ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯಜುವೇಂದ್ರ ಚಾಹಲ್ ಪತ್ನಿಗೆ ಪರಿಹಾರ ನೀಡಿದ್ದಾರೆ. ಆದರೆ, ಕಿರುತೆರೆ ನಟಿ ಶ್ವೇತಾ ತಿವಾರಿ ವಿಚ್ಛೇದನದಲ್ಲಿ ಪತಿಗೆ ಜೀವನಾಂಶ ನೀಡಿ ಸುದ್ದಿಯಾಗಿದ್ದರು.
ಇತ್ತೀಚಿನ ದಿನಗಳಲ್ಲಿ ವಿಚ್ಚೇದನ ಅನ್ನೋದು ಟ್ರೆಂಡ್ ಆಗಿದೆ. ತೀರಾ ಇತ್ತೀಚೆಗೆ ಈ ಲಿಸ್ಟ್‌ಗೆ ಸೇರಿದ್ದ ಟೀಮ್ ಇಂಡಿಯಾ ಆಟಗಾರ ಯಜುವೇಂದ್ರ ಚಾಹಲ್. 2020ರ ಡಿಸೆಂಬರ್‌ನಲ್ಲಿ ಧನ್ರಶ್ರೀ ವರ್ಮ ಎನ್ನುವ ಯುವತಿಯ ವಿವಾಹವಾಗಿದ್ದ ಯಜುವೇಂದ್ರ ಚಾಹಲ್ ಬರೀ 818 ದಿನಗಳ ಕಾಲ ಸಂಸಾರ ಮಾಡಿ ವಿಚ್ಚೇದನ ನೀಡಿದ್ದರು. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ಕೂಡ ತಮ್ಮ ಪತ್ನಿಗೆ ವಿಚ್ಚೇದನ ನೀಡಿದ್ದರು. ಸಾಮಾನ್ಯವಾಗಿ ವಿಚ್ಛೇದನ ವಿಚಾರಗಳು ಬಂದಾಗ ಜೀವನಾಂಶ ಅಥವಾ ಪರಿಹಾರದ ಹಣ ಕೂಡ ಸಾಕಷ್ಟು ಚರ್ಚಯಾಗುತ್ತದೆ. ಯಜುವೇಂದ್ರ ಚಾಹಲ್ ವಿಚ್ಛೇದನಕ್ಕೆ ಪರಿಹಾರವಾಗಿ 4.75 ಕೋಟಿ ರೂಪಾಯಿಯನ್ನು ನೀಡಿದ್ದಾರೆ. ಸಾಮಾನ್ಯವಾಗಿ ವಿವಾಹ ವಿಚ್ಛೇದನಗಳ ಪೈಕಿ ಪುರುಷರಿಂದ ಮಹಿಳೆ ಪಡೆಯುವ ಜೀವನಾಂಶದ ಬಗ್ಗೆಯೇ ಚರ್ಚೆ ಆಗುತ್ತದೆ.
ಆದರೆ, ಕಿರುತೆರೆ ನಟಿಯೊಬ್ಬರು ವಿಚ್ಛೇದನವಾದಾಗ ಪತಿಗೆ ಜೀವನಾಂಶ ನೀಡಿ ಸುದ್ದಿಯಾಗಿದ್ದರು. ಆಕೆ ಬೇರಾರೂ ಅಲ್ಲ ಶ್ವೇತಾ ತಿವಾರಿ. 44 ವರ್ಷವಾದರೂ ಬಳುಕುವ ಬಳ್ಳಿಯಂತಿರುವ ಶ್ವೇತಾ ಬಾಳಿನಲ್ಲಿ ಇಬ್ಬರು ಪುರುಷರು ಬಂದಿದ್ದಾರೆ. 1998 ರಿಂದ 2007ರವರೆಗೆ ಆಕೆ ಟಿವಿ ನಟ ರಾಜಾ ಚೌಧರಿಯನ್ನು ವಿವಾಹವಾಗಿದ್ದರು. ಈ ಮದುವೆಯಿಂದ ಅವರಿಗೆ ಪಲಕ್ ತಿವಾರಿ ಅನ್ನೋ ಮಗಳು ಜನಿಸಿದ್ದಳು. 2007ರಲ್ಲಿ ರಾಜಾ ಚೌಧರಿಯಿಂದ ಬೇರ್ಪಟ್ಟ ಶ್ವೇತಾ ತಿವಾರಿಗೆ ಐದು ವರ್ಷಗಳ ಹೋರಾಟ ಬಳಿಕ 2012ರಲ್ಲಿ ವಿಚ್ಛೇದನ ಸಿಕ್ಕಿತ್ತು.
ಈ ವೇಳೆ ಜೀವನಾಂಶದ ಬಗ್ಗೆಯೂ ಭಾರೀ ಚರ್ಚೆಯಾಗಿತ್ತು. ಮದುವೆ ಆಗಿದ್ದ ಸಮಯದಲ್ಲಿ ಇಬ್ಬರೂ ಸೇರಿ ಮಲಾಡ್‌ನಲ್ಲಿ ಸಿಂಗಲ್ ಬೆಡ್‌ರೂಮ್ ಅಪಾರ್ಟ್‌ಮೆಂಟ್‌ಅನ್ನು ಖರೀದಿ ಮಾಡಿದ್ದರು. ಆದರೆ, ಪತಿಗೆ ಜೀವನಾಂಶದ ಭಾಗವಾಗಿ 2012ರಲ್ಲಿ 93 ಲಕ್ಷ ರೂಪಾಯಿ ಮೌಲ್ಯದ ಈ ಅಪಾರ್ಟ್‌ಮೆಂಟ್‌ಅನ್ನು ರಾಜಾ ಚೌಧರಿಗೆ ನೀಡಿದ್ದರು.
18ಕ್ಕೆ ಮದುವೆಯಾಗಿ 2 ಬಾರಿ ವಿಚ್ಚೇದನ ಪಡೆದ ಈ ನಟಿಗೆ 43 ಆದ್ರೂ ಸೌಂದರ್ಯ ಕುಗ್ಗಿಲ್ಲ!
ವಿಚ್ಛೇದನದ ಭಾಗವಾಗಿ ಮಗಳ ಸಂಪೂರ್ಣ ಕಸ್ಟಡಿ ಶ್ವೇತಾ ತಿವಾರಿಗೆ ಸಿಕ್ಕಿತ್ತು. ರಾಜಾ ಚೌಧರಿಗೆ ಮಗಳ ಬಳಿ ಹೋಗಲು ಕೂಡ ಅವಕಾಶ ಇದ್ದಿರಲಿಲ್ಲ. ಆದರೆ, ಶ್ವೇತಾ ತಿವಾರಿ ಮಾತ್ರ ಈ ವಿಚಾರದಲ್ಲಿ ಮುಕ್ತವಾಗಿದ್ದಾರೆ. ಪಾಲಕ್ ತಿವಾರಿಗೆ ತಂದೆಯನ್ನು ನೋಡಬೇಕು ಎಂದು ಬಯಸಿದರೆ ಯಾವಾಗ ಬೇಕಾದರೂ ಅವರನ್ನು ಭೇಟಿ ಮಾಡಬಹುದು ಎಂದು ಹೇಳಿದ್ದರು.
ಸೀರೆಯ ಸೆರಗು ಕೆಳಕ್ಕೆ ಬಿದ್ದ ತಕ್ಷಣ ಓಡೋಡಿ ಬರೋ ಸಿಬ್ಬಂದಿ!
ರಾಜಾ ಚೌಧರಿಯೊಂದಿಗಿನ ತನ್ನ ದಾಂಪತ್ಯದ ಸವಾಲುಗಳ ಬಗ್ಗೆಯೂ ಶ್ವೇತಾ ಮಾತನಾಡಿದ್ದು, ಇದರಲ್ಲಿ ಹಿಂಸೆ ಮತ್ತು ಮದ್ಯಪಾನದ ಆರೋಪಗಳೂ ಸೇರಿವೆ.ಆ ಬಳಿಕ ಶ್ವೇತಾ ತಿವಾರಿ ಅಭಿನವ್ ಕೊಹ್ಲಿಯನ್ನು 2013ರಲ್ಲಿ ವಿವಾಹವಾದರು, ಈ ದಾಂಪತ್ಯದಿಂದ ರೇಯಾಂಶ್ ಎನ್ನುವ ಮಗನನ್ನು ಪಡೆದಿದ್ದಾರೆ. 2019ರಲ್ಲಿ ಅಭಿನವ್ ಕೊಹ್ಲಿಗೂ ವಿಚ್ಛೇದನ ನೀಡಿದರು.