Lakshmi Nivasa Serial: ಶ್ರೀಲಂಕಾದಲ್ಲಿ ಅತ್ತ ಭಾವನಾ-ಸಿದ್ದು ಹನಿಮೂನ್;‌ ಜಯಂತ್‌ನನ್ನು ಸಾಯಿಸಲು ಮುಂದಾದ ಜಾನು!

Published : Mar 22, 2025, 08:22 PM ISTUpdated : Mar 22, 2025, 09:22 PM IST
Lakshmi Nivasa Serial: ಶ್ರೀಲಂಕಾದಲ್ಲಿ ಅತ್ತ ಭಾವನಾ-ಸಿದ್ದು ಹನಿಮೂನ್;‌ ಜಯಂತ್‌ನನ್ನು ಸಾಯಿಸಲು ಮುಂದಾದ ಜಾನು!

ಸಾರಾಂಶ

ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಶ್ರೀಲಂಕಾಕ್ಕೆ ಭಾವನಾಗೆ ಸಿದ್ದೇಗೌಡ್ರು ಪ್ರೇಮ ನಿವೇದನೆ ಮಾಡಿದ್ದಾನೆ. ಇನ್ನೊಂದು ಕಡೆ ಜಯಂತ್‌ನನ್ನು ಕೊಲ್ಲಲು ಜಾನು ರೆಡಿ ಆಗಿದ್ದಾಳೆ. 

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸಿದ್ದೇಗೌಡ್ರು-ಭಾವನಾ ಹನಿಮೂನ್‌ಗೆಂದು ಶ್ರೀಲಂಕಾಕ್ಕೆ ಹೋಗಿದ್ದಾರೆ. ಇನ್ನು ಜಾಹ್ನವಿ-ಜಯಂತ್‌ ಕೂಡ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಅಲ್ಲಿ ಭಾವನಾ-ಸಿದ್ದೇಗೌಡ್ರು ಹನಿಮೂನ್‌ ಆಚರಿಸಿಕೊಂಡರೆ, ಜಯಂತ್‌ನನ್ನು ಜಾಹ್ನವಿ ಕೊಲ್ಲಲು ಮುಂದಾಗಿದ್ದಾಳೆ.

ಸಿದ್ದು ಮೇಲೆ ಸಿಟ್ಟಾಗಿದ್ದ ಭಾವನಾ
ಭಾವನಾ, ಸಿದ್ದೇಗೌಡ್ರು ನಡುವೆ ಎಲ್ಲ ಸಮಸ್ಯೆ ಬಗೆಹರಿದಿದೆ. ನನಗೆ ಗೊತ್ತಿಲ್ಲದೆ, ನನ್ನ ಅನುಮತಿ ಇಲ್ಲದೆ ಸಿದ್ದೇಗೌಡ್ರು ತಾಳಿ ಕಟ್ಟಿದ್ದಾರೆ ಅಂತ ಭಾವನಾ ಸಿಟ್ಟುಮಾಡಿಕೊಂಡಿದ್ದಳು. ಇನ್ನು ಭಾವನಾಳನ್ನು ಸೊಸೆ ಅಂತ ಸಿದ್ದು ಮನೆಯವರು ಒಪ್ಪಿಕೊಂಡಿರಲಿಲ್ಲ. ಈಗ ಭಾವನಾ ನನ್ನ ಸೊಸೆ ಅಂತ ಸಿದ್ದು ತಂದೆ, ಅಣ್ಣ ಮಾತ್ರ ಒಪ್ಪಿಕೊಂಡಿದ್ದಾರೆ. 

Kannada Tv Serial TRP: 'ಅಣ್ಣಯ್ಯ', 'ಲಕ್ಷ್ಮೀ ನಿವಾಸ' ಬದಿಗೊತ್ತಿ NO 1 ಸ್ಥಾನ ಪಡೆದ ಹೊಸ ಸೀರಿಯಲ್‌ ಯಾವುದು?

ಪ್ರೇಮ ನಿವೇದನೆ ಮಾಡಿದ ಸಿದ್ದು! 
ಸಿದ್ದು ಸಂಸಾರ ಮಾಡಬೇಕು, ಮನೆಗೆ ಮಗು ಬರಬೇಕು ಅಂತ ಇವರಿಬ್ಬರನ್ನು ಶ್ರೀಲಂಕಾಕ್ಕೆ ಕಳಿಸಲಾಗಿದೆ. ಅಲ್ಲಿ ಇವರಿಬ್ಬರು ಮುನಿಸಿ ಮರೆತು ಒಂದಾಗಿದ್ದಾರೆ. ನನಗೆ ನೀವೇ ತಾಳಿ ಹಾಕಿ ಅಂತ ಭಾವನಾ ಸಿದ್ದುಗೆ ಹೇಳಿದ್ದಳು. ಅದರಂತೆ ಮತ್ತೆ ಸಿದ್ದು ತನ್ನ ಹೆಂಡ್ತಿಗೆ ಮತ್ತೊಮ್ಮೆ ಮಾಂಗಲ್ಯಧಾರಣೆ ಮಾಡಿದ್ದಾನೆ. ಇನ್ನು ಈ ಜೋಡಿ ಡ್ಯುಯೆಟ್‌ ಹಾಡಿದೆ. ಭಾವನಾಗೆ ಸಿದ್ದು ಪ್ರೇಮ ನಿವೇದನೆ ಕೂಡ ಮಾಡಿದ್ದಾರೆ. 

ಜಯಂತ್‌ ಕೊಲ್ಲಲು ರೆಡಿಯಾದ ಚಿನ್ನಿ! 
ಜಯಂತ್‌ ತುಂಬ ಪೊಸೆಸ್ಸಿವ್.‌ ನನ್ನನ್ನು ಅತಿಯಾಗಿ ಪ್ರೀತಿಸಿ ಕಟ್ಟಿಹಾಕಿದ್ದಾನೆ ಅಂತ ಅವಳಿಗೆ ಅರ್ಥ ಆಗಿದೆ. ನಾನು ಯಾರ ಜೊತೆಯೂ ಮಾತನಾಡಬಾರದು, ಎಲ್ಲಿಯೂ ಹೋಗಬಾರದು ಅಂತ ಜಯಂತ್‌ ಅಂದುಕೊಳ್ಳೋದು ಜಾನುಗೆ ಗೊತ್ತಾಗಿದೆ. ಜಯಂತ್‌ ಪೊಸೆಸ್ಸಿವ್‌ನಿಂದ ನನ್ನ ಮಗು ಸತ್ತು ಹೋಯ್ತು ಅಂತ ಜಾನುಗೆ ತುಂಬ ಸಿಟ್ಟಿದೆ. ಹೀಗಾಗಿ ಅವಳು ಶ್ರೀಲಂಕಾದಲ್ಲಿ ಜಯಂತ್‌ನನ್ನು ಸಾಯಿಸೋಕೆ ರೆಡಿಯಾಗಿದ್ದಾಳೆ. ಜಾನು ಈ ರೀತಿ ಮಾಡ್ತಾಳಾ ಅಂತ ಜಯಂತ್‌ ಅಚ್ಚರಿಪಟ್ಟಿದ್ದಾನೆ. ಜಯಂತ್‌ನನ್ನು ಜಾನು ಸಾಯಿಸೋದು ಡೌಟ್.‌ ಆದರೆ ಅವನ ತಪ್ಪನ್ನು ಅರಿವು ಮಾಡಿಕೊಡಬಹುದು. ಇದರಿಂದ ಜಯಂತ್‌ ತಪ್ಪು ತಿದ್ದಿಕೊಂಡು ಸರಿ ಹೋಗ್ತಾನೆ ಎನ್ನೋದು ಡೌಟ್.‌ 

‘ಲಕ್ಷ್ಮೀ ನಿವಾಸ’ ನಟಿ ಶ್ವೇತಾ ದಾಂಪತ್ಯ ಜೀವನಕ್ಕೆ16 ವರ್ಷ... ಮದುವೆಯ ಅಪರೂಪದ ಫೋಟೊಗಳು ಇಲ್ಲಿವೆ

ವೀಕ್ಷಕರು ಏನು ಹೇಳಿದರು? 

  • ವಾವ್ ಭಾವನಾ ಮೇಡಂ, ಸಿದ್ದು. ಸೂಪರ್ ಚಿನ್ನು ಮರಿ, ನೀನು ಹುಷಾರು ಆ ಸೈಕೋ ಜೊತೆಗೆ…
  • ಸಿದ್ದೇಗೌಡ್ರು ಭಾವನಾ ಪ್ರೀತಿಯ ರಾಜ್ಯಭಾರ ತುಂಬಾ ಜೋರಾಗಿ ನಡಿತಾ ಇದೆ.
  • ಜಾನಕ್ಕ‌ ಒಳ್ಳೆ ಕೆಲಸ‌ ಮಾಡಿದೆ, ಅವನ‌ ಕಥೆ ಮುಗಿಸು ಆದಷ್ಟು ಬೇಗ.
  • ನೋಡಿ ಜಾನು ಸೈಕೊ ಆಗಿ ಬದಲಾಗ್ತಿದಾಳೆ . ಸೈಕೋಗಳಿಗೆ ಸೈಕೋ ಆಗಿನೆ ಉತ್ತರ ಕೊಡಬೇಕು ಸೂಪರ್ ಜಾನು. 
  • ಓಓಓಓ ಗೌಡ್ರೆ ಲಾಟರಿ. ನಡೀಲಿ ನಡೀಲಿ.
  • ಜಾನು ಅಕ್ಕ ಅವನನ್ನು ಬಿಡ್ಬೇಡ ಚುಚ್ಚಿ ಚುಚ್ಚಿ ಸಾಯಿಸು, ನಾನು ನಿನ್ ಜಾಗದಲ್ಲಿ ಇದ್ದಿದ್ರೆ ಅವನನ್ನು ಯಾವತ್ತೋ ಯಾವತ್ತೋ ಸಾಯಿಸುತಿದ್ದೆ.  
  • ಸಿದ್ದು ತುಂಬಾ ಜೋಶ್‌ನಲ್ಲಿ ಇದಾನೆ, ಪಾಪ ಇಷ್ಟು ದಿನ ದುಃಖ ಮಾಡ್ತಿದ್ದ, ಈಗಲಾದರೂ ಸಂತೋಷದಿಂದ ಇರಿ. 
  • ಅಂತೂ ಸಿದ್ದೇಗೌಡ್ರು, ಭಾವನಾ ಒಂದಾದ್ರೂ.
  • ಅಂತೂ ಇಂತೂ ನಮ್ ಗೌಡ್ರು ಪ್ರೀತಿಗೆ ಜಯ ಸಿಕ್ಕಿತು. ಜಾನು ಒಳ್ಳೆ ಕೆಲಸ ಮಾಡ್ತಾ ಇದ್ದೀಯ, ಚುಚ್ಚಿ ಸಾಯಿಸು. ಅವನ ಬಿಡಬೇಡ ಪಾಪಿ. 
  • ಒಂದು ಪ್ರೀತಿ ಶುರು. ಒಂದು ಪ್ರೀತಿ ಕೊನೆ 
  • ಚಿನ್ನು ಮರಿ ಯಾಕೆ ಹೀಗೆ ಮಾಡ್ತಿದೀರಾ... ಬೇಡ ಚಿನ್ನು ಮರಿ, ನಾ ನಿಮ್ಮನ್ನು ಎಷ್ಟು ಪ್ರೀತಿ ಮಾಡ್ತೀನಿ ಗೊತ್ತಲ್ವಾ ನಿಮಗೆ.  
     

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?