ಇಷ್ಟವಿಲ್ಲದ ಮದ್ವೆಯಾಗಲು ಒಲ್ಲದೇ ಸಾಯಲು ಹೊರಟ ರಾಮ್​ನನ್ನು ತಡೀತಾಳಾ ಸೀತಾ?

Published : Mar 18, 2024, 03:35 PM IST
ಇಷ್ಟವಿಲ್ಲದ ಮದ್ವೆಯಾಗಲು ಒಲ್ಲದೇ ಸಾಯಲು ಹೊರಟ ರಾಮ್​ನನ್ನು ತಡೀತಾಳಾ ಸೀತಾ?

ಸಾರಾಂಶ

ಇಷ್ಟವಿಲ್ಲದ ಮದುವೆಗೆ ಒಲ್ಲದ ರಾಮ್​  ಸಾಯುವ ನಿರ್ಧಾರಕ್ಕೆ ಬಂದಿದ್ದಾನೆ. ಸೀತಾ ಆತನನ್ನು ತಡೀತಾಳಾ?  

ರಾಮ್​ ತಾನು ಸೀತಾಳನ್ನು ಇಷ್ಟಪಟ್ಟಿರುವ ಸುದ್ದಿಯನ್ನು ತಾತನ ಬಳಿ ಹೇಳಲಿಲ್ಲ. ಇನ್ನು ಚಿಕ್ಕಮ್ಮನೋ ಈ ವಿಷಯವನ್ನು ಹೇಳುವುದೇ ಇಲ್ಲ. ಮಾಜಿ ಪ್ರೇಯಸಿ ಚಾಂದನಿ  ಬಗ್ಗೆ ತಾತನಿಗೆ ಗೊತ್ತಿದ್ದರೂ ಆಕೆಯನ್ನು ರಾಮ್​ ಆಕೆಯನ್ನು ಮರೆತಿದ್ದಾನೆ ಎನ್ನುವುದು ತಿಳಿದಿದೆ. ಇದೇ ಕಾರಣಕ್ಕೆ ಹಿಂದಿನ ಪ್ರೀತಿ ಪ್ರೇಮ ಎಲ್ಲವನ್ನೂ ಮರೆತು ನಾನು ಹೇಳುವ ಹುಡುಗಿಯ ಜೊತೆ ಮದ್ವೆಯಾಗು ಎಂದು ತಾತ ಹೇಳಿದ್ದಾರೆ. ಇದನ್ನು ಕೇಳಿ ರಾಮ್​ಗೆ ಆಕಾಶವೇ ಬಿದ್ದ ಅನುಭವವಾಗಿದೆ. ಹಿಂದಿನ ಪ್ರೇಯಸಿಯನ್ನು ಮರೆತು ಸೀತಾಳ ಜೊತೆ ಬದುಕು ಕಟ್ಟಿಕೊಳ್ಳಲು ಕಾಯುತ್ತಿದ್ದ ರಾಮ್​ಗೆ ತಾತನ ಮುಂದೆ ಏನು ಹೇಳಬೇಕೋ ತಿಳಿದಿರಲಿಲ್ಲ.  ಏಕೆಂದರೆ ಸೀತಾ ಇದುವರೆಗೆ ತನ್ನನ್ನು ಒಪ್ಪಿಕೊಂಡಿರುವ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಮನಸ್ಸಿನಲ್ಲಿಯೇ ರಾಮ್​ನನ್ನು ಪ್ರೀತಿಸುತ್ತಿದ್ದರೂ ಸೀತಾ, ಇದನ್ನು ರಾಮ್​ಗೆ ಹೇಳಿರಲಿಲ್ಲ.

ಇದೀಗ ರಾಮ್​ಗೆ ಮನಸ್ಸು ನೊಂದಿದೆ. ಇಷ್ಟವಿಲ್ಲದೇ ಯಾರನ್ನೋ ಮದ್ವೆಯಾಗುವುದು ಅವನಿಂದ ಆಗುವುದಿಲ್ಲ. ಇದೇ ಕಾರಣಕ್ಕೆ ದೂರವೆಲ್ಲೋ ಹೋಗಿದ್ದಾನೆ. ಒಂದರ್ಥದಲ್ಲಿ ಸಾಯುವ ನಿರ್ಧಾರವನ್ನೇ ಮಾಡಿದ್ದಾನೆ. ಆಫೀಸ್​ಗೆ ಬಂದ ಸೀತಾಳಿಗೆ ರಾಮ್​ನಿಗೆ ಬೇರೆ ಮದ್ವೆ ಮಾಡ್ತಿರೋ ವಿಷಯವನ್ನು ಅಶೋಕ್​ ಹೇಳಿದ್ದಾನೆ. ರಾಮ್​ ಬೇಸರದಿಂದ ಬೆಟ್ಟದ ಕಡೆಗೆ ಹೋದ ವಿಷಯವನ್ನು ಪ್ರಿಯಾ ಹೇಳಿದ್ದಾಳೆ. ಇವೆರಡನ್ನೂ ಕೇಳಿದ ಸೀತಾಳಿಗೆ ಶಾಕ್​ ಆಗಿದೆ. ಕಚೇರಿಯಿಂದ ಓಡಿ ಬೆಟ್ಟದ ಕಡೆಗೆ ಓಡಿದ್ದಾಳೆ. ರಾಮ್​ ರಾಮ್​ ಎಂದು ಕರೆದಿದ್ದಾಳೆ.

ಗಂಡ ಬಿಟ್ಟವಳು ಅಂತಾರಾ? ನೋಡ್ತಿರು ಎನ್ನುತ್ತಲೇ ಮಗಳನ್ನು ಮೆರವಣಿಗೆಯಲ್ಲಿ ಮನೆಗೆ ಕರ್ಕೊಂಡು ಬಂದ ಪುಟ್ಟಕ್ಕ!

ರಾಮ್​ ಕೂಡ ಬಂದು ನೀವು ನನ್ನನ್ನು ಪ್ರೀತಿಸ್ತಿದ್ದೀರಾ ಎಂದು ಕೇಳಿದಾಗ ಕೊನೆಗೂ ಸೀತಾ ರಾಮ್​ನನ್ನು ತಬ್ಬಿಕೊಂಡು ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ. ಇಲ್ಲಿಗೆ ಸೀತಾ ಮತ್ತು ರಾಮ್​ ಒಂದಾಗಿದ್ದಾರೆ. ಆದರೆ ಮುಂದೆ? ಗೊತ್ತಿಲ್ಲ. ಮುಂದಿರುವುದು ಬೆಟ್ಟದಷ್ಟು ಸವಾಲುಗಳು. ಒಂದೆಡೆ ರಾಮ್​ನ ಚಿಕ್ಕಮ್ಮ ಮತ್ತು ಚಾಂದನಿ ಸೇರಿ ಪ್ಲ್ಯಾನ್​ ಮಾಡಿದ್ದಾರೆ. ಚಿಕ್ಕಮ್ಮ ಅಂತೂ ರಾಮ್​ನನ್ನು ಮುಗಿಸುವ ತನಕ ಹೋಗಿದ್ದಾಳೆ. ತಾತನಿಗೆ ಸೀತಾಳ ಮೇಲೆ ಇಷ್ಟವಿದ್ದರೂ ಆಕೆ ಒಂದು ಮಗುವಿನ ತಾಯಿ ಎನ್ನುವ ಸತ್ಯ ಗೊತ್ತಿಲ್ಲ. ಅದು ಗೊತ್ತಾದರೆ ಮದುವೆಗೆ ಒಪ್ಪುವುದು ಕಷ್ಟವೇ. ಪರಿಸ್ಥಿತಿ ಹೀಗೆಲ್ಲಾ ಇರುವಾಗ ಮುಂದೇನು ಎಂದು ಪ್ರಶ್ನೆ ಕಾಡುವುದು ಸಹಜ. 

ಒಟ್ಟಿನಲ್ಲಿ ಸೀರಿಯಲ್​ ಕುತೂಹಲವನ್ನು ಕೆರಳಿಸುವಂತಿದೆ. ಅದೇ ಇನ್ನೊಂದೆಡೆ, ಸೀತಾ ದೂರವಾದಾಗ ರಾಮ್​ನ ಅಮ್ಮನ ನೆನಪು ಕಾಡಿದೆ. ತನ್ನ ಅಮ್ಮ ಹೇಗೆ ಸತ್ತಳು ಎಂಬ ಬಗ್ಗೆ ಇದುವರೆಗೆ ಯಾರೂ ಬಾಯಿಬಿಡದ ಬಗ್ಗೆ ಇದೀಗ ರಾಮ್​ಗೆ ಸಂದೇಹ ಶುರುವಾಗಿದೆ. ನೇರವಾಗಿಯೇ ಚಿಕ್ಕಮ್ಮನ ಬಳಿ ಈ ವಿಷಯ ಕೇಳಿದಾಗ, ಆಕೆಗೆ ಶಾಕ್​  ಆಗಿದೆ. ಚಿಕ್ಕಮ್ಮನೇ ರಾಮ್​ ಅಮ್ಮನನ್ನು ಕೊಲೆ ಮಾಡಿಸಿದ್ದು ಎಂದು ಕುಡಿದ ಅಮಲಿನಲ್ಲಿ ಇರುವ ಮಾವ ಸತ್ಯ ಹೇಳಿದ್ದಾನೆ. ಆದರೆ ಅದನ್ನು ನಂಬುವ ಸ್ಥಿತಿಯಲ್ಲಿ ರಾಮ್​  ಇಲ್ಲ. ಇದನ್ನು ಕೇಳಿ ಚಿಕ್ಕಮ್ಮನಿಗೂ ಶಾಕ್​ ಆಗಿದ್ದರೂ, ರಾಮ್​ಗೆ ಇದೆಲ್ಲಾ ಸುಳ್ಳು ಎಂದು ಮನವರಿಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಈ ನಿಜ ಯಾವಾಗ ಗೊತ್ತಾಗುವುದು ಎಂಬುದೂ ಈಗಿರುವ ಕುತೂಹಲ. 

ಪ್ರೇಯಸಿ ಜೊತೆ ನಿಶ್ಚಿತಾರ್ಥ, ಪತ್ನಿ ಜೊತೆ ಮತ್ತೆ ಮದ್ವೆ.. ನಂದೂ ಒಂದ್​ ಜನ್ಮನಾ ಅಂತನೇ ಭಾಗ್ಯಳ ಹೊಗಳಿಬಿಟ್ಟ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮೈಚಳಿ ಬಿಟ್ಟು ನೀರಿನಲ್ಲಿ Bigg Boss ಐಶ್ವರ್ಯ ಸಿಂಧೋಗಿ- ಶಿಶಿರ್‌ ಶಾಸ್ತ್ರಿ ರೊಮಾನ್ಸ್​: ವಿಡಿಯೋ ವೈರಲ್​
Annayya Serial ಜಿಮ್​ ಸೀನನಿಂದ ಹಲ್ಲೆ: ಮಗನ ವಿರುದ್ಧ ಅಪ್ಪನ ದೂರು- ಪೊಲೀಸರಿಂದ ಅರೆಸ್ಟ್​