ಪ್ರೇಯಸಿ ಜೊತೆ ನಿಶ್ಚಿತಾರ್ಥ, ಪತ್ನಿ ಜೊತೆ ಮತ್ತೆ ಮದ್ವೆ.. ನಂದೂ ಒಂದ್​ ಜನ್ಮನಾ ಅಂತನೇ ಭಾಗ್ಯಳ ಹೊಗಳಿಬಿಟ್ಟ!

Published : Mar 18, 2024, 02:35 PM IST
ಪ್ರೇಯಸಿ ಜೊತೆ ನಿಶ್ಚಿತಾರ್ಥ, ಪತ್ನಿ ಜೊತೆ ಮತ್ತೆ ಮದ್ವೆ.. ನಂದೂ ಒಂದ್​ ಜನ್ಮನಾ ಅಂತನೇ ಭಾಗ್ಯಳ ಹೊಗಳಿಬಿಟ್ಟ!

ಸಾರಾಂಶ

ತಾಂಡವ್​ ಮತ್ತು ಭಾಗ್ಯಳ ಮದುವೆ ವಾರ್ಷಿಕೋತ್ಸವ ಭರ್ಜರಿಯಾಗಿ ನಡೆಯುತ್ತಿದೆ. ಮನದಲ್ಲಿಯೇ ಗೊಣಗುತ್ತಲೇ ಕಷ್ಟಪಟ್ಟು ಪತ್ನಿಯನ್ನು ಹೊಗಳಿದ್ದಾನೆ ತಾಂಡವ್​.  

ತಾಂಡವ್​-ಭಾಗ್ಯಳ ಮದ್ವೆ ವಾರ್ಷಿಕೋತ್ಸವ ಭರ್ಜರಿಯಾಗಿ ನಡೆಯುತ್ತಿದೆ. 16ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇಬ್ಬರನ್ನೂ ಒಟ್ಟಿಗೇ ಕುಳ್ಳರಿಸಿ ಮರುಮದ್ವೆ ಮಾಡಿಸುತ್ತಿದ್ದಾಳೆ ಕುಸುಮಾ. ತಾಂಡವ್​ ಮತ್ತು ಭಾಗ್ಯ ಮದುಮಕ್ಕಳಾಗಿ ಮಿಂಚುತ್ತಿದ್ದಾರೆ. ಭಾಗ್ಯ ಅಂತೂ ಅತಿ ಸುಂದರವಾಗಿ ಕಾಣಿಸುತ್ತಿದ್ದಾಳೆ. ಪತ್ನಿಯ ಸೌಂದರ್ಯ ನೋಡಿ ಅರೆಕ್ಷಣ ವಿಚಲಿತನಾದರೂ ತಾಂಡವ್​ಗೆ ಅಹಂ ಬಿಡಬೇಕಲ್ಲ, ಅತ್ತ ಪ್ರೇಯಸಿಯ ಒಲವು ಬಿಡಬೇಕಲ್ಲ. ಎಲ್ಲರೂ ಭಾಗ್ಯಳನ್ನು ಹೊಗಳುತ್ತಿದ್ದಾರೆ. ಮದುವೆಯ ದಿನವೂ ನೀನು ಇಷ್ಟು ಸುಂದರವಾಗಿ ಕಾಣಿಸುತ್ತಿರಲಿಲ್ಲ ಎಂದು ಅತ್ತೆ ಕುಸುಮಾನೂ ಹೊಗಳುತ್ತಿದ್ದಾಳೆ. ಎಲ್ಲರೂ ಭಾಗ್ಯಳನ್ನು ಹೊಗಳುವುದನ್ನು ಕೇಳಿ ತಾಂಡವ್​ಗೆ ಇನ್ನಿಲ್ಲದ ಉರಿ. ಆದರೆ ಮನೆಯವರ ಎದುರು ನಗುಮುಖ ಮಾಡದೇ ವಿಧಿಯಿಲ್ಲ.

ಇದರ ನಡುವೆಯೇ ಗುಂಡ, ಎಲ್ಲರೂ ಅಮ್ಮನನ್ನು ಹೊಗಳಿದರು ನೀನು ಮಾತ್ರ ಏನೂ ಹೇಳಲೇ ಇಲ್ಲ ಎನ್ನುತ್ತಾನೆ. ಡಿವೋರ್ಸ್​ ಕೊಟ್ಟು ನೆಮ್ಮದಿಯಾಗಿ ಬದುಕೋಣ ಎಂದುಕೊಂಡರೆ ಇವಳ ಮೂತಿನೇ ಮತ್ತೆ ಮತ್ತೆ ನೋಡಬೇಕಲ್ಲ, ಇವಳ ಜೊತೆ ಮತ್ತೆ ಮದ್ವೆ ಎಂದು ಮನಸ್ಸಿನಲ್ಲಿಯೇ ಗೊಣಗುತ್ತಿರುವ ತಾಂಡವ್​ಗೆ ಮಗನ ಮಾತಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಕಷ್ಟಪಟ್ಟು ಅಮ್ಮ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾಳೆ ಎಂದು ಹೊಗಳುತ್ತಾನೆ.

ಹತ್ತಾರು ಜಿರಲೆ ಇರೋ ಕೋಣೆಯಲ್ಲಿ ಕೂಡಿಹಾಕಿದ್ರೆ ನಾನು ಸತ್ತೇ ಹೋಗ್ತೇನೆ! ಸೋನು ನಿಗಮ್​ ಮಾತಲ್ಲೇ ಕೇಳಿ...

ಭಾಗ್ಯಲಕ್ಷ್ಮಿ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಎಲ್ಲರೂ ಭಾಗ್ಯ ಮತ್ತು ತಾಂಡವ್​ ಜೋಡಿಗೆ ದೃಷ್ಟಿ ಬೀಳದಿರಲಪ್ಪ ಎನ್ನುತ್ತಿದ್ದಾರೆ. ಇದಾಗಲೇ ಎಲ್ಲರೂ ಖುಷಿಯಿಂದ ಇರುವಾಗಲೇ  ಶ್ರೇಷ್ಠಾಳ ಎಂಟ್ರಿಯಾಗಿತ್ತು.  ತೋರಣ ನೋಡಿ ಉರಿದುಕೊಂಡಿದ್ದ ಶ್ರೇಷ್ಠಾ, ಹೂವಿನ ತೋರಣವನ್ನು ಕಿತ್ತು ಹಾಕಿದ್ದಳು. ಇದನ್ನು ಆರಂಭದಲ್ಲಿ ನೋಡಿದ ಭಾಗ್ಯಳ ಅಮ್ಮ ಸುನಂದಾಗೆ ಶಾಕ್​ ಆಗಿತ್ತು. ಶ್ರೇಷ್ಠಾ ಮತ್ತು ತಾಂಡವ್​ ಮದುವೆಯಾಗಲಿದ್ದಾರೆ ಎನ್ನುವ ಸತ್ಯ ತಿಳಿಯದಿದ್ದರೂ ಇಬ್ಬರ ನಡುವೆ ಏನೋ ಆಗುತ್ತಿದೆ, ಶ್ರೇಷ್ಠಾಳಿಂದ ತನ್ನ ಮಗಳ ಬದುಕು ಹಾಳಾಗುತ್ತಿದೆ ಎನ್ನುವ ಸತ್ಯ ಅವಳಿಗೆ ಗೊತ್ತು. ಇದೇ ಕಾರಣಕ್ಕೆ,  ಕೋಪದಿಂದ ಅವಳು ಶ್ರೇಷ್ಠಾಳಿಗೆ ಬೈದಿದ್ದಳು. 

ಅಷ್ಟರಲ್ಲಿಯೇ ಕುಸುಮಾ ಎಂಟ್ರಿ ಕೊಟ್ಟಿದ್ದಳು.  ಅವಳಿಗೆ ಶ್ರೇಷ್ಠಾಳ ಕಂತ್ರಿ ಬುದ್ಧಿ ಗೊತ್ತು. ಅದೇ ಕಾರಣಕ್ಕೆ, ಒಂದು ಕೈಯಲ್ಲಿ ಹೂವಿನ ಬುಟ್ಟಿ ಇನ್ನೊಂದರಲ್ಲಿ ಮಾವಿನ ಎಲೆ ತಂದಿದ್ದಳು. ಅದನ್ನು ಶ್ರೇಷ್ಠಾಳಿಗೆ ತೋರಿಸುತ್ತಾ,  ಏನ್ ನೋಡ್ತಾ ಇದ್ದೀಯಾ? ನೀನು ಒಳಗಡೆ ಬರುವ ಹಾಗೆ ಇಲ್ಲ. ನನ್ನ ಕೈಯಲ್ಲಿ ಇದೆಯಲ್ಲ ಈ ಹೂವುಗಳಿಂದ ಹಾರ ಮಾಡಬೇಕು, ಇನ್ನೊಂದು ಕೈಯಲ್ಲಿ ಇರುವ  ಮಾವಿನ ಎಲೆಗಳಿಂದ ತೋರಣ ಮಾಡಬೇಕು.  ಇಷ್ಟೆಲ್ಲ ಕೆಲಸವನ್ನು ಚಪ್ಪಲಿ ತೆಗೆದೇ ಮಾಡಬೇಕು. ಇಷ್ಟು ಮಾಡಿ ಆದ ಮೇಲೆ ಒಳಗೆ ಬರಬೇಕು. ಇಲ್ಲದಿದ್ದರೆ ಇಲ್ಲ ಎಂದಿದ್ದಳು. ಇದನ್ನು ಸಹಿಸದೇ ಶ್ರೇಷ್ಠಾ ವಾಪಸ್​ ಹೋಗಿದ್ದಾಳೆ. ಇವೆಲ್ಲಾ ತಾಂಡವ್​ಗೆ ಗೊತ್ತಿಲ್ಲ. ಇಷ್ಟವಿಲ್ಲದ ಮದ್ವೆಯಲ್ಲಿ ತೊಡಗಿದ್ದಾನೆ. 

ಗಂಡ ಬಿಟ್ಟವಳು ಅಂತಾರಾ? ನೋಡ್ತಿರು ಎನ್ನುತ್ತಲೇ ಮಗಳನ್ನು ಮೆರವಣಿಗೆಯಲ್ಲಿ ಮನೆಗೆ ಕರ್ಕೊಂಡು ಬಂದ ಪುಟ್ಟಕ್ಕ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಚೈತ್ರಾ ಕುಂದಾಪುರ, ಸ್ಪಂದನಾ ಸೋಮಣ್ಣ ನಡುವೆ ತಂದಿಟ್ಟು ನಕ್ಕ ವಿಲನ್‌ Bigg Boss; ಯಾಕ್ರೀ ಹೀಗ್‌ ಮಾಡ್ತೀರಾ?
BBK 12: ಗಿಲ್ಲಿ ನಟನ ಜೊತೆ ಅಮಾನವೀಯವಾಗಿ ನಡ್ಕೊಂಡ ರಘು; ಪ್ರತ್ಯಕ್ಷಸಾಕ್ಷಿ ಅಭಿಷೇಕ್‌ ಶ್ರೀಕಾಂತ್‌ ಏನಂದ್ರು?