ಶ್ರೇಷ್ಠಾ- ತಾಂಡವ್ ಮದುವೆ ಭರ್ಜರಿಯಾಗಿ ನಡೆಯುತ್ತಿದೆ. ಕುಸುಮಾಗೆ ಸತ್ಯ ಗೊತ್ತಾಗಿದೆ. ಭಾಗ್ಯಳಿಗೆ ಅಸಲಿ ವಿಷಯ ಗೊತ್ತಿಲ್ಲದಿದ್ದರೂ ಯಾವುದೋ ಹೆಣ್ಣಿನ ಜೀವನ ಹಾಳಾಗಬಾರದು ಎಂದು ಮದುವೆ ನಿಲ್ಲಿಸಲು ಬಂದಿದ್ದಾಳೆ. ಮುಂದೇನು?
ಶ್ರೇಷ್ಠಾ ಮತ್ತು ತಾಂಡವ್ ಮದುವೆ ಅತ್ತ ನಡೆಯುತ್ತಿದೆ. ಇತ್ತ ಅಮ್ಮ ಕುಸುಮಾಳಿಗೆ ಶ್ರೇಷ್ಠಾ ಮದ್ವೆಯಾಗ್ತಿರೋದು ತನ್ನ ಮಗನೇ ಎನ್ನುವ ಸತ್ಯ ತಿಳಿದಿದೆ. ಆದರೆ ಅದನ್ನು ಅವಳು ಯಾರಿಗೂ ಹೇಳಲಿಲ್ಲ. ಈ ಮದುವೆಯನ್ನು ನಿಲ್ಲಿಸಲು ಆಟೋದಲ್ಲಿ ಬರುತ್ತಿದ್ದಳು. ಆದರೆ ಆಟೋ ಅಪಘಾತಕ್ಕೀಡಾಗಿ ಅಲ್ಲಿಗೆ ಪೊಲೀಸರು ಬಂದರು. ಪೊಲೀಸರು ತನಿಖೆ ಎಂದೆಲ್ಲಾ ಹೇಳಿದಾಗ ಕುಸುಮಾ ತನ್ನ ಬಂಗಾರದ ಬಳೆಯನ್ನು ಪೊಲೀಸರಿಗೆ ಕೊಟ್ಟು ಅಲ್ಲಿಂದ ಓಡೋಡಿ ಕಲ್ಯಾಣ ಮಂಟಪಕ್ಕೆ ಬಂದಿದ್ದಾಳೆ. ಭಾಗ್ಯ-ಕುಸುಮಾ ಬಂದೇ ಬರುತ್ತಾರೆ ಎನ್ನುವ ಕಾರಣಕ್ಕೆ ಬಾಗಿಲಿನಲ್ಲಿ ಬಾಡಿಗಾರ್ಡ್ ನಿಯೋಜನೆ ಮಾಡಿದ್ದಾಳೆ ಶ್ರೇಷ್ಠಾ. ಅವರು ಕುಸುಮಾಳನ್ನು ನೋಡುತ್ತಿದ್ದಂತೆಯೇ ಅವಳನ್ನು ತಡೆಯಲು ಮುಂದಾಗಿದ್ದಾರೆ.
ಇತ್ತ ಸುಂದ್ರಿ ಗಂಡ ಪೂಜಾಳನ್ನು ಕಿಡ್ನ್ಯಾಪ್ ಮಾಡಿದ್ದಾನೆ. ಶ್ರೇಷ್ಠಾ ದುಡ್ಡು ಕೊಟ್ಟು ಹೀಗೆ ಮಾಡಿಸಿದ್ದಾಳೆ. ಏಕೆಂದರೆ ಆಕೆಗೆ ಎಲ್ಲ ಸತ್ಯ ಗೊತ್ತಿದೆ ಎಂದು. ಈ ವಿಷಯ ಸುಂದ್ರಿಗೆ ತಿಳಿದು ಭಾಗ್ಯಳಿಗೆ ತಿಳಿಸಿದ್ದಾಳೆ. ಭಾಗ್ಯ ತನ್ನ ತಂಗಿಯನ್ನು ಬಿಡಿಸಿಕೊಂಡು ಹೋಗಲು ಬಂದಿದ್ದಾಳೆ. ಅಲ್ಲಿ ಅವಳಿಗೆ ಸುಂದ್ರಿ ಅರ್ಧಂಬರ್ಧ ಸತ್ಯ ಹೇಳಿದ್ದಾಳೆ. ತಾಂಡವ್ ತರುಣ್ ಹೆಸರಿನಲ್ಲಿ ಇರುವುದು, ಶ್ರೇಷ್ಠಾ ಮದ್ವೆಯಾಗ್ತಿರೋದು ಭಾಗ್ಯಳ ಗಂಡನನ್ನೇ ಎನ್ನುವ ಸತ್ಯ ಹೇಳಲಿಲ್ಲ. ಬದಲಾಗಿದೆ ತರುಣ್ಗೆ ನಾವು ನಿಜವಾದ ಅಪ್ಪ-ಅಮ್ಮ ಅಲ್ಲ. ಶ್ರೇಷ್ಠಾ ದುಡ್ಡು ಕೊಟ್ಟ ಕಾರಣ ಹೀಗೆ ಮಾಡಿರುವುದಾಗಿ ಹೇಳಿದ್ದಾಳೆ. ಆದರೆ ಅಲ್ಲಿ ನಡೆಯುತ್ತಿರುವುದು ನಿನ್ನ ಗಂಡನ ಮದ್ವೆ ಎನ್ನುವುದು ಹೇಳಿಲ್ಲ.
ಲಕ್ಷ್ಮಿ ಕೀರ್ತಿಯಾಗಿ ಬದಲಾಗಿದ್ದು ಹೇಗೆ? ಶೂಟಿಂಗ್ ಸಮಯದಲ್ಲಿ ನಡೆದದ್ದೇನು? ಮೇಕಿಂಗ್ ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಈ ಪ್ರೊಮೋಗೆ ಸಿಕ್ಕಾಪಟ್ಟೆ ಕಮೆಂಟ್ ಸುರಿಮಳೆಯಾಗಿದೆ. ಕುಸುಮಾಗೆ ಬೇರೆ ಆಟೋ ಸಿಗಲಿಲ್ವಾ ಎಂದು ಹಲವರು ಪ್ರಶ್ನಿಸುತ್ತಿದ್ದರೆ, ಸುಂದ್ರಿ ಭಾಗ್ಯಳಿಂದ ಇನ್ನೂ ಸತ್ಯ ಮುಚ್ಚಿಟ್ಟಿರುವುದು ಹಾಸ್ಯಾಸ್ಪದ ಎಂದಿದ್ದಾರೆ. ಇದೀಗ ಭಾಗ್ಯ ಮತ್ತು ಕುಸುಮಾ ಮದುವೆಯನ್ನು ತಡೆಯಲು ಬಂದಿದ್ದಾರೆ. ಆದರೆ ಇವರು ಮದುವೆ ಮನೆಗೆ ಎಂಟ್ರಿ ಕೊಡುವಷ್ಟರಲ್ಲಿಯೇ ಶ್ರೇಷ್ಠಾಳ ಕುತ್ತಿಗೆಗೆ ತಾಳಿ ಕಟ್ಟುತ್ತಾನೆ ಎನ್ನುತ್ತಿದ್ದಾರೆ ಕಮೆಂಟಿರು. ಈ ಸೀರಿಯಲ್ ಹಿಂದಿಯ ರೀಮೇಕ್ ಆಗಿದೆ ಎನ್ನುವುದು ಅವರ ವಾದ. ಅದು ಆ ಸೀರಿಯಲ್ ರೀಮೇಕ್ ಆಗಿದ್ದರೆ ಶ್ರೇಷ್ಠಾ ಮತ್ತು ತಾಂಡವ್ ಮದುವೆಯಾಗುತ್ತದೆ. ಭಾಗ್ಯ ಮಕ್ಕಳನ್ನು ಕಟ್ಟಿಕೊಂಡು ಗಂಡನ ಮನೆ ಬಿಡುತ್ತಾಳೆ. ಮುಂದೆ ಅವಳ ಬಾಳಲ್ಲಿ ಇನ್ನೊಬ್ಬರ ಎಂಟ್ರಿ ಆಗುತ್ತದೆ... ಹೀಗೆ ಆ ಸೀರಿಯಲ್ ಸ್ಟೋರಿಯನ್ನು ಈ ಸೀರಿಯಲ್ಗೆ ತಂದು ಹೀಗೆಲ್ಲಾ ಆಗುತ್ತದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸದ್ಯ ಭಾಗ್ಯಲಕ್ಷ್ಮಿ ಕುತೂಹಲ ಕೆರಳಿಸಿದೆ.
ಆದರೆ, ಇದರ ನಡುವೆಯೇ ಭಾಗ್ಯಳಿಗೆ ಇಂಥ ಗಂಡ ಬೇಕೆ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಇಷ್ಟೆಲ್ಲಾ ಮಾಡಿದರೂ ಶ್ರೇಷ್ಠಾಳ ಹಿಂದೆ ಬಿದ್ದಿರೋ ತಾಂಡವ್ನನ್ನು ಯಾವ ಕಾರಣಕ್ಕೂ ಭಾಗ್ಯ ತನ್ನಜೀವನದಲ್ಲಿ ಎಂಟ್ರಿ ಕೊಡಿಸುವುದು ಸರಿಯಲ್ಲ. ಇಂಥ ಗಂಡ ಇದ್ದರೆಷ್ಟು ಬಿಟ್ಟರೆಷ್ಟು ಎನ್ನುತ್ತಿದ್ದಾರೆ ರೊಚ್ಚಿಗೆದ್ದ ಕಮೆಂಟಿಗರು. ಅವನು ಶ್ರೇಷ್ಠಾಳನ್ನೇ ಮದುವೆಯಾಗಬೇಕು. ಆಗ ಇದೆ ಅವನಿಗೆ ಮಾರಿಹಬ್ಬ. ಶ್ರೇಷ್ಠಾಳ ಅಸಲಿ ಗುಣ ಗೊತ್ತಾಗಿ ಮತ್ತೆ ಭಾಗ್ಯಳ ಕಾಲಿಗೆ ಬಂದು ಬೀಳಬೇಕು ಎನ್ನುವುದು ಭಾಗ್ಯಲಕ್ಷ್ಮಿ ಸೀರಿಯಲ್ ಪ್ರೇಮಿಗಳ ಅಭಿಲಾಷೆಯಾಗಿದೆ. ಆದರೆ ಭಾಗ್ಯ ತನಗಾಗಿ ಅಲ್ಲದಿದ್ದರೂ, ಮಕ್ಕಳಿಗಾಗಿ ಅಪ್ಪ ಬೇಕು ಎನ್ನುತ್ತಿದ್ದಾಳೆ. ಅಪ್ಪ ಇಲ್ಲದ ಮಕ್ಕಳನ್ನು ಅವಳು ಊಹಿಸಿಕೊಳ್ಳುವುದೂ ಕಷ್ಟವಾಗಿದೆ. ಒಟ್ಟಿನಲ್ಲಿ ಸೀರಿಯಲ್ ಸದ್ಯ ಕುತೂಹಲ ಕೆರಳಿಸಿದೆ.
ಅವತ್ತು ಬಟ್ಟೆ ತೊಳೆಯುತ್ತಿದ್ದಾಗ ಅವನು ಬಂದು... ಬದುಕು ಬದಲಿಸಿದ ಆ ದಿನ ನೆನೆದ ಬಿಗ್ಬಾಸ್ ನೀತು