ ಅತೀ ಶ್ರೀಮಂತ ಹೊಸ ಬಿಲಿಯನೇರ್‌ ಪಟ್ಟಿಯಲ್ಲಿ ಒಫ್ರಾ ಅವರು 1219ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ವಿಶ್ವದ ಮಾಧ್ಯಮ ಮತ್ತು ಮನರಂಜನೆಯ ಪಟ್ಟಿಯಲ್ಲಿ 50ನೇ ಸ್ಥಾನದಲ್ಲಿದ್ದಾರೆ. ಆದರೆ ಅಚ್ಚರಿ ಎಂದರೆ ವಿಶ್ವದ ಯಾವುದೇ ಪ್ರೈಮ್‌ಟೈಮ್ ಟಾಕ್ ಶೋ ನಿರೂಪಕರು, ಓಪ್ರಾ ಅವರ ಆರನೇ ಒಂದು ಭಾಗದಷ್ಟು ಕೂಡ ನಿವ್ವಳ ಮೌಲ್ಯವನ್ನು ಹೊಂದಿಲ್ಲ.

ಬರೀ ಇಷ್ಟೇ ಅಲ್ಲ ಟಾಕ್ ಶೋ ನಿರೂಪಕಿ ಓಪ್ರಾ ಅವರ ಸಂಪತ್ತು ವಿಶ್ವದ ಕೆಲವು ಅತ್ಯಂತ ಯಶಸ್ವಿ ನಟರ ಶ್ರೀಮಂತಿಕೆಯನ್ನು ಮೀರಿಸುತ್ತಿದೆ. ವಿಶ್ವದ ಮೂರು ಶ್ರೀಮಂತ ಹಾಲಿವುಡ್ ನಟರಾದ  ಟಾಮ್ ಕ್ರೂಸ್ , ಡ್ವೇನ್ ಜಾನ್ಸನ್ ಮತ್ತು ಶಾರುಖ್ ಖಾನ್ ಅವರ ನಿವ್ವಳ ಮೌಲ್ಯ ಸುಮಾರು $2.3 ಬಿಲಿಯನ್ ಆಗಿದೆ. ಆದರೆ  ಓಪ್ರಾ ಅವರ ಶ್ರೀಮಂತಿಕೆ ಮುಂದೆ ಇವರ ಶ್ರೀಮಂತಿಕೆಯೂ ಕಡಿಮೆ ಎನಿಸಿದೆ. 

ಸಾಮಾನ್ಯ ಹಿನ್ನೆಲೆಯ ಓಪ್ರಾ ಇಷ್ಟೊಂದು ಶ್ರೀಮಂತೆ ಆಗಿದ್ದು ಹೇಗೆ?
ಓಪ್ರಾ 70 ರ ದಶಕದ ಮಧ್ಯಭಾಗದಿಂದ 80 ರ ದಶಕದ ಮಧ್ಯಭಾಗದವರೆಗೆ ಅಂದರೆ ಚಿಕಾಗೋಗೆ ಸ್ಥಳಾಂತರಗೊಂಡು ತನ್ನದೇ ಆದ ಪ್ರೈಮ್‌ಟೈಮ್ ಕಾರ್ಯಕ್ರಮವನ್ನು ಪಡೆಯುವವರೆಗೂ ಟಿವಿ ಸುದ್ದಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. 1985 ರಲ್ಲಿ ಸ್ಟೀವನ್ ಸ್ಪೀಲ್‌ಬರ್ಗ್ ಅವರ ದಿ ಕಲರ್ ಪರ್ಪಲ್‌ನಲ್ಲಿ ಕಾಣಿಸಿಕೊಂಡ ನಂತರ ಓಪ್ರಾ ಅವರ ಜನಪ್ರಿಯತೆ ಖ್ಯಾತಿಯ ಉತ್ತುಂಗಕ್ಕೇರಿತ್ತು. ಇದರಿಂದಲೇ ಅವರು ಆಸ್ಕರ್‌ಗೂ ನಾಮನಿರ್ದೇಶನಗೊಂಡರು. ಮುಂದಿನ ವರ್ಷ, ದಿ ಓಪ್ರಾ ವಿನ್‌ಫ್ರೇ ಶೋ ಪ್ರಸಾರವಾಯಿತು ಮತ್ತು ಇದು 2011 ರವರೆಗೂ ಮುಂದುವರೆಯಿತು. 80 ರ ದಶಕದ ಅಂತ್ಯದಿಂದ ಆರಂಭವಾದ ಈ ಶೋ ತನ್ನ ಪ್ರಸಾರವನ್ನು ನಿಲ್ಲಿಸುವವರೆಗೆ, ಟಿವಿ ರೇಟಿಂಗ್‌ಗಳಲ್ಲಿ ಸ್ಥಿರವಾಗಿ ಅಗ್ರಸ್ಥಾನದಲ್ಲಿಯೇ ನಿಂತಿತ್ತು. ಹೀಗಾಗಿ ಓಪ್ರಾ ಶೀಘ್ರದಲ್ಲೇ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕರಾದರು ಜೊತೆಗೆ ಸ್ವತಃ ಲಾಭ ಗಳಿಸಿದ್ದರು. 

ಇದನ್ನೂ ಓದಿ: ತಮಿಳುನಾಡು ಉದ್ಯಮಿಗೆ ದುಬಾರಿ BMW iX1 ಕಾರು ಗಿಫ್ಟ್ ನೀಡಿದ ಚೀನಾದ ಗೆಳತಿ

ಅವರು ತಮ್ಮ ಶೋದಿಂದ ಬಂದ ಲಾಭವನ್ನು ಮರು ಹೂಡಿಕೆ ಮಾಡಿದರು. ಜೊತೆಗೆ  ಅವರ ದಿ ಕಲರ್ ಪರ್ಪಲ್, ಬಿಲವ್ಡ್ ಮತ್ತು ಸೆಲ್ಮಾ ಚಲನಚಿತ್ರಗಳಿಂದ ಅವರಿಗೆ ಉತ್ತಮ ಲಾಭ ಬಂತು ಇದರಿಂದ ಬಂದ ಲಾಭ ಅಂದಾಜು $2.5 ಬಿಲಿಯನ್‌ಗಿಂತ ಹೆಚ್ಚು ಎಂದು ಫೋರ್ಬ್ಸ್  ವರದಿ ಮಾಡಿದೆ. ಇದರ ಜೊತೆಗೆ, ಓಪ್ರಾ ತನ್ನದೇ ಆದ ಟಿವಿ ಚಾನೆಲ್ ಅನ್ನು ಸಹ ಪ್ರಾರಂಭಿಸಿದರು ಮತ್ತು ಇತರ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡಿದರು. ಅವರ ಟಾಕ್ ಶೋ  ಮುಗಿದ ನಂತರ ಓಪ್ರಾ ವಿವಿಧ ಸಿಂಗಲ್ ಎಪಿಸೋಡ್‌ನ ಅಥವಾ ಅಲ್ಪಾವಧಿಯ ಕಾರ್ಯಕ್ರಮಗಳಲ್ಲಿ ಟಿವಿಯಲ್ಲಿ ಕಾಣಿಸಿಕೊಳ್ಳುವುದನ್ನು ಮುಂದುವರೆಸಿದರು. ಇದರ ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಅವರು ಹಣ ಹೂಡಿಕೆ ಮಾಡಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಮನೆ, ಮತ್ತು ಹವಾಯಿಯಲ್ಲಿ 2,100 ಎಕರೆ ಭೂಮಿಯೂ ಸೇರಿದಂತೆ ಅವರು ಒಂದು ಡಜನ್‌ಗಿಂತಲೂ ಹೆಚ್ಚು ಆಸ್ತಿಗಳನ್ನು ಹೊಂದಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!