ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದ ʼಅಣ್ಣಯ್ಯ ಧಾರಾವಾಹಿʼ ಜಿಮ್‌ ಸೀನ ತಾಯಿ ವಿದ್ಯಾರ್ಹತೆ ಏನು?

ʼಅಣ್ಣಯ್ಯʼ ಧಾರಾವಾಹಿಯಲ್ಲಿ ಜಿಮ್‌ ಸೀನ ತಾಯಿ ಪಾತ್ರಧಾರಿ ಶ್ರುತಿ ಕುಶಾಲ್‌  ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯ ಇಲ್ಲಿದೆ! 

unknown facts about zee kannada annayya kannada serial actress shruthi kushal

ʼಅಣ್ಣಯ್ಯʼ ಧಾರಾವಾಹಿಯಲ್ಲಿ ಜಿಮ್‌ ಸೀನ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರುತಿ ಕುಶಾಲ್‌ ಅವರು ವೆಸ್ಟರ್ನ್‌ ಡ್ಯಾನ್ಸ್‌ ಮಾಡ್ತಿರುವ ವಿಡಿಯೋ ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಆಗಲೇ ಅನೇಕರಿಗೆ ಶ್ರುತಿ ಕುಶಾಲ್‌ ಅವರು ವಯಸ್ಸಿಗೆ ಮೀರಿದ ಪಾತ್ರ ಮಾಡುತ್ತಿದ್ದರು ಎಂದು ಅರಿವಾಗಿತ್ತು. 

ಕಂಪೆನಿಗಳಲ್ಲಿ ಕೆಲಸ ಮಾಡಿದ್ದರು! 
ಶ್ರುತಿ ಕುಶಾಲ್‌ ಅವರು ನಟನೆ ಆರಂಭಿಸೋದಕ್ಕೂ ಮುನ್ನ Industrial Engineer ಆಗಿ ಅವರು ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. Wipro Technologies,  Festo Controls Pvt Ltd ಅಲ್ಲಿಯೂ ಕೆಲಸ ಮಾಡಿದ್ದರು.

Latest Videos

ಅಣ್ಣಯ್ಯ ಧಾರಾವಾಹಿ: ಈ ಕಾರಣಕ್ಕೆ ಗುಂಡಮ್ಮಗೆ ಈ ವಾರದ ಕಿಚ್ಚನ ಚಪ್ಪಾಳೆ ಕೊಡ್ಲೇಬೇಕು ಎಂದ ವೀಕ್ಷಕರು!

ರಂಗಶಂಕರ ಸೇರಿಕೊಂಡರು
ಮದುವೆಯಾದ ಬಳಿಕವೇ ಶ್ರುತಿ ಕುಶಾಲ್‌ ಅವರು ರಂಗಶಂಕರ ಸೇರಿಕೊಂಡರು. ಅಲ್ಲಿ ಅವರು ನಟನೆ ಕಲಿತರು. ʼರಾಧಾ ನಿವಾಸʼ ನಾಟಕದಲ್ಲಿ ಮೊದಲು ನಟಿಸಿ, ಅಲ್ಲಿಂದ ಅವರು ಮುಕ್ತವಾಗಿ ಮಾತನಾಡೋದನ್ನು ಕಲಿತರು. ಹೀಗೆ ಕಿರುಚಿತ್ರಗಳಲ್ಲಿ ನಟಿಸಿ, ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಪಡೆದರು. 

ಧಾರಾವಾಹಿಗಳಲ್ಲಿ ನಟನೆ! 
ʼನಾಗಕನ್ನಿಕೆ, ʼಮುದ್ದುಲಕ್ಷ್ಮೀʼ, ʼಯುಗಾಂತರʼ, ʼಪುಣ್ಯವತಿʼ ಧಾರಾವಾಹಿಗಳಲ್ಲಿ ಶ್ರುತಿ ಕುಶಾಲ್‌ ಅವರು ನಟಿಸಿದ್ದರು. 

ʼರಿಯಲ್‌ ಆಗಿ ನಂಗೆ ಬ್ರೇಕಪ್‌ ಆಗಿದೆʼ-ಅಣ್ಣಯ್ಯ ಧಾರಾವಾಹಿ ವಿಕಾಶ್‌ ಉತ್ಯಯ್ಯ

ʼಪುಣ್ಯವತಿʼ ನಂತರ ಏಳೆಂಟು ತಿಂಗಳು ಕೆಲಸ ಇರಲಿಲ್ಲ
“ಒಂದೇ ಧಾರಾವಾಹಿಗೆ ಮೂರು ಸಲ ಲುಕ್‌ಟೆಸ್ಟ್‌ ಅಂತ ಕರೆದರು, ಬೇರೆ ಊರಿನಲ್ಲಿ ಶೂಟಿಂಗ್‌ ಇರತ್ತೆ ಅಂತ ಹೇಳಿದರು. ಆಮೇಲೆ ಕರೆಯಲ್ಲ. ಆಮೇಲೆ ಆಗೋದೆಲ್ಲ ಒಳ್ಳೆಯದಕ್ಕೆ ಅಂತ ನಾನು ಯಾವಾಗಲೂ ಭಾವಿಸಿದೆ. ಅದೇ ಟೈಮ್‌ಗೆ ಅಣ್ಣಯ್ಯ ಧಾರಾವಾಹಿ ಲುಕ್‌ಟೆಸ್ಟ್‌ಗೆ ಕರೆದರೂ ಕೂಡ, ನಾನು ತಾಯಿ ಪಾತ್ರಕ್ಕೆ ಯಂಗ್‌ ಆಗಿ ಕಾಣ್ತೀನಿ ಅಂತ ಕಾರಣ ನೀಡಿ ರಿಜೆಕ್ಟ್‌ ಮಾಡಿದ್ದರು. ಅದಾಗಿ ನಾಲ್ಕು ತಿಂಗಳುಗಳ ಬಳಿಕ ಮತ್ತೆ ಆಯ್ಕೆ ಮಾಡಿದ್ದರು, ಆ ಟೈಮ್‌ನಲ್ಲಿ ನಾನು ಇಂಟರ್‌ನ್ಯಾಶನಲ್‌ ಟೂರ್‌ಗೆ ಹೋಗಿದ್ದೆ, ಅದಾದ ಮೇಲೆ ಮತ್ತೆ ಅಲ್ಲಿಂದ ಅವಕಾಶ ಬಂತು, ನಮಗೆ ಏನು ಬೇಕೋ ಅದೇ ಸಿಗೋದು ಅಂತ ಇದಕ್ಕೆ ಹೇಳೋದು” ಎಂದಿದ್ದಾರೆ ಶ್ರುತಿ ಕುಶಾಲ್.‌

“ಕೆಲಸ ಇದ್ದರೆ ಸಿಕ್ಕಾಪಟ್ಟೆ ಕೆಲಸ ಇರುತ್ತದೆ, ಕೆಲಸ ಇಲ್ಲ ಅಂದ್ರೆ ಏನೂ ಇರೋದಿಲ್ಲ. ಇದಕ್ಕೆ ನಾವು ಅಡ್ಜಸ್ಟ್‌ ಆಗಬೇಕು. ರಂಗಭೂಮಿಗೂ, ಧಾರಾವಾಹಿ ನಟನೆಗೂ ತುಂಬ ವ್ಯತ್ಯಾಸ ಇದೆ, ಆರಂಭದಲ್ಲಿ ಧಾರಾವಾಹಿಯಲ್ಲಿ ನಟಿಸೋದು ಕಷ್ಟ ಆಗುತ್ತಿತ್ತು” ಎಂದು ನಟಿ ಶ್ರುತಿ ಕುಶಾಲ್‌ ಹೇಳಿದ್ದಾರೆ.

vuukle one pixel image
click me!