ಅತ್ತೆ ಮನೆಯಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದ ಸಹನಾಳನ್ನು ರಾಜಾರೋಷವಾಗಿ ಮೆರವಣಿಗೆ ಮೂಲಕ ತವರಿಗೆ ಕರೆದುಕೊಂಡು ಬಂದಿದ್ದಾಳೆ ಪುಟ್ಟಕ್ಕ. ನೆಟ್ಟಿಗರು ಏನೆಂದ್ರು ನೋಡಿ...
ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎನ್ನುವ ಮಾತು ತಲೆತಲಾಂತರಗಳಿಂದ ಬಂದಿದೆ. ಗಂಡನ ಮನೆಯಲ್ಲಿ ಏನೇ ಬಂದರೂ ಅದನ್ನು ಸಹಿಸಿಕೊಂಡು ಹೋಗು ಎನ್ನುವ ಮಾತನ್ನು ಪ್ರತಿಹೆಜ್ಜೆಗೂ ಪಾಲನೆ ಮಾಡಿಕೊಂಡು ಹೋದ ಹೆಣ್ಣುಮಕ್ಕಳು ಎಷ್ಟೋ ಮಂದಿ ಹೆಣವಾಗಿದ್ದಾರೆ. ಗಂಡನ ಮನೆಯಲ್ಲಿ ನಡೆಯುವ ದೌರ್ಜನ್ಯಗಳನ್ನು ಹೇಳಿಕೊಂಡು ಹೆಣ್ಣು ತವರಿಗೆ ಬಂದಾಗ, ಆಕೆ ಚಿತ್ರಹಿಂಸೆ ಅನುಭವಿಸುತ್ತಿದ್ದರೂ ಗಂಡನೇ ಸರ್ವಸ್ವ, ಗಂಡನ ಮನೆಯೇ ಸರ್ವಸ್ವ ಎಂದೆಲ್ಲಾ ಹೇಳಿ ಆಕೆಯನ್ನು ಖುದ್ದು ಪಾಲಕರೇ ಸಾವಿನ ಬಾಯಿಗೆ ತಳ್ಳಿರುವ ಘಟನೆಗಳೂ ಅಲ್ಲಲ್ಲಿ ಇಂದಿಗೂ ಕೇಳಿಬರುತ್ತಿವೆ. ಗಂಡನ ಮನೆಯಲ್ಲಿ ಹೆಣ್ಣು ಹೊಂದಿಕೊಂಡು ಹೋಗಬೇಕಾಗಿರುವುದು ದಿಟವೇ. ಹಾಗೆಂದು ಅಲ್ಲಿ ದಿನನಿತ್ಯವೂ ದೌರ್ಜನ್ಯ ಸಹಿಸಿಕೊಂಡು ಹೋಗು ಎಂದರೆ ಅದು ಸಾಧ್ಯವಿಲ್ಲದ ಮಾತು. ಆದರೆ ತವರಿಗೆ ವಾಪಸಾದರೆ ಗತಿ?
ಹೌದು. ಗಂಡನ ಮನೆ ಬಿಟ್ಟು ಬಂದ ಹೆಣ್ಣಿಗೆ ತವರಿನಲ್ಲಿ ಬಾಳುವ ಹಕ್ಕಿಲ್ಲ ಎನ್ನುವುದು ಇಂದು-ನಿನ್ನೆಯದ್ದಲ್ಲ, ತಲೆತಲಾಂತರಗಳಿಂದಲೂ ಬಂದಿರುವ ಮಾತೇ. ಏಕೆಂದರೆ ತವರಿಗೆ ವಾಪಸಾದ ಮಗಳಿಗೆ ಮನೆಯಲ್ಲಿ ಇದ್ದವರು ಪ್ರೀತಿ ಮಾಡಿದರೂ, ಅಕ್ಕ-ಪಕ್ಕದ ಮನೆಯವರು ಆಡುವ ಚುಚ್ಚು ಮಾತುಗಳು ಅಷ್ಟಿಷ್ಟಲ್ಲ. ಗಂಡನ ಮನೆಯಲ್ಲಿ ಹೆಣ್ಣು ಪ್ರಾಣ ತೆತ್ತರೂ ಪರವಾಗಿಲ್ಲ, ತವರಿಗೆ ವಾಪಸಾಗಬಾರದು ಎಂದೇ ಹೇಳಲಾಗುತ್ತದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಗಂಡಿನ ಮನೆಯವರೂ ಚಿತ್ರಹಿಂಸೆ ಕೊಡುವುದೂ ಇದೆ. ಆದರೆ ಪುಟ್ಟಕ್ಕನ ಮಕ್ಕಳು ಇವರೆಲ್ಲರಿಗೂ ತಕ್ಕ ಉತ್ತರ ಕೊಟ್ಟಿದೆ.
undefined
ಅಂಕಲ್ನ ಮದ್ವೆಯಾಗಲು ಇಷ್ಟೆಲ್ಲಾ ಕಷ್ಟ ಯಾಕ್ ಚಿನ್ನಾ, ನಾನು ಮದ್ವೆಯಾಗ್ತೀನಿ ಬಾ ಎನ್ನೋದಾ ಫ್ಯಾನ್ಸ್!
ಹೆಣ್ಣನ್ನು ಸಹನಾಶೀಲಳು ಎನ್ನುತ್ತಾರೆ, ಆದರೆ ಸಮಯ ಬಂದಾಗ ಕಾಳಿ, ದುರ್ಗೆ ಎಲ್ಲವೂ ಆಗುತ್ತಾಳೆ ಎನ್ನುವ ಮಾತೂ ಇದೆ. ಇದೀಗ ಪುಟ್ಟಕ್ಕನ ಮಕ್ಕಳು ಸೀರಿಯಲ್ ಪುಟ್ಟಕ್ಕ ಕೂಡ ಕಾಳಿ ಅವತಾರ ತಾಳಿದ್ದಾಳೆ. ಎಲ್ಲ ಕಷ್ಟಗಳನ್ನೂ ನುಂಗಿಕೊಂಡು, ಸಹನೆಗೆ ಇನ್ನೊಂದು ಪ್ರತಿರೂಪವೇ ಎಂದುಕೊಂಡಿರೋ ಪುಟ್ಟಕ್ಕ ಇದೀಗ ಈ ಅವತಾರ ತಾಳಲು ಕಾರಣವೂ ಇದೆ. ಹಿರಿ ಮಗಳು ಸಹನಾಳ ಗಂಡನ ಮನೆಯಲ್ಲಿ ಆಕೆ ಅನುಭವಿಸುತ್ತಿರುವ ಚಿತ್ರಹಿಂಸೆ ಪುಟ್ಟಕ್ಕನ ತಾಳ್ಮೆಗೆಡಿಸಿದೆ. ಅದೆಷ್ಟೋ ಬಾರಿ ಮಕ್ಕಳು ಗಂಡನ ಮನೆಯವರ ಬಗ್ಗೆ ಹೇಳಿದರೂ ಮಕ್ಕಳಿಗೆ ಬುದ್ಧಿ ಹೇಳಿ ಕಳುಹಿಸಿದವಳು ಈ ಪುಟ್ಟಕ್ಕ. ಹಿರಿ ಮಗಳು ಸಹನಾ ಪತಿಯ ಮೇಲೆ ಡೌಟ್ ಪಟ್ಟಾಗಲೂ ಆಕೆಗೆ ತಿದ್ದಿ ಬುದ್ಧಿ ಹೇಳಿ ಕಳುಹಿಸಿದವಳು ಈಕೆ. ಆದರೆ ಮಗಳಿಗೇ ವಿಷ ಹಾಕುವ ಮಟ್ಟಿಗೆ ಅತ್ತೆ ಮನೆಯವರು ಬೆಳೆದು ನಿಂತಿದ್ದಾರೆ ಎಂದರೆ ಸುಮ್ಮನೇ ಇರುತ್ತಾಳೆಯೆ? ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾಳೆ.
ಆಗ ಸಹನಾಳ ಅತ್ತೆ ಹೋಗಿ ಕರ್ಕೊಂಡು ಹೋಗಿ ನೋಡೋಣ. ಗಂಡ ಬಿಟ್ಟವಳು ಎನ್ನುತ್ತಾರೆ. ಆಗ ನಿಮಗೆ ಗೊತ್ತಾಗತ್ತೆ ಎನ್ನುತ್ತಾಳೆ. ಆಗ ಪುಟ್ಟಕ್ಕ ಹಾಗೂ ಗಂಡ, ಹೌದಾ ನೋಡೇ ಬಿಡೋಣ. ಮಗಳನ್ನು ಮೆರವಣಿಗೆ ಮೂಲಕ ಕರ್ಕೊಂಡು ಹೋಗ್ತೇವೆ. ಯಾರು ಏನು ಅಂತಾರೆ ನೋಡೇ ಬಿಡೋಣ ಎಂದು ಚಾಲೆಂಜ್ ಹಾಕಿ ಮೆರವಣಿಗೆ ಮೂಲಕ ಮಗಳನ್ನು ಕರೆದುಕೊಂಡು ಬರುತ್ತಾಳೆ. ಸ್ನೇಹಾ ಆರತಿ ಮಾಡಿ ಅಕ್ಕನನ್ನು ಬರಮಾಡಿಕೊಳ್ಳುತ್ತಾರೆ. ಇದರ ಪ್ರೊಮೋಗೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ಪುಟ್ಟಕ್ಕ ಎಲ್ಲರಿಗೂ ಮಾದರಿ ಎನ್ನುತ್ತಿದ್ದಾರೆ. ಇಂಥ ತಾಯಿ ಇದ್ದರೆ ಯಾವ ಮಗಳಿಗೂ ತೊಂದರೆ ಬರುವುದಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.
ಯಶ್ ಚಿತ್ರದಲ್ಲಿ ಕರೀನಾ ಕಪೂರ್ ನಟಿಸ್ತಿರೋದು ನಿಜನಾ? ಕೊನೆಗೂ ನಟಿಯಿಂದ ಬಂದಿದೆ ಈ ಉತ್ತರ...