ದೈಹಿಕ ಸಂಬಂಧವೇ ಬೇಡ ಅಂದಿದ್ದ ತುಳಸಿಗೆ ಇದೇನಾಗೋಯ್ತು? ಎಲ್ಲರ ಊಹೆಗೂ ಮೀರಿದ ಟ್ವಿಸ್ಟ್​ ಇದು!

By Suchethana D  |  First Published Sep 14, 2024, 2:43 PM IST

ಎಲ್ಲವೂ ಸರಿಯಾಗ್ತಿದೆ ಎನ್ನೋ ಹೊತ್ತಿನಲ್ಲಿಯೇ  ಶ್ರೀರಸ್ತು ಶುಭಮಸ್ತು ಸೀರಿಯಲ್​ಗೆ ಇದೇನಿದು ಟ್ವಿಸ್ಟ್​?  ತಲೆ ತಿರುಗಿ ಬಿದ್ದ ತುಳಸಿಗೆ 'ಕಂಗ್ರಾಟ್ಸ್​' ಹೇಳಿಬಿಟ್ಟರಲ್ಲಾ ಡಾಕ್ಟರ್? ದೈಹಿಕ ಸಂಬಂಧವೇ ಬೇಡ ಎಂದಿದ್ದ ತುಳಸಿ...? ಇದು ನಿಜನಾ? 
 


ಶ್ರೀರಸ್ತು ಶುಭಮಸ್ತು ಸೀರಿಯಲ್​ಗೆ ಬಹುಶಃ ಯಾವ ಪ್ರೇಕ್ಷಕರೂ, ಯಾವ ನೆಟ್ಟಿಗರೂ ಊಹಿಸಲಾಗದ ಟ್ವಿಸ್ಟ್​ ಸಿಕ್ಕಿದೆ. ಅವಿ ಮತ್ತು ಅಭಿ ಇಬ್ಬರೂ ಅಮ್ಮ ಎಂದು ಸ್ವೀಕರಿಸಿದ ತುಳಸಿ, ಎಲ್ಲರ ಬಾಯಲ್ಲೂ ತುಳಸಿ ಅಮ್ಮ ಎಂದೇ ಕರೆಸಿಕೊಳ್ಳುತ್ತಿರುವ ಈ ಅಮ್ಮಾ, ಇನ್ನೇನು ಅಜ್ಜಿಯಾಗುವ ಕನಸು ಕಾಣುತ್ತಿರುವ ತುಳಸಿ ಅಮ್ಮಾ... ಮತ್ತೊಮ್ಮೆ ಅಮ್ಮಾ  ಆಗ್ತಿದ್ದಾಳೆ! ಹೌದು. ಯಾರ ಊಹೆಗೂ ನಿಲುಕದ ಟ್ವಿಸ್ಟ್​ ಅನ್ನು ಈ ಸೀರಿಯಲ್​ಗೆ ನೀಡಲಾಗಿದೆ. ಒಂದೆಡೆ ಅವಿ ಮತ್ತು ಅಭಿ ಮತ್ತೊಂದೆಡೆ ಸಮರ್ಥ್​, ಹೀಗೆ ಮೂವರು ಮಕ್ಕಳ ನಡುವೆ ಪ್ರೀತಿಯ ವಿಷಯದಲ್ಲಿ ಜಟಾಪಟಿ ಏರ್ಪಡಿಸಿದ್ದ ತುಳಸಿ ಅಮ್ಮಾ, ಈಗ ಮತ್ತೊಂದು ಮಗುವಿನ ತಾಯಿಯಾಗುತ್ತಿದ್ದಾಳೆ. ತಲೆ ತಿರುಗಿ ಬಿದ್ದ ತುಳಸಿಯನ್ನು ವೈದ್ಯೆ ಚೆಕ್​ ಮಾಡಿ ಕಂಗ್ರಾಟ್ಸ್​ ಎಂದಿದ್ದಾರೆ. ಏನಾಯ್ತು ಎಂದು ಗಾಬರಿಯಿಂದ ತುಳಸಿ ಕೇಳಿದಾಗ ನೀವು ತಾಯಿಯಾಗ್ತಾ ಇದ್ದೀರಾ ಎಂದು ವೈದ್ಯೆ ಹೇಳಿದ್ದಾರೆ! ಇದನ್ನು ಕೇಳಿ ತುಳಸಿಗೆ ಆಕಾಶವೇ ಕಳಚಿಬಿದ್ದ ಅನುಭವವಾಗಿದೆ...

ಹೀಗೊಂದು ಪ್ರೊಮೋ ಇದೀಗ ಬಿಡುಗಡೆಯಾಗಿದೆ.  ಈಗ ಹೊಸ ಮನೆಯಲ್ಲಿ ಎಲ್ಲರೂ ತುಳಸಿಯನ್ನು ಅಮ್ಮ ಎಂದು ಒಪ್ಪಿಕೊಂಡಿದ್ದಾರೆ. ತುಳಸಿ ಅಮ್ಮ ಎಲ್ಲರ ಮನೆ ಗೆದ್ದಿದ್ದಾಳೆ. ಅವಳ ಹೆಸರಿನಲ್ಲಿ ಮಕ್ಕಳು ಹೊಸ ಕಂಪೆನಿಯನ್ನೇ ಶುರು ಮಾಡಲು ಹೊರಟಿದ್ದಾರೆ. ವಿಲನ್​ಗಳಾದ ದೀಪಿಕಾ ಮತ್ತು ಶಾರ್ವರಿಯನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಇದು ಶುಭ ಸುದ್ದಿಯಾಗಿದೆ. ಎಲ್ಲರೂ ಖುಷಿ ಪಟ್ಟಿದ್ದಾರೆ. ಆದರೆ, ಶ್ರೀಮಂತರ ಮನೆಗೆ ಸೊಸೆಯಾಗಿ ಅಮ್ಮ ಹೋದಾಗಿನಿಂದಲೂ ಸಮರ್ಥ್​ಗೆ ಅಮ್ಮನ ಮೇಲೆ ಕೋಪ. ಹಾಗಂತ ಪ್ರೀತಿ ಏನೂ ಕಮ್ಮಿಯಾಗಲಿಲ್ಲ. ಅಮ್ಮನನ್ನು ಆ ಮನೆಯವರೆಲ್ಲರೂ ಕನಿಷ್ಠವಾಗಿ ನೋಡುತ್ತಿದ್ದಾಗ, ಸಮರ್ಥ್​ ಹೋಗಿ ರೇಗಾಡಿದ್ದಾನೆ, ಕೂಗಾಡಿದ್ದಾನೆ. ತನ್ನ ತಾಯಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ದುಃಖ ಪಟ್ಟಿದ್ದಾನೆ.  ಆದರೆ ಈಗ ತನ್ನ ಪ್ರೀತಿಯನ್ನು ಇನ್ನಿಬ್ಬರು ಮಕ್ಕಳ ಜೊತೆ ಹಂಚಿಕೊಳ್ಳುವುದು ಆತನಿಗೆ ಇಷ್ಟವಿಲ್ಲ.  ಇದೀಗ ಅಮ್ಮನ ಹೆಸರಿನಲ್ಲಿ ಕಂಪೆನಿಯೊಂದು ತೆರೆಯಲಾಗುತ್ತಿದೆ ಎಂದು ಕೇಳಿ ಅಮ್ಮ ಸಂಪೂರ್ಣ ಈ ಶ್ರೀಮಂತರ ಮನೆಯ ವಶ ಆಗಿಬಿಟ್ಟಳು ಎಂದು ಮತ್ತಷ್ಟು ಕೋಪ ನೆತ್ತಿಗೇರಿದೆ ಸಮರ್ಥ್​ಗೆ.

Tap to resize

Latest Videos

undefined

ಅವತ್ತು ಬಟ್ಟೆ ತೊಳೆಯುತ್ತಿದ್ದಾಗ ಅವನು ಬಂದು... ಬದುಕು ಬದಲಿಸಿದ ಆ ದಿನ ನೆನೆದ ಬಿಗ್​ಬಾಸ್​ ನೀತು


 ಅಮ್ಮನ ಕೈ ಹಿಡಿದು ಮನೆಗೆ ವಾಪಸ್​ ಕರೆದಿದ್ದಾನೆ. ಎಲ್ಲರೂ ಏನಾಯಿತು ಎಂದು ಪ್ರಶ್ನಿಸಿದಾಗ, ಅವರ ಮೇಲೆ ಸಮರ್ಥ್​ ರೇಗಾಡಿದ್ದಾನೆ. ನನ್ನ ಅಮ್ಮ ಇಲ್ಲಿ ಇರುವುದನ್ನು ನೋಡಲು ಆಗುತ್ತಿಲ್ಲ, ಮನೆಗೆ ವಾಪಸ್​ ಬರುತ್ತಿಯೋ, ಇಲ್ವೋ ಎಂದು ಪ್ರಶ್ನೆ ಮಾಡಿದ್ದಾನೆ. ಇದನ್ನು ಕೇಳಿ ತುಳಸಿಯೂ ಶಾಕ್​ ಆಗಿದ್ದಾಳೆ. ಏನು ಇದೆಲ್ಲಾ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಸಮರ್ಥ್​ ನಾನು ಬೇಕೋ, ಬೇಡವೋ ಮನೆಗೆ ಬರುತ್ತಿಯೋ ಇಲ್ಲವೋ ಎಂದುಪ್ರಶ್ನಿಸಿದಾಗ ತುಳಸಿ ನಾನು ಅಲ್ಲಿಗೆ ಬರುವುದಿಲ್ಲ ಎಂದಿದ್ದಾಳೆ. ಸಮರ್ಥ್​ ಕೈಹಿಡಿದು ಎಳೆದುಕೊಂಡು ಹೋಗುವಷ್ಟರಲ್ಲಿಯೇ ತುಳಸಿ ತಲೆ ತಿರುಗಿ ಬಿದ್ದಿದ್ದಾಳೆ. ಸಮರ್ಥ್​ ಆಕೆಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಹೋಗಿದ್ದಾನೆ. ಇತ್ತ ಯಾವ ಆಸ್ಪತ್ರೆ ಎಂದು ತಿಳಿಯದೇ ಅವಿ-ಅಭಿ ಮತ್ತು ಮಾಧವ್​ ಹುಡುಕಾಡುತ್ತಿದ್ದಾರೆ.

 

ಆದರೆ ಅತ್ತ ಡಾಕ್ಟರ್​ ತುಳಸಿಗೆ ಅಮ್ಮ  ಆಗ್ತಿರೋ ವಿಷಯ ಹೇಳಿದ್ದಾರೆ. ಈಗ ಮುಂದೇನು? ಯಾರೂ ಊಹಿಸಲಾರದ ತಿರುವು ಈಗ ಸೀರಿಯಲ್​ ಪಡೆದುಕೊಂಡಿದೆ! ನಮ್ಮಿಬ್ಬರದ್ದು ಆತ್ಮದ ಸಾಂಗತ್ಯ, ದೈಹಿಕ ಸಂಬಂಧ ನಮಗೆ ಬೇಡ ಎಂದಿದ್ದ ತುಳಸಿ ನಿಜವಾಗಿಯೂ ಗರ್ಭ ಧರಿಸಿದ್ದಾ ಅಥವಾ ಇದು ಯಾರದ್ದಾದರೂ ಕನಸಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಬೇಕಿದೆಯಷ್ಟೇ. ಆದರೂ ಈ ಪ್ರೊಮೋಗೆ ಸಿಕ್ಕಾಪಟ್ಟೆ ಕಮೆಂಟ್ಸ್​ ಬರ್ತಾ ಇದ್ದು, ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. 

ಭಾಗ್ಯ-ಕುಸುಮಾ ಎದುರೇ ಶ್ರೇಷ್ಠಾಗೆ ತಾಳಿ ಕಟ್ತಾನಾ ತಾಂಡವ್​? ಮನೆ ಬಿಡ್ತಾಳಾ ಭಾಗ್ಯ?

click me!