ಕೆಂಡಸಂಪಿಗೆಯಲ್ಲಿ ರಾಜೇಶ್‌ ಪಾತ್ರ ಕೊನೆ, ಬಿಗ್‌ ಬಾಸ್‌ ಬರ್ತಿದ್ದಾರಾ ಶನಿ ಖ್ಯಾತಿಯ ಸುನೀಲ್‌?

Published : Sep 23, 2022, 12:42 PM IST
ಕೆಂಡಸಂಪಿಗೆಯಲ್ಲಿ ರಾಜೇಶ್‌ ಪಾತ್ರ ಕೊನೆ, ಬಿಗ್‌ ಬಾಸ್‌ ಬರ್ತಿದ್ದಾರಾ ಶನಿ ಖ್ಯಾತಿಯ ಸುನೀಲ್‌?

ಸಾರಾಂಶ

ಅಕ್ಕ ತಮ್ಮನ ನಡುವಿನ ಬಂಧದ ಬಗೆಗಿನ ಕಥೆಯಿದ್ದ 'ಕೆಂಡ ಸಂಪಿಗೆ' ಸೀರಿಯಲ್‌ನಲ್ಲಿ ಏಕಾಏಕಿ ತಮ್ಮ ರಾಜೇಶನ ಸಾವಾಗಿದೆ. ಈ ಸೀರಿಯಲ್ ನೋಡ್ತಿದ್ದವರೆಲ್ಲ ಮುಖ್ಯ ಪಾತ್ರದ ದಿಢೀರ್ ನಿರ್ಗಮನದ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ಇದೀಗ ರಾಜೇಶ್ ಪಾತ್ರ ಮಾಡ್ತಿದ್ದ ಶನಿ ಖ್ಯಾತಿಯ ಸುನೀಲ್ ಗೌಡ ಬಿಗ್‌ಬಾಸ್ ಪ್ರವೇಶಿಸುವ ಮಾತು ಕೇಳಿಬರ್ತಿದೆ.

'ಕೆಂಡ ಸಂಪಿಗೆ' ಕಲರ್ಸ್ ಕನ್ನಡದಲ್ಲಿ ಇತ್ತೀಚೆಗಷ್ಟೇ ಶುರುವಾದ ಸೀರಿಯಲ್. ಇದರಲ್ಲಿ ಆರಂಭದಲ್ಲೇ ಪ್ರೊಮೋದಲ್ಲಿ ರಕ್ಷಾ ಬಂಧನ, ತಮ್ಮ ಅಕ್ಕನ ಸಂಬಂಧದ ಕಥೆ ಹೇಳ್ತೀವಿ ಅಂದುಕೊಂಡಿದ್ದರು. ಕನ್ನಡದ ಮಟ್ಟಿಗೆ ಈ ಸಬ್ಜೆಕ್ಟ್‌ನ ಸೀರಿಯಲ್‌ ಅಪರೂಪ. ಹೀಗಾಗಿ ಜನ ಕುತೂಹಲದಿಂದಲೇ ಈ ಸೀರಿಯಲ್ ನೋಡತೊಡಗಿದರು. ಈ ಸೀರಿಯಲ್ ನಾಯಕಿ ಸುಮನಾ. ಆಕೆಯ ತಮ್ಮ ರಾಜೇಶ. ಆತ ಪರೀಕ್ಷೆಯಲ್ಲಿ ಫೇಲ್ ಅನ್ನೋ ಕಾರಣಕ್ಕೆ ಅಕ್ಕ ಸುಮನ ಆತನಲ್ಲಿ ಮಾತು ಬಿಟ್ಟಿದ್ದಾಳೆ. ಆದರೆ ತಮ್ಮ ಬಗೆಗಿನ ಪ್ರೀತಿ, ಕಾಳಜಿ ಕಡಿಮೆ ಆಗಿಲ್ಲ.

ಆದರೆ ಏಕಾಏಕಿ ಈ ಪಾತ್ರ ಸಾವನ್ನಪ್ಪುವಂತೆ ಕಥೆ ಮಾಡಲಾಗಿದೆ. ಭಾರೀ ಆಸಕ್ತಿಯಿಂದ ತೋರಿಸಲಾಗಿದ್ದ ರಾಜೇಶ್ ಪಾತ್ರ ದಿಢೀರ್ ಕೊನೆ ಮಾಡಲಾಗಿದೆ. ಇದು ಎಲ್ಲರಿಗೂ ಅಚ್ಚರಿ, ಆಘಾತ ತಂದಿತ್ತು. ಜನಪ್ರಿಯತೆಯತ್ತ ಸಾಗುತ್ತಿದ್ದ ಪಾತ್ರವನ್ನು ದಿಢೀರನೆ ಯಾಕೆ ಸ್ಟಾಪ್ ಮಾಡಿದ್ರು ಅನ್ನೋ ಬಗ್ಗೆ ಏನೇನೆಲ್ಲ ಮಾತುಗಳು ಕೇಳಿ ಬಂದರೂ ಸಂಬಂಧಪಟ್ಟರು ಈ ಬಗ್ಗೆ ಏನೂ ಮಾತಾಡಿಲ್ಲ. ಆದರೆ ಇದೀಗ ಹರಿದು ಬರುತ್ತಿರುವ ಸುದ್ದಿ. ಸುಮಿಯ ತಮ್ಮನಾಗಿ ನಟಿಸುತ್ತಿದ್ದ ರಾಜೇಶ ಅಂದರೆ ಸುನೀಲ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಅನ್ನೋ ಗುಮಾನಿ ಇದೆ ಅನ್ನೋದು. ಈ ಮಾತು ಎಷ್ಟರ ಮಟ್ಟಿಗೆ ನಿಜ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ರಾಜೇಶನ ಪಾತ್ರಕ್ಕೆ ಸುನೀಲ್ ಜೀವ ತುಂಬಿದ್ದರು. ಅಕ್ಕ-ತಮ್ಮ ನಡುವಿನ ಬಾಂಧವ್ಯದ ಕಥೆ ಹೊಂದಿದ್ದ ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶನ ಪಾತ್ರವನ್ನು ಅಂತ್ಯಗೊಳಿಸಲಾಗಿದೆ. ಕಾರ್ಪೋರೇಟರ್‌ ತೀರ್ಥರಾಮ ಪ್ರಸಾದ್‌ ಜೊತೆಗಿರುತ್ತಿದ್ದ ರಾಜೇಶ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಂಡುಬಿಟ್ಟ. ಬೆಂಕಿ ಹಚ್ಚಿದ ನಾಟಕ ಆಡಿದರೆ ದುಡ್ಡು ಬರುತ್ತದೆ. ಇದರಿಂದ ಮನೆಯಲ್ಲಿ ಅಕ್ಕ ಮಾಡಿರೋ ಸಾಲ ತೀರಿಸಬಹುದು ಅನ್ನೋ ಯೋಚನೆಯಲ್ಲಿ ರಾಜೇಶ ಬೆಂಕಿ ಹಚ್ಚುವ ನಾಟಕ ಮಾಡಿದ್ದು.

Bigg Boss Kannada 9; ಮನೆಯ ಫೋಟೋ ರಿವೀಲ್, ಏನೂ ಬದಲಾಗಿಲ್ಲ ಎಂದ ವೀಕ್ಷಕರು

ಆದರೆ ಆತನ ಅಕ್ಕ ಸುಮಾ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಜೈಲು ಸೇರಿದ್ದ ಕಾಳಿ ಈ ಸನ್ನಿವೇಶವನ್ನು ತನ್ನ ಸೇಡಿ (Revenge) ಗೆ ಬಳಸಿಕೊಳ್ತಾನೆ. ತನ್ನ ಹುಡುಗರಿಂದ ನಿಜವಾಗಿ ಬೆಂಕಿ ಹಚ್ತಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರಾಜೇಶ ಮೃತಪಟ್ಟ. ಅಲ್ಲಿಗೆ ‘ಕೆಂಡಸಂಪಿಗೆ’ ಸೀರಿಯಲ್‌ನಲ್ಲಿ ರಾಜೇಶನ ಪಾತ್ರಕ್ಕೆ ಫುಲ್ ಸ್ಟಾಪ್ ಇಡಲಾಗಿದೆ. ಏಕಾಏಕಿ ರಾಜೇಶನ ಪಾತ್ರವನ್ನು ಅಂತ್ಯಗೊಳಿಸಿರುವುದರಿಂದ ನಟ ಸುನೀಲ್ ಬಗ್ಗೆ ಸೋಷಿಯಲ್ ಮೀಡಿಯಾ (Social media)ದಲ್ಲಿ ಹೊಸ ಚರ್ಚೆ ನಡೆಯುತ್ತಿದೆ.

‘ಕೆಂಡಸಂಪಿಗೆ’ ಸೀರಿಯಲ್‌ನಲ್ಲಿ ರಾಜೇಶನ ಪಾತ್ರ ಹಠಾತ್ ಮುಕ್ತಾಯ ಕಂಡಿರುವುದರಿಂದ ನಟ ಸುನೀಲ್ ‘ಬಿಗ್ ಬಾಸ್’ ಮನೆಗೆ ಹೋಗಬಹುದು ಎಂದು ನೆಟಿಜನ್ಸ್ ಊಹಿಸುತ್ತಿದ್ದಾರೆ. ವರ್ಷಗಳ ಹಿಂದೆ ಶನಿ (Shani)ದೇವನ ಚರಿತ್ರೆ ಕುರಿತಾದ ಕಥಾಹಂದರ ಹೊಂದಿದ್ದ ‘ಶನಿ’ ಧಾರಾವಾಹಿ ಪ್ರಸಾರ ಕಂಡಿತ್ತು. ಈ ಪೌರಾಣಿಕ ಧಾರಾವಾಹಿಯಲ್ಲಿ ಶನಿದೇವನ ಪಾತ್ರ ನಿಭಾಯಿಸಿದ್ದವರು ನಟ ಸುನೀಲ್. ‘ಶನಿ’ ಪಾತ್ರದಿಂದ ಜನಪ್ರಿಯತೆ ಕಂಡಿದ್ದ ಸುನೀಲ್ ‘ಕೆಂಡಸಂಪಿಗೆ’ ಧಾರಾವಾಹಿಯ ಮೂಲಕ ಕಮ್ ಬ್ಯಾಕ್ (Comeback) ಮಾಡಿದರು. ‘ಕೆಂಡಸಂಪಿಗೆ’ ಸೀರಿಯಲ್‌ನಲ್ಲಿ ರಾಜೇಶನ ಪಾತ್ರ ಹಠಾತ್ ಮುಕ್ತಾಯ ಕಂಡಿರುವುದರಿಂದ ನಟ ಸುನೀಲ್ ‘ಬಿಗ್ ಬಾಸ್’ ಮನೆಗೆ ಹೋಗಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

 

ಕೆಂಡಸಂಪಿಗೆಯಲ್ಲಿ ತಮ್ಮ ರಾಜೇಶ ಇನ್ನಿಲ್ಲ! ಶನಿ ಖ್ಯಾತಿಯ ಸುನೀಲ್ ಪಾತ್ರ ಮುಕ್ತಾಯವಾಗುತ್ತಾ?

ದೀನಬಂಧು ಆಶ್ರಮದಲ್ಲಿ ಬೆಳೆದ ಹುಡುಗ ಸುನೀಲ್ ಸೀರಿಯಲ್‌ ಜಗತ್ತಿಗೆ (Serial World) ಬಂದದ್ದು ಶನಿ ಪಾತ್ರದ ಮೂಲಕ ಜನಪ್ರಿಯ ಆದದ್ದೇ ಯಾವ ಸಿನಿಮಾಕ್ಕೂ (Movie) ಕಡಿಮೆ ಇಲ್ಲದ ಕಥೆ. ಇಂಥಾ ಹುಡುಗ ಇದೀಗ ಬಿಗ್‌ ಬಾಸ್‌ ಕಡೆಗೆ ಹೊರಳುವ ಸೂಚನೆ ಸಿಕ್ಕಿದೆ. ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದು ನಾಳೆ ಆರಂಭವಾಗಲಿರೋ ಬಿಗ್‌ಬಾಸ್ ಸೀಸನ್ 9‌ (Bigboss season 9) ಮೂಲಕವೇ ಗೊತ್ತಾಗಲಿದೆ. ನಾಳೆ ಸಂಜೆ 6 ಗಂಟೆಯಿಂದ ಬಿಗ್‌ಬಾಸ್‌ ಶುರು.
 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!
ಜಿಮ್‌ನಿಂದ ಮರಳುತ್ತಿದ್ದಾಗ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಾರು ಭೀಕರ ಅಪಘಾತ