ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ, ರೆಸಾರ್ಟ್‌ಗೆ ಹೋಗಲು ಮಗಳು ತನ್ವಿಗೆ ಪೋಷಕರು ಅನುಮತಿ ನೀಡದಿದ್ದರೂ, ತಂದೆ ತಾಂಡವ್ ಆಕೆಗೆ ಬೆಂಬಲ ನೀಡುತ್ತಾನೆ. ಈ ನಡೆಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ ಧಾರಾವಾಹಿ ತನ್ನದೇ ಆದ ಅಭಿಮಾನಿಗಳು ಮತ್ತು ವೀಕ್ಷಕರನ್ನು ಹೊಂದಿದೆ. ಮನೆಯಿಂದ ಹೊರ ಬಂದಿರುವ ತಾಂಡವ್, ತಂದೆ-ತಾಯಿಗೆ ಒಳ್ಳೆಯ ಮಗನಾಗಲಿಲ್ಲ. ಮಡದಿಗೆ ಒಳ್ಳೆಯ ಗಂಡನೂ ಸಹ ಆಗಿಲ್ಲ. ಹಾಗಾಗಿಯೇ ವೀಕ್ಷಕರು ತಾಂಡವ್ ಮಾಡುವ ಕಿತಾಪತಿಗೆ ವೀಕ್ಷಕರು ಹಿಡಿಶಾಪ ಹಾಕುತ್ತಿರುತ್ತಾರೆ. ಶ್ರೇಷ್ಠಾ ಜೊತೆ ಸೇರಿ ಭಾಗ್ಯಾ ಮಾಡುವ ಎಲ್ಲಾ ಕೆಲಸಗಳಿಗೂ ತಾಂಡವ್ ಅಡ್ಡಗಾಲು ಹಾಕುತ್ತಿರುತ್ತಾನೆ. ಆದ್ರೆ ಮಕ್ಕಳ ಮೇಲಿನ ಪ್ರೀತಿ ತಾಂಡವ್‌ಗೆ ಸ್ವಲ್ಪವೂ ಕಡಿಮೆಯಾಗಿಲ್ಲ. ಮಗಳು ತನ್ವಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ಸರ್ಪೈಸ್ ನೀಡಿದ್ದನು. ಇದೀಗ ತಾನು ಬೆಸ್ಟ್ ತಂದೆ ಅನ್ನೋದನ್ನು ತಾಂಡವ್ ಸಾಬೀತು ಮಾಡಿದ್ದಾನೆ.
ಕಳೆದ ಎರಡ್ಮೂರು ಸಂಚಿಕೆಗಳಿಂದ ಗೆಳತಿಯರೊಂದಿಗೆ ರೆಸಾರ್ಟ್‌ಗೆ ಹೋಗಲು ತನ್ವಿ ಪ್ಲಾನ್ ಮಾಡಿಕೊಂಡಿದ್ದಾಳೆ. ಆದ್ರೆ ಒಪ್ಪಿಗೆ ಪತ್ರಕ್ಕೆ ಪೋಷಕರ ಸಹಿ ಕಡ್ಡಾಯವಾಗಿದೆ. ಹಾಗಾಗಿ ಅಜ್ಜಿ ಕುಸುಮಾ, ಅಜ್ಜ ಧರ್ಮೇಂದ್ರ, ತಾಯಿ ಭಾಗ್ಯಾ ಬಳಿ ಅನುಮತಿ ಕೇಳಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಹುಡುಗಿಯರೇ ಹೋಗುತ್ತಿರೋದು ಮತ್ತು ಒಂದು ದಿನ ಅಲ್ಲಿಯೇ ಉಳಿಯೋ ಕಾರಣಕ್ಕೆ ಭಾಗ್ಯಾ ಸೇರಿದಂತೆ ಯಾರು ಅನುಮತಿ ನೀಡಿಲ್ಲ. ತನ್ವಿ ನೀಡಿರುವ ಪತ್ರಕ್ಕೆ ಯಾರೂ ಸಹಿ ಹಾಕಿಲ್ಲ. ಇದಕ್ಕಾಗಿ ಊಟ ಮಾಡದೇ ತನ್ವಿ ಹಠ ಹಿಡಿದಿದ್ದಾಳೆ.
ಊಟ ಬಿಟ್ರೂ ಭಾಗ್ಯಾ ಮತ್ತು ಕುಸುಮಾ ಮಾತ್ರ ರೆಸಾರ್ಟ್ ಸ್ಟೇಗೆ ಒಪ್ಪಿಗೆ ನೀಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಸಿವು ಆದ್ರೆ ತಾನೇ ಊಟ ಮಾಡ್ತಾಳೆ ಎಂದು ಭಾಗ್ಯ ಸಹ ಹೇಳಿದ್ದಾಳೆ. ಮನೆಯಲ್ಲಿ ಯಾರೂ ಒಪ್ಪದ ಹಿನ್ನಲೆ ಪರ್ಮಿಶನ್ ಲೆಟರ್‌ಗೆ ಸಹಿ ಹಾಕಿಸಿಕೊಳ್ಳಲು ತಂದೆ ತಾಂಡವ್ ಬಳಿ ತನ್ವಿ ಹೋಗಿದ್ದಾಳೆ. ಆದ್ರೆ ಅಲ್ಲಿಯೂ ತನ್ವಿಗೆ ನಿರಾಸೆಯುಂಟಾಗಿದೆ.
ಇದನ್ನೂ ಓದಿ: ʼಭಾಗ್ಯಲಕ್ಷ್ಮೀʼ ಧಾರಾವಾಹಿಗೆ ಎಂಟ್ರಿ ಕೊಟ್ಟ ಸಾವಿರಾರು ಕೋಟಿ ರೂ ಬಾಚಿದ ಸಿನಿಮಾ ನಟ! ಅವರಾರು?
ಸಹಿ ಹಾಕುವಂತೆ ತಂದೆಗೆ ಹೇಳಿದ ತನ್ವಿ
ನಾನು ಮತ್ತು ನನ್ನ ಫ್ರೆಂಡ್ಸ್ ರೆಸಾರ್ಟ್‌ನಲ್ಲಿ ಒಂದು ದಿನ ಉಳಿದುಕೊಳ್ಳಲು ಪ್ಲಾನ್ ಮಾಡಿದ್ದೇವೆ. ಆದ್ರೆ ಅಲ್ಲಿ ಸ್ಟೇ ಆಗಲು, ಪೇರೇಂಟ್ಸ್ ಪರ್ಮಿಷನ್ ಬೇಕು. ಅಮ್ಮನ್ನ ಕೇಳಿದ್ರೆ ಸಹಿ ಮಾಡಲ್ಲ ಅಂದ್ಳು. ಅಜ್ಜಿಯನ್ನ ಕೇಳಿದ್ರೆ ದೊಡ್ಡ ಗಲಾಟೆಯೇ ಮಾಡಿದ್ಳು. ಅದಕ್ಕೆ ನಿನ್ನ ಬಳಿ ಬಂದೆ. ನೀವು ತುಂಬಾ ಮಾಡರ್ನ್ ಆಗಿ ಥಿಂಕ್ ಮಾಡುತ್ತೀರಿ ಎಂದು ನನಗೆ ಗೊತ್ತು. ಪ್ಲೀಸ್ ಪರ್ಮಿಷನ್ ಲೆಟರ್‌ಗೆ ಸಹಿ ಹಾಕಿ ಎಂದು ತಂದೆ ಬಳಿ ತನ್ವಿ ಕೇಳಿಕೊಂಡಿದ್ದಾಳೆ.
ತಾಂಡವ್ ಹೇಳಿದ್ದೇನು?
ಮನೆಯಲ್ಲಿ ಅವರಿಬ್ಬರೂ ಬೇಡ ಅಂದ್ರೆ ನಾನು ಬೇಕು ಅಂತ ಹೇಳ್ತಿನಾ? ನಾನು ಸಹ ಬೇಡ ಅಂತಾನೇ ಹೇಳೋದು. ಯಾವುದೇ ಚೇಂಜ್ ಬೇಡ. ಇವಾಗ ಏನಿದೆಯೋ ಅದನ್ನು ಮಾಡು. ಚೆನ್ನಾಗಿ ಓದಿ, ಒಳ್ಳೆಯ ಮಾರ್ಕ್ಸ್ ತೆಗೆಯೋದು ನಿನ್ನ ಕೆಲಸ. ಅದನ್ನು ಬಿಟ್ಟು ಚೇಂಜ್, ಫೀಲ್ ಗುಡ್ ಅಂತ ಹೋದ್ರೆ ನಾನು ಸುಮ್ನೆ ಇರಲ್ಲ. ಪಿಕ್ನಿಕ್ ಎಲ್ಲಾ ಬಿಟ್ಟು ಓದೋದರ ಮೇಲೆ ಫೋಕಸ್ ಮಾಡು. ಕಾಲೇಜು ಬಿಟ್ಟು, ಬೀದಿ ಬೀದಿ ಅಲೆಯೊಕ್ಕೆಲ್ಲಾ ಪರ್ಮಿಷನ್ ಕೊಡಲ್ಲ. ಟೈಮ್ ಆಯ್ತು, ನಿನ್ನನ್ನು ಕಾಲೇಜಿಗೆ ಬಿಟ್ಟು ಹೋಗ್ತೀನಿ ಎಂದು ಖಡಕ್ ಆಗಿ ತಾಂಡವ್ ಹೇಳಿದ್ದಾನೆ. ಈ ಪ್ರೋಮೋ ನೋಡಿದ ವೀಕ್ಷಕರು ತಾಂಡವ್ ಓರ್ವ ಒಳ್ಳೆಯ ತಂದೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Bhagyalakshmi Serial: ಹೊಸ ಸಾಹಸಕ್ಕಿಳಿದ ಭಾಗ್ಯಾಗೆ ತಾಂಡವ್ ಬಿಟ್ಟು ಮನೆಯವ್ರಿಂದಲೇ ನಂಬಿಕೆದ್ರೋಹ ಆಗೋದು ಪಕ್ಕಾ!