ಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಭಾಗ್ಯ ಹೊಸ ಹೆಜ್ಜೆ ಇಟ್ಟರೆ, ತಾಂಡವ್ ಮಾತ್ರ ಒಳ್ಳೆಯ ಕೆಲಸ ಮಾಡಿದ್ದಾನೆ. ಏನದು?
ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ತಾನು ʼಕೈ ತುತ್ತುʼ ಹೆಸರಿನಡಿಯಲ್ಲಿ ಅಡುಗೆ ಮಾಡಿ ಅದನ್ನೇ ಉದ್ಯೋಗ ಮಾಡಿಕೊಳ್ತೀನಿ ಅಂತ ಭಾಗ್ಯ ಅಂದುಕೊಂಡಿದ್ದಳು. ಆದರೆ ಯಾರೂ ಅವಳಿಗೆ ಊಟ ಬೇಕು ಅಂತ ಹೇಳಲೇ ಇಲ್ಲ. ಈ ಅವಳು ಇನ್ನೊಂದು ಹೆಜ್ಜೆ ಇಟ್ಟಿದ್ದಾಳೆ. ಇನ್ನು ತಾಂಡವ್ ಈ ಬಾರಿ ಒಂದೊಳ್ಳೆಯ ಕೆಲಸ ಮಾಡಿದ್ದಾನೆ.
ಭಾಗ್ಯ ಹೊಸ ಉದ್ಯೋಗದ ಮೇಲೆ ಕನ್ನಿಕಾ ಕಣ್ಣು ಬಿತ್ತು!
ಇನ್ನೊಂದು ಕಡೆ ಭಾಗ್ಯ ಮನೆಯಲ್ಲಿ ಅಡುಗೆ ಮಾಡಿ ಅದನ್ನು ಅವಳು ಹಾಸ್ಟೆಲ್‌ವೊಂದಕ್ಕೆ ಹೋಗಿ ಅಲ್ಲಿ ಅಡುಗೆಯನ್ನು ಸೇಲ್ ಮಾಡಿದ್ದಾಳೆ, ಅವಳ ಅಡುಗೆಗೆ ಭಾರೀ ಮೆಚ್ಚುಗೆ ಸಿಕ್ಕಿದೆ. ಇದನ್ನೇ ಅಸ್ತ್ರ ಮಾಡಿಕೊಂಡು ಅವಳು ಊಟ ಸೇಲ್ ಮಾಡಬೇಕು ಎಂದುಕೊಂಡಿದ್ದಳು. ಅವಳಿಗೆ ಒಂದು ಬೆಳಕು ಕಂಡಿದೆ. ಇದನ್ನು ಕನ್ನಿಕಾ ನೋಡಿದ್ದು, ಭಾಗ್ಯ ಮಟ್ಟ ಹಾಕಲು ಏನ್ ಮಾಡ್ತಾಳೋ ಏನೋ! ಒಟ್ಟಿನಲ್ಲಿ ಭಾಗ್ಯಗೆ ಉಳಿಗಾಲ ಇಲ್ಲಂತಾಗಿದೆ. ಒಂದಾದ ಮೇಲೆ ಒಂದು ಕಷ್ಟ. ಕಷ್ಟಗಳು ಬಂದಾಗ ಭಾಗ್ಯಗೆ ಬೇಜಾರು ಆಗುತ್ತದೆಯೋ ಗೊತ್ತಿಲ್ಲ, ವೀಕ್ಷಕರಿಗೆ ಬೇಸರ ಬಂದಂತಾಗಿದೆ.
ರಜತ್, ವಿನಯ್ ಗೌಡ ಮತ್ತೆ ಅರೆಸ್ಟ್; ಮಚ್ಚು ಹಿಡಿದ ಬಿಗ್ ಬಾಸ್ ಆನೆಗಳಿಗೆ ಪರಪ್ಪನ ಅಗ್ರಹಾರವೇ ಮನೆ?
ಮಗಳಿಗೆ ಬುದ್ಧಿ ಹೇಳಿದ ತಾಂಡವ್!
ಇನ್ನು ತನ್ವಿ ಟ್ರಿಪ್‌ಗೆ ಹೋಗಬೇಕು ಎಂದುಕೊಂಡಿದ್ದಳು. ಇದಕ್ಕೆ ಭಾಗ್ಯ, ಕುಸುಮಾ ಒಪ್ಪಿಗೆ ಕೊಡಲಿಲ್ಲ. ತನ್ನ ತಂದೆ ಟ್ರಿಪ್ ಫಾರ್ಮ್‌ಗೆ ಸಹಿ ಹಾಕಿದರೆ ಹೋಗಬಹುದು ಎಂದು ತನ್ವಿ ಅಂದುಕೊಂಡಿದ್ದಳು. ತನ್ವಿಗೆ ಟ್ರಿಪ್‌ಗೆ ಹೋಗಲು ತಾಂಡವ್ ಒಪ್ಪಿಗೆ ಕೊಟ್ಟಿಲ್ಲ, ಬದಲಾಗಿ ಅವನು ಬೈದು ಬುದ್ಧಿ ಹೇಳಿದ್ದಾನೆ. ಸುಮ್ಮನೆ ಓದಿಕೊಂಡಿರು, ಟ್ರಿಪ್‌ಗೆ ಹೋಗೋದು ಬೇಡ ಅಂತ ಅವನು ಬೈದಿದ್ದಾನೆ.
Bhagyalakshmi Serial: ಹೊಸ ಸಾಹಸಕ್ಕಿಳಿದ ಭಾಗ್ಯಾಗೆ ತಾಂಡವ್ ಬಿಟ್ಟು ಮನೆಯವ್ರಿಂದಲೇ ನಂಬಿಕೆದ್ರೋಹ ಆಗೋದು ಪಕ್ಕಾ!
ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ಏನು ಹೇಳಿದ್ದಾರೆ?