ಹೆತ್ತವರ ತ್ಯಜಿಸಿ ಸರಿಗಮಪ ಖ್ಯಾತಿ ಪೃಥ್ವಿ ಭಟ್ ಲವ್ ಮ್ಯಾರೇಜ್! ವಶೀಕರಣವೆಂದು ಅಪ್ಪನ ಅಳಲು!

Published : Apr 21, 2025, 04:44 PM ISTUpdated : Apr 21, 2025, 05:29 PM IST
ಹೆತ್ತವರ ತ್ಯಜಿಸಿ ಸರಿಗಮಪ ಖ್ಯಾತಿ ಪೃಥ್ವಿ ಭಟ್ ಲವ್ ಮ್ಯಾರೇಜ್! ವಶೀಕರಣವೆಂದು ಅಪ್ಪನ ಅಳಲು!

ಸಾರಾಂಶ

ಸರಿಗಮಪ ಖ್ಯಾತಿಯ ಪೃಥ್ವಿ ಭಟ್, ಜೀ ಕನ್ನಡದ ಅಭಿಷೇಕ್ ಜೊತೆ ದೇವಸ್ಥಾನದಲ್ಲಿ ಮದುವೆಯಾಗಿ ಓಡಿಹೋಗಿದ್ದಾರೆ. ತಂದೆ ಶಿವಪ್ರಸಾದ್, ಪೃಥ್ವಿ ಅಭಿಷೇಕ್‌ರನ್ನು ಮದುವೆಯಾಗುವುದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದ್ದಳು, ವಶೀಕರಣದಿಂದ ಓಡಿಹೋಗಿದ್ದಾಳೆ ಎಂದು ಆರೋಪಿಸಿದ್ದಾರೆ. ಮಗಳಿಗೆ ಮದುವೆ ಮಾಡಲು ಯೋಜಿಸುತ್ತಿದ್ದ ತಂದೆ ಈ ಘಟನೆಯಿಂದ ಬೇಸರಗೊಂಡಿದ್ದಾರೆ.

ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ಅವರು ಲವ್ ಮ್ಯಾರೇಜ್ ಮಾಡಿಕೊಂಡು ಓಡಿ ಹೋಗಿದ್ದಾರೆ ಎನ್ನಲಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎನ್ನುವವರ ಜೊತೆ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು ಮನೆಯವರಿಗೆ ಹೇಳದೇ ಎಲ್ಲೋ ಹೋಗಿದ್ದಾರೆ ಎಂದು ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಅಳಲು ತೋಡಿಕೊಂಡಿದ್ದಾರೆ. ನನ್ನ ಮಗಳು ಅವನ ಜೊತೆ ಮದುವೆ ಆಗುವುದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದ್ದಳು. ಆದರೆ, ಅವಳಿಗೆ ವಶೀಕರಣ ಮಾಡಲಾಗಿದೆ. ಹೀಗಾಗಿ ಅವಳು ಅವನ ಜೊತೆ ಓಡಿಹೋಗಿದ್ದಾಳೆ ಎಂದಿದ್ದಾರೆ ಪ್ರಥ್ವಿ ಭಟ್ ತಂದೆ. 

ಈ ಬಗ್ಗೆ ಆಡಿಯೋ ಬಿಡುಗಡೆ ಮಾಡಿರುವ ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಅವರು ತಮ್ಮ ಅಳಲು ತೋಡಿಕೊಳ್ಳುತ್ತ.. ನನ್ನ  ಮಗಳ ತಲೆ ಕೆಡಿಸಲಾಗಿದೆ. ಅವಳನ್ನು ನಾವು ಹೇಗೆ ಬೆಳಸಿದ್ದೇವೆ ಎಂಬುದು ಎಲ್ಲರಿಗೂ ಗೊತ್ತು.. ಅವಳ ಮದುವೆ ಮಾಡಲು ಗಂಡು ಹುಡುಕುತ್ತಿದ್ದೆವು. ಈಗ ನೋಡಿದರೆ ಹೀಗೆ ಆಗಿಹೋಗಿದೆ.. ಇದಕ್ಕೆಲ್ಲಾ ಕಾರಣ, ಜೀ ಕನ್ನಡ ವಾಹಿನಿಯಲ್ಲಿ ಜೂರಿ ಆಗಿರುವ ನರಹರಿ ದೀಕ್ಷಿತ್ ಎಂದಿದ್ದಾರೆ. ಅವರಿಗೆ ನಾನು ಮಗಳ ಮದುವೆ ವಿಷಯ ಹೇಳಿದ್ದೆ. ಜೀ ಕನ್ನಡದಲ್ಲಿ, ನಿಮ್ಮ ಶೋದಲ್ಲಿ ಯಾರಾದರೂ ಆರ್ಟಿಸ್ಟ್ ಇದ್ದರೆ ನನ್ನ ಮಗಳಿಗೆ ಮದುವೆಗೆ ನೋಡಿ ಎಂದಿದ್ದೆ.

ಪುನೀತ್ ರಾಜ್‌ಕುಮಾರ್ ಬಯೋಪಿಕ್ 'ಸದ್ಯಕ್ಕೆ ಬೇಡ' ಎಂದ ಶಿವರಾಜ್‌ಕುಮಾರ್; ಕಾರಣವೇನು?

ಆದರೆ, ಅವರು, ನನ್ನ ಮಗಳು ಪೃಥ್ವಿ ಭಟ್ ಜೀ ಕನ್ನಡದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಜೊತೆ ಲವಲ್ಲಿ ಬಿದ್ದು, ಅದು ಮದುವೆ ಮಾಡಿಕೊಳ್ಳುವಮಟ್ಟಕ್ಕೆ ಹೋಗಿದೆ ಎಂಬ ಸಂಗತಿ ಗೊತ್ತಿದ್ದರೂ ಆ ಬಗ್ಗೆ ಏನೂ ಹೇಳೇ ಇಲ್ಲ. ಇದರಿಂದ ನಮಗೆ ಆ ಸಂಗತಿ ಗೊತ್ತೇ ಆಗಲಿಲ್ಲ. ಈಗ ಮಗಳು ಜಾತಿ ಬಿಟ್ಟು ಓಡಿ ಹೋಗಿದ್ದಾಳೆ. ಈಗ ಏನು ಹೇಳಿಯೂ ಪ್ರಯೋಜನವಿಲ್ಲ. ಅವಳು ಮನೆ ಬಿಟ್ಟುಹೋಗಿ 20 ದಿನಗಳ ಮೇಲಾಯ್ತು. ನಮ್ಮ ಜೊತೆ ಈಗ ಅವಳು ಸಂಪರ್ಕದಲ್ಲಿ ಇಲ್ಲ' ಎಂದಿದ್ದಾರೆ. 

ಶಿವಪ್ರಸಾದ್ ಅವರು ಹೇಳಿರೋ ಪ್ರಕಾರ, 'ನನ್ನ ಮಗಳು ಅಭಿಷೇಕ್ ಜೊತೆ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದ್ದಳು. ಆತನ ಜೊತೆ ಲವ್ ಆಗಿರುವ ಸಂಗತಿ ನಮಗೂ ಗೊತ್ತಿತ್ತು. ಆದರೆ, ಮದುವೆ ಆಗುವುದಿಲ್ಲ ಎಂದು ಆಕೆಯೇ ದೇವರ ಮುಂದೆ ಪ್ರಮಾಣ ಮಾಡಿದ್ದರಿಂದ ನಾವು ಆಕೆಯ ಮದುವೆಯನ್ನು ಬೇರೆಯವರ ಜೊತೆ ಮಾಡಲು ಪ್ರಯತ್ನ ಮಾಡುತ್ತಿದ್ದೆವು.

ಪೂಜಾ ಹೆಗ್ಡೆ ಮೇಲೆ ಅದ್ಯಾರಿಗೆ ಕೋಪ? ಅದೇನು ತಪ್ಪು ಮಾಡಿದ್ರು ಪೂಜಾ ಪಾಪ?

ಈಗ ನೋಡಿದರೆ, ಅಭಿಷೇಕ್ ಜೊತೆ ಓಡಿಹೋಗಿ ಆಕೆ ಯಾವುದೇ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾಳೆ. ನಮಗೆ ಸುದ್ದಿ ತಿಳಿಯುವ ಹೊತ್ತಿಗೇ ಸಾಕಷ್ಟು ದಿನಗಳು ಕಳೆದು ಹೋಗಿದ್ದವು. ಹೆತ್ತು ಬೆಳೆಸಿ ಸಾಕಿದ ತಂದೆ-ತಾಯಿಗಳಾಗಿ ನಾವು ಸಹಜವಾಗಿಯೇ ಮಗಳ ಮದುವೆ ಮಾಡಿಕೊಡುವ ಕನಸು ಕಾಣುತ್ತಿದ್ದೆವು. ಆದರೆ ಈಗ ನಮ್ಮೆಲ್ಲರ ಕನಸಿಗೆ ಕೊಳ್ಳಿ ಇಟ್ಟು ಆಕೆ ಮದುವೆ ಮಾಡಿಕೊಂಡ' ಎಂದು ತೀವ್ರ ನೋವಿನಲ್ಲಿ ಪೃಥ್ವಿ ಭಟ್ ತಂದೆ ಮಾತನ್ನಾಡಿರುವ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಅಂದಹಾಗೆ, ಸದ್ಯ ಜೀ ಕನ್ನಡ ಸರಿಗಮಪ ಖ್ಯಾತಿಯ  ಪೃಥ್ವಿ ಭಟ್ ಅವರು ಅಭಿಷೇಜ್ ಎಂಬವರ ಜೊತೆ 'ಲವ್ ಮ್ಯಾರೇಜ್' ಮಾಡಿಕೊಂಡು ಮನೆ ಬಿಟ್ಟು  ಹೋಗಿರುವ ಸಂಗತಿ ದೊಡ್ಡ ಸುದ್ದಿಯಾಗುತ್ತಿದೆ. ಮುಂದಿನ ಬೆಳವಣಿಗೆಯನ್ನು ಕಾದು ನೋಡಲಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!
ಬರಿಗೈಯಲ್ಲಿ ಟಾಯ್ಲೆಟ್​ ತೊಳೆದ Bigg Boss ಡಾಗ್​ ಸತೀಶ್​​: ನಿಮ್ಮ ಮನೆಗೂ ಬೇಕಾದ್ರೆ ಬರ್ತಾರಂತೆ!